ಬೆಂಗಳೂರು: ಉಮೇಶ್ ಕತ್ತಿ (Umesh Katti ) ನನ್ನ ಒಳ್ಳೆಯ ಸ್ನೇಹಿತ. ಸ್ವಲ್ಪ ಹುಂಬ. ಅವರಿಗೆ ಮೂರು ಬಾರಿ ಬೈಪಾಸ್ ಸರ್ಜರಿ ಆಗಿತ್ತು. ಆದರೆ ಆರೋಗ್ಯ ಬಗ್ಗೆ ಸ್ವಲ್ಪ ನೆಗ್ಲಿಜೆನ್ಸ್ ಇತ್ತು. ಅಷ್ಟೊಂದು ಕೇರ್ ತಗೊಳ್ತಿರಲಿಲ್ಲ ಅನಿಸುತ್ತದೆ: ಹೀಗೆಂದು ಸ್ನೇಹಿತನ ಬದುಕು ಮತ್ತು ಸಾವನ್ನು ವಿಶ್ಲೇಷಿಸಿದರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ.
ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ ಅವರು, ಗೆಳೆಯನ ನಿಧನದಿಂದ ಆಘಾತವಾಗಿದೆ. ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ನಾನು ಕನ್ಯಾಕುಮಾರಿಯಿಂದ ಆರಂಭವಾಗುವ ಭಾರತ್ ಜೋಡೋ ಕಾರ್ಯಕ್ರಮ ರದ್ದುಗೊಳಿಸಿ ಕತ್ತಿ ಅಂತ್ಯಸಂಸ್ಕಾರಕ್ಕೆ ಹೋಗುತ್ತೇನೆ ಎಂದು ಭಾರವಾದ ಮನಸ್ಸಿನಿಂದ ಹೇಳಿದರು.
ಉಮೇಶ್ ಕತ್ತಿ ಅವರು ಜನತಾ ಪಕ್ಷದ ಪ್ರಾಡಕ್ಟ್. ರಾಮಕೃಷ್ಣ ಹೆಗಡೆ ಅವರ ಅನುಯಾಯಿ. ಅವರ ತಂದೆ ೧೯೮೩ರಲ್ಲಿ ಸದನದಲ್ಲೇ ಹೃದಯಾಘಾತದಿಂದ ತೀರಿಕೊಂಡಿದ್ದರು. ಆಗ ನಡೆದ ಉಪಚುನಾವಣೆಯಲ್ಲಿ ಉಮೇಶ್ ಕತ್ತಿ ಗೆದ್ದುಬಂದಿದ್ದರು. ಕತ್ತಿ ಅವರು ರಾಮಕೃಷ್ಣ ಹೆಗಡೆ ಮತ್ತು ಜೆ.ಎಚ್.ಪಟೇಲ್ ಅವರ ಒಡನಾಡಿಯಾಗಿದ್ದರು. ನನ್ನ ಜತೆಗೂ ಆತ್ಮೀಯವಾಗಿದ್ದರು ಎಂದು ನೆನಪು ಮಾಡಿಕೊಂಡರು ಸಿದ್ದರಾಮಯ್ಯ.
ಇದನ್ನೂ ಓದಿ | 8 ಬಾರಿ ಶಾಸಕ ಉಮೇಶ್ ಕತ್ತಿ ಇನ್ನು 8 ತಿಂಗಳು ಇದ್ದಿದ್ದರೆ ಧರ್ಮ ಸಿಂಗ್ ದಾಖಲೆ ಮುರಿಯುತ್ತಿದ್ದರು !