Umesh Katti | ಕತ್ತಿ ನನ್ನ ಫ್ರೆಂಡ್‌, ಆರೋಗ್ಯದ ಬಗ್ಗೆ ಸ್ವಲ್ಪ ನಿರ್ಲಕ್ಷ್ಯ ಇತ್ತು ಅನಿಸ್ತದೆ: ಸಿದ್ದರಾಮಯ್ಯ ಕಂಬನಿ - Vistara News

ಉಮೇಶ್ ಕತ್ತಿ

Umesh Katti | ಕತ್ತಿ ನನ್ನ ಫ್ರೆಂಡ್‌, ಆರೋಗ್ಯದ ಬಗ್ಗೆ ಸ್ವಲ್ಪ ನಿರ್ಲಕ್ಷ್ಯ ಇತ್ತು ಅನಿಸ್ತದೆ: ಸಿದ್ದರಾಮಯ್ಯ ಕಂಬನಿ

ಉಮೇಶ್‌ ಕತ್ತಿ(Umesh Katti ) ಅವರ ನಿಧನಕ್ಕೆ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ. ಗೆಳೆಯನ ಅಂತ್ಯಕ್ರಿಯೆಗಾಗಿ ಊರಿಗೆ ಹೋಗುತ್ತೇನೆ, ಕನ್ಯಾಕುಮಾರಿ ಕಾರ್ಯಕ್ರಮ ಸ್ಕಿಪ್‌ ಮಾಡುತ್ತೇನೆ ಎಂದಿದ್ದಾರೆ.

VISTARANEWS.COM


on

siddaramaih katti
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಉಮೇಶ್‌ ಕತ್ತಿ (Umesh Katti ) ನನ್ನ ಒಳ್ಳೆಯ ಸ್ನೇಹಿತ. ಸ್ವಲ್ಪ ಹುಂಬ. ಅವರಿಗೆ ಮೂರು ಬಾರಿ ಬೈಪಾಸ್‌ ಸರ್ಜರಿ ಆಗಿತ್ತು. ಆದರೆ ಆರೋಗ್ಯ ಬಗ್ಗೆ ಸ್ವಲ್ಪ ನೆಗ್ಲಿಜೆನ್ಸ್‌ ಇತ್ತು. ಅಷ್ಟೊಂದು ಕೇರ್‌ ತಗೊಳ್ತಿರಲಿಲ್ಲ ಅನಿಸುತ್ತದೆ: ಹೀಗೆಂದು ಸ್ನೇಹಿತನ ಬದುಕು ಮತ್ತು ಸಾವನ್ನು ವಿಶ್ಲೇಷಿಸಿದರು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ.

ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ ಅವರು, ಗೆಳೆಯನ ನಿಧನದಿಂದ ಆಘಾತವಾಗಿದೆ. ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ನಾನು ಕನ್ಯಾಕುಮಾರಿಯಿಂದ ಆರಂಭವಾಗುವ ಭಾರತ್‌ ಜೋಡೋ ಕಾರ್ಯಕ್ರಮ ರದ್ದುಗೊಳಿಸಿ ಕತ್ತಿ ಅಂತ್ಯಸಂಸ್ಕಾರಕ್ಕೆ ಹೋಗುತ್ತೇನೆ ಎಂದು ಭಾರವಾದ ಮನಸ್ಸಿನಿಂದ ಹೇಳಿದರು.

ಉಮೇಶ್‌ ಕತ್ತಿ ಅವರು ಜನತಾ ಪಕ್ಷದ ಪ್ರಾಡಕ್ಟ್. ರಾಮಕೃಷ್ಣ ಹೆಗಡೆ ಅವರ ಅನುಯಾಯಿ. ಅವರ ತಂದೆ ೧೯೮೩ರಲ್ಲಿ ಸದನದಲ್ಲೇ ಹೃದಯಾಘಾತದಿಂದ ತೀರಿಕೊಂಡಿದ್ದರು. ಆಗ ನಡೆದ ಉಪಚುನಾವಣೆಯಲ್ಲಿ ಉಮೇಶ್‌ ಕತ್ತಿ ಗೆದ್ದುಬಂದಿದ್ದರು. ಕತ್ತಿ ಅವರು ರಾಮಕೃಷ್ಣ ಹೆಗಡೆ ಮತ್ತು ಜೆ.ಎಚ್.ಪಟೇಲ್ ಅವರ ಒಡನಾಡಿಯಾಗಿದ್ದರು. ನನ್ನ ಜತೆಗೂ ಆತ್ಮೀಯವಾಗಿದ್ದರು ಎಂದು ನೆನಪು ಮಾಡಿಕೊಂಡರು ಸಿದ್ದರಾಮಯ್ಯ.

ಇದನ್ನೂ ಓದಿ | 8 ಬಾರಿ ಶಾಸಕ ಉಮೇಶ್‌ ಕತ್ತಿ ಇನ್ನು 8 ತಿಂಗಳು ಇದ್ದಿದ್ದರೆ ಧರ್ಮ ಸಿಂಗ್‌ ದಾಖಲೆ ಮುರಿಯುತ್ತಿದ್ದರು !

