Site icon Vistara News

Khanapur Election Results: ಖಾನಾಪುರದಲ್ಲಿ ಬಿಜೆಪಿಗೆ ಭರ್ಜರಿ ಜಯ, ಅಂಜಲಿಗೆ ಸೋಲು

vittal halgekar won the khanapur constituency

ಬೆಂಗಳೂರು: ಬೆಳಗಾವಿ ಜಿಲ್ಲೆಯ ಖಾನಾಪುರ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳಕರ್ ವಿರುದ್ಧ ಬಿಜೆಪಿಯ ವಿಠಲ್ ಹಲಗೇಕರ್ ಅವರು 54629 ಮತಗಳ ಅಂತರದಿಂದ ಗೆದ್ದಿದ್ದಾರೆ. ನಿಂಬಾಳ್ಕರ್ ಅವರಿಗೆ 37295 ಮತಗಳು ಬಂದರೆ, ಭರ್ಜರಿ ಜಯ ಸಾಧಿಸಿದ ಹಲಗೇಕರ್ ಅವರಿಗೆ 91834 ಮತಗಳು ಸಂದಿವೆ. ಇನ್ನು ಜೆಡಿಎಸ್‌ನ ಭಾಗವಾನ್ ನಾಸೀರ್ ಪಾಪುಲ್ಸಾಬ್ ಅವರು 15,600 ಮತಗಳನ್ನು ಪಡೆದುಕೊಂಡಿದ್ದಾರೆ(Khanapur Election Results).

2023ರ ಚುನಾವಣೆಯ ಅಭ್ಯರ್ಥಿಗಳು

ಪ್ರಸಕ್ತ ಚುನಾವಣೆಯಲ್ಲಿ ಹಾಲಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು ಕಾಂಗ್ರೆಸ್‌ ಟಿಕೆಟ್ ಮೂಲಕ ಮತ್ತೆ ಕಣದಲ್ಲಿದ್ದರು. ಬಿಜೆಪಿಯಿಂದಲೂ ವಿಠಲ್ ಹಲಗೇಕರ್ ಅವರು ಸ್ಪರ್ಧಿಸಿದ್ದಾರೆ. ನಾಸೀರ್ ಬಾಪಲುಸಾಬ್ ಭಗವಾನ್ ಅವರು ಸ್ಪರ್ಧಿಸಿದ್ದರು.

2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?

ಬೆಳಗಾವಿ ಜಿಲ್ಲೆಯ ಪ್ರಮುಕ ಕ್ಷೇತ್ರಗಳಲ್ಲಿ ಖಾನಾಪುರ ಕೂಡ ಒಂದು. 1957ರಿಂದಲೂ ಈ ಕ್ಷೇತ್ರದಲ್ಲಿ ಎಂಇಎಸ್ ಅಭ್ಯರ್ಥಿಗಳು ಮತ್ತು ಪಕ್ಷೇತರ ಅಭ್ಯರ್ಥಿಗಲೇ ಮೇಲುಗೈ ಸಾಧಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಗೆಲುವು ಕಾಣುತ್ತಿದೆ. 2018ರ ಚುನಾವಣೆ ವೇಳೆ ಕಾಂಗ್ರೆಸ್‌ನ ಡಾ. ಅಂಜಲಿ ನಿಂಬಾಳ್ಕರ್ ಅವರು 36649 ಮತಗಳನ್ನು ಪಡೆದುಕೊಂಡಿದ್ದರು. ಇವರ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ವಿಠಲ್ ಹಲಗೇಕರ್ ಅವರು 31516 ಮತಗಳನ್ನು ಪಡೆದುಕೊಂಡಿದ್ದರು. ಗೆಲುವಿನ ಪ್ರಮಾಣ ತೀರಾ ದೊಡ್ಡದೇನಿಲ್ಲ.

Exit mobile version