ಬೆಂಗಳೂರು/ಕೊಡಗು: ಮಂಗಳವಾರ (ಅ.17) ಕೊಡಗಿನ ಮಡಿಕೇರಿ ತಾಲೂಕಿನ ಭಾಗಮಂಡಲ ಸಮೀಪದ ತಲಕಾವೇರಿಯಲ್ಲಿ ಧಾರಾಕಾರ (Rain News) ಮಳೆಯಾಗಿದೆ. ದಟ್ಟ ಮಂಜಿನೊಂದಿಗೆ ಮಳೆ (Karnataka Weather Forecast) ಅಬ್ಬರಿಸುತ್ತಿದ್ದು, ತಲಕಾವೇರಿಯಲ್ಲಿಂದು ರಾತ್ರಿ 1.27ಕ್ಕೆ ತೀರ್ಥೋದ್ಭವ ಆಗಲಿದೆ. ಹೀಗಾಗಿ ಭಕ್ತಾಧಿಗಳು ರಾತ್ರಿ ಪೂರ್ತಿ ಹೀಗೆ ಮಳೆ ಸುರಿದರೆ ಪೂಜಾಕೈಂಕಾರ್ಯ ಹೇಗೆ ಎಂದು ಚಿಂತಿಸುತ್ತಿದ್ದಾರೆ.
ಅಕ್ಟೋಬರ್ 18ರಂದು ಕೊಡಗು ಹಾಗೂ ಮೈಸೂರಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಐಎಂಡಿ ಯೆಲ್ಲೋ ಅಲರ್ಟ್ ನೀಡಿದೆ.
ಉಳಿದಂತೆ ದಕ್ಷಿಣ ಒಳನಾಡಿನ ಚಾಮರಾಜನಗರದಲ್ಲೂ ಪ್ರತ್ಯೇಕ ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮಂಡ್ಯ, ರಾಮನಗರ ಮತ್ತು ತುಮಕೂರಲ್ಲಿ ಲಘುವಾಗಿ ಸಾಧಾರಣ ಮಳೆಯಾಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ ಮತ್ತು ದಾವಣಗೆರೆಯಲ್ಲಿ ಚದುರಿದಂತೆ ಅತಿ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಬಳ್ಳಾಪುರದಲ್ಲಿ ಒಣಹವೆ ಇರಲಿದೆ.
ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡದಲ್ಲಿ ಭರ್ಜರಿ ಮಳೆಯಾಗಲಿದ್ದು, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಸಾಧಾರಣ ಮಳೆಯಾಗಲಿದೆ.
ಇದನ್ನೂ ಓದಿ: Road Accident : ಭೀಕರ ಅಪಘಾತ; ನವರಾತ್ರಿ ಪೂಜೆಗೆ ಹೋದ ಮಹಿಳೆಯರು ಮಸಣ ಸೇರಿದರು
ಇಲ್ಲೆಲ್ಲ ಅಲ್ಪ ಮಳೆ
ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ವಿಜಯನಗರ, ವಿಜಯಪುರ, ಕೊಪ್ಪಳ, ಗದಗ, ಬಾಗಲಕೋಟೆಯಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದ್ದು, ಉಳಿದೆಡೆ ಒಣ ಹವೆ ಇರಲಿದೆ.
ಮೈಸೂರು-ಮಂಡ್ಯದಲ್ಲಿ ಅಬ್ಬರಿಸಿರುವ ವರುಣ
ನೈರುತ್ಯ ಮುಂಗಾರು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಉತ್ತರ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿಯ ಬಹುತೇಕ ಕಡೆಗಳಲ್ಲಿ, ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ, ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿರುವ ವರದಿ ಆಗಿದೆ. ಸಾಲಿಗ್ರಾಮದಲ್ಲಿ 9, ಕೃಷ್ಣರಾಜಪೇಟೆಯಲ್ಲಿ 8, ವಿರಾಜಪೇಟೆ 6, ಮಂಗಳೂರು ವಿಮಾನ ನಿಲ್ದಾಣ 5, ಜಯಪುರದಲ್ಲಿ 4 ಸೆಂ.ಮೀ ಮಳೆಯಾಗಿದೆ.
ಪಣಂಬೂರು, ಉಡುಪಿ, ಟಿ ನರಸೀಪುರ, ಹುಣಸೂರಲ್ಲಿ ತಲಾ 3ಸೆಂ.ಮೀ ಮಳೆಯಾಗಿದೆ. ಮಾಣಿ, ಮಂಗಳೂರು, ಬೆಳ್ತಂಗಡಿ, ಧರ್ಮಸ್ಥಳ, ಯಲ್ಲಾಪುರ, ಕದ್ರಾ, ಗೋಕರ್ಣ, ಸಿದ್ದಾಪುರ, ಲೋಂಡಾ, ಶೃಂಗೇರಿ, ಮೈಸೂರಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಮೂಲ್ಕಿ, ಪುತ್ತೂರು, ಕಿರವತ್ತಿ , ಕೋಟ, ಕೂಲ್ಲೂರು, ಎನ್ ಆರ್ ಪುರ, ಕಡೂರು, ತರೀಕೆರೆ, ಕಮ್ಮರಡಿ, ಹಾರಂಗಿ, ನಾಪೋಕ್ಲು, ಅರಕಲಗೂಡು ಹಾಸನ, ಬೆಳ್ಳೂರು , ಕುಣಿಗಲ್‌ನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