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉಮೇಶ್ ಕತ್ತಿ

ಅಧಿವೇಶನ | ಕತ್ತಿ ಅಜಾತಶತ್ರು, ಬೆಳಗಾವಿಗೆ ಹೋದಾಗ ಜತೆಗೇ ಊಟ ಕೂಡಾ ಮಾಡ್ತಾ ಇದ್ವಿ ಎಂದ ಸಿದ್ದರಾಮಯ್ಯ

ವಿಧಾನ ಮಂಡಲ ಅಧಿವೇಶನ ಆರಂಭಗೊಂಡಿದ್ದು, ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಸಿದ್ದರಾಮಯ್ಯ ಅವರು ಉಮೇಶ್‌ ಕತ್ತಿ ಅವರ ಬಗ್ಗೆ ಮಾತನಾಡಿದರು.

VISTARANEWS.COM


on

election-2023-siddaramaiah to contest from only one constituency
Koo

ಬೆಂಗಳೂರು: ವಿಧಾನ ಮಂಡಲದ ಮಳೆಗಾಲದ ಅಧಿವೇಶನದ ಮೊದಲ ದಿನ ನಮ್ಮನ್ನು ಅಗಲಿದ ಮಾಜಿ ಸಚಿವರಾದ ಉಮೇಶ್‌ ಕತ್ತಿ, ಪ್ರಭಾಕರ ರಾಣೆ ಸೇರಿದಂತೆ ಹಲವು ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂತಾಪ ಸೂಚಿಸಿ ಮಾತನಾಡಿದ ಮಾಜಿ ಸಿಎಂ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಉಮೇಶ್‌ ಕತ್ತಿ ನನಗೂ ಬಹಳ ಆತ್ಮೀಯ. ಲೋಕೋಪಯೋಗಿ ಸಚಿವನಾಗಿದ್ದಾಗ ನನ್ನ ಬಳಿ ಯಾವಾಗಲೂ ಬರುತ್ತಿದ್ದರು. ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ನಾನು ಬೆಳಗಾವಿಗೆ ಹೋಗಿದ್ದಾಗ ಊಟಕ್ಕೆ ಕರೆದಿದ್ದರು. ತುಂಬ ಹೊತ್ತು ರಾಜಕೀಯವಾಗಿ ಚರ್ಚೆ ಮಾಡಿದೆವುʼʼ ಎಂದು ನೆನಪಿಸಿಕೊಂಡರು.

ʻʻಬೆಳಗಾವಿ ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವ ಬೆಳೆಸಿಕೊಂಡಿದ್ದ ಉಮೇಶ್‌ ಕತ್ತಿ ವರ್ಣರಂಜಿತ ರಾಜಕಾರಣಿ. ಆಡಳಿತ ಮತ್ತು ವಿಪಕ್ಷ ಶಾಸಕರ ಜತೆ ಸ್ನೇಹ ಜೀವಿಯಾಗಿ ಇದ್ದ ಅವರು ಅಜಾತಶತ್ರುʼʼ ಎಂದರು ಸಿದ್ದರಾಮಯ್ಯ. ಅವರು ಕಾಲಿಟ್ಟ ಎಲ್ಲ ರಂಗಗಳಲ್ಲೂ ಯಶಸ್ವಿ ಆಗಿದ್ದರು ಎಂದು ನೆನಪು ಮಾಡಿಕೊಂಡರು.

ʻʻಕತ್ತಿಗೆ ಪ್ರತ್ಯೇಕ ರಾಜ್ಯದ ಬೇಡಿಕೆ ಇಡಬೇಡ ಅಂತ ವೈಯಕ್ತಿಕ ಸಲಹೆ ಕೊಟ್ಟಿದ್ದೆ. ಉತ್ತರ ಕರ್ನಾಟಕ ಅಭಿವೃದ್ಧಿಗೆ ಬೇಡಿಕೆ ಇಡು, ಅಭಿವೃದ್ಧಿ ಬಗ್ಗೆ ಮಾತಾಡು, ಪ್ರತ್ಯೇಕತೆ ಮಾತು ಬೇಡ ಅಂದಿದ್ದೆʼʼ ಎಂದು ಸಿದ್ದರಾಮಯ್ಯ ಹೇಳಿದರು.

