ಕೊಪ್ಪಳ: ವಿವಾಹದಾಚೆಗಿನ ಸಂಬಂಧ (Illicit relationship) ಹೊಂದಿದ್ದ ಇಬ್ಬರು ಪ್ರೇಮಿಗಳು ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ (suicide case) ಮಾಡಿಕೊಂಡ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿಯಲ್ಲಿ ನಡೆದಿದೆ.
ಪೀರಸಾಬ (35), ಶಾರವ್ವ (30) ಆತ್ಮಹತ್ಯೆ ಮಾಡಿಕೊಂಡವರು. ಇಬ್ಬರಿಗೂ ಪ್ರತ್ಯೇಕ ವಿವಾಹವಾಗಿದ್ದು, ತಲಾ ಮೂರು ಜನ ಮಕ್ಕಳಿದ್ದಾರೆ. ಇಬ್ಬರ ಮಧ್ಯೆ ಹಲವು ವರ್ಷಗಳಿಂದ ಅನೈತಿಕ ಸಂಬಂಧವಿತ್ತು. ಇತ್ತೀಚಿಗೆ ಪೀರಸಾಬನ ಪತ್ನಿ ಶಾರವ್ವಳೊಂದಿಗೆ ಜಗಳವಾಡಿದ್ದಳು. ನಿನ್ನೆ ಸಂಜೆ ಪೀರಸಾಬನ ಹೊಲದಲ್ಲಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಸ್ತೆ ಅಪಘಾತದಲ್ಲಿ ಬಾಲಕಿ ಸಾವು
ವಿಜಯನಗರ: ಬೈಕ್‌ಗೆ ಲಾರಿ ಡಿಕ್ಕಿಯಾದ ಪರಿಣಾಮ ಬಾಲಕಿಯೊಬ್ಬಳು ಸಾವಿಗೀಡಾಗಿದ್ದಾಳೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ MB ಅಯ್ಯನಹಳ್ಳಿ ಬಳಿ ಘಟನೆ ನಡೆದಿದ್ದು, ಸಿದ್ದಾಪುರ ಗ್ರಾಮದ ಸಿಂಚನ(12) ಮೃತಪಟ್ಟ ಬಾಲಕಿ.
ಬೈಕ್ ಸವಾರ ಮಹೇಶ(45), ಪುತ್ರ ಲಕ್ಷ್ಮಣ(2) ಗಾಯಗೊಂಡಿದ್ದಾರೆ. ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ, ಅನಧಿಕೃತ ಯೂ ಟರ್ಟ್‌ಗಳು ಇದಕ್ಕೆ ಕಾರಣ ಎಂದು ಗೊತ್ತಾದ ಹಿನ್ನೆಲೆಯಲ್ಲಿ, ಪೊಲೀಸರು ಕೂಡಲೇ ಸ್ಥಳದಲ್ಲಿದ್ದ ಅನಧಿಕೃತ ಯೂ ಟರ್ನ್‌ಗಳನ್ನು ಮುಚ್ಚಿಸಿದ್ದಾರೆ. ಅನಧಿಕೃತ ಯೂ ಟರ್ನ್‌ಗಳನ್ನು ತೆರೆದರೆ FIR ದಾಖಲಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Illicit Relationship: ಪತಿ, ಮಕ್ಕಳಿದ್ದರೂ ಸಣ್ಣ ವಯಸ್ಸಿನ ಯುವಕನ ಮೋಹಿಸಿದಳು; ಅನೈತಿಕ ಸಂಬಂಧಕ್ಕೆ ಬಲಿಯಾದಳು