ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಕಾವು ದಿನೇದಿನೆ ರಂಗೇರುತ್ತಿದೆ. ಕರ್ನಾಟಕದಲ್ಲೂ (Karnataka) ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದ, ಅಬ್ಬರದ ಹೇಳಿಕೆ, ಇನ್ನಿಲ್ಲದ ರಣತಂತ್ರ ರೂಪಿಸುತ್ತಿವೆ. ಇನ್ನು ಮೊದಲ ಹಂತದ 14 ಕ್ಷೇತ್ರಗಳಿಗೆ ನೂರಾರು ಅಭ್ಯರ್ಥಿಗಳು ಕೂಡ ನಾಮಪತ್ರ ಸಲ್ಲಿಸಿದ್ದು, ಪ್ರಚಾರದ ಭರಾಟೆಯನ್ನು ದ್ವಿಗುಣಗೊಳಿಸಿದ್ದಾರೆ. ಅಷ್ಟೇ ಅಲ್ಲ, ಕಣದಲ್ಲಿರುವ ಅಭ್ಯರ್ಥಿಗಳು ಆಸ್ತಿಯನ್ನು ಘೋಷಣೆ ಮಾಡಿದ್ದು, ಇವರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ (DK Suresh) ಅವರೇ ಸಿರಿವಂತ ಅಭ್ಯರ್ಥಿ ಎನಿಸಿದ್ದಾರೆ. ಹಾಗಾದರೆ, ಕಣದಲ್ಲಿರುವ ಟಾಪ್ 10 ಸಿರಿವಂತರು ಯಾರು? ಇಲ್ಲಿದೆ ಮಾಹಿತಿ.
1. ಡಿ.ಕೆ.ಸುರೇಶ್, ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ
ಒಟ್ಟು ಆಸ್ತಿ: 593 ಕೋಟಿ ರೂ.
ಚರಾಸ್ತಿ: 106.71 ಕೋಟಿ ರೂ.
ಸ್ಥಿರಾಸ್ತಿ: 486.33 ಕೋಟಿ ರೂ.
ಚಿನ್ನ : 1,260 ಗ್ರಾಂ
ಬೆಳ್ಳಿ : 4.86 ಕೆ.ಜಿ
2. ಸ್ಟಾರ್ ಚಂದ್ರು, ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ
ಒಟ್ಟು ಆಸ್ತಿ: 267 ಕೋಟಿ ರೂ.
ಚರಾಸ್ತಿ: 29.94 ಕೋಟಿ ರೂ.
ಸ್ಥಿರಾಸ್ತಿ: 237.11 ಕೋಟಿ ರೂ.
ಪತ್ನಿ ಚರಾಸ್ತಿ: 182.33 ಕೋಟಿ ರೂ.
ಪತ್ನಿ ಸ್ಥಿರಾಸ್ತಿ: 146.99 ಕೋಟಿ ರೂ.
3. ರಕ್ಷಾ ರಾಮಯ್ಯ, ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ
ಒಟ್ಟು ಆಸ್ತಿ: 191 ಕೋಟಿ ರೂ.
3 ಕಾರು: 2.70 ಕೋಟಿ ರೂ. ಮೌಲ್ಯ
ಚಿನ್ನ, ಬೆಳ್ಳಿ, ವಜ್ರಾಭರಣ: 64 ಲಕ್ಷ ರೂ. ಮೌಲ್ಯ
ಸಾಲ : 9 ಕೋಟಿ.
4. ಎಚ್.ಡಿ.ಕುಮಾರಸ್ವಾಮಿ, ಮಂಡ್ಯ ಮೈತ್ರಿ ಅಭ್ಯರ್ಥಿ
ಒಟ್ಟು ಆಸ್ತಿ: 55 ಕೋಟಿ ರೂಪಾಯಿ
ಮುಕ್ಕಾಲು ಕೆ.ಜಿ ಚಿನ್ನಾಭರಣ: 47 ಲಕ್ಷ ರೂ. ಮೌಲ್ಯ
ಸಾಲ: 19.12 ಕೋಟಿ ರೂಪಾಯಿ
ಪತ್ನಿಯ ಒಟ್ಟು ಆಸ್ತಿ: 154 ಕೋಟಿ ರೂ.
5. ಡಾ.ಸಿ.ಎನ್.ಮಂಜುನಾಥ್, ಬೆಂ. ಗ್ರಾಮಾಂತರ ಬಿಜೆಪಿ ಅಭ್ಯರ್ಥಿ
ಒಟ್ಟು ಆಸ್ತಿ: 44 ಕೋಟಿ ರೂ.
ಚರಾಸ್ತಿ: 6.98 ಕೋಟಿ ರೂ.
ಸ್ಥಿರಾಸ್ತಿ: 36.66 ಕೋಟಿ ರೂ.
