ಬೆಂಗಳೂರು: ಪ್ರಾಥಮಿಕ ಹಂತದ ಮತದಾನ ಹಲವು ಸುತ್ತಿನ ಮಾತುಕತೆ, ಚರ್ಚೆಗಳ ಬಳಿಕ ರಾಜ್ಯ ಬಿಜೆಪಿ ಚುನಾವಣಾ ಸಮಿತಿ ಎಲ್ಲ 224 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು (Karnataka Elections) ಅಂತಿಮಗೊಳಿಸಿದ್ದು, ಗುರುವಾರವೇ (ಮಾರ್ಚ್ 6) ಹೈಕಮಾಂಡ್ ಅಂಗಳಕ್ಕೆ ರವಾನೆಯಾಗಲಿದೆ. ರಾಜ್ಯ ಚುನಾವಣಾ ಸಮಿತಿ ಎರಡು ದಿನಗಳ ಕಾಲ ಸುದೀರ್ಘವಾಗಿ ಚರ್ಚಿಸಿ ಸಿದ್ಧಪಡಿಸಿದ ಪಟ್ಟಿಯಲ್ಲಿ ಶೇಕಡಾ 85ರಷ್ಟು ಹಾಲಿ ಶಾಸಕರಿಗೆ ಟಿಕೆಟ್ ದೃಢಪಡಿಸಿದೆ. 80ರಿಂದ 90 ಕ್ಷೇತ್ರಗಳಲ್ಲಿ ಒಬ್ಬರೇ ಅಭ್ಯರ್ಥಿಯ ಹೆಸರನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.
20ರಿಂದ 25 ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ. ಭ್ರಷ್ಟಾಚಾರ ಆರೋಪ, ಕಾರ್ಯಕರ್ತರ ವಿರೋಧ, ಕ್ಷೇತ್ರದಲ್ಲಿ ವರ್ಚಸ್ಸು ಕಳೆದುಕೊಂಡಿರುವ, ಶಾಸಕರ ಬದಲಿಗೆ ಬೇರೆಯವರಿಗೆ ಟಿಕೆಟ್ ನೀಡುವ ಪ್ಲ್ಯಾನ್ ಸಿದ್ಧವಾಗಿದೆ. ಇದೇ ವೇಳೆ, ಸರ್ವೆ, ಆಂತರಿಕ ಮತದಾನ, ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ವಿಶ್ವಾಸ ಇಲ್ಲದಿರುವ ಶಾಸಕರಿಗೂ ಟಿಕೆಟ್ ಕೈತಪ್ಪಲಿದೆ ಎನ್ನಲಾಗಿದೆ. ರಾಜ್ಯ ಬಿಜೆಪಿ ಚುನಾವಣಾ ಸಮಿತಿ ಕಳುಹಿಸಿರುವ ಪಟ್ಟಿಯನ್ನು ಹೈಕಮಾಂಡ್ ಏಪ್ರಿಲ್ 7 ಮತ್ತು 8ರಂದು ಪರಿಶೀಲಿಸಿ 9ರಂದು ಪಟ್ಟಿ ಬಿಡುಗಡೆ ಮಾಡುವುದು ಬಹುತೇಕ ಪಕ್ಕಾ ಆಗಿದೆ.
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರು
ಚನ್ನಗಿರಿ – ಮಾಡಾಳ್ ವಿರೂಪಾಕ್ಷಪ್ಪ
ಹಾವೇರಿ ನಗರ – ನೆಹರೂ ಓಲೆಕಾರ್
ಕನಕಗಿರಿ – ಬಸವರಾಜ್ ದಡೆಸಗೂರು
ಕಾರ್ಯಕರ್ತರ ವಿರೋಧ ಎದುರಿಸುತ್ತಿರುವ ಶಾಸಕರು
ಮೂಡಿಗೆರೆ – ಶಾಸಕ ಎಂ.ಪಿ ಕುಮಾರಸ್ವಾಮಿ,
ರಾಣೆಬೆನ್ನೂರು – ಅರುಣ್ ಕುಮಾರ್
ಬ್ಯಾಡಗಿ – ವಿರೂಪಾಕ್ಷಪ್ಪ ಬ್ಯಾಡಗಿ
ಸಾಗರ – ಹಾಲಪ್ಪ ಆಚಾರ್
ಸೊರಬ – ಕುಮಾರ್ ಬಂಗಾರಪ್ಪ
ತೇರದಾಳ – ಸಿದ್ದು ಸವದಿ
ವರ್ಚಸ್ಸು ಕಳೆದುಕೊಂಡ ಶಾಸಕರು
ರೋಣ – ಕಳಕಪ್ಪ ಬಂಡಿ
