Site icon Vistara News

Lightning strike | ಸಿಡಿಲು ಬಡಿದು ಇಬ್ಬರು ಸಾವು: ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಎರಗಿದ ಆಘಾತ

lightning two person died in Seemandhra

ಬೀದರ್‌: ರಾಜ್ಯದಲ್ಲಿ ಕೆಲವು ಕಡೆ ಮಳೆಯ ಅಬ್ಬರ ಮುಂದುವರಿದಿದ್ದರೆ ಸಿಡಿಲೂ ತನ್ನ ಪ್ರತಾಪವನ್ನು ತೋರಿಸಿದೆ. ಬೀದರ್‌ ಜಿಲ್ಲೆಯಲ್ಲಿ ಸಿಡಿಲು ಬಡಿದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬರಿಗೆ ಗಂಭೀರವಾದ ಗಾಯಗಳಾಗಿವೆ.

ಕಮಲನಗರ ತಾಲ್ಲೂಕಿನ ಠಾಣಾಕುಶನೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಮುಧೋಳ (ಕೆ) ಹೊರವಲಯದಲ್ಲಿ ಈ ಘಟನೆ ನಡೆದಿದೆ. ಚಿಮ್ಮೇಗಾಂವ್‌ದ ಕಚರಬಾಯಿ ಕೇರಬಾ ತೋಟಗೆರೆ (30) ಹಾಗೂ ಕಿಶನ್‌ ವಿಠ್ಠಲ್ ಕುಂಬಾರ (28) ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಅರ್ಚನಾ ಅವರ ಸೊಂಟ ಹಾಗೂ ಭುಜಕ್ಕೆ ಸುಟ್ಟ ಗಾಯಗಳಾಗಿವೆ.

ವಿನಾಯಕ ಬಿರಾದಾರ ಎಂಬವರ ಹೊಲದಲ್ಲಿ ಸೋಯಾಬಿನ್ ರಾಶಿ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಸೋಯಾಬಿನ್‌ ಕೊಯ್ದು ರಾಶಿ ಮಾಡುತ್ತಿದ್ದಾಗ ಮಳೆ ಸರಿಯಲು ಆರಂಭಿಸಿದ್ದರಿಂದ ರಕ್ಷಣೆ ಪಡೆಯಲು ನಾಲ್ವರು ಮರದ ಕೆಳೆಗೆ ಹೋದಾಗ ಸಿಡಿಲು ಬಡಿದಿದೆ. ದಾರುಣ ಸಾವು ಕಂಡ ಕುಟುಬಸ್ಥರ ಆಕ್ರಂದನ…ಮುಗಿಲುಮುಟ್ಟಿದೆ. ಕಮಲನಗರ ತಾಲೂಕಿನ ಠಾಣಾಕುಸನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಕೊಪ್ಪಳದಲ್ಲಿ ಸಿಡಿಲು ಬಡಿದು ಯುವಕ ಸಾವು, ಮಹಿಳೆಗೆ ಗಂಭೀರ ಗಾಯ

Exit mobile version