ನಿಲ್ಲುತ್ತಿದೆ ಮಕ್ಕಳ ಹೃದಯ! ಹೆಚ್ಚಾಯ್ತು ಅಲ್ಪಾಯುಷ್ಯದ ಭಯ; ಹೃದಯಾಘಾತಕ್ಕೆ ಮತ್ತೊಬ್ಬ ವಿದ್ಯಾರ್ಥಿ ಬಲಿ - Vistara News

ಆರೋಗ್ಯ

ನಿಲ್ಲುತ್ತಿದೆ ಮಕ್ಕಳ ಹೃದಯ! ಹೆಚ್ಚಾಯ್ತು ಅಲ್ಪಾಯುಷ್ಯದ ಭಯ; ಹೃದಯಾಘಾತಕ್ಕೆ ಮತ್ತೊಬ್ಬ ವಿದ್ಯಾರ್ಥಿ ಬಲಿ

Heart Attack: ಚಿಕ್ಕಮಗಳೂರಿನಲ್ಲಿ ಹೃದಯಾಘಾತಕ್ಕೆ 7ನೇ ತರಗತಿ ವಿದ್ಯಾರ್ಥಿನಿ ಬಲಿಯಾಗಿದ್ದಳು. ಈ ಘಟನೆ ಮಾಸುವ ಮುನ್ನವೇ ಇದೀಗ ಉಡುಪಿಯಲ್ಲಿ ಪಿಯುಸಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

VISTARANEWS.COM


on

1st PUC student dies of heart attack
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಉಡುಪಿ: 60 ವರ್ಷ ದಾಟಿದ ನಂತರ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆಗಳೆಲ್ಲವೂ ಚಿಕ್ಕ ವಯಸ್ಸಿಗೆ ಕಾಡುವಂತಾಗಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ. ಅಫ್ಕಾರ್ (17) ಮೃತ ದುರ್ದೈವಿ.

ಅಫ್ಕಾರ್‌ ಕಲ್ಯಾಣಪುರ ಮಿಲಾಗ್ರಿಸ್ ಪಿಯು ಕಾಲೇಜಿನ ಪ್ರಥಮ ಪಿಯುಸಿ ಓದುತ್ತಿದ್ದ. ಸ್ಟೂಡೆಂಟ್ ಇಸ್ಲಾಮಿಕ್ ಅರ್ಗನೈಸೇಶನ್ ಆಫ್ ಇಂಡಿಯಾದ ಸಕ್ರಿಯ ಸದಸ್ಯನಾಗಿದ್ದ. ಅಫ್ಕಾರ್‌ ಹುಟ್ಟಿನಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಡಿಸೆಂಬರ್ 6ರಂದು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆದಿದ್ದ.

ಕಳೆದ 18ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದ ಅಫ್ಕಾರ್‌ಗೆ ಊರಿಗೆ ಹಿಂದಿರುಗಿದ ಸಂದರ್ಭ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಸ್ಪತ್ರೆಗೆ ಸಾಗಿಸುವ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದ.

ಕುಸಿದು ಬಿದ್ದವಳ ಹೃದಯ ಬಡಿತವೇ ನಿಂತಿತ್ತು!

ಚಿಕ್ಕಮಗಳೂರಿನಲ್ಲಿ 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಳು. ಬುಧವಾರ ಬೆಳಗ್ಗೆ ಶಾಲೆಗೆ ತೆರಳುತ್ತಿದ್ದಾಗ ಕುಸಿದು ಬಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿತ್ತು. 13 ವರ್ಷದ ಬಾಲಕಿ ಸೃಷ್ಟಿ ಮೃತಪಟ್ಟ ಬಾಲಕಿಯಾಗಿದ್ದಾಳೆ. ಮೂಡಿಗೆರೆ ತಾಲೂಕಿನ ಕೆಸವಳಲು ಜೋಗಣ್ಣನಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.

ದಾರದಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸೃಷ್ಟಿ ಶಾಲೆಗೆ ತೆರಳುತ್ತಿದ್ದಾಗ ಹಠಾತ್‌ ಆಗಿ ಕುಸಿದು ಬಿದ್ದಿದ್ದಳು. ಹೀಗಾಗಿ ಸೃಷ್ಟಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಆಕೆ ಮೃತಪಟ್ಟಿದ್ದಾಳೆ. ಬಳಿಕ ಪರೀಕ್ಷೆ ನಡೆಸಿದ ಮೂಡಿಗೆರೆಯ ಎಂಜಿಎಂ ಸರ್ಕಾರಿ ಆಸ್ಪತ್ರೆ ವೈದ್ಯರು ಹೃದಯಾಘಾತವಾಗಿದೆ ಎಂದು ಘೋಷಿಸಿದ್ದಾರೆ.

ಪ್ರಾಥಮಿಕ ಆಸ್ಪತ್ರೆಯಲ್ಲಿ ಇಲ್ಲ ಮೂಲ ಸೌಕರ್ಯ

ದಾರದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇರಲಿಲ್ಲ. ಅಲ್ಲದೆ, ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳು ಸಹ ಇಲ್ಲ. ಈ ಕಾರಣದಿಂದ ಬಾಲಕಿಯೊಬ್ಬಳು ಮೃತಪಟ್ಟಂತೆ ಆಗಿದೆ ಎಂದು ಗ್ರಾಮಸ್ಥರು ಜಿಲ್ಲಾಡಳಿತ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ಗ್ರಾಮದಲ್ಲೇ ಆಸ್ಪತ್ರೆಯಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮೂಡಿಗೆರೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸೃಷ್ಟಿ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಗೋಳಿಡುತ್ತಿದ್ದಾರೆ.

