ಬೆಂಗಳೂರು: ಅಪಮಾನ ಮಾಡಲೆಂದೇ ಉದ್ದೇಶಪೂರ್ವಕವಾಗಿ ಜಾತಿ ಹೆಸರು ಬಳಸಿದರೆ ಮಾತ್ರ ಎಸ್‌ಟಿ- ಎಸ್‌ಸಿ ಕಾಯ್ದೆ ಅನ್ವಯವಾಗುತ್ತದೆ ಎಂದು ಹೈಕೋರ್ಟ್ ಮಹತ್ತರ ಆದೇಶ ನೀಡಿದೆ.
ಎಸ್‌ಟಿ ಎಸ್‌ಸಿ ಕಾಯ್ದೆ ರದ್ದುಪಡಿಸಲು ಕೋರಿದ್ದ ಮನವಿಗೆ ಸಂಬಂಧಿಸಿ ಹೈಕೋರ್ಟ್ ಈ ಆದೇಶ ನೀಡಿದೆ. ಆನೇಕಲ್‌ನ ಸೂರ್ಯನಗರ ನಿವಾಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗ ಪ್ರಸನ್ನ ಈ ಆದೇಶ ನೀಡಿದ್ದಾರೆ.
2020ರರಲ್ಲಿ ಜಯಮ್ಮ ಎಂಬಾಕೆ ದೂರು ನೀಡಿದ್ದರು. ಕ್ರಿಕೇಟ್ ಆಡುವಾಗ ತನ್ನ ಮಗನ ಮೇಲೆ ಹಲ್ಲೆ ನಡೆಸಿ ಅಪಹರಣ ಮಾಡಿ ಜಾತಿ ನಿಂದನೆ ಮಾಡಿದ್ದಾರೆಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದರು. ಶೈಲೇಶ್ ಅವರ ಪುತ್ರ ಸೇರಿ ಉಳಿದ ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಎರಡು ತಂಡಗಳ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಈ ವೇಳೆ ಅಪಮಾನ ಮಾಡಲೆಂದೇ ಜಾತಿ ಹೇಸರು ಬಳಸಿರುವ ಬಗ್ಗೆ ಯಾವುದೇ ಸಾಕ್ಷಿಗಳಿಲ್ಲ. ಹೀಗಾಗಿ ಎಸ್‌ಸಿ- ಎಸ್‌ಟಿ ಕಾಯ್ದೆಯನ್ನ ರದ್ದುಪಡಿಸಿ ಉಳಿದ ಹಲ್ಲೆ, ಅಪಹರಣ ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಹೈಕೋರ್ಟ್ ಆದೇಶ ನೀಡಿದೆ.