Site icon Vistara News

Bharath Jodo Yatra | ಕಾಂಗ್ರೆಸ್‌ನ ಟ್ವಿಟರ್‌ ಹ್ಯಾಂಡಲ್‌ ಸ್ಥಗಿತ ಆದೇಶ ವಜಾಗೊಳಿಸಿದ ಹೈಕೋರ್ಟ್‌

Twitter annot claim protection under article 19, Centre tells Karnataka HC

ಬೆಂಗಳೂರು : ಕೆಜಿಎಫ್‌ ಚಾಪ್ಟರ್‌-೨ ಸಿನಿಮಾದ ಹಾಡನ್ನು ಅನುಮತಿಯಿಲ್ಲದೇ ಬಳಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಸೇರಿದ ಎರಡು ಟ್ವಿಟರ್‌ ಹ್ಯಾಂಡಲ್‌ಗಳನ್ನು (Bharath Jodo Yatra) ಸ್ಥಗಿತಗೊಳಿಸುವಂತೆ ಬೆಂಗಳೂರು ನಗರ ಜಿಲ್ಲಾ ವಾಣಿಜ್ಯ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್‌ ಮಂಗಳವಾರ (ಅಕ್ಟೋಬರ್‌ ೮ರಂದು) ರದ್ದು ಮಾಡಿದೆ. ಇದರೊಂದಿಗೆ ಕಾಂಗ್ರೆಸ್‌ನ ಸೋಶಿಯಲ್‌ ಮೀಡಿಯಾ ತಂಡ ನಿರಾಳವಾಗಿದೆ.

ಕೆಜಿಎಫ್‌ ಹಾಡನ್ನು ಕದ್ದು ಬಳಸಿದ್ದು ಸಾಬೀತಾಗಿದೆ ಎಂದು ಐಎನ್‌ಸಿ ಹಾಗೂ ಭಾರತ್‌ ಜೋಡೋ ಯಾತ್ರಾ ಟ್ವಿಟರ್‌ ಹ್ಯಾಂಡಲ್‌ಗಳನ್ನು ಸ್ಥಗಿತಗೊಳಿಸುವಂತೆ ವಾಣಿಜ್ಯ ನ್ಯಾಯಾಲಯ ಆದೇಶ ಹೊರಡಿಸಿತ್ತು. ಎಚ್ಚೆತ್ತುಕೊಂಡ ಕಾಂಗ್ರೆಸ್‌, ತಕ್ಷಣ ಅದನ್ನು ತೆಗೆದುಹಾಕಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಜಿ. ನರೇಂದ್ರ ಹಾಗೂ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರನ್ನೊಳಗೊಂಡ ಹೈಕೋರ್ಟ್‌ ಹೊಸ ಆದೇಶ ಹೊರಡಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಗ್ವಿ, ವಾಣಿಜ್ಯ ನ್ಯಾಯಾಲಯ ಯಾವುದೇ ನೋಟಿಸ್‌ ನೀಡದೇ ಟ್ವಿಟರ್‌ ಖಾತೆಯನ್ನು ಸ್ಥಗಿತ ಮಾಡಿದೆ ಎಂದರು.

ನಕಲು ಮಾಡಲಾಗಿದೆ ಎಂದು ಹೇಳಲಾದ ಹಾಡನ್ನು ಕಾಂಗ್ರೆಸ್‌ನ ಎಲ್ಲ ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುತ್ತೇವೆ. ಈ ಕುರಿತು ಎಮ್‌ಆರ್‌ಟಿ ಮ್ಯೂಸಿಕ್‌ಗೆ ದಾಖಲೆ ಒದಗಿಸುತ್ತೇವೆ ಎಂದು ಕಾಂಗ್ರೆಸ್‌ ಮುಚ್ಚಳಿಕೆ ಬರೆದುಕೊಟ್ಟ ಹಿನ್ನೆಲೆಯಲ್ಲಿ ಕೋರ್ಟ್‌ ಸ್ಥಗಿತ ಆದೇಶವನ್ನು ಹಿಂಪಡೆದಿದೆ.

“ಅರ್ಜಿದಾರರು ಟ್ವಿಟರ್‌ ಹ್ಯಾಂಡಲ್‌ನಿಂದ ಹಾಡನ್ನು ಅಳಿಸಿ ಹಾಕಿರುವ ಬಗ್ಗೆ ಸ್ಕ್ರೀನ್‌ ಶಾಟ್‌ ನೀಡಿದೆ,” ಎಂದು ಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ | ಕೆಜಿಎಫ್‌-2 ಹಾಡು ಅನಧಿಕೃತ ಬಳಕೆ: ಕಾಂಗ್ರೆಸ್‌ ಟ್ವಿಟರ್‌ ಅಕೌಂಟ್‌ ಬ್ಲಾಕ್‌ ಮಾಡಲು ಕೋರ್ಟ್‌ ಆದೇಶ

Exit mobile version