ಸೃಷ್ಟಿಗೆ ಆಗಾಗ ಇತ್ತು ತಲೆ ಸುತ್ತುವ ಸಮಸ್ಯೆ

ಸೃಷ್ಟಿಗೆ ಆಗಾಗ ತಲೆ ಸುತ್ತುವ ಸಮಸ್ಯೆ ಇತ್ತು ಎನ್ನಲಾಗಿದೆ. ಆದರೆ, ಈ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಬಗ್ಗೆ ವೈದ್ಯರು ಸಲಹೆ ನೀಡುವುದೇನೆಂದರೆ, ಚಿಕ್ಕ ಮಕ್ಕಳಿಗೆ ತಲೆ ಸುತ್ತುವ ಸಂದರ್ಭ ಇದ್ದರೆ ಅವರನ್ನು ಕೂಡಲೇ ತಜ್ಞ ವೈದ್ಯರಿಗೆ ತೋರಿಸಬೇಕು. ಇದರಿಂದ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Pig Kidney: ಹಂದಿಯ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳ ಬಳಿಕ ಸಾವು

Pig Kidney: ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಮೂತ್ರಪಿಂಡ ಕಸಿ ಪಡೆದ ಮೊದಲ ವ್ಯಕ್ತಿ, ಇಂಗ್ಲೆಂಡ್‌ನ ವೇಮೌತ್‌ನ ನಿವಾಸಿ 62 ವರ್ಷದ ರಿಕ್ ಸ್ಲೇಮನ್ ಶಸ್ತ್ರ ಚಿಕಿತ್ಸೆ ನಡೆದ ಸುಮಾರು ಎರಡು ತಿಂಗಳ ನಂತರ ನಿಧನ ಹೊಂದಿದ್ದಾರೆ. ಆದರೆ ಅವರ ನಿಧನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕಿಡ್ನಿ ಕಸಿಯ ಪರಿಣಾಮದಿಂದ ಅವರು ನಿಧನ ಹೊಂದಿದ್ದಾರೆ ಎಂಬುದಕ್ಕೆ ನಮಗೆ ಯಾವುದೇ ಸೂಚನೆ ಸಿಕ್ಕಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

VISTARANEWS.COM


on

Pig Kidney
Koo

ಬೋಸ್ಟನ್: ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಮೂತ್ರಪಿಂಡ (Pig Kidney) ಕಸಿ ಪಡೆದ ಮೊದಲ ವ್ಯಕ್ತಿ, ಇಂಗ್ಲೆಂಡ್‌ನ ವೇಮೌತ್‌ನ ನಿವಾಸಿ 62 ವರ್ಷದ ರಿಕ್ ಸ್ಲೇಮನ್ (Rick Slayman) ಶಸ್ತ್ರ ಚಿಕಿತ್ಸೆ ನಡೆದ ಸುಮಾರು ಎರಡು ತಿಂಗಳ ನಂತರ ನಿಧನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ಬೋಸ್ಟನ್‌ನ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ರಿಕ್ ಸ್ಲೇಮನ್ ಅವರಿಗೆ ಹಂದಿಯ ಮೂತ್ರಪಿಂಡ ಕಸಿ ಮಾಡಲಾಗಿತ್ತು. ʼʼಹಂದಿ ಮೂತ್ರಪಿಂಡವು ಕನಿಷ್ಠ ಎರಡು ವರ್ಷಗಳವರೆಗೆ ಕಾರ್ಯ ನಿರ್ವಹಿಸುತ್ತದೆ ಎಂದು ನಂಬಿದ್ದೆವು. ಆದರೆ ರಿಕ್ ಸ್ಲೇಮನ್ ಅವರ ಹಠಾತ್‌ ನಿಧನ ಆಘಾತ ತಂದಿದೆʼʼ ಎಂದು ವೈದ್ಯರು ತಿಳಿಸಿದ್ದಾರೆ.

“ರಿಕ್ ಸ್ಲೇಮನ್ ಅವರ ಹಠಾತ್ ನಿಧನದಿಂದ ತೀವ್ರ ದುಃಖವಾಗಿದೆ. ಕಿಡ್ನಿ ಕಸಿಯ ಪರಿಣಾಮದಿಂದ ಅವರು ನಿಧನ ಹೊಂದಿದ್ದಾರೆ ಎಂಬುದಕ್ಕೆ ನಮಗೆ ಯಾವುದೇ ಸೂಚನೆ ಸಿಕ್ಕಿಲ್ಲ. ಸ್ಲೇಮನ್ ಅವರನ್ನು ವಿಶ್ವಾದ್ಯಂತದ ಕಿಡ್ನಿ ಸಮಸ್ಯೆ ಇರುವವರ ಭರವಸೆ ಎಂದೇ ಪರಿಗಣಿಸಲಾಗುತ್ತದೆ. ಸ್ಲೇಮನ್ ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸುತ್ತಿದ್ದೇವೆʼʼ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಅಂತಿಮ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಸ್ಲೇಮನ್ ಅವರಿಗೆ ಮಾರ್ಚ್ 16ರಂದು ಶಸ್ತ್ರಚಿಕಿತ್ಸೆ ನಡೆಸಿ ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಟೈಪ್ 2 ಮಧುಮೇಹಿಯಾಗಿದ್ದ ಅವರು ಈ ಹಿಂದೆ 2018ರಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು. ಆದಾಗ್ಯೂ ಐದು ವರ್ಷಗಳ ನಂತರ ಕಸಿ ಮಾಡಿಸಿಕೊಂಡಿದ್ದ ಮೂತ್ರಪಿಂಡ ವಿಫಲವಾಗಲು ಪ್ರಾರಂಭಿಸಿತು ಮತ್ತು ಅಂದಿನಿಂದ ಅವರು ಡಯಾಲಿಸಿಸ್‌ನಲ್ಲಿದ್ದರು.

ಕೊನೆಗೆ ಅವರು ಹಂದಿಯ ಮೂತ್ರಪಿಂಡವನ್ನು ಕಸಿ ಮಾಡಿಸಿಕೊಳ್ಳಲು ಒಪ್ಪಿಗೆ ನೀಡಿದ್ದರು. ಈ ವೇಳೆ ಅವರು ಇದು ತಾನು ಎದುರಿಸುವಂತಹ ಸಮಸ್ಯೆ ಇರುವವರಿಗೆ ಭರವಸೆಯ ಬೆಳಕನ್ನು ಒದಗಿಸಲಿದೆ ಎಂದು ಹೇಳಿದ್ದರು. ಅದರಂತೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ವೈದ್ಯರ ಪ್ರಯೋಗ ಯಶಸ್ವಿಯಾಗಿತ್ತು. ಆ ಮೂಲಕ ರಿಕ್ ಸ್ಲೇಮನ್ ಹಂದಿ ಮೂತ್ರಪಿಂಡ ಕಸಿ ಸ್ವೀಕರಿಸಿದ ವಿಶ್ವದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಸುಮಾರು ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದು, ಬಳಿಕ ಮನೆಗೆ ತೆರಳಿದ್ದರು. ಅವರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡು ಬಂದಿದೆ. ಮನೆಯಲ್ಲಿ ಚಿಕಿತ್ಸೆ ಮುಂದುವರಿಸುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದರು. ʼʼಸ್ಲೇಮನ್‌ಗೆ ಕಸಿ ಮಾಡಲಾದ ಹಂದಿಯ ಮೂತ್ರಪಿಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ರಕ್ತದಲ್ಲಿನ ತ್ಯಾಜ್ಯವನ್ನು ತೆಗೆದು ಹಾಕುತ್ತಿದ್ದು, ಮೂತ್ರವನ್ನು ಉತ್ಪಾದಿಸುತ್ತದೆ. ದೇಹದ ದ್ರವಗಳನ್ನು ಸಮತೋಲನಗೊಳಿಸುತ್ತದೆʼʼ ಎಂದು ಅಂದು ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಇದರಿಂದ ಮುಂಬರುವ ದಿನಗಳಲ್ಲಿ ಮಾನವನ ಮೇಲೆ ಪ್ರಾಣಿಗಳ ಅಂಗಾಂಗ ಕಸಿಯ ಪ್ರಯೋಗದ ಹೊಸ ಯುಗವೊಂದು ಪ್ರಾರಂಭವಾಗುವ ಸಾಧ್ಯತೆಯಿದೆ ಎಂದೇ ವಿಶ್ಲೇಷಿಸಲಾಗಿತ್ತು.

