Site icon Vistara News

ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪೇನು?: ಸಮರ್ಥಿಸಿಕೊಂಡ ಸಿದ್ದರಾಮಯ್ಯ

non veg

ಚಿಕ್ಕಬಳ್ಳಾಪುರ: ಮಾಂಸಾಹಾರ ಸೇವಿಸಿ ಕೊಡಗಿನಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂಬ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದು, ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪೇನು? ಎಂದಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕೊಡಗಿನಲ್ಲಿ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬುದು ವಿವಾದವಾಗಿತ್ತು. ಈ ಹಿಂದೆ ಧರ್ಮಸ್ಥಳಕ್ಕೆ ಮಾಂಸಾಹಾರ ಸೇವಿಸಿ ತೆರಳಿದ್ದರು ಎಂಬುದೂ ವಿವಾದವಾಗಿತ್ತು. ಇದೀಗ ಕೊಡಗಿನ ಘಟನೆ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪೇನು? ಒಂದು ದಿನದ ಮುಂಚೆ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುವುದಿಲ್ಲವೇ? ಮಾಂಸಾಹಾರಿಗಳು ಮಾಂಸ ತಿನ್ನುತ್ತಾರೆ, ಸಸ್ಯಾಹಾರಿಗಳು ಸಸ್ಯಾಹಾರ ತಿನ್ನುತ್ತಾರೆ.

ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಬೇಡ ಅಂತ ಕೇಳುವುದಕ್ಕೆ ನೀನು ಯಾರು? ನಾನು ತಿನ್ನುವುದು ಮಾಂಸಾಹಾರ. ನಿನ್ನ ಹ್ಯಾಬಿಟ್‌ ನಿನಗೆ, ನನ್ನ ಹ್ಯಾಬಿಟ್‌ ನನಗೆ. ಅದನ್ನು ಕೇಳುವುದಕ್ಕೆ ನೀನು ಯಾರು? ಎಂದು ಪ್ರತಿಪ್ರಶ್ನೆ ಹಾಕಿದ್ದಾರೆ.

ಸರ್ಕಾರದ ಜನೋತ್ಸವದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದು ಜನೋತ್ಸವ ಅಲ್ಲ, ಭ್ರಷ್ಟೋತ್ಸವ ಎಂದಿದ್ದಾರೆ.

ಇದನ್ನೂ ಓದಿ | Non Veg | ದೇವಸ್ಥಾನ ಭೇಟಿ ಮುನ್ನ ನಾಟಿಕೋಳಿ ತಿಂದಿದ್ದರೇ ಸಿದ್ದರಾಮಯ್ಯ?; ಮತ್ತೆ ವಿವಾದ ಸೃಷ್ಟಿ!

Exit mobile version