Site icon Vistara News

ಖಾಕಿಗೆ ಮರ್ಯಾದೆ ಹೋಗಿದೆ, ಕಾವಿಗೆ ಮಾತ್ರ ಗೌರವವಿದೆ; ಮಠಗಳ ಕೊಡುಗೆ ಶ್ಲಾಘಿಸಿದ ಡಿ.ಕೆ. ಶಿವಕುಮಾರ್

dk shivakumar speech

ರಾಮನಗರ: ಖಾಕಿಗೆ ಇರುವ ಮರ್ಯಾದೆ ಹೋಗಿಬಿಟ್ಟಿದೆ. ಏನಾದರೂ ಗೌರವ ಎಂಬುವುದು ಇದ್ದರೆ ಅದು ಕಾವಿಗೆ, ಮಠಮಾನ್ಯ ಗುರುಗಳಿಗೆ ಮಾತ್ರ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಮಠಗಳೇ ಶ್ರೇಷ್ಠ. ಸರ್ಕಾರವೂ ಮಾಡದಂತಹ ಉತ್ತಮ ಕಾರ್ಯಗಳನ್ನು ರಾಜ್ಯದ ಮಠಗಳು ಮಾಡುತ್ತಾ ಬಂದಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಕಂಚುಗಲ್ ಬಂಡೇಮಠದಲ್ಲಿ ಭಾನುವಾರ ಆಯೋಜಿಸಿದ್ದ ಚರಮೂರ್ತಿ ಶ್ರೀ ಶಿವರುದ್ರ ಮಹಾಸ್ವಾಮಿ ಸಂಸ್ಮರಣೋತ್ಸವ ಹಾಗೂ ಪೂಜ್ಯ ಚರಮೂರ್ತಿ ಶ್ರೀ ಬಸವಲಿಂಗ ಮಹಾಸ್ವಾಮಿ ನಿರಂಜನ ಚರಪಟ್ಟಾಧಿಕಾರದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಶಿಕ್ಷಣ, ಆರೋಗ್ಯ, ಸಾಮಾಜಿಕ, ಧಾರ್ಮಿಕವಾಗಿ ಮಠಗಳು ಬದಲಾವಣೆ ತಂದಿವೆ. ದೇವರು ವರ ಅಥವಾ ಶಾಪ ಕೊಡುವುದಿಲ್ಲ, ಅವಕಾಶ ಕೊಡುತ್ತಾನೆ. ಅಧಿಕಾರ ಬರುತ್ತದೆ, ಹೋಗುತ್ತದೆ. ಯಾರೂ ಯಾವ ಜಾತಿಯಲ್ಲಿ ಹುಟ್ಟುಬೇಕು ಎಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ಹಾಗೆಯೇ ದೇವರು ಒಬ್ಬ ನಾಮ ಹಲವು ಎಂದು ಪೂಜಿಸುತ್ತೇವೆ. ನಮ್ಮ ಹಿರಿಯರು ಮನೆ-ಮಠ ಹುಷಾರು ಎಂದು ಹೇಳಿದ್ದಾರೆ. ಹೀಗಾಗಿ ನಮಗೆ ಮಾರ್ಗದರ್ಶನ ನೀಡುವ ಮಠಗಳನ್ನು ನಾವು ಕಾಪಾಡಿಕೊಳ್ಳಬೇಕು ಎಂದರು.

ಸಾಧನೆ ಮಾಡಬೇಕಾದರೆ ಮನೆ, ಮಠ, ಗುರು ಮುಖ್ಯವಾಗಿರಬೇಕು. ನಿಮ್ಮ ಜತೆ ನಾನಿದ್ದೇನೆ, ನನಗೆ ಆಶೀರ್ವಾದ ಮಾಡಿ ಎಂದು 2023ಕ್ಕೆ ಸಿಎಂ ಆಗಲು ಆಶೀರ್ವಾದ ಮಾಡುವಂತೆ ಪರೋಕ್ಷವಾಗಿ ಸ್ವಾಮೀಜಿಗಳ ಬಳಿ ಬೇಡಿಕೊಂಡರು.

ಇದನ್ನೂ ಓದಿ | ಮಂತ್ರಾಲಯ ರಾಯರ ಮಠದ ಹುಂಡಿಯಲ್ಲಿ 2.52 ಕೋಟಿ ರೂ. ಸಂಗ್ರಹ

Exit mobile version