ಈ ಹಿಂದೆ ಹಂದಿಯ ಹೃದಯವನ್ನು ಕಸಿ ಮಾಡಿದ ಕೆಲವೇ ವಾರಗಳಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಹೀಗಾಗಿ ಈ ಪ್ರಯೋಗ ಭರವಸೆ ಮೂಡಿತ್ತು.

ಇದನ್ನೂ ಓದಿ: Pig kidney: ಮನುಷ್ಯನಿಗೆ ಹಂದಿಯ ಕಿಡ್ನಿ ಅಳವಡಿಕೆ ಸಕ್ಸೆಸ್! ರೋಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್

Continue Reading

ಆರೋಗ್ಯ

Protein Supplements: ಪ್ರೊಟಿನ್‌ ಸಪ್ಲಿಮೆಂಟ್‌ನ ಸೈಡ್‌ ಎಫೆಕ್ಟ್‌ ಏನೇನು? ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯ ಸೂಚನೆ ಇಲ್ಲಿದೆ

ಭಾರತೀಯರಿಗಾಗಿಯೇ ವಿಶೇಷವಾಗಿ ಈ ಆಹಾರ ಮಾರ್ಗದರ್ಶನಗಳನ್ನು ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ ಬಿಡುಗಡೆ ಮಾಡಿದೆ. ಐಎಂಆರ್‌ಸಿ ಅಡಿಯಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕಾಗಿ ನೇಮಿಸಲಾದ ತಜ್ಞರ ಸಮಿತಿ ಈ ಶಿಫಾರಸಿ ಜೀವನಶೈಲಿಯ ರೋಗಗಳನ್ನು ದೂರ ಇರಿಸಲು ಅಗತ್ಯವಾದ ಸೂಚನೆಗಳನ್ನು 13 ವರ್ಷಗಳ ನಂತರ ಬಿಡುಗಡೆ ಮಾಡಿದೆ. ಯಾವುದೇ ಉತ್ಪನ್ನವನ್ನು ಖರೀದಿಸುವಾಗ ಅದರ ಲೇಬಲ್‌ ಮೇಲೆ ನಮೂದಿಸಿರುವ ಮಾಹಿತಿಯನ್ನು ಪರಿಶೀಲಿಸಿ (Protein Supplements) ಎಂದು ಗ್ರಾಹಕರಿಗೆ ತಿಳಿಸಿದೆ.

VISTARANEWS.COM


on

Protein Supplements
Koo

ದೇಹದ ಸ್ನಾಯುಗಳನ್ನು ಹೆಚ್ಚಿಸುವ ಉದ್ದೇಶದಿಂದ ದೀರ್ಘಕಾಲ ತೆಗೆದುಕೊಳ್ಳುವ ಎಲ್ಲ ಪೂರಕಗಳು ಅಡ್ಡ ಪರಿಣಾಮಗಳನ್ನು ಉಂಟುಮಾಡುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಎಂಆರ್‌ಸಿ) ಎಚ್ಚರಿಸಿದೆ. ಬದಲಿಗೆ, ಸಮತೋಲಿತ ಆಹಾರದ ಮೂಲಕವೇ ಸತ್ವಗಳನ್ನು ದೇಹಕ್ಕೆ ಒದಗಿಸುವುದಕ್ಕೆ ಶಿಫಾರಸು ಮಾಡಿದೆ. ಪ್ರೊಟೀನ್‌ ಮತ್ತು ವಿಟಮಿನ್‌ಗಳ (Protein Supplements) ಪೂರಕಗಳನ್ನು ಸೇವಿಸುವ ಬಗ್ಗೆ ಕೆಲವು ಮಾರ್ಗದರ್ಶಿಸೂತ್ರಗಳನ್ನು ಈ ಸಂಸ್ಥೆ ಬಿಡುಗಡೆ ಮಾಡಿದ್ದು, ಉಪ್ಪು, ಸಕ್ಕರೆ ಮತ್ತು ಸಂಸ್ಕರಿತ ಆಹಾರಗಳ ಸೇವನೆಗೆ ಕಡಿವಾಣ ಹಾಕುವ ಅಗತ್ಯವನ್ನು ಒತ್ತಿಹೇಳಿದೆ. ಭಾರತೀಯರಿಗಾಗಿಯೇ ವಿಶೇಷವಾಗಿ ಈ ಮಾರ್ಗದರ್ಶನಗಳನ್ನು, ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ ಬಿಡುಗಡೆ ಮಾಡಿದೆ. ಐಎಂಆರ್‌ಸಿ ಅಡಿಯಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕಾಗಿ ನೇಮಿಸಲಾದ ತಜ್ಞರ ಸಮಿತಿ ಈ ಶಿಫಾರಸಿ ಜೀವನಶೈಲಿಯ ರೋಗಗಳನ್ನು ದೂರ ಇರಿಸಲು ಅಗತ್ಯವಾದ ಸೂಚನೆಗಳನ್ನು 13 ವರ್ಷಗಳ ನಂತರ ಇದಾಗಿದೆ. ಯಾವುದೇ ಉತ್ಪನ್ನವನ್ನು ಖರೀದಿಸುವಾಗ ಅದರ ಲೇಬಲ್‌ ಮೇಲೆ ನಮೂದಿಸಿರುವ ಮಾಹಿತಿಯನ್ನು ಪರಿಶೀಲಿಸಿ ಎಂದು ಗ್ರಾಹಕರಿಗೆ ತಿಳಿಸಿದೆ.

