ಮಂಡ್ಯ: ಹಲವು ಕೆರೆಗಳ ನಿರ್ಮಾತೃ ಖ್ಯಾತಿಯ ಕೆರೆ ಕಾಮೇಗೌಡ ಅವರು ಇನ್ನಿಲ್ಲ. ಮಳವಳ್ಳಿಯ ಕಲ್ಮನೆ ಕಾಮೇಗೌಡ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ತಮ್ಮ ನಿವಾಸದಲ್ಲಿ ಮೃತಪಟ್ಟ ಅವರು ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅಪಾರ ಪರಿಸರ ಪ್ರೇಮಿಯಾಗಿದ್ದ ಇವರು ಕುಂದೂರು ಬೆಟ್ಟದಲ್ಲಿ ಅಂತರ್ಜಲ ವೃದ್ದಿಗಾಗಿ 15ಕ್ಕೂ ಹೆಚ್ಚು ಕೆರೆ ನಿರ್ಮಿಸಿ ಆಧುನಿಕ ಭಗೀರಥ ಎಂದೇ ಖ್ಯಾತಿ ಪಡೆದಿದ್ದರು. ಕುಂದೂರು ಬೆಟ್ಟದಲ್ಲಿ ಸಾವಿರಾರು ಮರ ಗಿಡ ನೆಟ್ಟು ಬೆಳೆಸಿದ್ದರು. ಇದಕ್ಕಾಗಿ ರಾಜ್ಯೋತ್ಸವ ಪ್ರಶಸ್ತಿ, ಬಸವ ಪ್ರಶಸ್ತಿ ಪಡೆದಿದ್ದರಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರಿಂದಲೂ ಪ್ರಶಂಸೆ ಪಡೆದಿದ್ದರು.
ಇಂದು ಸ್ವಗ್ರಾಮ ದಾಸನದೊಡ್ಡಿಯಲ್ಲಿ ಕಾಮೇಗೌಡರ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ | Saravana Dhanapal | ಬಲೂನ್ ಮ್ಯಾನ್ ಖ್ಯಾತಿಯ ಕಲಾವಿದ ಶರವಣ ಧನಪಾಲ್ ಇನ್ನಿಲ್ಲ