Site icon Vistara News

Karnataka Politics: ಬಿ.ಎಸ್‌. ಯಡಿಯೂರಪ್ಪಗೆ ಅವರು ವಿಷದ ಇಂಜೆಕ್ಷನ್ ಕೊಟ್ರು!: ಸಾಹಿತಿ ದೇವನೂರು ಮಹಾದೇವ ಆರೋಪ

Devanuru mahadeva and BS Yediyurappa

#image_title

ಮೈಸೂರು: ರಾಜ್ಯ ಬಿಜೆಪಿಯಲ್ಲಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರನ್ನು ಕಡೆಗಣಿಸಿದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸಾಹಿತಿ ದೇವನೂರು ಮಹಾದೇವ, ಯಡಿಯೂರಪ್ಪ ಎಂಬ ಮರಕ್ಕೆ ವಿಷದ ಇಂಜೆಕ್ಷನ್‌ ನೀಡಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ದೇವನೂರು ಮಹಾದೇವ, ಬಿ.ಎಸ್‌. ಯಡಿಯೂರಪ್ಪ ಅವರು ಒಬ್ಬರು ಮಾಸ್ ಲೀಡರ್. ಯಡಿಯೂರಪ್ಪರಿಗೇ ವಿಷದ ಇಂಜೆಕ್ಷನ್ ಕೊಟ್ರು. ಯಡಿಯೂರಪ್ಪ ಬಿಜೆಪಿಯ ದೊಡ್ಡ ಮರ ಇದ್ದಹಾಗೆ. ವಿಷದ ಇಂಜೆಕ್ಷನ್ ಕೊಟ್ಟ ಪರಿಣಾಮ ಮರ ಒಣಗುತ್ತಿದೆ ಎಂದರು.

ಲಕ್ಷ್ಮಣ ಸವದಿ ಹಾಗೂ ಜಗದೀಶ ಶೆಟ್ಟರ್ ಅವರನ್ನು ಕಟ್ ಮಾಡಿ ಆಚೆ ಹಾಕಿದ್ರು. ವಿಜಯೇಂದ್ರ ಅವರನ್ನು ಸೋಲಿಸಲು ಸಂಚು ಮಾಡಿದ್ರು. ಸೋಮಣ್ಣ ಅವರನ್ನು ಟ್ರಾನ್ಸ್‌ಫರ್‌ ಮಾಡಿದರು. ಬಿಜೆಪಿಗೆ ಬೇಕಿರೋದು ಕಾಲಾಳುಗಳು. ಮಾಸ್ ಲೀಡರ್ ಬೇಕಿಲ್ಲ.

ಬಿಜೆಪಿಯಲ್ಲಿ ನಾಯಕರು ಯಾರು? ಪ್ರಲ್ಹಾದ ಜೋಶಿ, ಬಿ. ಎಲ್‌. ಸಂತೋಷ್ ಇಬ್ಬರನ್ನು ಯಾರನ್ನಾದರೂ ಸೇರಿಸಿಕೊಳ್ಳುತ್ತಾರೆ. ಇದರ ಬಿತ್ತನೆ ಇರೋದು ಹೆಡಗೆವಾರ್‌. ಇದರ ಮೂಲ ಬೀಜ ಅದೇ ಎಂದರು.

ಹಿಜಾಬ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಅವರ ಹಕ್ಕು ರೀ. ನಾನು ಅದನ್ನ ಹಾಕ್ಬೇಡಿ ಅಂತ ಹೇಳ್ತೀನಿ. ಆದ್ರೆ ನಾನೇ ಅದಕ್ಕೆ ಬೆಂಬಲ ನೀಡಿದ್ದೆ. ಅವರ ಹಕ್ಕನ್ನು ನಾವು ಯಾಕೆ ಕಿತ್ಕೊಳ್ಬೇಕು? ಅರಬ್ ಕಂಟ್ರಿಲಿ ಹಿಜಾಬ್ ಬೇಡ ಎಂದು ಪ್ರತಿಭಟನೆ ಮಾಡಿದ್ರು. ಅದು ಅವರ ಹಕ್ಕು. ದಬ್ಬಾಳಿಕೆ ಮಾಡಿ ಯಾಕೆ ಅದನ್ನ ತೆಗಿಬೇಕು? ಹಿಜಾಬ್ ಗಲಾಟೆಯಿಂದ ಅದೆಷ್ಟೋ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಯ್ತು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಹಿಜಾಬ್ ನಿಂದ ಅದನ್ನ ಕಿತ್ತುಕೊಳ್ಳಬಾರದು.

ಹಿಂದುತ್ವ ಅಂದ್ರೆ ವೈದಿಕ ಆಗಬಾರದು. ಸಾಧು ಸಂತರದ್ದು, ಬುದ್ಧ ಬಸವ ಅಂಬೇಡ್ಕರ್ ಅವರದ್ದು ಮತ್ತೊಂದು ಇದೆ. ಹಿಂದೂ ಧರ್ಮ ಅಂತ ಬಂದ್ರೆ ವೈದಿಕ. ಸಂವಿಧಾನಕ್ಕೆ ಬೇಕಿರೋದು ಬುದ್ಧ ಇತ್ಯಾದಿಗಳದ್ದು. ನಾವು ಹಿಂದುತ್ವ ಅಲ್ಲ, ಎಲ್ಲಾ ಸಮುದಾಯಗಳನ್ನು ಒಳಗೊಂಡ ಬಹುತ್ವ ಆಯ್ಕೆ ಎಂದಿದ್ದಾರೆ.

ಇದನ್ನೂ ಓದಿ: BS Yediyurappa: ಕಾಂಗ್ರೆಸ್‌ ಗ್ಯಾರಂಟಿ ಜಾರಿ ಬಗ್ಗೆ ನನಗೆ ಗ್ಯಾರಂಟಿ ಇದೆ: ಬಿ.ಎಸ್‌. ಯಡಿಯೂರಪ್ಪ

Exit mobile version