Protein Supplements

ಪೂರಕಗಳೇಕೆ ಬೇಡ?

ದೀರ್ಘ ಕಾಲದವರೆಗೆ ಪ್ರೊಟೀನ್‌ ಪೂರಕಗಳನ್ನು ಸೇವಿಸುವುದರಿಂದ ಕಿಡ್ನಿ ತೊಂದರೆಗಳು ಕಾಡಬಹುದು; ಮೂಳೆಗಳಲ್ಲಿನ ಖನಿಜಾಂಶ ಕ್ಷೀಣಿಸಬಹುದು. ಹಾಗಾಗಿ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನು ಆಹಾರದ ಮೂಲಕವೇ ತೆಗೆದುಕೊಳ್ಳುವುದು ಸುರಕ್ಷಿತವಾದ ಮಾರ್ಗ ಎಂದು ಸಂಸ್ಥೆ ಹೇಳಿದೆ. ಪ್ರೊಟೀನ್‌ ಪೂರಕಗಳನ್ನು ಮೊಟ್ಟೆ, ಹಾಲು, ಸೋಯ, ಬಟಾಣಿ ಮುಂತಾದ ವಸ್ತುಗಳಿಂದ ಮಾಡಲಾಗುತ್ತದೆ. ಆದರೆ ಕೆಲವು ಉತ್ಪನ್ನಗಳಲ್ಲಿ ರುಚಿ ಹೆಚ್ಚಿಸುವ ಉದ್ದೇಶದಿಂದ ಸಕ್ಕರೆ ಅಥವಾ ಯಾವುದಾದರೂ ಕೃತಕ ವಸ್ತುಗಳನ್ನು ಸೇರಿಸಲಾಗುತ್ತದೆ. ಇಂಥವುಗಳನ್ನು ದೀರ್ಘಕಾಲದವರೆಗೆ ಸೇವಿಸುವುದು ಆರೋಗ್ಯಕ್ಕೆ ಸೂಕ್ತವಲ್ಲ. ಶೇ. ೫೬ಕ್ಕೂ ಹೆಚ್ಚಿನ ಭಾರತೀಯರಿಗೆ ಹೆಚ್ಚಿನ ಸಾರಿ ಅನಾರೋಗ್ಯಗಳು ಕಾಡುವುದು ಅಸಮರ್ಪಕ ಆಹಾರ ಪದ್ಧತಿಯಿಂದ. ಹಾಗಾಗಿ ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸುವುದು ರೋಗಮುಕ್ತವಾಗುವಲ್ಲಿ ಮಹತ್ವದ್ದು ಎಂದು ಹೇಳಿದೆ.

Protein Supplements

ಆಹಾರ ಹೇಗಿರಬೇಕು?

ಸಮತೋಲಿತ ಆಹಾರ ಪದ್ಧತಿಯೆಂದರೆ ಹೇಗಿರಬೇಕು? ಆಹಾರದಲ್ಲಿ ಯಾವುದು ಎಷ್ಟು ಇದ್ದರೆ ಸರಿ ಅಥವಾ ತಪ್ಪು? ಸಂಸ್ಥೆಯ ಪ್ರಕಾರ, ದಿನದ ಒಟ್ಟು ಕ್ಯಾಲರಿಗಳಲ್ಲಿ ಶೇ ೫. ರಷ್ಟು ಮಾತ್ರವೇ ಸಕ್ಕರೆಯ ಕ್ಯಾಲರಿಯಿಂದ ಬರಬಹುದು. ಉಳಿದಂತೆ ಧಾನ್ಯ ಮತ್ತು ಸಿರಿಧಾನ್ಯಗಳಿಂದ ದೊರೆಯುವ ಶಕ್ತಿಯು ಶೇ. 45ನ್ನು ಮೀರುವಂತಿಲ್ಲ. ಕಾಳುಗಳು, ಮಾಂಸ ಮುಂತಾದವುಗಳ ಕ್ಯಾಲರಿ ಶೇ. 15 ಇದ್ದರೆ ಸಾಕಾಗುತ್ತದೆ. ಉಳಿದ ಶಕ್ತಿಗಳೆಲ್ಲ ಕಾಯಿ-ಬೀಜಗಳು, ತರಕಾರಿ-ಹಣ್ಣುಗಳು ಮತ್ತು ಡೇರಿ ಉತ್ಪನ್ನಗಳಿಂದ ಬರಬೇಕು. ಈ ಎಲ್ಲಾ ಕ್ಯಾಲರಿಗಳಲ್ಲೂ ಶೇ. 30ಕ್ಕಿಂತ ಕಡಿಮೆ ಶಕ್ತಿ ಕೊಬ್ಬಿನಿಂದ ಬಂದರೆ ಸಾಕಾಗುತ್ತದೆ. ಆದರೆ ಮಾಂಸ ಮತ್ತು ಕಾಳುಗಳ ಬೆಲೆ ದುಬಾರಿ ಎನ್ನುವ ಕಾರಣಕ್ಕಾಗಿ ಧಾನ್ಯಗಳನ್ನು ಭಾರತೀಯರು ಮಿತಿಮೀರಿ ಬಳಸುತ್ತಿದ್ದಾರೆ. ಇದು ಅತಿಯಾದ ಪಿಷ್ಟದ ಸೇವನೆಗೆ ಕಾರಣವಾಗುತ್ತಿದೆ. ಹಾಗಾಗಿ ಅಗತ್ಯ ಅಮೈನೊ ಆಮ್ಲಗಳು ಮತ್ತು ಕೊಬ್ಬಿನಾಮ್ಲಗಳು ಸರಿಯಾಗಿ ದೊರೆಯದಿದ್ದರೆ, ಸತ್ವಗಳ ಕೊರತೆ ಉಂಟಾಗುತ್ತದೆ. ಮಾತ್ರವಲ್ಲ, ರಕ್ತದೊತ್ತಡ ಮತ್ತು ಟೈಪ್‌ 2 ಮಧುಮೇಹಕ್ಕೂ ಕಾರಣವಾಗುತ್ತದೆ ಎಂದು ಸಂಸ್ಥೆ ಎಚ್ಚರಿಸಿದೆ.
ಅವಧಿಗೆ ಮುನ್ನವೇ, ಅಂದರೆ ಪೂರ್ಣಾಯಸ್ಸು ಬದುಕದೆಯೇ ಸಾವನ್ನಪ್ಪುವವರ ಸಂಖ್ಯೆ ಇದರಿಂದ ಹೆಚ್ಚಾಗುತ್ತಿದೆ. ತಪ್ಪಾದ ಆಹಾರ ಪದ್ಧತಿ ಮತ್ತು ಅದರಿಂದ ಬರುತ್ತಿರುವ ಜೀವನಶೈಲಿಯ ರೋಗಗಳನ್ನು ಸರಿಪಡಿಸಿಕೊಳ್ಳುವುದರಿಂದ ಇಂಥ ಸಾವನ್ನು ತಡೆಯಬಹುದು. ಇದಕ್ಕಾಗಿ ಪೋಷಕಾಂಶಗಳು ಸಮತೋಲನೆಯಲ್ಲಿ ದೊರೆಯುವಂತೆ ಆಹಾರ ಸೇವಿಸಬೇಕು. ವ್ಯಾಯಾಮವೆಂಬುದು ಬದುಕಿನ ಭಾಗ ಆಗಿರಬೇಕು. ಸಂಸ್ಕರಿತ ಆಹಾರಗಳು ಹಾಗೂ ಅದರಿಂದ ಬರುವ ಉಪ್ಪು ಮತ್ತು ಸಕ್ಕರೆಯಂಶಗಳನ್ನು ನಿಯಂತ್ರಿಸಬೇಕು. ಆಗ ಮಾತ್ರ ಸತ್ವಗಳ ಕೊರತೆ ಮತ್ತು ಬೊಜ್ಜಿನಂಥ ತೊಂದರೆಗಳಿಂದ ದೂರವಾಗುವುದಕ್ಕೆ ಸಾಧ್ಯ.

