Site icon Vistara News

Karnataka Elections : ಯಾದಗಿರಿಯಲ್ಲಿ ಕಾಂಗ್ರೆಸ್‌- ಬಿಜೆಪಿ ಸಂಘರ್ಷ; ಕಾರ್ಯಕರ್ತರ ನಡುವೆ ಕಲ್ಲು ತೂರಾಟ, ವಾಹನಗಳು ಜಖಂ

yadagiri fight

#image_title

ಯಾದಗಿರಿ: ಚುನಾವಣೆಯ ಕಾವು ಜೋರಾಗುತ್ತಿರುವಂತೆಯೇ ಕಾರ್ಯಕರ್ತರ ನಡುವೆ ಘರ್ಷಣೆಗಳು ಆರಂಭಗೊಂಡಿವೆ. ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್‌ನಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಕಲ್ಲುತೂರಾಟ ನಡೆದಿದೆ.

ಶಾಂತಗೌಡ ಚನ್ನಪಟ್ಟಣ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಅವರು ಕಾಂಗ್ರೆಸ್‌ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಅವರಿಗೆ ಬೆಂಬಲ ನೀಡಿದ್ದಾರೆ. ಅವರು ಸುರಪುರ ವಿಧಾನಸಭಾ ಕ್ಷೇತ್ರದ ಕಕ್ಕೇರಾ ಬನಶಟ್ಟಿಹಾಳ‌ ಗ್ರಾಮ ಹಾಗೂ ನಾರಾಯಣಪುರ ಕಡೆ ಬೈಕ್ ಕಾರು ಹಾಗೂ ಬೈಕ್ ರ‍್ಯಾಲಿ ಮೂಲಕ ಶಕ್ತಿ‌ ಪ್ರದರ್ಶನಕ್ಕೆ ಮುಂದಾಗಿದ್ದರು.

ಯಾದಗಿರಿಯ ಕೊಡೆಕಲ್‌ ಬಳಿ ನಡೆದ ಕಾಂಗ್ರೆಸ್‌- ಬಿಜೆಪಿ ಸಂಘರ್ಷದ ಚಿತ್ರಗಳು

ಈವೇಳೆ ಕೊಡೆಕಲ್ ಬಳಿ ಆಗಮಿಸುತ್ತಿದ್ದಂತೆ ಸುರಪುರದ ಬಿಜೆಪಿ‌ ಶಾಸಕ‌ ರಾಜೂಗೌಡ ಬೆಂಬಲಿಗರು ಕಾಂಗ್ರೆಸ್‌ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಅವರ ಬೆಂಬಲಿಗರ ಮೇಲೆ ಕಲ್ಲೂ ತೂರಾಟ ನಡೆಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಗಲಾಟೆಯಲ್ಲಿ ರಾಜಾವೆಂಕಟಪ್ಪ ನಾಯಕ ಅವರ ಕಾರು ಸೇರಿ ಹಲವು ವಾಹನಗಳ ಜಖಂಗೊಂಡಿವೆ.

ಸಂಬಂಧವಿಲ್ಲ ಎಂದ ರಾಜೂ ಗೌಡ

ಆದರೆ ಈ ಘಟನೆಗೂ ನಮ್ಮ ಕಾರ್ಯಕರ್ತರಿಗೂ ಯಾವುದೆ ಸಂಬಂಧವಿಲ್ಲ. ಕಾಂಗ್ರೆಸ್ ಕಾರ್ಯಕರ್ತರೇ ಕಲ್ಲು ತೂರಾಟ ಮಾಡಿದ್ದಾರೆ, ಸೋಲಿನ ಭೀತಿಯಿಂದ ಕಾಂಗ್ರೆಸ್ ನಾಯಕರು ಹತಾಶೆಗೊಂಡು ಗಲಾಟೆ ಮಾಡುವ ಕೆಲಸ ಮಾಡಿದ್ದಾರೆ ಎಂದು ಶಾಸಕ ರಾಜೂಗೌಡ ಹೇಳಿದ್ದಾರೆ.

ಯಾದಗಿರಿಯ ಕೊಡೆಕಲ್‌ ಬಳಿ ನಡೆದ ಕಾಂಗ್ರೆಸ್‌- ಬಿಜೆಪಿ ಸಂಘರ್ಷದ ಚಿತ್ರಗಳು

ʻʻಕೊಡೇಕಲ್ ಗ್ರಾಮದಲ್ಲಿ ಇಂದು ಕೊಡೇಕಲ್ ಬಸವೇಶ್ವರ ಜಾತ್ರೆ ನಡೆಯುತ್ತಿದೆ, ಜಾತ್ರೆ ದಿನವೇ ಕೊಡೇಕಲ್ ಗ್ರಾಮದಲ್ಲಿ ಕಾಂಗ್ರೆಸ್ ನವರು ವಾಹನಗಳ ನಿಲ್ಲಿಸಿ ಟ್ರಾಫಿಕ್ ಸಮಸ್ಯೆ ಯಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದರು. ಆದರೆ, ಇದಕ್ಕೂ ಕೂಡ ಇದಕ್ಕೆ ಸ್ಪಂದಿಸದೆ ಬೇಕೆಂದೇ ಹಾರ್ನ್‌ ಹೆಚ್ಚು ಮಾಡುತ್ತಾ ಅಶಾಂತಿ‌ ಸೃಷ್ಟಿಸಿದ್ದರು, ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರೇ ಕಲ್ಲು ತೂರಿದ್ದಾರೆ. ಅದರಲ್ಲೂ ಕಲ್ಲು ತೂರಿದವರು ಕಾಂಗ್ರೆಸ್‌ ಕಾರ್ಯಕರ್ತರೇ ಹೊರತು ನಮ್ಮವರು ಅಲ್ಲʼʼ ಎಂದು ಹೇಳಿದ್ದಾರೆ ರಾಜೂ ಗೌಡ.

ಇದನ್ನೂ ಓದಿ : Karnataka Elections : ಪುತ್ತೂರು ಬಿಜೆಪಿ ಶಾಸಕ ಸಂಜೀವ ಮಠಂದೂರು ಕಾಮಕೇಳಿ ಫೋಟೊ ವೈರಲ್‌

Exit mobile version