ಬೆಂಗಳೂರು: ರಾಜ್ಯದಲ್ಲಿ ಇನ್ನೆರಡು ದಿನಗಳು ಮಳೆಯಾಗುವ (Rain News) ಮುನ್ಸೂಚನೆ ಇದೆ. ಬುಧವಾರ ಕರಾವಳಿಯ ಬಹುತೇಕ ಕಡೆಗಳಲ್ಲಿ ದಕ್ಷಿಣ ಒಳನಾಡಿ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ (Karnataka Weather Forecast) ಇದೆ. ಉತ್ತರ ಒಳನಾಡಲ್ಲೂ ಹಗುರದಿಂದ ಕೂಡಿದ ಮಳೆಯಾಗಲಿದೆ.
ಜನವರಿ 10ರಂದು ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ವ್ಯಾಪಕ ಮಳೆಯಾಗಬಹುದು. ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ ಹಾಗೂ ಕಲಬುರಗಿ, ವಿಜಯಪುರದ ಪ್ರತ್ಯೇಕ ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಯಾದಗಿರಿ, ರಾಯಚೂರು, ಕೊಪ್ಪಳ, ಗದಗದಲ್ಲಿ ಒಣಹವೆ ಮುಂದುವರಿಯಲಿದೆ.
ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಕೋಲಾರ, ಮಂಡ್ಯ, ಮೈಸೂರು, ರಾಮನಗರ, ವಿಜಯನಗರ, ತುಮಕೂರಲ್ಲಿ ಮಳೆಯಾಗಲಿದೆ. ಮಲೆನಾಡಿನ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗಿನ ಹಲವೆಡೆ ಮಳೆಯ ಸಿಂಚನವಾಗಲಿದೆ.
ಜನವರಿ 11ರಂದು ಬಹುತೇಕ ಕಡೆಗಳಲ್ಲಿ ಒಣಹವೆಯೇ ಮೇಲುಗೈ ಸಾಧಿಸಲಿದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಒಳನಾಡಿನ ಚಾಮರಾಜನಗರ, ಕೋಲಾರ ಹಾಗೂ ರಾಮನಗರದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಶುಷ್ಕ ವಾತಾವರಣಿರಲಿದೆ.
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 25 ಡಿ.ಸೆ -19 ಡಿ.ಸೆ
ಮಂಗಳೂರು: 32 ಡಿ.ಸೆ – 22 ಡಿ.ಸೆ
ಚಿತ್ರದುರ್ಗ: 27 ಡಿ.ಸೆ – 18 ಡಿ.ಸೆ
ಗದಗ: 31 ಡಿ.ಸೆ – 18 ಡಿ.ಸೆ
ಹೊನ್ನಾವರ: 35 ಡಿ.ಸೆ- 23 ಡಿ.ಸೆ
ಕಲಬುರಗಿ: 32 ಡಿ.ಸೆ – 18 ಡಿ.ಸೆ
ಬೆಳಗಾವಿ: 29 ಡಿ.ಸೆ – 19 ಡಿ.ಸೆ
ಕಾರವಾರ: 35 ಡಿ.ಸೆ – 23 ಡಿ.ಸೆ
ಇದನ್ನೂ ಓದಿ: Peenya Flyover : ವಾಹನ ಸವಾರರೇ ಗಮನಿಸಿ ಜನವರಿ 16 ರಿಂದ ಪೀಣ್ಯ ಫ್ಲೈಓವರ್ ಬಂದ್!
ಚಳಿಗಾಲದಲ್ಲಿ ಮುಖಕಾಂತಿ ಹೆಚ್ಚಿಸುವುದು ಹೇಗೆ?