ಇದನ್ನೂ ಓದಿ: Vitamin Side Effects: ವಿಟಮಿನ್‌ ಮಾತ್ರೆಗಳನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ?

ಪ್ರೊಟೀನ್‌ ಮೂಲಗಳೇನು?

ಪ್ರೊಟೀನ್‌ ಪೂರಕಗಳು ಬೇಡವೆಂದರೆ, ಅಗತ್ಯ ಪ್ರಮಾಣದ ಸತ್ವ ಯಾವುದರಿಂದ ಬರಬೇಕು? ಎಂಥಾ ಆಹಾರವನ್ನು ಸೇವಿಸಬೇಕು? ಲೀನ್‌ ಮೀಟ್‌ ಅಥವಾ ಕಡಿಮೆ ಕೊಬ್ಬಿನ ಮಾಂಸಗಳು, ಮೀನುಗಳು, ಮೊಟ್ಟೆ, ಡೇರಿ ಉತ್ಪನ್ನಗಳು, ಕಾಳುಗಳು ಮತ್ತು ಕಾಯಿ-ಬೀಜಗಳಲ್ಲಿ ಉತ್ತಮ ಗುಣಮಟ್ಟದ ಪ್ರೊಟೀನ್‌ ನೈಸರ್ಗಿಕವಾಗಿ ದೊರೆಯುತ್ತದೆ.

Continue Reading

ಆರೋಗ್ಯ

International Nurses’s Day: ಇಂದು ನರ್ಸ್‌ಗಳ ದಿನ; ಈ ದಿನಾಚರಣೆ ಹಿನ್ನೆಲೆ ಏನು?

ಕಠಿಣ ಸಂದರ್ಭಗಳಲ್ಲೂ ಧೃತಿಗೆಡದಂತೆ ರೋಗಿಗಳ ಶುಶ್ರೂಷೆ ನಿರ್ವಹಿಸುವ ನರ್ಸ್‌ಗಳ (International Nurses’s Day) ಸೇವಾ ಮನೋಭಾವಕ್ಕೆ ಧನ್ಯವಾದ ಹೇಳುವುದಕ್ಕೆಂದು ನಿಗದಿಯಾದ ದಿನವೇ ಮೇ 12. ನರ್ಸಿಂಗ್‌ ಕ್ಷೇತ್ರಕ್ಕೆ ಹೊಸಭಾಷ್ಯ ಬರೆದ ಫ್ಲಾರೆನ್ಸ್‌ ನೈಟಿಂಗೇಲ್‌ ಅವರನ್ನು ನೆನಪಿಸಿಕೊಳ್ಳುವ ಸಂದರ್ಭವೂ ಇದು ಹೌದು. ಈ ದಿನದ ಹಿನ್ನೆಲೆ ಏನು? ಸಂದೇಶ ಏನು? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

International Nurses’s Day
Koo

ಸಮಾಜದ ಸ್ವಾಸ್ಥ್ಯ ಕಾಪಾಡುವುದಕ್ಕೆ ನರ್ಸ್‌ಗಳು (International Nurses’s Day) ಅಥವಾ ವೈದ್ಯಕೀಯ ಶುಶ್ರೂಷಕಿಯರು ನೀಡುತ್ತಿರುವ ಕೊಡುಗೆ ದೊಡ್ಡದು. ಆಸ್ಪತ್ರೆ ಸಣ್ಣದೇ ಇರಲಿ, ದೊಡ್ಡದೇ ಇರಲಿ. ಶುಶ್ರೂಷಕರಿಲ್ಲದೆ ಕೆಲಸ ನಡೆಯುವುದಿಲ್ಲ. ಇಂದು ಸರಳ ಅಂದಾಜಿನ ಪ್ರಕಾರ, 12 ತಾಸಿನ ಪಾಳಿಯೊಂದರಲ್ಲಿ, ನರ್ಸ್‌ಗಳು ಸುಮಾರು 5-6 ಮೈಲುಗಳಷ್ಟು ದೂರ ನಡೆಯುತ್ತಾರೆ. ಕೋವಿಡ್‌ ಸಮಯದಲ್ಲಿ ನರ್ಸ್‌ಗಳು ಮಾಡಿದ ಕೆಲಸಕ್ಕೆ ಇಡೀ ಲೋಕ ಸಾಕ್ಷಿಯಾಗಿದೆ. ಆದರೂ ಇಂಥ ವೃತ್ತಿಯ ಬಗ್ಗೆ ಇರಬೇಕಾದ ಗೌರವ ಇಲ್ಲ ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ಮಾತ್ರ ಸಾಕ್ಷಿಗಳು ಬೇಕಿಲ್ಲ. ಪ್ರತಿ ವರ್ಷ ಮೇ ತಿಂಗಳ 12ನೇ ದಿನವನ್ನು ʻಅಂತಾರಾಷ್ಟ್ರೀಯ ಶುಶ್ರೂಷಕರ ದಿನʼ ಎಂದು ಗುರುತಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.