ಸಲೀಂ ಅಹ್ಮದ್ ಸಂತಾಪ
ಕಾಂಗ್ರೆಸ್‌ ಪಕ್ಷದ ಕಾರ್ಯಾಧ್ಯಕ್ಷರೂ ಆಗಿರುವ ಎಂಎಲ್‌ಸಿ ಸಲೀಂ ಅಹಮದ್‌ ಅವರು ವಿಧಾನಪರಿಷತ್‌ನಲ್ಲಿ ಮಾತನಾಡಿದರು. ʻʻಉಮೇಶ್‌ ಕತ್ತಿ ಅವರು ಅಪರೂಪದ ರಾಜಕಾರಣಿ, ಮೊನ್ನೆ ಸೆಪ್ಟೆಂಬರ್‌ ೧ರಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತಿಗೆ ಸಿಕ್ಕರು. ಎರಡು ಗಂಟೆಯಲ್ಲಿ ಅನೇಕ ವಿಚಾರಗಳು ಚರ್ಚೆ ಮಾಡಿದೆವು. ಅವರು ತುಂಬಾ ಜನರಿಗೆ ಉದ್ಯೋಗ ಕೊಟ್ಟರು. ಅವರ ನಿಧನವನ್ನು ಅರಗಿಸಿಕೊಳ್ಳಲಾಗುತ್ತಿಲ್ಲʼʼ ಎಂದರು.

Continue Reading

ಉಮೇಶ್ ಕತ್ತಿ

ಅಧಿವೇಶನ | ಎಲ್ಲ ಪಕ್ಷಗಳ ಬಿ ಫಾರಂ ನನ್ನ ಕಿಸೆಯಲ್ಲಿದೆ ಅಂತಿದ್ದರು ಕತ್ತಿ, ನೆನಪು ಮಾಡಿಕೊಂಡ ಬೊಮ್ಮಾಯಿ

ವಿಧಾನ ಮಂಡಲ ಅಧಿವೇಶನದ ಮೊದಲ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವರಾಗಿದ್ದ ಉಮೇಶ್‌ ಕತ್ತಿ ಸೇರಿದಂತೆ ಈ ಅವಧಿಯಲ್ಲಿ ನಿಧನರಾದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

VISTARANEWS.COM


on

Umesh katti bommai
ಬೆಳಗಾವಿಯಲ್ಲಿ ನಡೆದ ಚುನಾವಣೆ ಸಂಬಂಧಿತ ಸಭೆಯಲ್ಲಿ ಉಮೇಶ್‌ ಕತ್ತಿ ಮತ್ತು ಸಿಎಂ ಬೊಮ್ಮಾಯಿ
Koo

ಬೆಂಗಳೂರು: ಉಮೇಶ್‌ ಕತ್ತಿ ಅವರು ತುಂಬಾ ಆತ್ಮೀಯ ನಡವಳಿಕೆಯ ವ್ಯಕ್ತಿ. ಕ್ಷೇತ್ರದ ಜನರಿಗೆ ಬಹಳ ಪ್ರೀತಿ ಪಾತ್ರರಾಗಿದ್ದರಲ್ಲದೆ, ಎಲ್ಲ ರಾಜಕೀಯ ನಾಯಕರ ಜತೆಗೂ ತುಂಬ ಒಳ್ಳೆಯ ಸಂಬಂಧ ಹೊಂದಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸೋಮವಾರ ಆರಂಭಗೊಂಡ ವಿಧಾನಸಭಾ ಅಧಿವೇಶನದ ಆರಂಭದ ದಿನ ಉಮೇಶ್‌ ಕತ್ತಿ ಸೇರಿದಂತೆ ಹಲವು ನಾಯಕರು, ಗಣ್ಯರ ನಿಧನಕ್ಕೆ ಸಂತಾಪ ಸೂಚಿಸಿ ಅವರು ಮಾತನಾಡಿದರು.

ʻʻಎಲ್ಲವೂ ಸರಿ ಇದ್ದಿದ್ದರೆ ಇಂದು ಉಮೇಶ್ ಕತ್ತಿ ನಮ್ಮ ಜತೆ ಇರಬೇಕಿತ್ತು. ಮೊದಲ ಸಾಲಿನಲ್ಲಿ ಅವರು ಕೂರಬೇಕಿತ್ತುʼʼ ಎಂದು ಹೇಳಿದ ಬೊಮ್ಮಾಯಿ ಅವರು, ಉಮೇಶ್‌ ಕತ್ತಿ ಅವರು ಎಲ್ಲ ಪಾರ್ಟಿಗಳ ಬಿ ಫಾರಂ ನನ್ನ ಕಿಸೆಯಲ್ಲಿದೆ ಎಂದು ಹೇಳ್ತಿದ್ದರುʼʼ ಎಂದರು. ೧೯೮೫ರಲ್ಲಿ ಮೊದಲ ಬಾರಿ ಶಾಸಕರಾದ ಕತ್ತಿ ಅವರು ಬಳಿಕ ಆರು ಪಕ್ಷಗಳಲ್ಲಿ ಹುಕ್ಕೇರಿ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಎಂಟು ಬಾರಿ ಗೆದ್ದು ಶಾಸಕರಾಗಿದ್ದಾರೆ. ೧೯೮೫ರಲ್ಲಿ ಜನತಾ ಪಕ್ಷದಿಂದ, ೧೯೮೯, ೧೯೯೪ರಲ್ಲಿ ಜನತಾ ದಳದಿಂದ, ೧೯೯೯ರಲ್ಲಿ ಸಂಯುಕ್ತ ಜನತಾದಳದಿಂದ, ೨೦೦೪ರಲ್ಲಿ ಕಾಂಗ್ರೆಸ್‌ನಿಂದ (ಆಗ ಸೋತಿದ್ದರು) ಸ್ಪರ್ಧಿಸಿದ್ದರು. ೨೦೦೪ರಲ್ಲಿ ಮತ್ತೆ ಜೆಡಿಎಸ್‌ಗೆ ಬಂದರಾದರೂ ಗೆದ್ದ ಬಳಿಕ ಆಪರೇಷನ್‌ ಕಮಲದ ಮೂಲಕ ಬಿಜೆಪಿ ಸೇರಿದ್ದರು. ಅಲ್ಲಿಂದ ಬಳಿಕ ಅವರು ಬಿಜೆಪಿಯಲ್ಲೇ ಇದ್ದಾರೆ.

