Site icon Vistara News

Karnataka Weather : ದಕ್ಷಿಣ ಒಳನಾಡಲ್ಲಿ ಇನ್ನೆರಡು ದಿನ ಬಿಡದೆ ಸುರಿಯಲಿದೆ ಮಳೆ

Rain warning girls walking in road

ಬೆಂಗಳೂರು: ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮತ್ತು ಕರಾವಳಿಯ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ (Karnataka Weather) ಸಾಧ್ಯತೆ ಇದೆ.

ಭಾರೀ ಮಳೆ ಮುನ್ನೆಚ್ಚರಿಕೆ

ಅ.11ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಹಾಸನ, ಮೈಸೂರು, ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣರುತ್ತದೆ. ಒಂದು ಅಥವಾ ಎರಡು ಬಾರಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ಮಳೆ ಸುರಿಯಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇನ್ನು ಮುಂದಿನ 48 ಗಂಟೆಯೊಳಗೆ ದಕ್ಷಿಣ ಒಳನಾಡಿನ ಹಾಸನ, ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಇಲ್ಲೆಲ್ಲ ತಾಪಮಾನ ಏರಿಕೆ!

ಉತ್ತರ ಒಳನಾಡಿನ ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ಕೊಪ್ಪಳದಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2-4 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇತ್ತ ದಕ್ಷಿಣ ಒಳನಾಡಿನ ಮಂಡ್ಯ, ಹಾಸನ, ಚಿತ್ರದುರ್ಗ, ದಾವಣಗೆರೆ ಮತ್ತು ಮೈಸೂರು ಸೇರಿದಂತೆ ಕರಾವಳಿಯ ಉತ್ತರ ಕನ್ನಡ, ಉಡುಪಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ 2-3 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Karnataka Weather : ಭಾರಿ ಮಳೆಗೆ ಮುಳುಗಿದ ಬೆಂಗಳೂರು! ಟ್ರ್ಯಾಕ್ಟರ್‌ನಲ್ಲೇ ಜನರ ಸಂಚಾರ!

ದಕ್ಷಿಣ ಒಳನಾಡಲ್ಲಿ ಮುಂಗಾರು ಚುರುಕು

ರಾಜ್ಯದಲ್ಲಿ ಸೋಮವಾರ (ಅ.9)ರಂದು ನೈರುತ್ಯ ಮುಂಗಾರು ದಕ್ಷಿಣ ಒಳನಾಡಿನಲ್ಲಿ ಚುರುಕಾಗಿತ್ತು. ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ದುರ್ಬಲವಾಗಿತ್ತು. ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮತ್ತು ಕರಾವಳಿ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ಇತ್ತು. ದಕ್ಷಿಣ ಒಳನಾಡಲ್ಲಿ ಮಳೆ ಅಬ್ಬರ ಇದ್ದರೆ ಇತ್ತ ಉತ್ತರ ಒಳನಾಡಿನ ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 35.8 ಡಿ.ಸೆ ದಾಖಲಾಗಿದೆ. ವಿಜಯಪುರಯಲ್ಲಿ ಕಡಿಮೆ ಉಷ್ಣಾಂಶ 18.0 ಡಿ.ಸೆ ದಾಖಲಾಗಿದೆ.

ಭಾರಿ ಮಳೆಯು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ 9 ಸೆಂ.ಮೀ, ಶ್ರವಣಬೆಳಗೊಳದಲ್ಲಿ 8 ಸೆಂ.ಮೀ ಹಾಗೂ ದೇವನಹಳ್ಳಿ, ಬೆಂಗಳೂರು ನಗರದಲ್ಲಿ ತಲಾ 7 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ, ಶ್ರೀರಂಗಪಟ್ಟಣದಲ್ಲಿ ತಲಾ 6 ಸೆಂ.ಮೀ, ಬೆಂಗಳೂರು ಕೆಐಎಎಲ್, ಎಲೆಕ್ಟ್ರಾನಿಕ್ ಸಿಟಿ ಎಆರ್‌ಜಿ, ಕೆಎಸ್‌ಎನ್‌ಡಿಎಂಸಿ ಕ್ಯಾಂಪಸ್ ತಲಾ 5 ಸೆಂ.ಮೀ ಮಳೆಯಾಗಿದೆ. ಕೊಳ್ಳೇಗಾಲ, ರಾಮನಗರ, ಸುತ್ತೂರು , ಉತ್ತರಹಳ್ಳಿ, ಜಿಕೆವಿಕೆ, ಕನಕಪುರದಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ.

ಧರ್ಮಸ್ಥಳ, ಅರಕಲಗೂಡು, ಕೊಣನೂರು, ಸಿ.ಆರ್‌.ಪಟ್ನಾ, ಮೈಸೂರು, ಸರಗೂರು, ಟಿ ನರಸೀಪುರ, ನಾಪೋಕ್ಲು , ಕೃಷ್ಣರಾಜಪೇಟೆ , ಮಾಲೂರಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ. ಹುಂಚದಕಟ್ಟೆ, ಹೆಸರಘಟ್ಟ, ಹಾರಂಗಿ, ಹಾಸನದಲ್ಲಿ ತಲಾ 2 ಸೆಂ.ಮೀ, ಕೃಷ್ಣರಾಜಸಾಗರ, ಬೆಳ್ಳೂರು, ಸೋಮವಾರಪೇಟೆ , ಹೊಸಕೋಟೆ, ಮಾಗಡಿ, ಸಾಲಿಗ್ರಾಮ, ಜಯಪುರ, ಚಾಮರಾಜನಗರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version