ರಾಯಚೂರು ನಗರ – ಶಿವರಾಜ್ ಪಾಟೀಲ್
ಚಿಕ್ಕಪೇಟೆ – ಉದಯ್ ಗರುಡಾಚಾರ್
ಧಾರವಾಡ – ಅಮೃತ್ ದೇಸಾಯಿ
ಹಾಲಿ ಶಾಸಕರ ಕುಟುಂಬಕ್ಕೆ ಟಿಕೆಟ್
ಶಿಕಾರಿಪುರ – ಬಿಎಸ್‌ವೈ ಪುತ್ರ ವಿಜಯೇಂದ್ರ
ಶಿವಮೊಗ್ಗ ನಗರ – ಈಶ್ವರಪ್ಪ ಪುತ್ರ ಕಾಂತೇಶ್
ಮುದೋಳ – ಗೋವಿಂದ ಕಾರಜೋಳ ಪುತ್ರ ಉಮೇಶ್ ಕಾರಜೋಳ
ಚಿತ್ರದುರ್ಗ – ತಿಪ್ಪಾರೆಡ್ಡಿ ಮಗ ಡಾ. ಸಿದ್ಧಾರ್ಥ್
ರಾಜಿನಾಮೆ ನೀಡಿರುವವರು
ಕುಂದಾಪುರ – ಹಾಲಾಡಿ ಶ್ರೀನಿವಾಸ ಶೆಟ್ಟಿ
ದಾವಣಗೆರೆ ಉತ್ತರ – ಎಸ್.ಎ ರವೀಂದ್ರನಾಥ್
ವಲಸಿಗರಿಗೆ ಕೋಕ್!?
ಅಥಣಿ – ಮಹೇಶ್ ಕುಮಠಹಳ್ಳಿ
ಕಾಗವಾಡ – ಶ್ರೀಮಂತ ಪಾಟೀಲ್
ತೆರವಾಗಿರುವ ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿ
ಹುಕ್ಕೇರಿ – ಉಮೇಶ್ ಕತ್ತಿ ಸ್ಥಾನಕ್ಕೆ ಕುಟುಂಬಸ್ಥರಿಗೆ
ಸವದತ್ತಿ – ಆನಂದ್ ಮಾಮನಿ ಕುಟುಂಬಸ್ಥರಿಗೆ
ಹೈಕಮಾಂಡ್ ಅಂಗಳಕ್ಕೆ ತಲುಪಿರುವ ಕ್ಷೇತ್ರಗಳು
ಈಶ್ವರಪ್ಪ, ಸೋಮಣ್ಣ, ಜಗದೀಶ್ ಶೆಟ್ಟರ್ ಮೊದಲಾದ ಹಿರಿಯ ನಾಯಕರ ಸ್ಪರ್ಧೆ ಮತ್ತು ಟಿಕೆಟ್ ವಿಚಾರವನ್ನು ವಿಶೇಷ ಕ್ಷೇತ್ರಗಳೆಂದು ಪರಿಗಣಿಸಿ ಹೈಕಮಾಂಡ್ ಕೈಗೆ ಒಪ್ಪಿಸಲಾಗಿದೆ. ಸುಮಾರು 80 ಕ್ಷೇತ್ರಗಳಿಗೆ ಇಬ್ಬರು ಅಭ್ಯರ್ಥಿಗಳಿದ್ದು ಅದನ್ನು ಹೈಕಮಾಂಡ್ ಫೈನಲ್ ಮಾಡಲಿದೆ.
ಪರಾಜಿತ ಅಭ್ಯರ್ಥಿ, ಮಾಜಿ ಶಾಸಕರುಗಳಿಗೆ ಟಿಕೆಟ್ ಕೊಡಬೇಕೇ ಎಂಬ ಬಗ್ಗೆ ಚರ್ಚೆ ನಡೆದು ಕಡಿಮೆ ಅಂತರದಿಂದ ಸೋತಿದ್ದ ಅಭ್ಯರ್ಥಿಗಳಿಗೆ ಮತ್ತೆ ಟಿಕೆಟ್ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ ಎನ್ನಲಾಗಿದೆ. ಆದರೆ ಎರಡು ಭಾರಿ ಸೋತ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ. ಬಿಜೆಪಿಗೆ ಗಟ್ಟಿ ನೆಲೆಯಿಲ್ಲದ 30 ಕ್ಷೇತ್ರಗಳಲ್ಲಿ ಪಕ್ಷದ ಭವಿಷ್ಯಕ್ಕೆ ಉಪಯೋಗವಾಗುವ ಅಭ್ಯರ್ಥಿಗಳ ಪಟ್ಟಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : BJP Karnataka: ಸುದೀಪ್ ಕುರಿತ ಟೀಕೆಯನ್ನು ಜಾತಿಗೆ ತಿರುಗಿಸಿದ ಬಿಜೆಪಿ: ಎಸ್‌ಟಿ ಸಮುದಾಯಕ್ಕೆ ಅವಮಾನ ಎಂಬ ಆರೋಪ