Site icon Vistara News

Lok Sabha Election 2024: ಮತ್ತೆ ಒಂದಾದ ದಳಪತಿ-ಹಳ್ಳಿಹಕ್ಕಿ; ಮಂಡ್ಯದಲ್ಲಿ ಎಚ್‌ಡಿಕೆ ಗೆಲ್ಲಬೇಕು ಎಂದ ಎಚ್‌.ವಿಶ್ವನಾಥ್‌

HD Kumaraswamy and H Vishwanath

ಮೈಸೂರು: ಲೋಕಸಭಾ ಚುನಾವಣೆ (Lok Sabha Election 2024) ಸಂದರ್ಭದಲ್ಲಿ ಹಳ್ಳಿ ಹಕ್ಕಿ ಮತ್ತು ದಳಪತಿ ಮುನಿಸು ಮರೆತು ಮತ್ತೆ ಒಂದಾಗಿದ್ದಾರೆ. ಕೆ.ಆರ್. ನಗರದ ಬಿಜೆಪಿ ಎಂಎಲ್‌ಸಿ, ಮಾಜಿ ಸಚಿವ ಎಚ್.ವಿಶ್ವನಾಥ್ ನಿವಾಸಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಶನಿವಾರ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ನಾಲ್ಕೂವರೆ ವರ್ಷದ ಬಳಿಕ “ವಿಶ್ವಣ್ಣ” ಎಂದು ಎಚ್‌ಡಿಕೆ ಕರೆದಿದ್ದು, ಮೊದಲ ಮುಖಾಮುಖಿಯಲ್ಲೇ ಇಬ್ಬರು ಆತ್ಮೀಯ ಮಾತುಕತೆಯೊಂದಿಗೆ, ಪರಸ್ಪರ ಹಾಡಿ ಹೊಗಳಿದ್ದು ಕಂಡುಬಂದಿತು.

ಕೆ.ಆರ್.ನಗರ, ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ವ್ಯಾಪ್ತಿಗೆ ಸೇರುವ ಕ್ಷೇತ್ರ. ಹೀಗಾಗಿ ಎಚ್‌.ವಿಶ್ವನಾಥ್‌ ಅವರನ್ನು ಎಚ್‌ಡಿಕೆ ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಕುಮಾರಸ್ವಾಮಿ ಅವರಿಗೆ ಜಿ.ಟಿ.ದೇವೆಗೌಡ, ಸಾ.ರಾ.ಮಹೇಶ್, ಪುಟ್ಟರಾಜು‌ ಸೇರಿ ಅನೇಕ ನಾಯಕರು ಸಾಥ್‌ ನೀಡಿದರು.

ಈ ಹಿಂದೆ ಸಮ್ಮಿಶ್ರ ಸರ್ಕಾರ ಬೀಳಿಸುವಲ್ಲಿ ಎಚ್.ವಿಶ್ವನಾಥ್‌ ಪ್ರಮುಖ ಪಾತ್ರ ವಹಿಸಿದ್ದರು. ಅಂದಿನಿಂದ ವಿಶ್ವನಾಥ್ ಜತೆ ಅಂತರ ಎಚ್‌ಡಿಕೆ ಕಾಯ್ದುಕೊಂಡಿದ್ದರು. ಈಗ ಲೋಕಸಭಾ ಚುನಾವಣೆಯಲ್ಲಿ ಸಂದರ್ಭದಲ್ಲಿ ಮತ್ತೆ ಒಂದಾಗಿದ್ದಾರೆ.‌

ಇದನ್ನೂ ಓದಿ | Viral Video: ಮತದಾರರ ಗಡ್ಡ ಬೋಳಿಸಿ, ಕಟಿಂಗ್‌ ಮಾಡಿ ವೋಟ್ ಕೇಳಿದ ಅಭ್ಯರ್ಥಿ; ನೀವೇ ನೋಡಿ

