Site icon Vistara News

Karnataka Elections : ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಕಾರು ಸೀಜ್‌; ಮತದಾರರಿಗೆ ಹಂಚಲು ಸೀರೆ ಸಾಗಾಟ?

Soumya reddy

#image_title

ಬೆಂಗಳೂರು: ಜಯನಗರದ ಕಾಂಗ್ರೆಸ್‌ ಶಾಸಕಿ ಸೌಮ್ಯ ರೆಡ್ಡಿ ಅವರಿಗೆ ಸೇರಿದ ಕಾರನ್ನು ಚುನಾವಣಾಧಿಕಾರಿಗಳು (Karnataka Elections) ವಶಕ್ಕೆ ಪಡೆದಿದ್ದಾರೆ. ವಾಹನ ಪರಿಶೀಲನೆ ವೇಳೆ ಸೀರೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕಾರನ್ನು ವಶಕ್ಕೆ ಪಡೆಯಲಾಗಿದೆ.

ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ಜಯನಗರದ ಬಳಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಕಾರೊಂದು ಬಂದಿತ್ತು. ಅದನ್ನು ಪರಿಶೀಲಿಸಿದಾಗ ಅದರಲ್ಲಿ ಸೀರೆಗಳು ಪತ್ತೆಯಾದವು. ವಿಚಾರಣೆ ನಡೆಸಿದಾಗ ಇದು ಸೌಮ್ಯ ರೆಡ್ಡಿ ಅವರಿಗೆ ಸೇರಿದ ಕಾರು ಎನ್ನುವುದು ಪತ್ತೆಯಾಯಿತು. ಆದರೆ, ಕಾರಿನಲ್ಲಿ ಸೌಮ್ಯಾ ರೆಡ್ಡಿ ಅವರು ಇರಲಿಲ್ಲ.

ಕೂಡಲೇ ಚುನಾವಣಾಧಿಕಾರಿಗಳು ಕಾರನ್ನು ಸೀಜ್‌ ಮಾಡಿ ಕಾರನ್ನ ವಶಕ್ಕೆ ಪಡೆದು ತಿಲಕ ನಗರ ಠಾಣೆಗೆ ಒಪ್ಪಿಸಿದ್ದಾರೆ. ಚಾಲಕ ರಾಮಚಂದ್ರಪ್ಪ ಎಂಬುವರು ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಅವರ ಮೇಲೆ ಕೇಸು ದಾಖಲಾಗಿದೆ.

ಕಾರಿನಲ್ಲಿ 23 ಸೀರೆ, 23 ರವಿಕೆ ಪೀಸ್, ಆಂಡ್ರಾಯ್ಡ್‌ ಮೊಬೈಲ್ , 13 ಶಾಲು, 150 ಪುಸ್ತಕಗಳನ್ನು ಕಾರಿನಿಂದ ವಶಕ್ಕೆ ಪಡೆಯಲಾಗಿದೆ. ಈ ಸೀರೆಗಳು ಮತದಾರರಿಗೆ ಹಂಚಲು ಒಯ್ಯುತ್ತಿದ್ದವುಗಳೆಂದು ಅನುಮಾನವಿದೆ.

ಕಾರನ್ನು ಸದ್ಯ ತಿಲಕ ನಗರ ಠಾಣೆ ಬಳಿ ನಿಲ್ಲಿಸಲಾಗಿದೆ. ಕಾರಿಗೆ ಪೂರ್ತಿ ಕವರ್‌ ಹಾಕಿ ಮುಚ್ಚಲಾಗಿದೆ. ಚುನಾವಣಾಧಿಕಾರಿಗಳು ಚಾಲಕ ರಾಮಚಂದ್ರ ವಿರುದ್ಧ ತಿಲಕ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಲಬುರಗಿಯಲ್ಲಿ ಕಾರುಗಳಲ್ಲಿ 2.50 ಲಕ್ಷ ರೂ. ಪತ್ತೆ

ಕಲಬುರಗಿ: ಇಲ್ಲಿನ ಕೋರಂಟಿ ಚೆಕ್ ಪೋಸ್ಟ್ ಬಳಿ ಎರಡು ಕಾರುಗಳನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ 2.5 ಲಕ್ಷ ರೂ. ಸಿಕ್ಕಿದೆ. ನಿರ್ಮಲಾ ಎಂಬುವವರಿಗೆ ಸೇರಿದ ಕಾರಿನಲ್ಲಿ 1.50 ಲಕ್ಷ ರೂ. ಹಾಗೂ ಅವಿನಾಶ್ ಎಂಬುವವರಿಗೆ ಸೇರಿದ 1 ಲಕ್ಷ ಹಣ ಪತ್ತೆಯಾಗಿದೆ.

ಚುನಾವಣೆ ನೀತಿ ಸಂಹಿತೆಯ ಪ್ರಕಾರ, ಒಬ್ಬ ವ್ಯಕ್ತಿ 50 ಸಾವಿರ ರೂ.ಗಿಂತ ಹೆಚ್ಚು ಹಣ ತೆಗೆದುಕೊಂಡು ಹೋಗುವಂತಿಲ್ಲ.. ನಿರ್ಮಲಾ ಮತ್ತು ಅವಿನಾಶ್‌ ಇಬ್ಬರೂ ತಮ್ಮ ಬಳಿ ಇರುವ ಹಣಕ್ಕೆ ದಾಖಲೆ ಇದೆ ಎಂದು ಹೇಳುತ್ತಿದ್ದಾರೆ. ಹಣವನ್ನು ವಶಕ್ಕೆ ಪಡೆದ ಪೊಲೀಸರು ದಾಖಲೆ ತಂದು ಹಣ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.

35 ಲಕ್ಷ ರೂಪಾಯಿ ಮೌಲ್ಯದ ಬಿಯರ್‌ ಜಪ್ತಿ

ಚಿಕ್ಕಬಳ್ಳಾಪುರ: ಅಬಕಾರಿ ಇಲಾಖೆ ಅಧಿಕಾರಿಗಳ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿ ನಡೆಸಿದ ಕಾರ್ಯಾಚರಣೆ ವೇಳೆ ಅನಧಿಕೃತವಾಗಿ ಸಾಗಿಸುತ್ತಿದ್ದ 35 ಲಕ್ಷ ರೂಪಾಯಿ ಮೌಲ್ಯದ ಬಿಯರ್ ಜಪ್ತಿ ಮಾಡಲಾಗಿದೆ.

ಛತ್ತೀಸ್‌ಗಢದಿಂದ ಬೆಂಗಳೂರಿನ ವೈಟ್ ಫೀಲ್ಡಿಗೆ ಸಾಗಾಟ ಮಾಡುತ್ತಿದ್ದ ಮದ್ಯ ಇದಾಗಿದ್ದು, ಮದ್ಯ ಸಾಗಿಸುತ್ತಿದ್ದ ಕಟೈನರ್ ಲಾರಿ ಹಾಗೂ ಮದ್ಯ ಜಪ್ತಿ ಮಾಡಲಾಗಿದೆ. ಲಾರಿಯಲ್ಲಿ ಒಟ್ಟು 13, 800 ಲೀಟರ್ ಮದ್ಯ ಇತ್ತು.

ಇದನ್ನೂ ಓದಿ : Karnataka Election 2023: ಇದು ನನ್ನ ಕೊನೆಯ ಚುನಾವಣೆ: ಸಚಿವ ಬಿ.ಸಿ. ಪಾಟೀಲ್‌

Exit mobile version