Site icon Vistara News

Kolar News: ಕಾಲೇಜಿನ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಯುವಕನ ಬಂಧನ

Kolar News

ಕೋಲಾರ: ಕಲಬುರಗಿ ಹಾಸ್ಟೆಲ್‌ನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮಗುವಿಗೆ ಜನ್ಮ ನೀಡಿದ್ದು ಸುದ್ದಿಯಾದ ಬೆನ್ನಲ್ಲೇ ಅಂತಹುದೇ ಘಟನೆ ನಗರದಲ್ಲಿ ನಡೆದಿದೆ. ನಗರದಲ್ಲಿ (Kolar News) ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು (17) ಕಾಲೇಜಿನ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಕೋಲಾರ ಹೊರ ವಲಯದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಕಾಲೇಜಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಕಾಲೇಜಿನಲ್ಲಿದ್ದಾಗ ಹೊಟ್ಟೆ ನೋವೆಂದು ಶೌಚಾಲಯಕ್ಕೆ ಹೋಗಿದ್ದ ವಿದ್ಯಾರ್ಥಿನಿ ಅಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ, ಆಕೆಗೆ ತಾನು ಗರ್ಭಿಣಿ ಎನ್ನುವುದು ಕೂಡ ಗೊತ್ತೆ ಇರಲಿಲ್ಲ ಎಂದು ತಿಳಿದುಬಂದಿದೆ.

ಸದ್ಯ ವಿದ್ಯಾರ್ಥಿಯನ್ನು ಆ‌ರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಪೊಲೀಸರು ಹುಡುಕಾಟ ನಡೆಸಿದಾಗ ಮುಳಬಾಗಿಲಿನ ಅನಿಲ್‌ ಕುಮಾರ್‌ (21) ಎಂಬಾತ ಬಾಲಕಿ ಗರ್ಭಿಣಿ ಆಗಲು ಕಾರಣ ಎಂದು ತಿಳಿದುಬಂದಿದೆ. ಆತನನ್ನು ನಗರದ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯು ಶ್ರೀನಿವಾಸಪುರ ತಾಲೂಕಿನಿಂದ ಕಾಲೇಜಿಗೆ ಬರುತ್ತಿದ್ದಳು.

ಕಳೆದ ವರ್ಷ ಡಿಸೆಂಬ‌ರ್‌ನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಹಾಸ್ಟೆಲ್‌ನಲ್ಲೇ ಮಗುವಿಗೆ ಜನ್ಮ ನೀಡಿದ್ದಳು. ಬಳಿಕ ನವಜಾತ ಶಿಶುವಿನೊಂದಿಗೆ ವಿದ್ಯಾರ್ಥಿಯನ್ನು ಕಲಬುರಗಿಯ ಶಿಶು ಗೃಹಕ್ಕೆ ದಾಖಲಿಸಲಾಗಿತ್ತು. ನಂತರ ಪೊಲೀಸರು ಪ್ರರಕಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಬಾಲಕಿ ಮಗುವಿಗೆ ಜನ್ಮ ನೀಡಲು ಕಾರಣವಾದವನು ಅಪ್ರಾಪ್ತೆಯ ಸೋದರ ಸಂಬಂಧಿ ಎನ್ನುವುದು ಗೊತ್ತಾಗಿತ್ತು. ನಂತರ ಆತನನ್ನು ಪತ್ತೆ ಮಾಡಿ ಪೋಕ್ಸೊ ಕಾಯ್ದೆಯಡಿ ಬಂಧಿಸಿದ್ದರು.

ಇದನ್ನೂ ಓದಿ | Bomb Blast: ಜೋಯಿಡಾದಲ್ಲಿ ಪತ್ರಕರ್ತರು ಸಾಗುತ್ತಿದ್ದ ಕಾರಿನಡಿ ನಾಡ ಬಾಂಬ್ ಸ್ಫೋಟ

Krishna River Tragedy: ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಆರು ಮಂದಿ ನೀರುಪಾಲು, ಒಬ್ಬರ ಮೃತದೇಹ ಪತ್ತೆ

ವಿಜಯಪುರ: ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಆರು ಜನ ನೀರುಪಾಲಾಗಿದ್ದು, ಒಬ್ಬರ ಮೃತದೇಹ ಪತ್ತೆಯಾಗಿದೆ. ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿ ಕೃಷ್ಣಾ ನದಿಯಲ್ಲಿ ದುರ್ಘಟನೆ ನಡೆದಿದೆ. ನದಿ ಆಚೆಯ ನಡುಗಡ್ಡೆಗೆ ತೆರಳಿ ವಾಪಸ್‌ ಬರುತ್ತಿದ್ದ ವೇಳೆ ಘಟನೆ ನಡೆದಿದ್ದು, ಸ್ಥಳಕ್ಕೆ ಕೊಲ್ಹಾರ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಹೆಚ್ಚುವರಿ ಎಸ್.ಪಿ. ಶಂಕರ ಮಾರಿಹಾಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳೀಯರು ಹಾಗೂ ಅಧಿಕಾರಿಗಳಿಂದ ನೀರು ಪಾಲಾದವರಿಗಾಗಿ (raft capsizes) ಶೋಧಕಾರ್ಯ ನಡೆಯುತ್ತಿದೆ.

ಅಂದರ್ ಬಾಹರ್ (ಇಸ್ಪೇಟ್) ಆಡುವಾಗ ಪೊಲೀಸರು ದಾಳಿ ನಡೆಸಿದ ವೇಳೆ ಕೃಷ್ಣಾ ನದಿಯಲ್ಲಿ ತೆಪ್ಪದ ಮೂಲಕ ಎಸ್ಕೇಪ್ ಆಗಲು ಯತ್ನಿಸಿದಾಗ ಏಳೆಂಟು ಜನರು ನೀರುಪಾಲು ಆಗಿರುವ ಶಂಕೆ ವ್ಯಕ್ತವಾಗಿದೆ. ಅದರಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಪುಂಡಲೀಕ ಯಂಕಂಚಿ (35) ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್ ಒಬ್ಬ ನದಿಯಿಂದ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Bomb Blast: ಜೋಯಿಡಾದಲ್ಲಿ ಪತ್ರಕರ್ತರು ಸಾಗುತ್ತಿದ್ದ ಕಾರಿನಡಿ ನಾಡ ಬಾಂಬ್ ಸ್ಫೋಟ

ತೆಪ್ಪದಲ್ಲಿ ತೆರಳಿದವರು ಕೊಲ್ಹಾರ ಹಾಗೂ ಬಳೂತಿ ಗ್ರಾಮದವರು ಎನ್ನಲಾಗಿದೆ. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಗ್ರಾಮಸ್ಥರು ದೌಡಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Exit mobile version