ಸಹಕಾರಿ ಸಕ್ಕರೆ ಕಾರ್ಖಾನೆ ಜನಕ
ʻʻಬೆಳಗಾವಿ ಜಿಲ್ಲೆಯಲ್ಲಿ ಇಷ್ಟೊಂದು ಸಕ್ಕರೆ ಕಾರ್ಖಾನೆಗಳು ಬೆಳೆಯಲು, ಈ ಮಟ್ಟಕ್ಕೆ ಅಭಿವೃದ್ಧಿ ಕಾಣಲು ಉಮೇಶ್‌ ಕತ್ತಿ ಅವರೇ ಕಾರಣ. ಅದರಲ್ಲೂ ಸಹಕಾರಿ ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಇವರೇ ಮೂಲ ಪುರುಷರುʼʼ ಎಂದು ಹೇಳಿದರು ಬಸವರಾಜ ಬೊಮ್ಮಾಯಿ.

ಕತ್ತಿ ಅವರು ಜನರ ಜತೆ ಸೇರಿ ಬೆಳೆದ ರಾಜಕಾರಣಿ ಎಂದು ಹೇಳಿದ ಬೊಮ್ಮಾಯಿ ಅವರು ಹುಕ್ಕೇರಿ ಕ್ಷೇತ್ರವನ್ನು ದಾಟಿ ಹೋಗುವಾಗ ಬೆಲ್ಲದ ಚಹ ಕುಡಿದು ಸ್ನೇಹಯುತವಾಗಿ ಮಾತನಾಡಿಸಿಕೊಂಡೇ ಹೋಗಬೇಕಾಗಿತ್ತು ಎಂದು ನೆನಪು ಮಾಡಿಕೊಂಡರು.

ʻʻದೇವೇಗೌಡರು ಮೊದಲ ಬಾರಿ ಸಂಪುಟ ರಚನೆ ಮಾಡಿದಾಗ ಅವಕಾಶ ಕೊಡಲಿಲ್ಲ ಸಹಜವಾಗಿ ಬೇಸರ ವ್ಯಕ್ತಪಡಿಸಿದರು. ನಂತರ ನಡೆದ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ತಮ್ಮ ಟೀಮನ್ನು ಪ್ರತ್ಯೇಕವಾಗಿ ಗೆಲ್ಲಿಸಿಕೊಂಡುಬಂದರು. ಜೈಲು ಖಾತೆ ಕೊಟ್ಟಾಗ ಕಾಯಂ ಆಗಿ ನನ್ನನ್ನು ಜೈಲಿಗೆ ಹಾಕುವ ಯೋಚನೆ ಮಾಡಿದ್ದೀರಾ ಎಂದು ಹಾಸ್ಯ ಮಾಡಿದರು. ಖಾತೆಯನ್ನು ಚೆನ್ನಾಗಿ ನಿಭಾಯಿಸಿದರುʼʼ ಎಂದರು ಬೊಮ್ಮಾಯಿ.

ರಾಗಿ, ಜೋಳ, ಸಿರಿಧಾನ್ಯದ ಮೂಲಕ ಪಡಿತರ ಕ್ರಾಂತಿ
ʻʻಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರಾದ ಬಳಿಕ ಪಡಿತರಕ್ಕೆ ರಾಗಿ ಮತ್ತು ಜೋಳ ಸೇರಿಸಬೇಕು ಎಂಬ ಪ್ರಸ್ತಾವನೆಯನ್ನು ಮುಂದಿಟ್ಟರು. ಇವತ್ತು ರಾಜ್ಯದ ಪಡಿತರ ವ್ಯವಸ್ಥೆಯಲ್ಲಿ ರಾಗಿ ಮತ್ತು ಜೋಳ ಇದ್ದರೆ, ಸಿರಿಧಾನ್ಯ ಇದ್ದರೆ ಅದಕ್ಕೆ ಕಾರಣ ಉಮೇಶ್‌ ಕತ್ತಿʼʼ ಎಂದು ಶ್ಲಾಘಿಸಿದರು ಬೊಮ್ಮಾಯಿ.