ಚಳಿಗಾಲದಲ್ಲಿ ಚರ್ಮ ಒಣಗುವುದು, ಕಳಾಹೀನವಾಗುವುದು ಹೆಚ್ಚು. ಅದರಲ್ಲೂ ವಯಸ್ಸು 40 ದಾಟುತ್ತಿದ್ದಂತೆ ಒಣ ಚರ್ಮದ ಸಮಸ್ಯೆ ಇನ್ನಷ್ಟು ಹೆಚ್ಚುತ್ತದೆ. ಹಾಗೆಂದು ಪ್ರಾಯ ಹೆಚ್ಚುತ್ತಿದ್ದಂತೆ ಸುಂದರವಾಗಿ ಕಾಣಬೇಕೆಂಬ ಆಸೆ ಕಡಿಮೆಯಾಗಬೇಕೆಂಬ ನಿಯಮವಿಲ್ಲವಲ್ಲ. ಒಣ ಚರ್ಮದ ಸಮಸ್ಯೆಗಳೆಲ್ಲಾ ಚಿಗುರುವುದೇ ಚಳಿಗಾಲದಲ್ಲಿ. ಇದರಿಂದ ಚರ್ಮ ಸುಕ್ಕಾಗುವುದು, ಕಾಂತಿಹೀನವಾಗುವುದು ಇವೆಲ್ಲ ಸಾಮಾನ್ಯ. ತ್ವಚೆಗೆ ಮೇಲಿಂದ ಏನನ್ನೇ ಹಚ್ಚಿ ಉಪಚಾರ ಮಾಡಿದರೂ ಹೆಚ್ಚಿನವು ತಾತ್ಕಾಲಿಕ ಪರಿಹಾರಗಳು. ಚರ್ಮಕ್ಕೆ ದೇಹದ ಒಳಗಿನಿಂದ ಪೋಷಣೆ ದೊರೆತರೆ ಮಾತ್ರವೇ ಕಳೆಯೂ ಹೆಚ್ಚುವುದಕ್ಕೆ ಸಾಧ್ಯ. ಹಾಗಾಗಿ ಊಟ ಬಲ್ಲವನಿಗೆ ವಯಸ್ಸೂ ಆಗುವುದಿಲ್ಲ ಎನ್ನುತ್ತಾರೆ ಆಹಾರ ತಜ್ಞರು. ಅಂದರೆ ಸರಿಯಾಗಿ ಊಟ ಮಾಡುವವರು ಚಿರಯೌವನಿಗರು ಎಂದಲ್ಲ, ಅವರಿಗೆ ಬೇಗ ವಯಸ್ಸಾದಂತೆ ಕಾಣುವುದಿಲ್ಲ ಎಂಬುದು ಅದರರ್ಥ. ದೇಹಕ್ಕೆ ವಯಸ್ಸಾಗುತ್ತಿದ್ದಂತೆ ಸಾಯುವ ಜೀವಕೋಶಗಳನ್ನು ಮತ್ತೆ ಮತ್ತೆ ಸೃಷ್ಟಿಸಿಕೊಳ್ಳಲು ಸೂಕ್ತವಾದ ಆಹಾರ ಸೇವಿದಾಗ ಮಾತ್ರವೇ, ಚರ್ಮಕ್ಕಾಗುವ ಹಾನಿಯನ್ನು ತುಂಬಲು ಸಾಧ್ಯ. ಅದಕ್ಕಾಗಿ (skincare in winter) ಏನು ಮಾಡಬೇಕು?
ವಯಸ್ಸಾಗುವುದು ಸಾಮಾನ್ಯ ದೈಹಿಕ ಪ್ರಕ್ರಿಯೆ. ಆಂತರಿಕವಾಗಿ ಕಾಲಕ್ರಮೇಣ ವಯಸ್ಸಾಗುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಬಾಹ್ಯಸ್ವರೂಪದಲ್ಲಿ, ಅಂದರೆ ನಿದ್ದೆ ಸಾಕಾಗದೆ, ಪೋಷಣೆ ಕಡಿಮೆಯಾಗಿ, ಚಳಿ, ವಿಪರೀತ ಹವಾಮಾನ, ಧೂಳು, ಹೊಗೆಯಂಥ ಮಾಲಿನ್ಯಗಳಿಂದ ಚರ್ಮ ಸುಕ್ಕಾಗುವುದನ್ನು ತಡೆಯುವುದು ಅಸಾಧ್ಯವೇನಲ್ಲ. ಜೀವನಶೈಲಿಯನ್ನು ಆರೋಗ್ಯಕರವಾಗಿ ಉಳಿಸಿಕೊಂಡು, ಖನಿಜಗಳು ಮತ್ತು ಜೀವಸತ್ವಗಳನ್ನು ಒಳಗೊಂಡ ಆಹಾರ ನಮ್ಮ ಬದುಕಿನ ಭಾಗವಾದರೆ ಚರ್ಮವನ್ನು ನಳನಳಿಸುವಂತೆ ಇರಿಸಿಕೊಳ್ಳಲು ಆಗುತ್ತದೆ. ಯಾವೆಲ್ಲಾ ಪೋಷಕಾಂಶಗಳು ನಮ್ಮ ಚರ್ಮಕ್ಕೆ ಬೇಕು?
ಸೂಕ್ತ ಪೋಷಣೆ
ವಿಟಮಿನ್ ಎ ಅಥವಾ ಕೆರೋಟಿನಾಯ್ಡ್‌ನಂಥ ಸತ್ವಗಳು ಪ್ರಮುಖವಾಗಿ ಬೇಕು. ಕ್ಯಾರೆಟ್, ಗೆಣಸು, ದಪ್ಪ ಮೆಣಸು, ಪಪ್ಪಾಯಿ, ಮಾವು ಮುಂತಾದ ಹಣ್ಣು-ತರಕಾರಿಗಳಲ್ಲಿ ವಿಟಮಿನ್ ಎ ಯಥೇಚ್ಛವಾಗಿ ದೊರೆಯುತ್ತದೆ. ಇವುಗಳನ್ನು ಊಟದ ತಟ್ಟೆಗೆ ಸೇರಿಸಿಕೊಳ್ಳುವುದಕ್ಕೆ ದಾಕ್ಷಿಣ್ಯ ಮಾಡದಿದ್ದರಾಯಿತು.
