ಬೆಂಗಳೂರು: ಕೋವಿಡ್ ಪ್ರಕರಣಗಳು (covid 19) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಒಂದು ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಈ ಕುರಿತು ಚರ್ಚಿಸಲು ಮಹತ್ವದ ಸಭೆ ಕರೆಯಲಾಗಿದೆ. ಇದರೊಂದಿಗೆ ರಾಜ್ಯದ ಇಂದಿನ ಮಹತ್ವದ ಬೆಳವಣಿಗೆಗಳ (Karnataka Live News) ಕುರಿತು ಇಲ್ಲಿ ನೀವು ಓದಬಹುದು.
ನಿಲ್ಲುತ್ತಿದೆ ಮಕ್ಕಳ ಹೃದಯ! ಹೆಚ್ಚಾಯ್ತು ಅಲ್ಪಾಯುಷ್ಯದ ಭಯ; ಹೃದಯಾಘಾತಕ್ಕೆ ಮತ್ತೊಬ್ಬ ವಿದ್ಯಾರ್ಥಿ ಬಲಿ
60 ವರ್ಷ ದಾಟಿದ ನಂತರ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆಗಳೆಲ್ಲವೂ ಚಿಕ್ಕ ವಯಸ್ಸಿಗೆ ಕಾಡುವಂತಾಗಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ. ಅಫ್ಕಾರ್ (17) ಮೃತ ದುರ್ದೈವಿ.
ನಿಲ್ಲುತ್ತಿದೆ ಮಕ್ಕಳ ಹೃದಯ! ಹೆಚ್ಚಾಯ್ತು ಅಲ್ಪಾಯುಷ್ಯದ ಭಯ; ಹೃದಯಾಘಾತಕ್ಕೆ ಮತ್ತೊಬ್ಬ ವಿದ್ಯಾರ್ಥಿ ಬಲಿ
ಹೊಟ್ಟೆ ನೋವೆಂದ ಮಗಳನ್ನು ರೂಮಲ್ಲಿ ಕೂಡಿಟ್ಟು ಚಿತ್ರಹಿಂಸೆ ಕೊಟ್ಟರು; ಈಗವಳಿಗೆ ಕ್ಯಾನ್ಸರ್!
ಮೌಢ್ಯಕ್ಕೆ ಬಲಿಯಾದ ಕುಟುಂಬವೊಂದು ಅನಾರೋಗ್ಯದಿಂದ ನರಳಾಡುತ್ತಿದ್ದ ಯುವತಿಯನ್ನು ಮನೆಯೊಳಗೆ ಕೂಡಿಟ್ಟ ಅಮಾನವೀಯ ಘಟನೆಯೊಂದು ನಡೆದಿದೆ. ಜ್ಯೋತಿಷಿಯ ಮಾತು (Superstitious beliefs) ಕೇಳಿ ನಾಲ್ಕು ತಿಂಗಳ ಕಾಲ ಗೃಹ ಬಂಧನದಲ್ಲಿಟ್ಟು, ಯುವತಿ (26) ಪ್ರಾಣದ ಜತೆ ಆಟವಾಡಿದ್ದಾರೆ.
ಹೊಟ್ಟೆ ನೋವೆಂದ ಮಗಳನ್ನು ರೂಮಲ್ಲಿ ಕೂಡಿಟ್ಟು ಚಿತ್ರಹಿಂಸೆ ಕೊಟ್ಟರು; ಈಗವಳಿಗೆ ಕ್ಯಾನ್ಸರ್!