ಸಾಲ: 3.75 ಕೋಟಿ ರೂ.
ಪತ್ನಿ ಒಟ್ಟು ಆಸ್ತಿ : 52 ಕೋಟಿ ರೂ.
6. ಶ್ರೇಯಸ್ ಪಟೇಲ್, ಹಾಸನ ಕಾಂಗ್ರೆಸ್ ಅಭ್ಯರ್ಥಿ
ಒಟ್ಟು ಆಸ್ತಿ : 41 ಕೋಟಿ ರೂ.
ಚಿನ್ನಾಭರಣ : 59.65 ಲಕ್ಷ ರೂ. ಮೌಲ್ಯ
ಚರಾಸ್ತಿ : 1.40 ಕೋಟಿ ರೂ.
ಕೃಷಿಯೇತರ ಭೂಮಿ, ವಾಣಿಜ್ಯ ಕಟ್ಟಡ: 39.58 ಕೋಟಿ ರೂ. ಮೌಲ್ಯ
ಕೃಷಿ ಭೂಮಿ: 20 ಎಕರೆ
7. ಪ್ರೊ.ರಾಜೀವ್ ಗೌಡ, ಬೆಂಗಳೂರು ಉತ್ತರ ಕಾಂಗ್ರೆಸ್ ಅಭ್ಯರ್ಥಿ
ಒಟ್ಟು ಆಸ್ತಿ : 35 ಕೋಟಿ ರೂ.
ಚರಾಸ್ತಿ : 7.85 ಕೋಟಿ ರೂ.
ಸ್ಥಿರಾಸ್ತಿ : 26.74 ಕೋಟಿ ರೂ.
ಪತ್ನಿ ಆಸ್ತಿ : 100 ಕೋಟಿ ರೂ.
ಪತ್ನಿ ಸಾಲ : 1.5 ಕೋಟಿ ರೂ.
8. ಮಲ್ಲೇಶ್ ಬಾಬು, ಕೋಲಾರ ಜೆಡಿಎಸ್ ಅಭ್ಯರ್ಥಿ
ಒಟ್ಟು ಆಸ್ತಿ : 23 ಕೋಟಿ ರೂ.
ಚರಾಸ್ತಿ : 5.80 ಕೋಟಿ ರೂ.
ಸ್ಥಿರಾಸ್ತಿ : 16.76 ಕೋಟಿ ರೂ.
ಚಿನ್ನಾಭರಣ : 8 ಲಕ್ಷ ರೂ. ಮೌಲ್ಯ
ಸಾಲ: 3.25 ಕೋಟಿ ರೂ.
9. ಪ್ರಜ್ವಲ್ ರೇವಣ್ಣ, ಹಾಸನ ಜೆಡಿಎಸ್ ಅಭ್ಯರ್ಥಿ
ಒಟ್ಟು ಆಸ್ತಿ: 40.94 ಕೋಟಿ ರೂ.
ಚರಾಸ್ತಿ: 5.44 ಕೋಟಿ ರೂ.
ಸ್ಥಿರಾಸ್ತಿ: 35.40 ಕೋಟಿ ರೂ.
ಸಾಲ: 4.48 ಕೋಟಿ ರೂ.
ತೆರಿಗೆ ಬಾಕಿ: 3.04 ಕೋಟಿ ರೂ.
ಚಿನ್ನಾಭರಣ: 67 ಲಕ್ಷ ರೂ. ಮೌಲ್ಯ
10. ವಿ.ಸೋಮಣ್ಣ, ತುಮಕೂರು ಬಿಜೆಪಿ ಅಭ್ಯರ್ಥಿ
ಒಟ್ಟು ಆಸ್ತಿ : 17.74 ಕೋಟಿ ರೂ.
ಚರಾಸ್ತಿ: 5.18 ಕೋಟಿ ರೂ.
ಸ್ಥಿರಾಸ್ತಿ: 12.56 ಕೋಟಿ ರೂ.
ವಾರ್ಷಿಕ ಆದಾಯ: 69 ಲಕ್ಷ ರೂ.
ಪತ್ನಿ ವಾರ್ಷಿಕ ಆದಾಯ: 49 ಲಕ್ಷ ರೂ.
3 ಕಾರುಗಳ ಮೌಲ್ಯ: 37,48,038 ರೂ.
ಸಾಲ : 6.44 ಕೋಟಿ ರೂ.
ಇದನ್ನೂ ಓದಿ: Yaduveer: ಬಿಜೆಪಿಯ ಯದುವೀರ್ ಆಸ್ತಿ ಮೌಲ್ಯ 4.99 ಕೋಟಿ ರೂ.; ಇವರ ಬಳಿ ಸ್ವಂತ ಕಾರೂ ಇಲ್ಲ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