ರಾಜ್ಯ ವಿಭಾಗ ಆಗಬೇಕು ಅನ್ನೋ ನಿಲುವಲ್ಲ ಅವರದು
ಕತ್ತಿ ಅಂದ ಕೂಡಲೇ ಪ್ರತ್ಯೇಕ ರಾಜ್ಯ ಕೇಳುವವರು ಎಂಬ ಪ್ರತೀತಿ ಇದೆ. ಆದರೆ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಇದಕ್ಕೆ ಬೇರೆ ಆಯಾಮ ನೀಡಿದರು.
ʻʻಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಆಗಬೇಕು ಅನ್ನೋ ಆಸೆ ಅವರಿಗೆ ಇತ್ತು. ಹೀಗಾಗಿಯೇ ಅವರು ಕೆಲವು ಸಲ ವಿವಾದಾತ್ಮಕ ಹೇಳಿಕೆ ಕೊಡುತ್ತಿದ್ದರು. ಆದರೆ, ಮೂಲತಃ ಅವರಿಗೆ ರಾಜ್ಯ ಎರಡಾಗಬೇಕು ಎನ್ನುವ ಯಾವುದೇ ಅಭಿಪ್ರಾಯ ಇರಲಿಲ್ಲ. ಅಭಿವೃದ್ಧಿಯ ಸಲುವಾಗಿ ನಿರಂತರ ಒತ್ತಡ ಇರಬೇಕು ಎಂದು ಭಾವಿಸಿದ್ದರುʼʼ ಎಂದು ಹೇಳಿದರು.

ʻʻಆನೆಗಳು ಊರಿನ ಒಳಗೆ ಬರುತ್ತಿವೆ ಏನು ಮಾಡಬೇಕುʼʼ ಎಂದು ಕೇಳಿದಾಗ ʻʻಜನ ಅರಣ್ಯಕ್ಕೆ ಹೋಗವುದನ್ನು ಬಿಡಲಿ. ಆನೆ ನಾಡಿಗೆ ಬರಲ್ಲʼʼ ಎಂದು ನೇರವಾಗಿ ಹೇಳುವಷ್ಟು ಖಡಕ್‌ತನ ಅವರಲ್ಲಿತ್ತು ಎಂದರು ಬೊಮ್ಮಾಯಿ.

Continue Reading

ಉಮೇಶ್ ಕತ್ತಿ

Umesh Katti | ಕತ್ತಿ ನಿವಾಸಕ್ಕೆ ಅರುಣ್‌ ಸಿಂಗ್‌ ಸೇರಿ ಬಿಜೆಪಿ ನಾಯಕರ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಮುನಿರತ್ನ, ಎಂಟಿಬಿ ನಾಗರಾಜ್, ಭೈರತಿ ಬಸವರಾಜ್, ಜೆ.ಸಿ.ಮಾಧುಸ್ವಾಮಿ ಉಮೇಶ್‌ ಕತ್ತಿ‌ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

VISTARANEWS.COM


on

Umesh Katti
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ದಿವಂಗತ ಸಚಿವ ಉಮೇಶ್‌ ಕತ್ತಿ ಅವರ ನಿವಾಸಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹಾಗೂ ವಿವಿಧ ಸಚಿವರು ಭೇಟಿ ನೀಡಿದ್ದರು.
Koo

ಚಿಕ್ಕೋಡಿ: ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ದಿ. ಸಚಿವ ಉಮೇಶ್‌ ಕತ್ತಿ (Umesh Katti) ಅವರ ನಿವಾಸಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಮುನಿರತ್ನ, ಎಂಟಿಬಿ ನಾಗರಾಜ್, ಭೈರತಿ ಬಸವರಾಜ್, ಜೆ.ಸಿ.ಮಾಧುಸ್ವಾಮಿ ಗುರುವಾರ ಭೇಟಿ ನೀಡಿ ‌ಸಾಂತ್ವನ ಹೇಳಿದರು.

ಉಮೇಶ್ ಕತ್ತಿ ಪತ್ನಿ ಶೀಲಾ, ಸಹೋದರ ರಮೇಶ್ ಕತ್ತಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಮುಖಂಡರು, ಕತ್ತಿ ಅವರೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, ಉಮೇಶ್‌ ಕತ್ತಿ ನನ್ನ ಆತ್ಮೀಯ ಮಿತ್ರ. ಬೆಳಗಾವಿ, ಬೆಂಗಳೂರು, ದೆಹಲಿಯಲ್ಲಿ ಭೇಟಿಯಾದಾಗ ರಾಜ್ಯದ ಅಭಿವೃದ್ಧಿ, ಪಕ್ಷ ಸಂಘಟನೆ ಬಗ್ಗೆ ಹಲವು ಸಲಹೆ ನೀಡುತ್ತಿದ್ದರು. ಉಮೇಶ್‌ ಕತ್ತಿ ಬಿಂದಾಸ್ ವ್ಯಕ್ತಿಯಾಗಿದ್ದರು. ಅವರ ಅಗಲಿಕೆಯಿಂದ ಪಕ್ಷ, ರಾಜ್ಯಕ್ಕೆ ಅಪಾರ ನಷ್ಟವಾಗಿದೆ ಎಂದರು.‌

