Site icon Vistara News

Kolar News : ಕೋಲಾರದ ಒಂಟಿ ಮನೆಯಲ್ಲಿ ವೇಶ್ಯಾವಾಟಿಕೆ; ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಳು ರೈತ ಸಂಘದ ಮುಖ್ಯಸ್ಥೆ!

kolar News

ಕೋಲಾರ: ಒಂಟಿ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಆಧರಿಸಿ ಬಂಗಾರಪೇಟೆ ಪೊಲೀಸರು ದಾಳಿ (Kolar News) ನಡೆಸಿದ್ದಾರೆ. ವೇಶ್ಯಾವಾಟಿಕೆ ಮುಖ್ಯ ರೂವಾರಿ ಹಾಗೂ ರೈತ ಸಂಘದ ಮುಖ್ಯಸ್ಥೆ ಸರಸ್ವತಮ್ಮ ಸೇರಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ನಗರದ ಶ್ರೀನಗರದಲ್ಲಿನ ಒಂಟಿ ಮನೆಯಲ್ಲಿ ಸರಸ್ವತಮ್ಮ ವೇಶ್ಯಾವಾಟಿಕೆಯನ್ನು ನಡೆಸುತ್ತಿದ್ದಳು. ಸರಸ್ವತಮ್ಮ ಈ ಹಿಂದೆ ಬಂಗಾರಪೇಟೆಯ ವಿಜಯನಗರ ಬಡಾವಣೆಯಲ್ಲೂ ವೇಶ್ಯಾಟಾಟಿಕೆ ನಡೆಸಿ, ಸಿಕ್ಕಿ ಬಿದ್ದಿದ್ದಳು. ಇಷ್ಟಾದರೂ ತನ್ನ ಛಾಳಿಯನ್ನು ಮುಂದವರೆಸಿದ ಸರಸ್ವತಮ್ಮ ಇದೀಗ ದಂಧೆ ನಡೆಸಿ ಸಿಕ್ಕಿ ಬಿದ್ದಿದ್ದಾಳೆ. ಪೊಲೀಸರು ನಾಲ್ವರು ಆರೋಪಿಗಳ ಜತೆಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದ ರೈತ ಸಂಘದ ಮುಖ್ಯಸ್ಥೆ ಸರಸ್ವತಮ್ಮಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Murder Case : ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿ ಬಲಿ; ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ

ಎಣ್ಣೆ ಹೊಡೆದು ಡ್ಯೂಟಿಗೆ ಬಂದ ಖಾಕಿ!

ಮದ್ಯ ಸೇವಿಸಿ ಪೊಲೀಸ್‌ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿರುವ ಆರೋಪವೊಂದು ಕೇಳಿ ಬಂದಿದೆ. ಗುತ್ತಿಗಾರಿನಲ್ಲಿ ಹೊಯ್ಸಳ ವಾಹನದಲ್ಲಿ ಕುಡಿದು ಕರ್ತವ್ಯ ನಿರ್ವಹಣೆ ಮಾಡಿರುವ ಆರೋಪ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದಿದೆ.

ಪೊಲೀಸರನ್ನು ಪ್ರಶ್ನಿಸಿ ಬುದ್ದಿವಾದ ಹೇಳುವ ವಿಡಿಯೋ ವೈರಲ್ ಆಗಿದೆ. ಕೆಲ ಕುಡುಕರು‌ ಕುಡಿದು ಬಸ್ ಸ್ಟಾಂಡ್‌ನಲ್ಲಿ ಬಾಟಲಿ ಒಡೆದು ಮಲಗಿದ್ದರು. ಮಹಿಳೆಯೊಬ್ಬರು ಅವರಿಂದ ರಕ್ಷಣೆಗೆ 112ಗೆ ಕರೆ ಮಾಡಿದ್ದರು. ಈ ವೇಳೆ ಓರ್ವ ಎ.ಎಸ್.ಐ ಮತ್ತು ಡ್ರೈವರ್ ಆಗಮಿಸಿದ್ದರು. ಆದರೆ ಕುಡುಕರ ಮೇಲೆ ಕ್ರಮ ಕೈಗೊಳ್ಳದೇ ನಿರ್ಲಕ್ಷ‌ ತೋರಿದ್ದಕ್ಕೆ ಈ ವೇಳೆ ಅನುಮಾನ ಬಂದು ಸ್ಥಳೀಯರು ಪ್ರಶ್ನೆ ಮಾಡಿದಾಗ, ಪೊಲೀಸ್‌ ಸಿಬ್ಬಂದಿ ವರ್ತನೆ ಕುಡಿದಂತೆ ಕಂಡು ಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version