ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಚಡ್ಡಿ ಪಾಲಿಟಿಕ್ಸ್ (Chaddi Politics) ತಾರಕಕ್ಕೇರಿದೆ. ಬಿಜೆಪಿಯವರು ಹೇಳಿದ್ರೆ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಚಡ್ಡೀನೂ ಹಾಕುತ್ತಾರೆ, ದತ್ತ ಮಾಲೇನೂ ಹಾಕ್ತಾರೆ ಎಂಬ ಸಚಿವ ಚಲುವರಾಯಸ್ವಾಮಿ (Minister Chaluvaraya Swamy) ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಎಸ್‌ನ ಮಾಜಿ ಶಾಸಕ ಸುರೇಶ್ ಗೌಡ (Former MLA Suresh Gowda) ಅವರು, ಚಲುವರಾಯ ಸ್ವಾಮಿ ಮೊದಲೇ ಚಡ್ಡಿ ಹಾಕಲ್ಲ ಎಂದು ವಾಗ್ದಾಳಿ (Karnataka Politics) ನಡೆಸಿದ್ದಾರೆ.
ʻʻಚಲುವರಾಯಸ್ವಾಮಿ ಮೊದಲೇ ಚಡ್ಡಿ ಹಾಕಲ್ಲ. ಇವರಿಗೆ ಯಾರು ಹೇಳಬೇಕು ಚಡ್ಡಿ ಹಾಕು ಅಂತಾ? ಇವರಿಗೆ ಡಿ.ಕೆ. ಶಿವಕುಮಾರ್ ಅಥವಾ ಸಿದ್ದರಾಮಯ್ಯ ಹೇಳಬೇಕಾ.? ಚಡ್ಡಿ ಹಾಕ್ಕೊ ಕಾಚಾ ಹಾಕ್ಕೊ ಅಂತಾ ಯಾರು ಹೇಳಬೇಕು? ಇವರಿಗೆ ಯಾಕೆ ನಮ್ಮ ವಿಷಯ, ಇವರದ್ದು ಎಷ್ಟಿದೆ ಅಷ್ಟು ನೋಡಿಕೊಳ್ಳಬೇಕುʼʼ ಎಂದು ಹೇಳಿದರು.
ʻʻಇವನಿಗೆ ಪ್ಯಾಂಟ್ ಹಾಕೋದು ಕಲಿಸಿದ್ದು ಯಾರು? ಚಲುವರಾಯಸ್ವಾಮಿಗೆ ಚಡ್ಡಿ ಹಾಕಿದ್ರೆ ತೊಂದರೆ ಆಗಬಹುದು ಅದಕ್ಕೆ ಚಡ್ಡಿ ವಿಚಾರ ಹೇಳ್ತಾ ಇದಾರೆ. ಚಡ್ಡಿ ಹಾಕೊಂಡ್ರೆ ಬಿಚ್ಚೋಕೆ ತೊಂದರೆ ಆಗಬಹುದು, ಅದಕ್ಕೆ ಚಡ್ಡಿ ಹಾಕಬಾರದೆಂದು ಚಲುವರಾಯಸ್ವಾಮಿ ತೀರ್ಮಾನ ಮಾಡಿರಬೇಕುʼʼ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದರು.
ʻʻಪ್ಯಾಂಟ್ ಹಾಕೋದನ್ನು ಕಲಿಸಿದ್ದು ಯಾರು? ಮಾತಾಡೋದನ್ನು ಹೇಳಿಕೊಟ್ಟೋರು ಯಾರು ಅಂತಾ ಅವರೇ ಹೇಳಬೇಕು. ನಾವು ಚಡ್ಡಿ ಹಾಕೋತಿವೋ ಇಲ್ಲ, ಬುಂಡ ಬುಂಡ ಓಡಾಡುತ್ತಿವೋ ಇವರಿಗೆ ಯಾಕೆ?ʼʼ ಎಂದು ಪ್ರಶ್ನಿಸಿದ ಅವರು, ಚಲುವರಾಯ ಸ್ವಾಮಿಗೆ ಕುಮಾರಸ್ವಾಮಿ ದೇವೇಗೌಡರ ಬಗ್ಗೆ ಮಾತಾಡಿದರೆ ದೊಡ್ಡ ಲೀಡರ್ ಆಗುತ್ತೇನೆ ಎನ್ನುವ ಭ್ರಮೆಯಲ್ಲಿ ಇದ್ದಾನೆ.ʼʼ ಎಂದು ಹೇಳಿದರು.