Elder Woman in Wheelchair with Caregiver

ಅಂದೇ ಏಕೆ

ಆಧುನಿಕ ಕಾಲದಲ್ಲಿ ಶುಶ್ರೂಷಕರ ವೃತ್ತಿಗೆ ಹೊಸ ಭಾಷ್ಯ ಬರೆದ ಫ್ಲಾರೆನ್ಸ್‌ ನೈಟಿಂಗೇಲ್‌ ಅವರ ಜನ್ಮ ದಿನದ ನೆನಪಿಗಾಗಿ ಮೇ 12ರಂದು ಈ ದಿನವನ್ನು ಆಚರಿಸಲಾಗುತ್ತಿದೆ. 1850ರ ಯುದ್ಧ ಕಾಲದಲ್ಲಿ ಗಾಯಗೊಂಡಿದ್ದ ಬ್ರಿಟನ್‌ ಸೈನಿಕರನ್ನು ನೈಟಿಂಗೇಲ್‌ ಮತ್ತು ಆಕೆಯ ತಂಡ ಆರೈಕೆ ಮಾಡಿದ್ದ ರೀತಿ ಇಂದಿಗೂ ಚರಿತ್ರೆಯ ಭಾಗವಾಗಿ ನಿಂತಿದೆ. ಮೊದಲಿಗೆ ಆಕೆ ಆಸ್ಪತ್ರೆಗೆ ಆಗಮಿಸಿದಾಗ ಅಲ್ಲಿನ ಸ್ಥಿತಿಗತಿಯನ್ನು ನೋಡಿ ಹೌಹಾರಿದ್ದಳು. ಇಡೀ ಸ್ಥಳ ಕೊಳಕು ಕೂಪದಂತೆ ಕಾಣುತ್ತಿತ್ತು. ಆ ಸ್ಥಳವನ್ನೆಲ್ಲ ಸ್ವಚ್ಛಗೊಳಿಸಿ, ಅಲ್ಲಿ ಅಗತ್ಯವಿದ್ದಷ್ಟು ಆಹಾರ ಮತ್ತು ಔಷಧಿಗಳನ್ನು ತರಿಸಿಕೊಂಡಳು. 1860ರಲ್ಲಿ ಲಂಡನ್‌ನಲ್ಲಿ ನರ್ಸಿಂಗ್‌ ಶಾಲೆಯೊಂದನ್ನು ತೆರೆದಳು. ಆನಂತರದಿಂದ ವಿಶ್ವದ ಹಲವೆಡೆಗಳನ್ನು ನರ್ಸಿಂಗ್‌ಗಾಗಿ ಪ್ರತ್ಯೇಕ ಶಾಲೆಗಳು, ಕೋರ್ಸ್‌ಗಳು ಅಗತ್ಯವೆನ್ನುವ ಅರಿವು ಹೆಚ್ಚಿತು. ಹಾಗಾಗಿ ಈ ಮೇರು ವ್ಯಕ್ತಿಯನ್ನು ಸಹ ಮೇ 12ರಂದು ನೆನಪಿಸಿಕೊಳ್ಳಲಾಗುತ್ತದೆ.
ಆಸ್ಟ್ರೇಲಿಯ, ಕೆನಡಾ, ಅಮೆರಿಕ, ಬ್ರಿಟನ್‌ ಸೇರಿದಂತೆ ಹಲವಾರು ದೇಶಗಳಲ್ಲಿ ಇಡೀ ವಾರವನ್ನೇ ಶುಶ್ರೂಷಕರ ಸಪ್ತಾಹವೆಂದು ಆಚರಿಸುವ ಕ್ರಮವಿದೆ. ಇದಕ್ಕಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ತಮಗೆ ಆರೈಕೆ ಮಾಡಿದ ನರ್ಸ್‌ಗಳಿಗೆ ಧನ್ಯವಾದದ ರೂಪವಾಗಿ ಉಡುಗೊರೆಗಳನ್ನೂ ನೀಡಲಾಗುತ್ತದೆ. ಮಾತ್ರವಲ್ಲ, ನರ್ಸಿಂಗ್‌ ವೃತ್ತಿಯ ಬಗ್ಗೆ ಸಮಾಜದಲ್ಲಿರುವ ತರತಮದ ಭಾವಗಳನ್ನು ಹೋಗಲಾಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತದೆ.

Nurse with senior patient

ಸವಾಲುಗಳೇನು?

ಈ ಬಾರಿಯ ಶುಶ್ರೂಷಕರ ದಿನದ ಘೋಷವಾಕ್ಯ- “ನಮ್ಮ ಶುಶ್ರೂಷಕರು; ನಮ್ಮ ಭವಿಷ್ಯ. ಆರೈಕೆಯ ಹಿಂದಿನ ಆರ್ಥಿಕ ಶಕ್ತಿ”. ಈ ವೃತ್ತಿಯಲ್ಲಿರುವಂಥ ಅವಕಾಶಗಳು, ಇದಕ್ಕಿರುವ ಘನತೆ, ಬಡವ-ಬಲ್ಲಿದನೆಂಬ ಭೇದವಿಲ್ಲದಂತೆ ಸೇವೆ ಮಾಡುವ ಮನೋಭಾವ, ಸಹನೆಯಂಥ ಘನ ಗುಣಗಳನ್ನು ಹೆಚ್ಚಾಗಿ ಪ್ರಚುರ ಪಡಿಸುವುದರಿಂದ ಆರೈಕೆಗೆ ಆರ್ಥಿಕ ಬಲವೂ ಲಭ್ಯವಾಗಲು ಸಾಧ್ಯವಿದೆ. ಯುದ್ಧ, ನೈಸರ್ಗಿಕ ಪ್ರಕೋಪಗಳು, ಕೋವಿಡ್‌ನಂಥ ಮಹಾಮಾರಿ- ಹೀಗೆ ಯಾವುದೇ ಸಂದರ್ಭದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾದರೂ, ಇದರ ಒತ್ತಡ ಬೀಳುವುದು ಶುಶ್ರೂಷಕರ ಮೇಲೆ. ರೋಗಿಗಳ ನೋವು, ಅಸಹಾಯಕತೆ; ತಮ್ಮವರನ್ನು ಕಳೆದುಕೊಂಡವರ ಕೋಪ-ತಾಪಗಳೆಲ್ಲ ಕೆಲವೊಮ್ಮೆ ತಿರುಗುವು ಶುಶ್ರೂಷಕರ ಮೇಲೆ. ಅಂಥ ಸಂದರ್ಭದಲ್ಲೂ ಕರುಣೆಯಿಂದಲೇ ವರ್ತಿಸಿ, ಅವರನ್ನು ಆರೈಕೆ ಮಾಡುವುದು, ಸಮಾಧಾನ ಮಾಡುವುದು ಅತ್ಯಂತ ಕಷ್ಟದ ಕೆಲಸ. ಆದರೆ ಅದನ್ನಾದರೂ ನರ್ಸ್‌ಗಳು ಧೃತಿಗೆಡದಂತೆ ಮಾಡುತ್ತಾರೆ. ಹಾಗಾಗಿ ಅವರಿಗೆ ಧನ್ಯವಾದ ಹೇಳುವಂಥ ನಿಮ್ಮಿಷ್ಟದ ಸಣ್ಣ, ಸರಳ ಕೆಲಸ ಯಾವುದನ್ನಾದರೂ ಮಾಡಬಹುದು.

