ರಾಮನಗರ: ಕೆಪಿಸಿಸಿ ಅಧ್ಯಕ್ಷ, ಕನಕಪುರ ವಿಧಾನಸಭಾ ಕ್ಷೇತ್ರದ (Karnataka Elections 2023) ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಶಿವಕುಮಾರ್ ಅವರ ಆಸ್ತಿ ಮೌಲ್ಯ ಈಗ 1414 ಕೋಟಿ ರೂ.ಗಳಿಗೇರಿದೆ. ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರು ತಮಗಿರುವ ಆಸ್ತಿ, ಕುಟುಂಬದ ಆಸ್ತಿ, ಅದರ ಮೌಲ್ಯಗಳ ಲೆಕ್ಕಾಚಾರಗಳನ್ನು ನೀಡಿದ್ದಾರೆ. ಕಳೆದ 2018ರ ಚುನಾವಣೆಯ ವೇಳೆ 840 ಕೋಟಿ ರೂ. ಬಾಳುತ್ತಿದ್ದ ಅವರು ಈಗ ಸಾವಿರ ಕೋಟಿಯನ್ನೂ ಮೀರಿ ಮುಂದೆ ಹೋಗಿದ್ದಾರೆ. ಹಾಗಿದ್ದರೆ ಶಿವಕುಮಾರ್ ಆಸ್ತಿಯ ಒಟ್ಟಾರೆ ಲೆಕ್ಕಾಚಾರ ಹೇಗಿದೆ? ಇಲ್ಲಿದೆ ಫುಟ್ ಡಿಟೇಲ್ಸ್
ಡಿಕೆ ಶಿವಕುಮಾರ್ ಅವರು 12 ಬ್ಯಾಂಕ್ ಅಕೌಂಟ್‌ಗಳನ್ನು ಹೊಂದಿದ್ದಾರೆ. ಅದರಲ್ಲಿ ಕೆಲವು ಸಹೋದರ ಡಿ.ಕೆ. ಸುರೇಶ್ ಅವರ ಜತೆ ಜಂಟಿಯಾಗಿ ನಿರ್ವಹಿಸಲ್ಪಡುತ್ತವೆ. ಡಿ.ಕೆ. ಶಿವಕುಮಾರ್ ಅವರ ಬಳಿ ಇರುವ ಆಸ್ತಿಯ ಒಟ್ಟು ಮೌಲ್ಯ 1414 ಕೋಟಿ ರೂ. ಅದೇ ಹೊತ್ತಿಗೆ 225 ಕೋಟಿ ಮೊತ್ತದ ಲೋನ್ ಕೂಡಾ ಅವರಿಗಿದೆ
ಇರುವುದೊಂದೇ ಕಾರು: ಅಚ್ಚರಿ ಎಂದರೆ, ಇಷ್ಟೆಲ್ಲ ಶ್ರೀಮಂತರಾಗಿದ್ದರೂ ಡಿಕೆ ಶಿವಕುಮಾರ್ ಅವರ ಹೆಸರಲ್ಲಿ ಇರುವುದು ಒಂದೇ ಕಾರು. ಅದೂ ಕೂಡಾ 8 ಲಕ್ಷ 30 ಮೌಲ್ಯದ ಟಯೊಟ ಕಾರು.
ಹುಬ್ಲೋಟ್ ವಾಚ್ ಇದೆ: ಸಿದ್ದರಾಮಯ್ಯ ಅವರನ್ನು ಭಾರಿ ಇಕ್ಕಟ್ಟಿಗೆ ಸಿಲುಕಿಸಿದ್ದ ಹುಬ್ಲೋಟ್ ವಾಚ್ ಒಂದು ಡಿಕೆಶಿ ಬಳಿ ಇದೆ. ಅವರ ಮೌಲ್ಯ 23 ಲಕ್ಷದ 90 ಸಾವಿರ ರೂ.! ಅವರ ಬಳಿ 9 ಲಕ್ಷ ಮೌಲ್ಯದ 1 ರೊಲೆಕ್ಸ್ ವಾಚ್ ಕೂಡಾ ಇದೆಯಂತೆ. ಡಿಕೆಶಿ ಮನೆಯಲ್ಲಿರುವ ಪೀಠೋಪಕರಣಗಳ ಒಟ್ಟು ಮೌಲ್ಯ 14 ಲಕ್ಷದ 80 ಸಾವಿರ ರೂ.
