Site icon Vistara News

Crime news | ಫೇಸ್‌ಬುಕ್‌ ಸುಂದರಿಗಾಗಿ ಪತ್ನಿಗೆ ವಿಷ ಹಾಕಿದ ಪತಿರಾಯ

kolar poisoning

ಕೋಲಾರ: ಫೇಸ್‌ಬುಕ್‌ ಸುಂದರಿಯ ಸಂಗಕ್ಕಾಗಿ ಪತಿರಾಯನೊಬ್ಬ ಪತ್ನಿಗೆ ವಿಷ ಹಾಕಿದ ಘಟನೆ ಕೋಲಾರದಲ್ಲಿ ನಡೆದಿದೆ. ವಿಷ ಸೇವಿಸಿದ ಪತ್ನಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕಾನಗಮಾಕಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಪತ್ನಿಗಿಂತ 9 ವರ್ಷ ದೊಡ್ಡವನಾದ ಆರೋಪಿ ಶಶಿಕುಮಾರ್‌, ಫೇಸ್‌ಬುಕ್‌ನಲ್ಲಿ ಒಬ್ಬಾಕೆ ಸುಂದರಿಯ ಸಂಗ ಬೆಳೆಸಿದ್ದು, ಆಕೆಯ ಜೊತೆ ವಿಲಾಸ ನಡೆಸುವ ಗೀಳಿಗೆ ಬಿದ್ದು ಪತ್ನಿಯನ್ನೇ ಮರೆತಿದ್ದ. ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದ. ತವರು ಮನೆಯಲ್ಲಿಯೇ ಪತ್ನಿಗೆ ವಿಷ ಹಾಕಿದ್ದಾನೆ. ತೀವ್ರವಾಗಿ ಅಸ್ವಸ್ಥಗೊಂಡ ಪತ್ನಿ ಆಶಾರಾಣಿ ಆಸ್ಪತ್ರೆ ಸೇರಿದ್ದು, ಸಾವು ಬದುಕಿನ ಹೋರಾಟದಲ್ಲಿದ್ದಾರೆ. ಪಾತಕಿ ಪತಿ ಶಶಿಕುಮಾರ್ ತಲೆಮರೆಸಿಕೊಂಡಿದ್ದಾನೆ. ಶ್ರೀನಿವಾಸಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Doctor negligence | ಕೈಗೆ ಗಾಜು ಚುಚ್ಚಿ ಯುವಕ ಬಲಿ, ವೈದ್ಯರ ನಿರ್ಲಕ್ಷ್ಯ ಆರೋಪ

Exit mobile version