ಇದನ್ನೂ ಓದಿ | Rain News | ವಿಜಯನಗರ ಜಿಲ್ಲೆಯಲ್ಲಿ ವಿವಿಧೆಡೆ ಮನೆಗಳಿಗೆ ಹಾನಿ, ಅಪಾರ ಪ್ರಮಾಣದ ಬೆಳೆ ನಷ್ಟ

ಒಬ್ಬ ರಾಜಕೀಯ ನಾಯಕ 40 ವರ್ಷಗಳ ಶಾಸಕನಾಗಿ ಮಾಡಿದ ಕೆಲಸ, ದೂರದೃಷ್ಟಿ, ಆಲೋಚನೆಗಳು ಎಲ್ಲರಿಗೂ ಗೊತ್ತಾಗಬೇಕಿದೆ. ಕತ್ತಿ ಅವರ ರಾಜಕೀಯ ಜೀವನವು ಪುಸ್ತಕದ ರೂಪದಲ್ಲಿ ಹೊರ ಬರಬೇಕು ಎಂದರು.

ಆರೋಗ್ಯ ಸಚಿವ ಕೆ.ಸುಧಾಕರ್ ಮಾತನಾಡಿ, ಉಮೇಶ್‌ ಕತ್ತಿ ಅಕಾಲಿಕ ನಿಧನದಿಂದ ರಾಜ್ಯಕ್ಕೆ ನಷ್ಟವಾಗಿದೆ. ಕತ್ತಿ ಆಸ್ಪತ್ರೆಗೆ ದಾಖಲಾದಾಗ ನನಗೆ ಗೊತ್ತಾಯಿತು. ವೈದ್ಯರನ್ನು ಕರೆಸಿ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಯಿತು. ಆದರೆ ವಿಧಿ ಆಟದ ಮುಂದೆ ನಮ್ಮ ಪ್ರಯತ್ನ ಫಲಿಸಲಿಲ್ಲ ಎಂದರು.

ಅದೇ ರೀತಿ ಬೆಲ್ಲದ ಬಾಗೇವಾಡಿಯ ಉಮೇಶ್ ಕತ್ತಿ ನಿವಾಸಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಭೇಟಿ ನೀಡಿ ಕತ್ತಿ ಪತ್ನಿ, ಮಕ್ಕಳಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಪ್ರಲ್ಹಾದ್‌ ಜೋಶಿ, ಉಮೇಶ್ ಕತ್ತಿ ಕಳೆದ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಭೇಟಿಯಾಗಿದ್ದರು. ಅವರ ಅಕಾಲಿಕ ಸಾವು ನೋವು ತಂದಿದೆ ಎಂದರು.

ಬಾಲಚಂದ್ರ ಜಾರಕಿಹೊಳಿ ಭೇಟಿ
ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೂಡ ಉಮೇಶ್‌ ಕತ್ತಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಬಾಲಚಂದ್ರ ಜಾರಕಿಹೊಳಿ ಜತೆ ಅಣ್ಣನ ಇತ್ತೀಚಿನ ಸ್ವಾರಸ್ಯಕರ ಸಂಗತಿಗಳ ಬಗ್ಗೆ ರಮೇಶ್‌ ಕತ್ತಿ ಮಾಹಿತಿ ಹಂಚಿಕೊಂಡರು.

“ಒಂದು ತಿಂಗಳ ಅವಧಿಯಲ್ಲಿ ಕ್ಷೇತ್ರದ ಎಲ್ಲ ಹಳ್ಳಿಗಳಿಗೆ ಅಣ್ಣ ಉಮೇಶ್ ಕತ್ತಿ ಸಂಚಾರ ಮಾಡಿದ್ದಾರೆ. ಅಲ್ಲಿ ಸಾರ್ವಜನಿಕರೊಂದಿಗೆ ಅಹವಾಲು ಆಲಿಸಿ, ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಪ್ರತಿ ಹಳ್ಳಿ ಸುತ್ತಿ ಕುಡಿಯುವ ನೀರು, ಕೃಷಿಗೆ ನೀರಾವರಿ, ಸಮುದಾಯ ಭವನ ಸೌಲಭ್ಯವನ್ನು ಕಲ್ಪಿಸಿರುವೆ. ಇನ್ನೂ ಏನಾದರೂ ಕಡಿಮೆ ಆಗಿದ್ದರೆ ಹೇಳಿ” ಎಂದು ಜನರ ಬಳಿಯೇ ಕೇಳುತ್ತಿದ್ದರು ಎಂದು ರಮೇಶ್‌ ಕತ್ತಿ ಸ್ಮರಿಸಿದ್ದಾರೆ.