Continue Reading

ಆರೋಗ್ಯ

ICMR Dietary Guidelines: ನಿಮ್ಮ ಆರೋಗ್ಯ ಚೆನ್ನಾಗಿರಬೇಕೆ? ತಜ್ಞ ಸಮಿತಿಯ ಈ ಆಹಾರ ಸಲಹೆ ಪಾಲಿಸಿ

ಕೆಲವೊಮ್ಮೆ ತಿನ್ನುವ ಕಡು ಬಯಕೆಯನ್ನು ನಿಯಂತ್ರಿಸುವುದು ಕಷ್ಟ. ಈ ಸಂದರ್ಭದಲ್ಲಿ ಪರ್ಯಾಯವಾಗಿ ಬಳಸಬಹುದಾದ ಕೆಲವು ಆಹಾರ ಪದಾರ್ಥಗಳಿವೆ. ಈ ಕುರಿತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮಾರ್ಗಸೂಚಿಯನ್ನು (ICMR Dietary Guidelines) ಬಿಡುಗಡೆ ಮಾಡಿದೆ. ಈ ಬಗ್ಗೆ ಇಲ್ಲಿದೆ ವಿಸ್ತೃತ ಮತ್ತು ಉಪಯುಕ್ತ ಮಾಹಿತಿ.

VISTARANEWS.COM


on

By

ICMR Dietary Guidelines
Koo

ಬೆಳಗ್ಗೆ ಉಪಾಹಾರ (breakfast) ಚೆನ್ನಾಗಿಯೇ ಆಗಿದೆ. ಆದರೂ ಊಟಕ್ಕಿಂತ (lunch) ಮೊದಲು ಏನಾದರೂ ತಿನ್ನಬೇಕು ಎನ್ನುವ ಕಡು ಬಯಕೆ ಉಂಟಾಗುವುದು ಸಾಮಾನ್ಯ. ಆದರೆ ಎಲ್ಲರಿಗೂ ಇದನ್ನು ನಿಯಂತ್ರಿಸಲಾಗದು. ಹೀಗಾಗಿ ಕರಿದ ತಿಂಡಿಗಳು, ಕುರುಕಲು ತಿಂಡಿಗಳು (snaks), ಸಾಫ್ಟ್ ಡ್ರಿಂಕ್ಸ್ (soft drinks), ಜ್ಯೂಸ್‌ (juice) ಮೊದಲಾದವುಗಳ ಮೊರೆ ಹೋಗುತ್ತೇವೆ. ಆದರೆ ಇದು ಆರೋಗ್ಯಕರವಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಭಾರತೀಯರ ಆಹಾರ ಕ್ರಮ ಹೇಗಿರಬೇಕು ಎನ್ನುವ ಮಾರ್ಗಸೂಚಿಯನ್ನು (ICMR Dietary Guidelines) ಬಿಡುಗಡೆ ಮಾಡಿದ್ದು, ಇದರಲ್ಲಿ ಹೆಚ್ಚಿನ ಕ್ಯಾಲೋರಿ ಆಹಾರ ಪದಾರ್ಥಗಳಿಗೆ ಪರ್ಯಾಯ ಬಳಕೆ ಮಾಡಬಹುದಾದ ಪದಾರ್ಥಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಯಾವುದು ಆರೋಗ್ಯಕರ?

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹೆಚ್ಚಿನ ಕ್ಯಾಲೋರಿ ಆಹಾರ ಪದಾರ್ಥಗಳಿಗೆ ಪರ್ಯಾಯವಾಗಿ ಆರೋಗ್ಯಕರ ಪದಾರ್ಥಗಳನ್ನು ಉಲ್ಲೇಖಿಸಿದೆ. ಇದರಲ್ಲಿ ಪಿಜ್ಜಾ, ಡೊನಟ್ಸ್ ಮತ್ತು ಹಾಟ್‌ಡಾಗ್‌ಗಳ ಬದಲಿಗೆ ಸಲಾಡ್‌ ಮತ್ತು ಮೊಳಕೆ ಭರಿಸಿದ ಕಾಳುಗಳನ್ನು ಸೇವಿಸಬಹುದು. ಆಳವಾದ ಕರಿದ ತಿಂಡಿಗಳ ಬದಲಿಗೆ ಬೀಜಗಳು ಮತ್ತು ತರಕಾರಿ ಬೀಜಗಳನ್ನು ತಿನ್ನಬಹುದು.

ಹಣ್ಣಿನ ರಸವನ್ನು ಸೇವಿಸುವ ಬದಲು ಸಂಪೂರ್ಣ ಹಣ್ಣುಗಳನ್ನು ಸೇವಿಸಬೇಕು. ಜಾಮ್ ಮತ್ತು ಸಾಸ್‌ಗಳ ಬದಲಿಗೆ ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಚಟ್ನಿ ಮತ್ತು ಡಿಪ್‌ಗಳನ್ನು ಬಳಸಬಹುದು.


ಇದನ್ನೂ ಓದಿ: ICMR Dietary Guidelines: ಬೊಜ್ಜು ತಡೆಯಲು ಏನು ಮಾಡಬೇಕು? ಮಾರ್ಗಸೂಚಿ ಬಿಡುಗಡೆ ಮಾಡಿದ ಸಂಶೋಧನಾ ಸಂಸ್ಥೆ

ನಾವು ಸೇವಿಸುವ ಆಹಾರದಲ್ಲಿ ಹೆಚ್ಚು ಫ್ಯಾಟ್, ಸಕ್ಕರೆ, ಉಪ್ಪು, ಸಂಸ್ಕರಿಸಿದ ಆಹಾರಗಳ ಬಳಕೆಯನ್ನು ಕಡಿಮೆ ಮಾಡಿದಷ್ಟು ಹೆಚ್ಚು ಕಾಲ ನಾವು ಆರೋಗ್ಯವಾಗಿ ಜೀವಿಸಬಹುದು.