ಕಟ್ಟಿಂಗ್ ಮೆಷಿನ್‌ನಲ್ಲಿ ಮರ ಕಡಿಯುವಾಗ ಕುತ್ತಿಗೆ ಕಟ್! ವ್ಯಕ್ತಿ ಸಾವು
ಯಂತ್ರಗಳನ್ನು ಬಳಸುವಾಗ ಎಷ್ಟೇ ಎಚ್ಚರಿಕೆಯನ್ನು ಹೊಂದಿದ್ದರೂ ಸಾಕಾಗುವುದಿಲ್ಲ. ಸದ್ಯ ಮರ ಕಡಿಯುವಾಗ ಆಯತಪ್ಪಿ ಕಟ್ಟಿಂಗ್ ಮಿಷನ್ (Accidental death) ಮೇಲೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬೆಳ್ತಂಗಡಿಯ ಸಾವ್ಯ ಹೊಸಮನೆ ಎಂಬಲ್ಲಿ ಘಟನೆ ನಡೆದಿದೆ. ಸಾವ್ಯ ಹೊಸಮನೆ ನಿವಾಸಿ ಪ್ರಶಾಂತ್ ಪೂಜಾರಿ (36) ಮೃತ ದುರ್ದೈವಿ.
Accidental death: ಕಟ್ಟಿಂಗ್ ಮೆಷಿನ್‌ನಲ್ಲಿ ಮರ ಕಡಿಯುವಾಗ ಕುತ್ತಿಗೆ ಕಟ್! ವ್ಯಕ್ತಿ ಸಾವು
Yuva Nidhi Scheme: ಜ. 12ಕ್ಕೆ ಖಾತೆಗೆ ಯುವ ನಿಧಿ ಹಣ ಜಮೆ; ಸುಳ್ಳು ಹೇಳಿ ಪಡೆದರೆ ಕಾಸು ರಿಕವರಿ, ಕೇಸ್!
ಯುವ ನಿಧಿ ಯೋಜನೆಯ ದುರುಪಯೋಗದ ಬಗ್ಗೆ ಸರ್ಕಾರ ಕ್ರಮವಹಿಸಬೇಕಿದೆ. ಯುವನಿಧಿ ದುರುಪಯೋಗ ತಡೆಯುವ ಉದ್ದೇಶದಿಂದ ತಪ್ಪಿತಸ್ಥರ ಮೇಲೆ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
https://vistaranews.com/karnataka/bengaluru/money-recovery-in-case-of-fraud-in-yuva-nidhi-scheme/537449.html
ಕೋವಿಡ್ ಫಿಯರ್; ಮಕ್ಕಳು ಕೆಮ್ಮಿದ್ದರೂ ಶಾಲೆಗೆ ಕಳಿಸ್ಬೇಡಿ! ಪೋಷಕರಿಗೆ ಕ್ಯಾಮ್ಸ್ ರಿಕ್ವೆಸ್ಟ್
ಇಷ್ಟು ಸೈಲೆಂಟ್ ಆಗಿದ್ದ ಕೋವಿಡ್ (Covid 19) ಇದೀಗ ವೈಲೆಂಟ್ ಆಗುತ್ತಿದೆ. ಕೋವಿಡ್ ರೂಪಾಂತರಿ ವೈರಸ್ (COVID Subvariant JN.1) ಜನರಲ್ಲಿ ಫಿಯರ್ ಹೆಚ್ಚಿಸಿದೆ. ಸದ್ಯ ಮಕ್ಕಳು ಸ್ವಲ್ಪ ಕಮ್ಮಿದ್ದರೂ ಶಾಲೆಗೆ ಕಳಿಸಬೇಡಿ, ಬದಲಿಗೆ ಮನೆಯಲ್ಲೇ ಜೋಪಾನ ಮಾಡಿ ಎಂದು ಕ್ಯಾಮ್ಸ್ (ಖಾಸಗಿ ಶಾಲೆಗಳ ಒಕ್ಕೂಟ) ಮನವಿ ಮಾಡಿದೆ.
ಕೋವಿಡ್ ಫಿಯರ್; ಮಕ್ಕಳು ಕೆಮ್ಮಿದ್ದರೂ ಶಾಲೆಗೆ ಕಳಿಸ್ಬೇಡಿ! ಪೋಷಕರಿಗೆ ಕ್ಯಾಮ್ಸ್ ರಿಕ್ವೆಸ್ಟ್