ಬಳಿಕ ತೇರದಾಳ ಶಾಸಕ ಸಿದ್ದು ಸವದಿ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕೂಡ ಆಗಮಿಸಿ ಉಮೇಶ್‌ ಕತ್ತಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಕತ್ತಿ ನಿವಾಸದತ್ತ ಅಭಿಮಾನಿಗಳ ದಂಡು
ಉಮೇಶ್ ಕತ್ತಿ ಕುಟುಂಬವರಿಗೆ ಸಾಂತ್ವನ ಹೇಳಲು ಬೆಲ್ಲದ ಬಾಗೇವಾಡಿಯತ್ತ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಧಾವಿಸಿದ್ದು, ಕತ್ತಿ ಕುಟಂಬದ ನೋವಿನಲ್ಲಿ ಭಾಗಿಯಾಗಿದ್ದಾರೆ. ಅಣ್ಣ ಅಗಲಿದ ನೋವಲ್ಲಿ ಕಣ್ಣೀರು ಹಾಕುತ್ತಿರುವ ರಮೇಶ್ ಕತ್ತಿಯನ್ನು ಅಭಿಮಾನಿಗಳು ತಬ್ಬಿಕೊಂಡು ಸಮಾಧಾನ ಪಡಿಸಿದ್ದಾರೆ.

ಇದನ್ನೂ ಓದಿ | Bharath jodo| ಭಾರತ್‌ ಜೋಡೋ ಒಳ್ಳೆಯ ಕಾರ್ಯಕ್ರಮ: ಪಾಕಿಸ್ತಾನ, ಬಾಂಗ್ಲಾವನ್ನೂ ಜೋಡಿಸಲಿ ಎಂದ ಈಶ್ವರಪ್ಪ

Continue Reading

ಉಮೇಶ್ ಕತ್ತಿ

Umesh katti ತಮ್ಮ ರಮೇಶ್‌ ಕತ್ತಿ ಆರೋಗ್ಯದಲ್ಲಿ ಏರುಪೇರು, ಹೃದಯ ತಪಾಸಣೆ

ಮಂಗಳವಾರ ರಾತ್ರಿ ನಿಧನರಾದ ಸಚಿವ ಉಮೇಶ್‌ ಕತ್ತಿ ಅವರ ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆಯುತ್ತಿದೆ. ಈ ನಡುವೆ ಅವರ ತಮ್ಮ ರಮೇಶ್‌ ಕತ್ತಿ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ.

VISTARANEWS.COM


on

Ramesh katti
Koo

ಬೆಳಗಾವಿ: ಮಾಜಿ ಸಚಿವ ಉಮೇಶ್‌ ಕತ್ತಿ ಅವರ ಅಕಾಲಿಕ ನಿಧನದಿಂದ ಕಂಗಾಲಾಗಿರುವ ಅವರ ತಮ್ಮ ರಮೇಶ್‌ ಕತ್ತಿ ಆರೋಗ್ಯದಲ್ಲಿ ಸ್ವಲ್ಪಮಟ್ಟಿಗಿನ ಏರುಪೇರು ಕಂಡುಬಂದಿದೆ. ಕೂಡಲೇ ಅವರ ಹೃದಯ ತಪಾಸಣೆ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯ ‌ಬೆಲ್ಲದ ಬಾಗೇವಾಡಿ ಗ್ರಾಮದ ವಿಶ್ವರಾಜ್ ಶುಗರ್ಸ್ ನಲ್ಲಿ ಉಮೇಶ್‌ ಕತ್ತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ರಮೇಶ್‌ ಕತ್ತಿ ಅವರ ಆರೋಗ್ಯದಲ್ಲೇ ಏರುಪೇರಾಗಿದೆ.

ಉಮೇಶ್‌ ಕತ್ತಿ ಅವರು ಅಸ್ವಸ್ಥರಾಗಿದ್ದಾರೆ ಎಂಬ ಮಾಹಿತಿ ಸಿಗುತ್ತಿದ್ದಂತೆಯೇ ಮಂಗಳವಾರ ರಾತ್ರಿಯೇ ರಮೇಶ್‌ ಕತ್ತಿ ಅವರು ಬೆಳಗಾವಿಯಿಂದ ಬೆಂಗಳೂರಿಗೆ ಧಾವಿಸಿದ್ದರು. ಮತ್ತು ರಾತ್ರಿ ನಿಧನದ ಸುದ್ದಿ ತಿಳಿಯುತ್ತಲೇ ತುಂಬ ನೋವು ಅನುಭವಿಸಿದ್ದರು. ರಾತ್ರಿ ಇಡೀ ನಿದ್ದೆ ಮಾಡದೆ ಅಣ್ಣನ ಜತೆಗಿದ್ದ ರಮೇಶ್‌ ಕತ್ತಿ ಅವರು ಮಧ್ಯಾಹ್ನ ಪಾರ್ಥಿವ ಶರೀರದೊಂದಿಗೆ ಬೆಳಗಾವಿಗೆ ಮರಳಿದ್ದರು.

