Site icon Vistara News

ಇಬ್ಬರು ಡಕಾಯಿತರಿಗೆ ಕೊಪ್ಪಳದಲ್ಲಿ ಬೆಂಗಳೂರು ಪೊಲೀಸರ ಗುಂಡೇಟು

ಆರೋಪಿಗಳ ಕಾಲಿಗೆ ಫೈರಿಂಗ್‌

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಮುಷ್ಟೂರ ಬಳಿ ಶುಕ್ರವಾರ (ಜು.22) ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಡಕಾಯಿತಿ ಆರೋಪಿಗಳಿಗೆ ಬೆಂಗಳೂರಿನ ಪೊಲೀಸರು ಗುಂಡಿನ ರುಚಿ ತೋರಿಸಿದ್ದಾರೆ.

ಬೆಂಗಳೂರಿನ ಚಿಕ್ಕಜಾಲ ಪೊಲೀಸರು ಡಕಾಯಿತಿ ಪ್ರಕರಣ ಆರೋಪಿಗಳನ್ನು ಹಿಡಿಯಲು ಹೋಗಿದ್ದರು. ಆಗ ಐವರು ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆಗ ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಿದಾಗ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ಬಿತ್ತು.

ಇದನ್ನೂ ಓದಿ | ಜಪಾನ್‌ ಮಾಜಿ ಪ್ರಧಾನಿ ಶಿಂಜೊ ಅಬೆ ಎದೆಗೆ ಗುಂಡೇಟು, ಚಿಂತಾಜನಕ ಸ್ಥಿತಿ

ಶಂಕರ್ ಹಾಗೂ ಅಶೋಕ್ ಗುಂಡೇಟು ತಿಂದ ಆರೋಪಿಗಳು. ಪೊಲೀಸರ ಗುಂಡು ಹಾರಾಟದ ಬಳಿಕ ಅವಿತು ಕುಳಿತಿದ್ದ ಆರೋಪಿಗಳಾದ ಅಂಬಣ್ಣ , ಪರಶುರಾಮ, ಅಡವಿಯಪ್ಪ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಈ ವೇಳೆ ಪೊಲೀಸರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ಸ್‌ಪೆಕ್ಟರ್ ಪ್ರವೀಣ್ ಮತ್ತು ಪೊಲೀಸ್ ಪೇದೆ ಬಸವರಾಜ್ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಆರೋಪಿಗಳು ಮತ್ತು ಪೊಲೀಸರಿಗೆ ಗಂಗಾವತಿ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಮೇಲೆ ವಿವಿಧ ಕೇಸ್‌ಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ | ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೌಡಿ ಕಾಲಿಗೆ ಗುಂಡೇಟು

Exit mobile version