ಎಂಎಲ್‌ಸಿ ಎಚ್.ವಿಶ್ವನಾಥ್ ಮಾತನಾಡಿ, ನಮ್ಮೂರಿಗೆ ಎಚ್‌ಡಿಕೆ ಬಂದಿದ್ದಾರೆ. ಇದು ವಿಶೇಷ ಸಂದರ್ಭ. ನನ್ನ ರಾಜಕೀಯ ಜೀವನದಲ್ಲಿ ಅಪರೂಪದ ಸಂದರ್ಭ ರಾಜಕಾರಣದಲ್ಲಿ ಮಾತು, ಸಂಘರ್ಷ ಸಹಜ. ಅದನ್ನು ಸರಿ ಮಾಡಿಕೊಂಡು ಹೋಗುವುದು ಅನಿವಾರ್ಯ.‌ ಈ ನೆಲದಿಂದ ಎದ್ದು ಭಾರತದ ಪ್ರಧಾನಿ ಆಗುವುದು ಸುಲಭ ಸಾಧನೆ ಅಲ್ಲ. ಕಷ್ಟದ ಸಂದರ್ಭದಲ್ಲಿ ನನ್ನ ಜತೆಗಿದ್ದಾರೆ. ನಮ್ಮ ಭಿನ್ನಾಭಿಪ್ರಾಯ ಚಾಮುಂಡಿಬೆಟ್ಟದವರೆಗೂ ಹೋಗಿತ್ತು. ರಾಜಕೀಯ ಧ್ರುವೀಕರಣದ ಸಂದರ್ಭದಲ್ಲಿ ಯಾರನ್ನು ಬೆಂಬಲಿಸಬೇಕು ಎಂಬುದೇ ಸವಾಲು. ಬಿಜೆಪಿ- ಜೆಡಿಎಸ್ ಒಂದಕ್ಕೊಂದು ಮಿಳಿತವಾಗಿ ಮೋದಿ ಪ್ರಧಾನಿ ಮಾಡಲು ಸಜ್ಜಾಗಿವೆ. ನಾನು ವಿಷಯಾಧಾರಿತವಾಗಿ ಜೆಡಿಎಸ್, ಬಿಜೆಪಿ, ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದೇನೆ. ಅದೆಲ್ಲವನ್ನೂ ಮರೆತು ಕುಮಾರಸ್ವಾಮಿ ಮನೆಗೆ ಬಂದಿರುವುದು ಖುಷಿ ನೀಡಿದೆ. ರಾಜವಂಶದ ಕುಡಿ ಪ್ರಜಾಪ್ರಭುತ್ವದಲ್ಲಿ ಪ್ರತಿನಿಧಿಯಾಗಲು ಯದುವೀರ್ ಸ್ಪರ್ಧೆ ಮಾಡಿದ್ದಾರೆ. ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ, ಇಬ್ಬರೂ ಗೆಲ್ಲಬೇಕು ಎಂದು ಹೇಳಿದರು.

ಸಿದ್ದರಾಮಯ್ಯ ಮಾತಿಗೆ ಕುಟುಂಬ ರಾಜಕಾರಣ ಎನ್ನುತ್ತಾರೆ. ಕಾಂಗ್ರೆಸ್‌ನಲ್ಲಿ 13 ಜನರ ಮಕ್ಕಳು, ಕುಟುಂಬದವರು, 7 ಜನ ಮಂತ್ರಿಗಳು ಅಭ್ಯರ್ಥಿ ಆಗಿದ್ದಾರೆ‌. ಕುಮಾರಸ್ವಾಮಿ ಅವರ ಬಗ್ಗೆ ಆಡಳಿತಾತ್ಮಕವಾಗಿ ಟೀಕೆ ಮಾಡಿ. ಆದರೆ ಎಚ್‌.ಡಿ.ದೇವೇಗೌಡರ ಬಗ್ಗೆ ಯಾವುದೇ ಕಾರಣಕ್ಕೂ ಮಾತನಾಡಬಾರದು. ಅಂತಹ ನೈತಿಕತೆ ಯಾರಿಗೂ ಇಲ್ಲ.
ಸಿದ್ದರಾಮಯ್ಯ ಅವರೇ, ಮೈಸೂರಲ್ಲಿ ನಿಮ್ಮ ಮಗನನ್ನು ನಿಲ್ಲಿಸಬೇಕು ಅಂದುಕೊಂಡಿದ್ದಿರಿ, ನನ್ನ ಹೆಸರೂ ಇತ್ತು‌.
ಸರ್ವೇ ರಿಪೋರ್ಟ್ ಬಂದ ಮೇಲೆ ಪಾಪ ಲಕ್ಷ್ಮಣ್ ನಿಲ್ಲಿಸಿಕೊಂಡಿದ್ದೀರಿ. ಒಕ್ಕಲಿಗರಿಗೆ ಅಪಮಾನ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.