ಅದಾದ ಬಳಿಕ ವಿಶ್ವರಾಜ್ ಶುಗರ್ಸ್ ನಲ್ಲಿ ಉಮೇಶ್‌ ಕತ್ತಿ ಅವರ ಪಾರ್ಥಿವ ಶರೀರದ ದರ್ಶನ ನಡೆಯುತ್ತಿದ್ದಾಗ ಅಲ್ಲೇ ಇದ್ದರು. ಈ ಹೊತ್ತಲ್ಲಿ ಅವರಲ್ಲಿ ಸಣ್ಣ ಮಟ್ಟದ ಅಸ್ವಸ್ಥತೆ ಕಾಣಿಸಿಕೊಂಡಿತು. ಹೀಗಾಗಿ ಹೊರಗಡೆ ಅಣ್ಣನ ಪಾರ್ಥಿವ ಶರೀರದ ಅಂತಿಮ ದರ್ಶನ ನಡೆಯುತ್ತಿದ್ದಾಗಲೇ ಒಳಗೆ ರಮೇಶ್‌ ಕತ್ತಿ ಅವರ ಆರೋಗ್ಯ ತಪಾಸಣೆ ನಡೆಯಿತು. ಅಲ್ಲೇ ಅವರಿಗೆ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ಅವರ ಹೃದಯದ ಇಸಿಜಿ ಮಾಡಲಾಗಿದೆ. ಈಗ ಅವರ ಆರೋಗ್ಯ ಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ ಎಂದು ತಿಳಿದುಬಂದಿದೆ.

ರಮೇಶ್ ಕತ್ತಿ ಅವರು ಈ ಹಿಂದೆ ಸಂಸದರಾಗಿದ್ದು, ಪ್ರಸಕ್ತ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ| Umesh Katti | ಬೆಲ್ಲದ ಬಾಗೇವಾಡಿಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ: ಸಿಎಂ, ಮಾಜಿ ಸಿಎಂ ಆಗಮನ

Continue Reading
Advertisement
CoWin Certificates
ದೇಶ9 mins ago

CoWIN Certificates: ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಔಟ್‌; ಕೇಂದ್ರ ಹೇಳೋದೇನು?

PBKS vs CSK
ಕ್ರೀಡೆ12 mins ago

PBKS vs CSK: ಕೆಕೆಆರ್​ ದಾಖಲೆ ಹಿಂದಿಕ್ಕಿದ ಪಂಜಾಬ್​ ಕಿಂಗ್ಸ್

Parineeti Chopra husband Raghav Chadha doing well after eye surgery
ಬಾಲಿವುಡ್21 mins ago

Parineeti Chopra: ಪರಿಣಿತಿ ಚೋಪ್ರಾ ಪತಿ ಕಣ್ಣು ಕಳೆದುಕೊಳ್ಳುವ ಸಾಧ್ಯತೆ: ವೈದ್ಯರು ಹೇಳೋದೇನು?

Rahul Gandhi
ಪ್ರಮುಖ ಸುದ್ದಿ28 mins ago

Rahul Gandhi: ಇಂದು ಶಿವಮೊಗ್ಗದಲ್ಲಿ ರಾಹುಲ್‌ ಗಾಂಧಿ ಪ್ರಚಾರ; ಪ್ರಜ್ವಲ್‌ ರೇವಣ್ಣ ವಿಚಾರ ತೆಗೀತಾರಾ?

Job Alert
ಉದ್ಯೋಗ32 mins ago

Job Alert: ಗಮನಿಸಿ; ಹಟ್ಟಿ ಚಿನ್ನದ ಗಣಿ ಕಂಪನಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

After SSLC career options
ಶಿಕ್ಷಣ36 mins ago

Best Courses After SSLC: ವಿಜ್ಞಾನ, ವಾಣಿಜ್ಯ, ಕಲೆ; ಯಾವುದು ಉತ್ತಮ ಆಯ್ಕೆ?

Thomas Cup 2024
ಬ್ಯಾಡ್ಮಿಂಟನ್37 mins ago

Thomas Cup 2024: ಅಂತಿಮ ಲೀಗ್​ ಪಂದ್ಯದಲ್ಲಿ ಇಂಡೊನೇಷ್ಯಾಕ್ಕೆ ಮಣಿದ ಭಾರತ

Aadhaar Crads For Dog
ಪ್ರಮುಖ ಸುದ್ದಿ41 mins ago

Aadhaar Crads For Dog: ದೆಹಲಿಯಲ್ಲಿ ನಾಯಿಗಳಿಗೂ ಬಂತು ಆಧಾರ್ ಕಾರ್ಡ್!

Pushpa 2 The Rule Title track out
ಟಾಲಿವುಡ್53 mins ago

Pushpa 2: ‘ಪುಷ್ಪ 2’ ಟೈಟಲ್​ ಸಾಂಗ್ ಔಟ್‌: ಸ್ಟೈಲಿಶ್‌ ಆಗಿ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್!

Congress Candidate List
Lok Sabha Election 202456 mins ago

Congress Candidate List: ಅಮೇಥಿ, ರಾಯ್‌ ಬರೇಲಿಯಿಂದ ರಾಹುಲ್‌, ಪ್ರಿಯಾಂಕಾ ಸ್ಪರ್ಧಿಸುತ್ತಾರಾ? ಕುತೂಹಲಕ್ಕೆ ಇಂದು ತೆರೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ5 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