ಕಾಂಗ್ರೆಸ್ ಜತೆ ಹೋದರೆ ಮಾತ್ರ ಜಾತ್ಯತೀತವಾ?
ʻʻಸಿದ್ದರಾಮಯ್ಯ ಅವರ ಕಿವಿ ತಂಪು ಮಾಡಲು ಹೀಗೆ ಮಾತಾಡುತ್ತಾ ಇದ್ದಾರೆ. ಇವರ ಎಲ್ಲಾ ವಿಚಾರಗಳು ಹೊರಗೆ ಬರುತ್ತವೆ. ಇವರು ಗಾಜಿನ ಮನೆಯಲ್ಲಿ ಇದ್ದಾರೆ. ನಾವು ಒಂದು ಪಕ್ಷಕ್ಕೆ ಬೆಂಬಲ ಕೊಟ್ಟ ತಕ್ಷಣ ನಮ್ಮ ನಿಲುವು ಹೋಗಲ್ಲ. ಯಾರು ಜಾತ್ಯತೀತವಾಗಿ ಇದ್ದಾರೆ ಹೇಳಿ. ನಾವು ಕಾಂಗ್ರೆಸ್ ಜೊತೆ ಹೋದ್ರೆ ಮಾತ್ರ ಜಾತ್ಯಾತೀತನಾ?. ಕಾಂಗ್ರೆಸ್ ಅವರೆ ಜಾತ್ಯಾತೀತವಾಗಿ ಇಲ್ಲ. ನಿಜವಾದ ಜಾತಿವಾದಿ ಪಕ್ಷ ಕಾಂಗ್ರೆಸ್. ಎಲ್ಲರೂ ಅವರವರ ಧರ್ಮ ಮುಖ್ಯ. ನಾವು ಇನ್ನೊಂದು ಧರ್ಮ ಬಗ್ಗೆ ಮಾತಾಡಲ್ಲʼʼ ಎಂದು ಮಂಡ್ಯದಲ್ಲಿ ಮಾತನಾಡಿದ ಸುರೇಶ್ ಗೌಡ ಹೇಳಿದರು.
ಇದನ್ನೂ ಓದಿ :
ರಾಜ್ಯ ಎರಡನೇ ಶ್ರೀಲಂಕಾ ಆಗುತ್ತೆ ಎಂದ ಸುರೇಶ್ ಗೌಡ
ʻʻಗ್ಯಾರಂಟಿಗಳಿಂದಾಗಿ ರಾಜ್ಯ ದಿವಾಳಿಯಾಗುವತ್ತ ಸಾಗಿದೆ. ಮುಂದೆ ಇದು ಎರಡನೇ ಶ್ರೀಲಂಕಾ ಆಗಲಿದೆ. ಕಾಂಗ್ರೆಸ್ ನವರು ಸುಳ್ಳನ್ನೇ ಮನೆದೇವರು ಮಾಡ್ಕೊಂಡಿದ್ದಾರೆ. ಕೇಂದ್ರಕ್ಕೆ ಅವೈಜ್ಞಾನಿಕ ರಿಪೋರ್ಟ್ ಕೊಟ್ಟು ದುಡ್ಡು ಹೊಡಿತ್ತಿದ್ದಾರೆʼʼ ಎಂದು ಹೇಳಿದರು.