ಲೈಕೋಪೇನ್
ಟೊಮೇಟೊನಂಥ ಅಚ್ಚಕೆಂಪು ಬಣ್ಣದ ಹಣ್ಣು-ತರಕಾರಿಗಳಲ್ಲಿ ದೊರೆಯುವ ಸತ್ವವಿದು. ಗಾಯಗಳನ್ನು ಗುಣಪಡಿಸುವ, ಉರಿಯೂತವನ್ನು ತಗ್ಗಿಸುವ ಮತ್ತು ಕೊಲಾಜಿನ್ ಉತ್ಪತ್ತಿಮಾಡುವ ಸಾಮರ್ಥ್ಯವನ್ನು ಲೈಕೋಪೇನ್‌ಗಳು ಹೊಂದಿವೆ. ಚರ್ಮಕ್ಕಾಗುವ ಯಾವುದೇ ಹಾನಿಯನ್ನು ಗುಣಪಡಿಸಲು ಲೈಕೋಪೇನ್ ನೆರವು ಬೇಕು.
ವಿಟಮಿನ್ ಬಿ3
ಈರುಳ್ಳಿ, ಬೆಳ್ಳುಳ್ಳಿ, ಬಾಳೆಹಣ್ಣು, ಬಾರ್ಲಿ, ಓಟ್ಸ್ ಮುಂತಾದವುಗಳಿಂದ ದೊರೆಯುವ ಜೀವಸತ್ವವಿದು. ಚರ್ಮದ ಮೇಲೆ ಅತಿಯಾದ ಪಿಗ್‌ಮೆಂಟ್‌ಗಳನ್ನು ತಡೆಯಲು, ಸೂರ್ಯನ ಬಿಸಿಲಿನಿಂದಾಗುವ ಹಾನಿಯನ್ನು ಚರ್ಮ ಒಣಗುವುದನ್ನು ಕಡಿಮೆ ಮಾಡಲು ಅವಶ್ಯವಾಗಿ ಬೇಕಾದ ಪೋಷಣೆಯಿದು.
ವಿಟಮಿನ್ ಸಿ
ದೇಹದಲ್ಲಿರುವ ಮುಕ್ತ ರ್ಯಾಡಿಕಲ್‌ಗಳನ್ನು ನಿರ್ಬಂಧಿಸಿ, ಕೊಲಾಜಿನ್ ಹೆಚ್ಚಿಸುವ ಅತಿ ಮುಖ್ಯ ಆಂಟಿಆಕ್ಸಿಡೆಂಟ್ ಇದು. ಹುಳಿ ಹಣ್ಣುಗಳಲ್ಲಿ, ಪೇರಲೆ, ಕಿವಿ ಹಣ್ಣು, ಬ್ರೊಕೊಲಿ, ದಪ್ಪಮೆಣಸು- ಹೀಗೆ ಸಿ-ಜೀವಸತ್ವ ಇರುವಂಥ ಹಣ್ಣುತರಕಾರಿಗಳು ಬಹಳಷ್ಟಿವೆ.
ವಿಟಮಿನ್ ಡಿ
ಚರ್ಮದ ಜೀವಕೋಶಗಳ ಬೆಳವಣಿಗೆ ಮತ್ತು ಗುಣಪಡಿಸುವಲ್ಲಿ ಡಿ-ಜೀವಸತ್ವವೂ ಸಹಕಾರಿ. ಮಾತ್ರವಲ್ಲ, ಸೋಂಕುಗಳು ಕಾಡದಂತೆ ಚರ್ಮವನ್ನು ಕಾಪಾಡುತ್ತದೆ ಇದು. ಸೂರ್ಯರಶ್ಮಿಯ ಹೊರತಾಗಿ, ತೈಲಭರಿತ ಮೀನುಗಳಲ್ಲಿ, ಕೆಂಪು ಮಾಂಸ ಮತ್ತು ಮೊಟ್ಟೆಯ ಹಳದಿ ಭಾಗಗಳಲ್ಲಿ ಇದು ದೊರೆಯುತ್ತದೆ.
ವಿಟಮಿನ್ ಇ
ಎಂಟು ಬೇರೆಬೇರೆ ವಸ್ತುಗಳು ಒಟ್ಟಾಗಿ ಸೇರಿ ಇ-ಜೀವಸತ್ವವನ್ನು ಪೂರ್ಣಗೊಳಿಸುತ್ತವೆ. ಇವೆಲ್ಲ ಸೇರಿ ವಿಟಮಿನ್ ಸಿ ಜೊತೆಗೂಡಿ ದೇಹದಲ್ಲಿನ ಮುಕ್ತ ರ್ಯಾಡಿಕಲ್‌ಗಳನ್ನು ನಿರ್ಬಂಧಿಸುತ್ತವೆ. ಸೂರ್ಯಕಾಂತಿ ಬೀಜ, ಬಾದಾಮಿ, ಅವಕಾಡೊ, ಕೆಲವು ಸಸ್ಯಜನ್ಯ ಎಣ್ಣೆಗಳು, ಸಾಲ್ಮನ್‌ನಂಥ ಮೀನುಗಳಲ್ಲಿ ವಿಟಮಿನ್ ಇ ಲಭ್ಯವಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