ಎಚ್‌.ವಿಶ್ವನಾಥ್‌ ಭೇಟಿ ವೇಳೆ ಮಾತನಾಡಿದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು, ಮೊದಲ ಮುಖಾಮುಖಿಯಲ್ಲೇ ಆತ್ಮೀಯ ಮಾತುಕತೆ ನಡೆದಿದೆ. ರಾಜಕೀಯದಲ್ಲಿ ಟೀಕೆ, ಟಿಪ್ಪಣಿ ಸಹಜ.
ವಿಶ್ವಣ್ಣ ಅದೆಲ್ಲವನ್ನೂ ಮರೆತು ಬೆಂಬಲ ಕೊಟ್ಟಿದ್ದಾರೆ. ಮಂಡ್ಯದಲ್ಲಿ ಸ್ಪರ್ಧಿಸುತ್ತಿದ್ದಂತೆ ಕರೆ ಮಾಡಿ ಶುಭ ಕೋರಿದರು. ದೂರವಾಣಿ ಮೂಲಕವೇ ನನ್ನ ಬೆಂಬಲ ನಿಮಗಿದೆ ಅಂತ ತಿಳಿಸಿದರು. ಅವರ ಅಭಿಮಾನಕ್ಕೆ ಸೋತು ಮನೆಗೆ ಬಂದಿದ್ದೇನೆ. ವಿಶ್ವನಾಥ್ ನೇರ, ನಿಷ್ಠುರವಾಗಿ ಮಾತನಾಡುವ ರಾಜಕಾರಣಿ. ಆದರೆ ಪ್ರಾಮಾಣಿಕವಾಗಿ ಇದ್ದಾರೆ‌. ಅವರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ದೇವೇಗೌಡರ ಬಗ್ಗೆ ಸಚಿವ ರಾಜಣ್ಣ ಟೀಕೆ ವಿಚಾರ‌ಕ್ಕೆ ಪ್ರತಿಕ್ರಿಯಿಸಿ, ಅಳಿಯ,ಮಗ, ಮೊಮ್ಮಗ ಅಂತ ಹೇಳುತ್ತಿದ್ದಾರೆ. ರಾಜಣ್ಣ ಕುಟುಂಬ ಈಗ ಏನಾಗಿದೆ. ಏನ್ ಕೆಲಸ ಮಾಡಿದ್ದಾನೆ ಅಂತ ಮಗನನ್ನು ಎಂಎಲ್‌ಸಿ ಮಾಡಿದ್ದಾರೆ. ರಾಜಣ್ಣ ವಿಧಾನಸೌಧದ ಮೆಟ್ಟಿಲತ್ತಿದ್ದೇ ದೇವೇಗೌಡರಿಂದ. ದೇವೇಗೌಡರ ಪ್ರಚಾರದಿಂದಲೇ ಅವರು ಗೆದ್ದಿದ್ದು. ದೇವೇಗೌಡರು ಭೂಮಿಗೆ ಹೋಗುವವರೆಗೆ ರಾಜಕೀಯ ನಿವೃತ್ತಿ ಇಲ್ಲ. ರಾಜಣ್ಣರಿಂದ ಸಲಹೆ ಪಡೆಯುವ ದಯಾನೀಯ ಪರಿಸ್ಥಿತಿ ನಮಗೆ ಬಂದಿಲ್ಲ. ಅವರಿಗೆ ಬಂದಿರುವ ಸಂಸ್ಕೃತಿ ಅಂತಹದ್ದು. ಅವರು ಯಾರನ್ನು ಓಲೈಸಿಕೊಳ್ಳುಲು ಹೇಳಿಕೆ ಕೊಡುತ್ತಿದ್ದಾರೆ ಗೊತ್ತಿಲ್ಲ. ಆದರೆ ಇದನ್ನೆಲ್ಲ ಗಮನಿಸಿದರೆ ಓಲೈಕೆ ಇರಬಹುದು. ಆದರೆ ಇವರ ಆಟ ಹೆಚ್ಚು ದಿನ ನಡೆಯಲ್ಲ. ಅವರೇ ಸರ್ಕಾರ ತೆಗೆಯುತ್ತಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ | Nirmala Sitharaman: ಮೋದಿ ಸರ್ಕಾರ ಯಾವ ರಾಜ್ಯಕ್ಕೂ ಅನ್ಯಾಯ ಮಾಡಿಲ್ಲ: ನಿರ್ಮಲಾ ಸೀತಾರಾಮನ್‌

ಇವರೆಲ್ಲ ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಅವರು ನಮಗೆ ಜಾತ್ಯತೀತ ತೆಗೆಯಿರಿ ಅಂತಾರೆ. ಅವರ ಜಾತಿ ಕಾರ್ಡ್ ವರ್ಕ್ ಆಗಲ್ಲ. ಇತ್ತೀಚಿಗೆ ಒಕ್ಕಲಿಗರ ಮೇಲೆ ಇವರಿಗೆ ಪ್ರೀತಿ ಬಂದಿದೆ. 47 ವರ್ಷದಿಂದ ಒಕ್ಕಲಿಗರಿಗೆ ಕೊಡಬೇಡಿ ಅಂತ ಹೇಳಿದ್ದೆ. ಹಲವಾರು ಮಂತ್ರಿಗಳ ಹೇಳಿಕೆಗಳನ್ನು ನೋಡಿದರೆ ಈ ಸರ್ಕಾರ ಬಹಳ ದಿನ ಇರಲ್ಲ. ಸರ್ಕಾರದ ಆಯಸ್ಸು ಬಹಳ ದಿನ ಇಲ್ಲ. ಪುಲ್ವಾಮ‌ ದಾಳಿ ಬಗ್ಗೆ ಈಗೇಕೆ ಮಾತನಾಡುತ್ತಿದ್ದಾರೆ. ಪಾರ್ಲಿಮೆಂಟ್‌ನಲ್ಲಿ ಹೋಗಿ ಮಾತನಾಡಬಹುದಿತ್ತಲ್ಲವೇ ? ಇವರಿಗೆ ವಿಷಯ ಸರಕು ಇಲ್ಲ ಎಂದು ವಾಗ್ದಾಳಿ ನಡೆಸಿದರು.

Exit mobile version