ಜೆಡಿಎಸ್ ಬರ ಅಧ್ಯಯನದ ಬಗ್ಗೆ ಸಚಿವ ಚಲುವರಾಯಸ್ವಾಮಿ ಮಾಡಿರುವ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ʻʻಎಲ್ಲೋ ಕುಳಿತು ವರದಿ ತರಿಸಿಕೊಳ್ಳುವುದಲ್ಲ. ಅದಕ್ಕೆ ನಾವು ಗ್ರೌಂಡ್ ರಿಪೋರ್ಟ್ ಮಾಡ್ತಿದ್ದೇವೆ. ಇವರು ಬಿತ್ತನೆ ಬೀಜ ಕೊಟ್ಟಿದ್ದಾರಾ? ಇವರು ಇಲಾಖೆಯಿಂದ ರೈತರ ಕಷ್ಟ ಕೇಳಿ ಪರಿಹಾರ ಕೊಟ್ಟಿದ್ದಾರಾ? ನಾವು ವರದಿ ಮಾಡ್ತಿರೋದು ಇವರು ಒಪ್ಪಿಕೊಳ್ಳಿ ಅಂತಲ್ಲ. ಮುಂದೆ ಬರುವ ಅಧಿವೇಶನದಲ್ಲಿ ಚರ್ಚೆ ಮಾಡಲು ನಮ್ಮ ನಾಯಕರಿಗೆ ಕೊಟ್ಟಿದ್ದೇವೆ. ನಾವು ವಿರೋಧ ಪಕ್ಷದಲ್ಲಿದ್ದೇವೆ, ಪ್ರಯತ್ನ ಪಡುತ್ತಿದ್ದೇವೆʼʼ ಎಂದು ಹೇಳಿದರು.
ʻʻಇವರು 32 ಸಾವಿರ ಕೋಟಿ ರೂ. ಬರ ಪರಿಹಾರ ಕೊಡಬೇಕು ಎಂದು ಕೇಂದ್ರ ಮನವಿ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಯಾವತ್ತಾದರೂ 1000 ಕೋಟಿಗಿಂತ ಹೆಚ್ಚು ಹಣ ಕೊಟ್ಟೇ ಇಲ್ಲ. ಅವೈಜ್ಞಾನಿಕ ರಿಪೋರ್ಟ್ ಕೊಟ್ಟು ದುಡ್ಡು ಹೊಡೆಯುವ ಕೆಲಸ ಮಾಡ್ತಿದ್ದಾರೆ. ಕೇಂದ್ರದವರು ಕಡಲೆಕಾಯಿ ತಿಂತಾರಾ? ಅವರಿಗೂ ರಿಪೋರ್ಟ್ ಇದೆ. ಇವರು ಆದಿರಾಯರ ಕಾಲದ ವರದಿ ಕಳ್ಸಿದ್ದಾರೆ. ಇವರು ವರದಿ ಹೇಗೆ ತಯಾರು ಮಾಡಿದ್ದಾರೆ.? ಸ್ಥಳಕ್ಕೆ ಹೋಗದೆ ವರದಿ ಕೊಟ್ಟಿದ್ದಾರೆʼʼ ಎಂದು ಸುರೇಶ್ ಗೌಡ ಆಪಾದಿಸಿದರು.
ʻʻಇದು ಬರಿ ಸುಳ್ಳಿನ ಸರ್ಕಾರ. ಕರೆಂಟ್ ಎಲ್ಲಿ ಕೊಡ್ತಿದ್ದಾರೆ? ಉತ್ಪಾದನೆ ಎಲ್ಲಿ ಆಗ್ತಿದೆ. ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿದ್ದಾರೆ ಇವರು. ಇದೇ ರೀತಿಯಾದ್ರೆ ಈ ರಾಜ್ಯ ಎರಡನೇ ಶ್ರೀಲಂಕಾ ಆಗುತ್ತದೆʼʼ ಎಂದರು.