Site icon Vistara News

ಶಿವಮೊಗ್ಗದ ಶಂಕಿತ ಉಗ್ರರ ಜತೆ ಸಂಪರ್ಕ, ಕೊಪ್ಪಳದ ವ್ಯಕ್ತಿ ಬಂಧನ

detention

ಕೊಪ್ಪಳ: ಶಿವಮೊಗ್ಗದಲ್ಲಿ ಬಂಧಿತ ಶಂಕಿತ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಗಂಗಾವತಿಯ ವ್ಯಕ್ತಿಯೊಬ್ಬನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.

ಬಂಧಿತ ವ್ಯಕ್ತಿ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಶಬ್ಬೀರ್. ಗಂಗಾವತಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಶಬ್ಬೀರ್, ಶಿವಮೊಗ್ಗದಲ್ಲಿ ಬಂಧನವಾದ ಶಂಕಿತ ಉಗ್ರರ ಜೊತೆ ಸಂಪರ್ಕ ಹೊಂದಿದ್ದ. ಶಿವಮೊಗ್ಗ ಪೊಲೀಸರು ಗಂಗಾವತಿಯಲ್ಲಿ ಶಬ್ಬೀರ್‌ನನ್ನು ಬಂಧಿಸಿ ಕರೆದೊಯ್ದಿದ್ದಾರೆ.

ವೀರ್‌ ಸಾವರ್ಕರ್‌ ಫೋಟೋ ವಿಚಾರದಲ್ಲಿ ಹುಟ್ಟಿದ ತಗಾದೆಯಿಂದ ಪ್ರೇಮ್‌ ಸಿಂಗ್‌ ಎಂಬ ವ್ಯಕ್ತಿಗೆ ಚೂರಿ ಇರುತ, ಶಿವಮೊಗ್ಗ ನಗರದಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸುವ ಸಂಚು ಇತ್ಯಾದಿಗಳ ಹಿನ್ನೆಲೆಯಲ್ಲಿ ಈಗಾಘಲೇ ನಾಲ್ವರನ್ನು ಬಂಧಿಸಲಾಗಿದೆ. ಇವರು ಪಿಎಫ್‌ಐ ಸಂಘಟನೆಯ ಜತೆಗೆ ನಂಟು ಹೊಂದಿರುವುದು ಹಾಗೂ ಅದರ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದು ಖಚಿತವಾಗಿದೆ. ಕಳೆದ ವಾರ ಪಿಎಫ್‌ಐ ಕಚೇರಿ, ಮುಖಂಡರ ಮನೆಗಳ ಮೇಲೆ ದಾಳಿ ನಡೆದು 14 ಮಂದಿಯನ್ನು ಬಂಧಿಸಲಾಗಿತ್ತು.

Exit mobile version