Site icon Vistara News

ಮುಂದಿನ ಬಾರಿಯೂ ನಾನೇ ಶಾಸಕ ಎಂಬ ಭ್ರಮೆ ಬೇಡ: ಬಿಜೆಪಿ ನಾಯಕರಿಗೆ ಬಿಎಸ್‌ವೈ ಕಿವಿಮಾತು

BSY felicitaion

ಶಿವಮೊಗ್ಗ: ʻʻಮುಂದಿನ ಬಾರಿಯೂ ನಾನೇ ಶಾಸಕನೆಂಬ ಭ್ರಮೆ ಬೇಡ. ಕಾರ್ಯಕರ್ತರನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳಿʼʼ- ಹೀಗಂತ ಕಿವಿಮಾತು ಹೇಳಿದರು ಮಾಜಿ ಮುಖ್ಯಮಂತ್ರಿ, ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರಾಗಿರು ಬಿ.ಎಸ್.ಯಡಿಯೂರಪ್ಪ.

ಶನಿವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ʻʻಮಂಗಳೂರಿನಲ್ಲಿ ಶುಕ್ರವಾರ ಪ್ರಧಾನಿ ಜತೆ ಕೋರ್ ಕಮಿಟಿ ಸಭೆ ನಡೆದಿದೆ. ಯುವಕರನ್ನು ಸೆಳೆಯಬೇಕು, ಮಹಿಳೆಯರನ್ನು ದೊಡ್ಡ ಪ್ರಮಾಣದಲ್ಲಿ ಸಂಘಟಿಸಬೇಕು. ಯುವಕರಲ್ಲಿ ಪಕ್ಷದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಬೇಕು ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಇದರೊಂದಿಗೆ 150 ಟಾರ್ಗೆಟ್ ನಿಗದಿಪಡಿಸಲಾಗಿದೆ. ನೀವು ಕರೆದಾಗ ತಿಂಗಳಿಗೊಮ್ಮೆ ರಾಜ್ಯಕ್ಕೆ ಬರುತ್ತೇವೆ ಎಂದು ಖುದ್ದು ಮೋದಿಜಿಯವರೇ ತಿಳಿಸಿದ್ದಾರೆ. ಅದರಂತೆ ಒಂದು ದಿನವೂ ವಿಶ್ರಾಂತಿ ಪಡೆಯದ ಮೋದಿ ಮೇಲ್ಪಂಕ್ತಿಯಲ್ಲಿರುವ ನಾಯಕ. ಅವರೇ ಈ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿರುವಾಗ ನಾವು ಇನ್ನು ಹೇಗೆ ಕೆಲಸ ಮಾಡಬೇಕು ಎಂಬುದನ್ನು ನೀವು ನಿರ್ಧರಿಸಿ ಕೆಲಸ ಮಾಡಬೇಕುʼʼ ಎಂದರು.

ʻʻಶಿವಮೊಗ್ಗದ ಎಲ್ಲ ಅಸೆಂಬ್ಲಿ ಸ್ಥಾನಗಳನ್ನು ಗೆಲ್ಲಬೇಕು. ಈಗಿರುವ ಸಂಘಟನೆಗಿಂತ ಹೆಚ್ಚು ಬಲಪಡಿಸಬೇಕು. ಪರಿಶಿಷ್ಟ ಜಾತಿ, ಪಂಗಡವನ್ನು ವಿಶ್ವಾಸಕ್ಕೆ ತೆಗೆದುಕೊಂಡು 150 ಸ್ಥಾನವನ್ನು ಗೆಲ್ಲೋಣ. ನೀವು ಕರೆದಾಗ ವಿಧಾನ ಸಭಾ ಕ್ಷೇತ್ರಕ್ಕೆ ಬರುತ್ತೇನೆ. ಏನು ಸಾಧ್ಯವಿದೆ ಆ ಎಲ್ಲಾ ಕೆಲಸಗಳನ್ನು ಮಾಡೋಣ. ಕಾರ್ಯಕ್ರಮಗಳನ್ನು ನಿಗದಿ ಮಾಡಲಾಗಿದೆ. ಗೆದ್ದಿರುವ ಕ್ಷೇತ್ರವನ್ನು ಉಳಿಸಿಕೊಂಡು ಮುಂದೆ ಸಾಗಬೇಕಿದೆ. ಸಾಮೂಹಿಕ ನಾಯಕತ್ವದಲ್ಲಿ ಮುಂದೆ ಸಾಗೋಣ, ಪಕ್ಷ ಬಲಪಡಿಸೋಣʼʼ ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲೆಯ ಶಾಸಕರು, ಇತರ ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಪಾಲ್ಗೊಂಡು ಬಿ.ಎಸ್.ಯಡಿಯೂರಪ್ಪ ಅವರಿಗೆ ಶುಭ ಹಾರೈಸಿದರು.

ಇದನ್ನೂ ಓದಿ Election 2023 | ಶಿವಮೊಗ್ಗದಲ್ಲಿ ಮೋದಿ ಬೃಹತ್‌ ಕಾರ್ಯಕ್ರಮ; ಬಿ.ಎಸ್‌.ಯಡಿಯೂರಪ್ಪ

Exit mobile version