ಬೆಂಗಳೂರು: ರಾಜಕಾರಣಿಗಳ ಜತೆಗಿನ ಫೋಟೊ ತೋರಿಸಿ, ಷೇರು ಮಾರುಕಟ್ಟೆಯಲ್ಲಿ ಹಣ (Share Market) ಹೂಡಿಕೆ ಮಾಡಿ, ಅದರಿಂದ ಲಾಭ ಗಳಿಸಿ ಎಂಬುದಾಗಿ ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ (Fraud Case) ಕೇರಳದ (Kerala Couple) ಖತರ್ನಾಕ್ ದಂಪತಿಯನ್ನು ಬೆಂಗಳೂರಿನಲ್ಲಿ ಪೊಲೀಸರು (Bengaluru Police) ಬಂಧಿಸಿದ್ದಾರೆ.
ಶಿಲ್ಪಾ ಹಾಗೂ ಆಕೆಯ ಪತಿಯನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಕೇರಳದ ಜನರನ್ನು ಇವರು ವಂಚಿಸುತ್ತಿದ್ದರು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ, ಅದರಿಂದ ಹೆಚ್ಚಿನ ಲಾಭ ಮಾಡಿಕೊಡುವುದಾಗಿ ಜನರಿಗೆ ವಂಚನೆ ಮಾಡುತ್ತಿದ್ದರು. ಚೈನ್‌ಲಿಂಕ್ ಮೂಲಕ ಜನರನ್ನು ವಂಚಿಸುತ್ತಿದ್ದ ದಂಪತಿಯನ್ನು ಕೊನೆಗೆ ಪೊಲೀಸರು ಬಂಧಿಸಿದ್ದಾರೆ.
ಎಫ್‌ಐಆರ್ ಪ್ರತಿ
ರಾಜಕಾರಣಿಗಳ ಜತೆ ತೆಗೆಸಿಕೊಂಡ ಫೋಟೊಗಳನ್ನು ಜನರಿಗೆ ತೋರಿಸಿ ಅವರನ್ನು ನಂಬಿಸುತ್ತಿದ್ದರು. ಇವರು ಕೋಟ್ಯಂತರ ರೂಪಾಯಿ ವಂಚಿಸಿದ ಕುರಿತು ಪಶ್ಚಿಮ ವಿಭಾಗ ಹಾಗೂ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರಂತೆ ಎಚ್‌ಎಎಲ್ ಪೊಲೀಸರು ದಂಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದರು.
ದಂಪತಿ ವಿರುದ್ಧ ವಂಚನೆಗೊಳಗಾದವರ ಪ್ರತಿಭಟನೆ
ಇದನ್ನೂ ಓದಿ: Fraud Case: ಎಂಎಲ್‌ಸಿ ವಿಶ್ವನಾಥ್ ಪುತ್ರನಿಗೆ ವಂಚನೆ; ಬ್ಯಾಂಕ್ ಖಾತೆಯಿಂದ 1.99 ಲಕ್ಷ ರೂ. ದೋಚಿದ ಸೈಬರ್ ಕಳ್ಳರು
ಇವರ ವಂಚನೆ ಒಂದೆರಡಲ್ಲ
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು, ಮೊದಲು ಒಂದಷ್ಟು ಹಣ ನೀಡುತ್ತಿದ್ದರು. ಹೆಚ್ಚಿನ ಹಣದ ಆಸೆಗೆ ಜನ ಹೆಚ್ಚಿನ ದುಡ್ಡು ಹೂಡಿಕೆ ಮಾಡುತ್ತಲೇ ಇವರು ಹಣ ಪಡೆದು ಪರಾರಿಯಾಗುತ್ತಿದ್ದರು. ಅಷ್ಟೇ ಅಲ್ಲ, ಲಿಕ್ಕರ್ ದಂಧೆ ಮತ್ತು ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಿ ಕೊಡಿಸುವುದಾಗಿಯೂ ಇವರು ವಂಚನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.