Site icon Vistara News

ರಾಜ್ಯಪಾಲರು ರಾಜಭವನದಲ್ಲಿ ಎಲ್ಲ ಆಟಗಳನ್ನೂ ಆಡಿದ್ದಾರೆ: ಹಳೆಯ ಕಥೆಗಳನ್ನು ಬಿಚ್ಚಿಟ್ಟ ಎಸ್‌.ಎಂ. ಕೃಷ್ಣ

SM Krishna Basavaraj bommai BS Yediyurappa

#image_title

ಬೆಂಗಳೂರು: ಹಿಂದಿನ ರಾಜ್ಯಪಾಲರುಗಳು ರಾಜಭವನದಲ್ಲಿ ಏನೆಲ್ಲ ಆಟಗಳನ್ನು ಆಡುತ್ತಿದ್ದರೋ ಅದಕ್ಕೆಲ್ಲ ಬ್ರೇಕ್‌ ಹಾಕಿದ್ದು ಕರ್ನಾಟಕದ ಮಾಜಿ ಸಿಎಂ (Karnataka Politics) ಎಸ್‌.ಆರ್.‌ ಬೊಮ್ಮಾಯಿ ಎಂದು ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಹೇಳಿದ್ದಾರೆ.

ಗಾಂಧಿಭವನದಲ್ಲಿ ಆಯೋಜಿಸಲಾಗಿದ್ದ ಎಸ್‌.ಆರ್‌. ಬೊಮ್ಮಾಯಿ ಅವರ ಜನ್ಮಶತಮಾನೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಸ್. ಆರ್. ಬೊಮ್ಮಾಯಿ ಮಾಡಿದ ಹೋರಾಟ ಅವೀಸ್ಮರಣೀಯವಾದದ್ದು. ಹಿಂದೆ ಇದ್ದ ರಾಜ್ಯಪಾಲರು ರಾಜ ಭವನದಲ್ಲಿ ಎಲ್ಲ ಆಟಗಳನ್ನು ಆಡಿದ್ದಾರೆ. ಬೂಟಾ ಸಿಂಗ್ ಅವರು ಶಾಸಕರನ್ನು ಕರೆದುಕೊಂಡು ಹೋಗಿ ರಾಜಭವನದಲ್ಲಿ ಮಲಗಿಸಿಕೊಂಡಿದ್ರು. ಅವಾಗ ನಾನು ಪ್ರತ್ಯಕ್ಷದರ್ಶಿಯಾಗಿ ಎಲ್ಲವನ್ನು ಕಂಡಿದ್ದೇನೆ. ಅಂದು ರಾಜ್ಯಪಾಲರ ಆಡುವ ಆಟಕ್ಕೆ ಇತಿ ಶ್ರೀ ಹಾಡಿದ್ದು ಎಸ್ ಆರ್ ಬೊಮ್ಮಾಯಿ ಅವರು ಎಂದ ಎಸ್‌.ಎಂ. ಕೃಷ್ಣ, ನಾನು ರಾಜ್ಯಪಾಲರಾಗಿದ್ದಾಗ ಈ ರೀತಿ ಆಗಿಲ್ಲ ಎಂದು ನಕ್ಕರು. ಕೆಲವು ರಾಜ್ಯಪಾಲರ ನಡೆಯಿಂದ ನಮ್ಮ ರಾಜ್ಯಕ್ಕೆ ದೊಡ್ಡ ಅಪಮಾನ ಆಗಿರೋದನ್ನು ನಾವು ಕೇಳಿದ್ದೇವೆ ಎಂದರು.

ಎಸ್‌.ಆರ್‌. ಬೊಮ್ಮಾಯಿ ಅವರು ಸೌಜನ್ಯ ಶೀಲರು. ಹಿಂದೆ ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ನಾನು ಅದೇ ಸ್ವಭಾವವನ್ನು ಅವರಲ್ಲಿ ನೋಡಿದ್ದೇನೆ. ಇದು ಅವರಿಗೆ ವಂಶಪಾರಂಪರ್ಯವಾಗಿ ಬಂದಿರುವಂತದ್ದು. ಕರ್ನಾಟಕಕ್ಕೆ ಇದು ವಿಶೇಷ ಅನ್ನೋದನ್ನು ನಾವೆಲ್ಲರೂ ಭಾವಿಸಿಕೊಳ್ಳಬೇಕು.

ಈಗ ಪ್ರಜಾಪ್ರಭುತ್ವ ಯಾವ ಕಡೆ ಹೋಗ್ತಿದೆ ಎಂದು ಎಲ್ಲರ ಯೋಚಿಸಬೇಕು. ಹಣದ ಪ್ರಭಾವ ಈ ಚುನಾವಣೆಗಳಲ್ಲಿ ಎಷ್ಟರ ಮಟ್ಟಿಗೆ ಹೋಗ್ತಿದೆ ಎಂಬುದನ್ನು ಇತ್ತೀಚಿಗೆ ನಡೆದ ಚುನಾವಣೆಗಳಲ್ಲಿ ನೋಡಬಹುದು. ಹಣ ಹಂಚಿಕೆಯ ಚುನಾವಣೆಯಿಂದ ಪ್ರಜಾಪ್ರಭುತ್ವಕ್ಕೆ ಎಷ್ಟು ಒಳ್ಳೆಯದನ್ಮು ಮಾಡಬಲ್ಲದು ಎಂಬುದನ್ನು ಮುಂದೆ ನೋಡಬೇಕಿದೆ. ಹಣದ ಹೊಳೆ ಹರಿಸೋದು ಅತ್ಯಂತ ದೋಷಣೆಯ ವಿಷಯ. ಇದರ ಬಗ್ಗೆ ನಮ್ಮ ನಾಡಿನ ಹಿತ ಚಿಂತಕರು ಗಂಭೀರವಾಗಿ ಆಲೋಚಿಸಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಪಿ.ಜಿ. ಆರ್‌. ಸಿಂಧ್ಯಾ ಸೇರಿ ಮತ್ತಿತರ ಗಣ್ಯರು ಭಾಗವಹಿಸಿದ್ದರು.

ಇದನ್ನೂ ಓದಿ: Congress Guarantee : ಜನರಿಗೆ ದೋಖಾ ಗ್ಯಾರಂಟಿ, 70 ಯುನಿಟ್‌ ಬಳಸುವ ಬಡವರಿಗೆ ಶಾಕ್‌: ಬೊಮ್ಮಾಯಿ ಟೀಕೆ

Exit mobile version