ಚಾಮರಾಜನಗರ: ರಾಜ್ಯದ ಕಾವೇರಿ (Kaveri River) ಕಣಿವೆಯಲ್ಲಿ ಭರ್ಜರಿ ಮಳೆಯಾಗಿದ್ದು, ಈ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ನಾಲ್ಕೂವರೆ ಪಟ್ಟು ಅಧಿಕ ನೀರು ಬಿಡುಗಡೆ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಪ್ರಸಕ್ತ ಜಲವರ್ಷದ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ 101 ಟಿಎಂಸಿ ಬಿಡುಗಡೆ ಮಾಡಬೇಕಿತ್ತು. ಆದರೆ, ಈ ಅವಧಿಯಲ್ಲಿ 452.5 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. 1974ರ ನಂತರ ಇದೇ ಮೊದಲ ಬಾರಿಗೆ ಅತ್ಯಧಿಕ ಪ್ರಮಾಣದಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗಿದೆ.
ಬಿಳಿಗುಂಡ್ಲು ಜಲಮಾಪನ ಕೇಂದ್ರದಲ್ಲಿ ನೀರಿನ ಪ್ರಮಾಣ ದಾಖಲಾಗಿದ್ದು, ಜೂನ್‌ನಲ್ಲಿ 16.46 ಟಿಎಂಸಿ, ಜುಲೈ 106.93, ಆಗಸ್ಟ್ 223.57 ಹಾಗೂ ಸೆಪ್ಟೆಂಬರ್ 105.52 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಈ ವರ್ಷ ಜಲವಿವಾದಕ್ಕೆ ವರುಣ ಅವಕಾಶ ನೀಡಿಲ್ಲ.
ಕಳೆದ ನಾಲ್ಕು ವರ್ಷಗಳಿಂದಲ್ಲೂ ತಮಿಳುನಾಡಿಗೆ ನಿಗದಿಗಿಂತ ಅಧಿಕ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಅದರ ಅಂಕಿ ಅಂಶ ಇಲ್ಲಿದೆ.
2018-19ರಲ್ಲಿ 228 ಟಿಎಂಸಿ
2019-20ರಲ್ಲಿ 97 ಟಿಎಂಸಿ
2020-21ರಲ್ಲಿ 34 ಟಿಎಂಸಿ
2021-22ರಲ್ಲಿ 103 ಟಿಎಂಸಿ
ಇದನ್ನೂ ಓದಿ | ಕಾವೇರಿ ತೀರ್ಥೋದ್ಭವ; ತೀರ್ಥ ಸ್ವರೂಪಿಣಿ ಕಾವೇರಿ ಮಾತೆಯ ಕಣ್ತುಂಬಿಕೊಂಡ ಸಹಸ್ರ ಭಕ್ತಗಣ