Site icon Vistara News

Kundapura Election Results: ಕುಂದಾಪುರದಲ್ಲಿ ಹಾಲಾಡಿ ಶಿಷ್ಯ ಕಿರಣ್‌ ಕೊಡ್ಗಿ ಜಯಭೇರಿ

Kundapura assembly Election Results winner Kiran kumar kodgi

ಕುಂದಾಪುರ: ಉಡುಪಿ ಜಿಲ್ಲೆಯ ಮಟ್ಟಿಗೆ ಕುಂದಾಪುರ ವಿಧಾನಸಭಾ ಕ್ಷೇತ್ರ ಎಂದರೆ ಅದು ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಕ್ಷೇತ್ರ. ಆದರೆ, ಈ ಬಾರಿ ಅವರು ಸ್ಪರ್ಧೆ ಇಲ್ಲದ ಚುನಾವಣೆ ಇದಾಗಿದ್ದರಿಂದ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಈಗ ಕ್ಷೇತ್ರದ ಫಲಿತಾಂಶ (Kundapura Election Results) ಬಂದಿದ್ದು, ಬಿಜೆಪಿ ಪಕ್ಷದ ಕಿರಣ್‌ ಕುಮಾರ್‌ ಕೊಡ್ಗಿ ಅವರು ಜಯಗಳಿಸಿದ್ದಾರೆ.

ಕಿರಣ್ ಕೊಡ್ಗಿ ಮುಡಿಗೆ ಕುಂದಾಪುರ

ಕಳೆದ ಐದು ಚುನಾವಣೆಗಳಲ್ಲಿ ನಾಲ್ಕು ಬಾರಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬಿಜೆಪಿಯಿಂದ ಸ್ಪರ್ಧಿಸಿ ದಾಖಲೆಯ ಗೆಲುವು ಪಡೆದಿದ್ದರು. ಬಿಜೆಪಿಯಿಂದ ಸಚಿವ ಸ್ಥಾನ ಕೊಡುವುದಾಗಿ ಹೇಳಿ ಕೊಡದಿದ್ದರಿಂದ ಬೇಸರಗೊಂಡು 2013 ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ದಾಖಲೆ ಗೆಲುವು ಕಂಡಿದ್ದರು. ಹಾಗಾಗಿ ಕುಂದಾಪುರ ಕ್ಷೇತ್ರದಲ್ಲಿ ಹಾಲಾಡಿಯವರೇ ಅಂತಿಮ ಮತ್ತು ನಿರ್ಣಾಯಕರಾಗಿದ್ದಾರೆ. ಈ ಬಾರಿ ಅವರು ಸ್ಪರ್ಧೆಯಿಂದ ಹಿಂದೆ ಸರಿದು ತಮ್ಮ ಆಪ್ತರಾದ ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಬಿಜೆಪಿಯಿಂದ ಕುಂದಾಪುರದ ಟಿಕೆಟ್ ಕೊಡಿಸಿದ್ದರು. ಅವರ ಪ್ರಭಾವ ಬಳಸಿ ಈಗ ಗೆಲ್ಲಿಸಿಕೊಂಡು ಬಂದಿದ್ದಾರೆ. ಹಾಲಾಡಿ ಕರಾವಳಿಯಲ್ಲಿ ಅತ್ಯಂತ ಪ್ರಭಾವ ಬೀರುವ ಬಂಟ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಅವರ ಮತಗಳು ಬಿಜೆಪಿಗೆ ಸಹಜವಾಗಿಯೇ ಒಲಿದಿದೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಕಿರಣ್ ಕೊಡ್ಗಿ ಅವರಿಗೆ ಅವರ ಸಮುದಾಯದ ಮತಗಳೂ ಒಲಿದಿರುವುದು ಜಯಕ್ಕೆ ಮತ್ತೊಂದು ಪ್ಲಸ್‌ ಆಗಿದೆ.

ಕುಂದಾಪುರ ಚುನಾವಣಾ ಫಲಿತಾಂಶ

ಹೋರಾಡಿ ಸೋತ ಮೊಳಹಳ್ಳಿ ದಿನೇಶ್ ಹೆಗ್ಡೆ

ಕಾಂಗ್ರೆಸ್‌ನಿಂದ ಈ ಬಾರಿ ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ ಅವರು ಕಣಕ್ಕಿಳಿದಿದ್ದರು. ಅಲ್ಲದೆ, ಚುನಾವಣೆ ಘೋಷಣೆಗೆ ಮೂರು ತಿಂಗಳು ಮೊದಲೇ ಇವರು ಫೀಲ್ಡ್‌ಗೆ ಇಳಿದಿದ್ದರು. ಈ ಹಿನ್ನೆಲೆಯಲ್ಲಿ ಜನ ಸಂಪರ್ಕ ಸಾಧಿಸಲು ಸಫಲರಾಗಿದ್ದರು. ಆದರೆ, ಬಿಜೆಪಿಯನ್ನು ಸೋಲಿಸುವಷ್ಟು ಮತಗಳನ್ನು ಪಡೆಯಲು ಇವರಿಗೆ ಸಾಧ್ಯವಾಗಲೇ ಇಲ್ಲ. ಕಿರಣ್‌ಗೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬೆಂಬಲ ಇರುವುದೇ ಇದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

ಕಳೆದ ಚುನಾವಣೆ ಫಲಿತಾಂಶ
ಹಾಲಾಡಿ ಶ್ರೀನಿವಾಸ ಶೆಟ್ಟಿ (ಬಿಜೆಪಿ): 1,03,434 | ರಾಕೇಶ್ ಮಲ್ಲಿ (ಕಾಂಗ್ರೆಸ್): 47,029 | ಗೆಲುವಿನ ಅಂತರ: 56,405

ಈ ಬಾರಿಯ ಚುನಾವಣಾ ಫಲಿತಾಂಶ
ಕಿರಣ್‌ ಕುಮಾರ್‌ ಕೊಡ್ಗಿ (ಬಿಜೆಪಿ) 102424 | ದಿನೇಶ್ ಹೆಗ್ಡೆ (ಕಾಂಗ್ರೆಸ್‌) 60868 | ಗೆಲುವಿನ ಅಂತರ: 41556 ನೋಟಾ: 1141

ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version