Site icon Vistara News

Republic Day Tableau : ಸತತ 14 ವರ್ಷ ಗಣರಾಜ್ಯೋತ್ಸವ ಸ್ತಬ್ಧಚಿತ್ರ ಪ್ರದರ್ಶಿಸಿದ ಏಕಮಾತ್ರ ರಾಜ್ಯ ಕರ್ನಾಟಕ

Republic Day Tableau karnataka

ಬೆಂಗಳೂರು: ನವದೆಹಲಿಯಲ್ಲಿ ರಾಷ್ಟ್ರಪತಿ, ಪ್ರಧಾನಮಂತ್ರಿ, ಸೇನಾ ಮುಖ್ಯಸ್ಥರು ಹಾಗೂ ದೇಶ ವಿದೇಶಗಳ ಅತಿಥಿಗಳ ಸಮ್ಮುಖದಲ್ಲಿ ಪ್ರದರ್ಶನವಾಗುವ ಗಣರಾಜ್ಯೋತ್ಸವ ಸ್ತಬ್ಧಚಿತ್ರಗಳಲ್ಲಿ (Republic Day Tableau) ಕರ್ನಾಟಕ ಹೊಸ ದಾಖಲೆ ಬರೆದಿದೆ. ಸತತವಾಗಿ 14 ವರ್ಷದಿಂದ ಸ್ತಬ್ಧಚಿತ್ರ ಪ್ರದರ್ಶನ ಮಾಡುತ್ತಿರುವ ಏಕೈಕ ರಾಜ್ಯ ಕರ್ನಾಟಕ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಸತತ 14 ವರ್ಷಗಳಿಂದ ಪಥಸಂಚಲನದಲ್ಲಿ ಪಾಲ್ಗೊಂಡ ದೇಶದ ಏಕೈಕ ರಾಜ್ಯ ನಮ್ಮದು. ಇದನ್ನು ಸಾಧ್ಯವಾಗಿಸಿದ ಪ್ರತಿಯೊಬ್ಬರಿಗೂ ಆತ್ಮಾಭಿಮಾನದ ಧನ್ಯವಾದಗಳು ಎಂದಿದ್ದಾರೆ.

ಕರ್ನಾಟಕದ ಹಿರಿಮೆ ಮತ್ತು ಅಸ್ಮಿತೆಯನ್ನು ಬಿಂಬಿಸುವ “ನಾರಿ ಶಕ್ತಿ” ಸ್ತಬ್ಧಚಿತ್ರ ದೆಹಲಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವದಂದು ವಿಜೃಂಭಿಸಲಿದೆ. ಜನಸಾಮಾನ್ಯರ ಸಾಧನೆಯ ಪ್ರತೀಕವಾಗಿರುವ ಈ ಸ್ತಬ್ಧಚಿತ್ರ ಅತ್ಯಂತ ಕಡಿಮೆ ಅವಧಿಯಲ್ಲಿ ಸಿದ್ಧಗೊಂಡಿದೆ ಎಂದು ಗುರುವಾರ ಪ್ರದರ್ಶನವಾಗುವ ಸ್ತಬ್ಧಚಿತ್ರದ ಭಾವಚಿತ್ರಗಳನ್ನು ಬೊಮ್ಮಾಯಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Republic Day 2023: ಕರ್ನಾಟಕದ ನಾರಿಶಕ್ತಿ ಟ್ಯಾಬ್ಲೋ ಜತೆ ಉತ್ತರ ಕನ್ನಡದ ಹಾಲಕ್ಕಿ ಸುಗ್ಗಿ ಕುಣಿತ

2000ನೇ ಇಸವಿಯಿಂದ 2022ರವರೆಗಿನ 23 ವರ್ಷದಲ್ಲಿ 19 ಬಾರಿ ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಗೊಂಡಿದೆ. 2010ನೇ ಇಸವಿಯಿಂದ ಸತತವಾಗಿ 13 ವರ್ಷ ಕರ್ನಾಟಕ ಭಾಗವಹಿಸಿದೆ. ಇದೀಗ 2023ರಲ್ಲಿಯೂ ಭಾಗವಹಿಸುತ್ತಿದ್ದು, 14 ನೇ ವರ್ಷವಾಗಲಿದೆ. ಇಲ್ಲಿವರೆಗೆ ಕರ್ನಾಟಕ ಪ್ರದರ್ಶಿಸಿದ ಸ್ತಬ್ಧಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ.

Republic Day Tableau Karnataka

Exit mobile version