ಕೃಷಿ ಮತ್ತು ವಾಣಿಜ್ಯ ಕಟ್ಟಡಗಳ ಲೆಕ್ಕಾಚಾರ
ಕೃಷಿ ಜಮೀನಿನ ಇಟ್ಟು ಮೌಲ್ಯ: 28 ಕೋಟಿ 60 ಲಕ್ಷ
ಕೃಷಿಯೇತರ ಆಸ್ತಿ ಒಟ್ಟು ಮೌಲ್ಯ: 60 ಕೋಟಿ 53 ಲಕ್ಷ
ವಾಣಿಜ್ಯ ಕಟ್ಟಡ, ಅಪಾರ್ಟ್ಮೆಂಟ್: 852 ಕೋಟಿ 36 ಲಕ್ಷ
ವಸತಿ ಕಟ್ಟಡಗಳ ಮೌಲ್ಯ: 18 ಕೋಟಿ 51 ಲಕ್ಷ ರೂಪಾಯಿ
ಡಿಕೆಶಿ ಕುಟುಂಬದ ಸ್ಥಿರಾಸ್ತಿಗಳ ಮೌಲ್ಯ
ಡಿಕೆಶಿ ಹೆಸರಿನಲ್ಲಿರುವ ಸ್ಥಿರಾಸ್ತಿ: 970 ಕೋಟಿ ರೂ.
ಪತ್ನಿ ಉಷಾ ಹೆಸರಿನ ಸ್ಥಿರಾಸ್ತಿ:113.38 ಕೋಟಿ ರೂ.
ಪುತ್ರ ಆಕಾಶ್ ಹೆಸರಿನ ಸ್ಥಿರಾಸ್ತಿ: 54.33 ಕೋಟಿ ರೂ.
ಡಿಕೆಶಿ ಕುಟುಂಬದ ಚರಾಸ್ತಿಗಳ ಮೌಲ್ಯ
ಡಿಕೆಶಿ ಹೆಸರಿನಲ್ಲಿ ಚರಾಸ್ತಿ ಮೌಲ್ಯ: 244.93 ಕೋಟಿ ರೂ.
ಪತ್ನಿ ಸರಿನಲ್ಲಿರುವ ಚರಾಸ್ತಿ ಮೌಲ್ಯ: 20.30 ಕೋಟಿ ರೂ.
ಪುತ್ರ ಆಕಾಶ್ ಹೆಸರಿನಲ್ಲಿರುವ ಚರಾಸ್ತಿ: 12.99 ಕೋಟಿ ರೂ.
ಶಿವಕುಮಾರ್ ಕುಟುಂಬದ ಒಟ್ಟು ಆಸ್ತಿ
ಡಿಕೆಶಿ ಹೆಸರಿನಲ್ಲಿರುವ ಒಟ್ಟು ಆಸ್ತಿ ಮೌಲ್ಯ: 1,214.93 ಕೋಟಿ ರೂ.
ಪತ್ನಿ ಉಷಾ ಹೆಸರಿನಲ್ಲಿರುವ ಒಟ್ಟು ಆಸ್ತಿ: 133 ಕೋಟಿ ರೂ.
ಮಗ ಆಕಾಶ್ ಹೆಸರಿನಲ್ಲಿರುವ ಆಸ್ತಿ ಮೌಲ್ಯ: 66 ಕೋಟಿ ರೂ.
ಕುಟುಂಬದ ಒಟ್ಟು ಆಸ್ತಿ ಮೌಲ್ಯ: 1,414 ಕೋಟಿ ರೂ.
ಶಿವಕುಮಾರ್ ಮತ್ತು ಪತ್ನಿ ಹೆಸರಿನಲ್ಲಿರುವ ಸಾಲ
ಡಿಕೆ ಶಿವಕುಮಾರ್ ಹೆಸರಿನಲ್ಲಿ ಸಾಲ: 226 ಕೋಟಿ ರೂ.
ಪತ್ನಿ ಉಷಾ ಹೆಸರಿನಲ್ಲಿ ಇರುವ ಸಾಲ: 34 ಕೋಟಿ ರೂ.
ಡಿಕೆ ಶಿವಕುಮಾರ್ ಆಸ್ತಿ ಏರಿದ ವೇಗ
2013ರ ಅಫಿಡವಿಟ್‌ನಲ್ಲಿ ಕುಟುಂಬದ ಆಸ್ತಿ ಮೌಲ್ಯ 251 ಕೋಟಿ
2018ರ ಅಫಿಡವಿಟ್‌ನಲ್ಲಿ ಕುಟುಂಬದ ಆಸ್ತಿಮೌಲ್ಯ 840 ಕೋಟಿ
2013ರಲ್ಲಿ ಕುಟುಂಬದ ಒಟ್ಟು ಆಸ್ತಿ ಮೌಲ್ಯ: 1,414 ಕೋಟಿ ರೂ.
ಡಿಕೆ ಶಿವಕುಮಾರ್ ವಾರ್ಷಿಕ ಆದಾಯ
ಡಿಕೆ ಶಿವಕುಮಾರ್ ವಾರ್ಷಿಕ ಆದಾಯ: 14.24 ಕೋಟಿ ರೂ.
ಪತ್ನಿ ಉಷಾ ವಾರ್ಷಿಕ ಆದಾಯ: 1.9 ಕೋಟಿ ರೂ.
ಇದನ್ನೂ ಓದಿ : Karnataka Election 2023 : ಮಾಜಿ ಸಿಎಂ ಕುಮಾರಸ್ವಾಮಿಗೆ ಭವಾನಿ ರೇವಣ್ಣ ಎಷ್ಟು ಸಾಲ ನೀಡಿದ್ದಾರೆ ಗೊತ್ತೇ?