ಬೆಂಗಳೂರು: ಬೆಳಗಾವಿ ಜಿಲ್ಲೆಯ ಕಿತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಾಬಾಸಾಹೇಬ್ ಪಾಟೀಲ್ ಅವರು ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯ ಮಹಾಂತೇಶ್ ದೊಡಗೌಡರ್ ಅವರ ವಿರುದ್ಧ 2993 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಗೆದ್ದ ಕಾಂಗ್ರೆಸ್ ಅಭ್ಯರ್ಥಿ ಬಾಬಾಸಾಹೇಬ್ ಅವರು 77536 ಮತ ಪಡೆದುಕೊಂಡರೆ, ಸೋತ ದೊಡಗೌಡರ್ ಅವರು 74543 ಮತಗಳನ್ನು ಗಳಿಸಿದ್ದಾರೆ(Kittur Election Results).
2023ರ ಚುನಾವಣೆಯ ಅಭ್ಯರ್ಥಿಗಳು
ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಮಹಾಂತೇಶ್ ದೊಡಗೌಡರ್ ಕಣದಲ್ಲಿದ್ದರು. ಕಾಂಗ್ರೆಸ್ ಈ ಬಾರಿ ಹೊಸ ಮುಖಕ್ಕೆ ಆದ್ಯತೆ ನೀಡಿತ್ತು. ಹಾಗಾಗಿ, ಬಾಬಾ ಸಾಹೇಬ್ ಡಿ ಪಾಟೀಲ್ ಅವರಿಗೆ ಟಿಕೆಟ್ ನೀಡಿತ್ತು.
ಇದನ್ನೂ ಓದಿ: Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಡಬಲ್ ಎಂಜಿನ್ನ ಕೊಂಡಿ ಕಳಚಿದ ‘ಕೈ’
2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?
2008ರಲ್ಲಿ ರಚನೆಯಾದ ಬೆಳಗಾವಿ ಜಿಲ್ಲೆಯ ಮತ್ತೊಂದು ಹೊಸ ಕ್ಷೇತ್ರವಿದು. 2008ರಲ್ಲಿ ಬಿಜೆಪಿ ಮತ್ತು 2013ರಲ್ಲಿ ಕಾಂಗ್ರೆಸ್ ಈ ಕ್ಷೇತ್ರವನ್ನು ಗೆದ್ದಿದ್ದವು. ಕ್ರಮವಾಗಿ ಬಿಜೆಪಿಯ ಸುರೇಶ್ ಮಾರಿಹಾಳ( 48581 ಮತ) ಹಾಗೂ ಕಾಂಗ್ರೆಸ್‌ನ ಡಿ ಬಿ ಇನಾಮದಾರ್ (53924 ಮತ) ಜಯ ಸಾಧಿಸಿದ್ದರು. 2018ರಲ್ಲಿ ಮತ್ತೆ ಈ ಕ್ಷೇತ್ರವು ಬಿಜೆಪಿಯ ಪಾಲಾಯಿತು. ಕಾಂಗ್ರೆಸ್‌ನ ಡಿ ಬಿ ಇನಾಮದಾರ್ ಅವರ ವಿರುದ್ಧ ಬಿಜೆಪಿಯ ಮಹಾಂತೇಶ್ ದೊಡಗೌಡರ್ ಅವರು 73155 ಮತಗಳನ್ನು ಪಡೆದುಕೊಂಡು ಗೆದ್ದರು. ಕಾಂಗ್ರೆಸ್ ಅಭ್ಯರ್ಥಿ 40293 ಮತಗಳನ್ನು ಪಡೆಯಲು ಮಾತ್ರವೇ ಶಕ್ಯವಾಯಿತು.