ಕುಡಿಯಲು ಏನಿರಬೇಕು?

ರೆಡಿಮೇಡ್ ಸಾಫ್ಟ್ ಡ್ರಿಂಕ್ಸ್ ,ಜ್ಯೂಸುಗಳ ಬದಲಿಗೆ ಎಳನೀರು, ಮಜ್ಜಿಗೆ, ಲಿಂಬೆ ಹಣ್ಣುಮ್ ಚಿಯಾ ಬೀಜ, ಕಿತ್ತಳೆ, ಕಲ್ಲಂಗಡಿ, ಮಾವಿನ ಹಣ್ಣು, ಫೈನಾಪಲ್, ದಾಳಿಂಬೆ ಹಣ್ಣಿನ ರಸವನ್ನು ಕುಡಿಯಬಹುದು.

ಟೀ, ಕಾಫಿಯನ್ನು ಬರಿ ಹೊಟ್ಟೆಯಲ್ಲಿ ಊಟಕ್ಕಿಂತ ಅರ್ಧ ಗಂಟೆ ಮೊದಲು ಅಥವಾ ಅನಂತರ ಸೇವಿಸುವುದು ಒಳ್ಳೆಯದಲ್ಲ. ಇದರ ಬದಲು ಗ್ರೀನ್ ಟೀ, ಬ್ಲಾಕ್ ಟೀ ಕುಡಿಯಬಹುದು. ಆಲ್ಕೋಹಾಲ್ ಸೇವನೆಯು ಆರೋಗ್ಯಕರವಲ್ಲ. ಇದರ ಬದಲಿಗೆ ಫ್ರೆಶ್ ಹಣ್ಣಿನ ರಸವನ್ನು ಸೇವನೆ ಮಾಡಬಹುದು.

ತಿನ್ನಲು ಯಾವುದಿರಬೇಕು?

  1. 1. ಪಿಜ್ಜಾ, ಡೋನಟ್ ಬದಲಿಗೆ ಸಲಾಡ್, ತರಕಾರಿ ಬೀಜಗಳನ್ನು ಸೇವಿಸಬಹುದು.

2. ಡೀಪ್ ಫ್ರೈಡ್ ತಿಂಡಿಗಳ ಬದಲು ಬೀಜ, ಧಾನ್ಯಗಳನ್ನು ಸೇವಿಸಿ.

3. ಕೇಕ್, ಚಾಕಲೇಟ್, ಸ್ವೀಟ್ಸ್ ಬದಲಿಗೆ ಮನೆಯಲ್ಲೇ ಮಾಡಿರುವ ವಿವಿಧ ಧಾನ್ಯಗಳ ಉಂಡೆಗಳು, ಚಿಕ್ಕಿ, ಹುರಿದ ಕಾಳು, ಬೀಜಗಳನ್ನು ತಿನ್ನಬಹುದು.

4. ಜಾಮ್, ಸಾಸ್ ಬದಲಿಗೆ ಮನೆಯಲ್ಲೇ ಮಾಡಿರುವ ಚಟ್ನಿ, ಡಿಪ್ ಗಳನ್ನು ಸೇವಿಸಬಹುದು.

Continue Reading
Advertisement
Prajwal Revanna Case Will Not Be Handed Over To CBI Says Cm Siddaramaiah
Lok Sabha Election 202418 mins ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್;‌ ಸಿಬಿಐಗೆ ಏಕೆ ಕೊಡಲ್ಲ ಎಂದು ಕಾರಣ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ

Drowned in water
ಚಿಕ್ಕಬಳ್ಳಾಪುರ20 mins ago

Drowned in water : ಕೆರೆಯಲ್ಲಿ ಈಜುವ ಸವಾಲು; ಜೋಶ್‌ನಲ್ಲಿ ನೀರಿಗೆ ಇಳಿದ ಟೆಕ್ಕಿ ಮೃತ್ಯು

PoK
ಪ್ರಮುಖ ಸುದ್ದಿ22 mins ago

PoK Crisis: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ದಂಗೆಯೆದ್ದ ಜನ, ಗಲಾಟೆ; ಭಾರತದ ಜತೆ ವಿಲೀನಕ್ಕೆ ಆಗ್ರಹ!

Pig Kidney
ವಿದೇಶ27 mins ago

Pig Kidney: ಹಂದಿಯ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳ ಬಳಿಕ ಸಾವು

Arvind Kejriwal
ದೇಶ2 hours ago

Arvind Kejriwal: ಚೀನಾದಿಂದ ಭಾರತದ ನೆಲ ವಾಪಸ್‌ ಸೇರಿ 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ2 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Road Accident
ಕ್ರೈಂ2 hours ago

Road Accident : ತಂದೆ ಜತೆಗೆ ಕಾರ್‌ ವಾಶ್‌ ಮಾಡುವಾಗ ಎಕ್ಸಿಲೇಟರ್‌ ತುಳಿದ ಬಾಲಕ; ಆಟವಾಡುತ್ತಿದ್ದ ಮಗು ಅಪ್ಪಚ್ಚಿ

Ram Charan get mobbed by fans during public appearances
ಸಿನಿಮಾ2 hours ago

Ram Charan: ಚುನಾವಣಾ ಪ್ರಚಾರದ ವೇಳೆ ರಾಮ್ ಚರಣ್ ಶರ್ಟ್‌ ಹರಿದ ಫ್ಯಾನ್ಸ್‌: ಅಲ್ಲು ಸುತ್ತ ಜನವೋ ಜನ!

Mother's Day 2024 Duniya Vijay jaggesh Post Viral
ಸಿನಿಮಾ2 hours ago

Mother’s Day 2024: ಅಮ್ಮನ ನೆನೆದಾಗ ಮಗುವಾಗುವೆ ಎಂದ ಜಗ್ಗೇಶ್‌: ದುನಿಯಾ ವಿಜಯ್‌ ಭಾವುಕ ಪೋಸ್ಟ್‌!

Job Alert
ಉದ್ಯೋಗ3 hours ago

Job Alert: ಟೆಕ್ಸ್‌ಟೈಲ್ಸ್‌ ಕಮಿಟಿಯಿಂದ 40 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಬೆಂಗಳೂರಿನಲ್ಲೂ ಇದೆ ಪೋಸ್ಟಿಂಗ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ2 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ4 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ11 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು1 day ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ3 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

ಟ್ರೆಂಡಿಂಗ್‌