Site icon Vistara News

Lok Sabha Election 2024 : ಬಿಜೆಪಿಯಿಂದ ಹೊರಗೆ ಕಾಲಿಟ್ಟರೇ ಸುಮಲತಾ?

Mandya MP sumalatha ambarish and BJP

ಬೆಂಗಳೂರು: 2024ರ ಲೋಕಸಭಾ ಚುನಾವಣೆಗೆ (Lok Sabha Election 2024) ರಾಜಕೀಯ ಪಕ್ಷಗಳು ಭಾರಿ ತಂತ್ರಗಳಲ್ಲಿ ನಿರತವಾಗಿವೆ. ಇನ್ನು ಲೆಕ್ಕ ಹಾಕಿದರೆ ಕೇವಲ 9 ತಿಂಗಳಿಗೆ ಚುನಾವಣೆ ನಡೆಯುವುದರಿಂದ ಈಗಲೇ ತಾಲೀಮಿನಲ್ಲಿ ಎಲ್ಲರೂ ತೊಡಗಿದ್ದಾರೆ. ಬಿಜೆಪಿಯೇತರ, ಪ್ರಧಾನಿ ನರೇಂದ್ರ ಮೋದಿಗೆ ಪರ್ಯಾಯವಾಗಿ ಸರ್ಕಾರ ರಚನೆಯಾಗಬೇಕೆಂದು ಎಡಪಕ್ಷಗಳ ಸಹಿತ ಅನೇಕ ಪಕ್ಷದವರು ಮಹಾಘಟಬಂಧನ್‌ (Mahagathbandhan) ಅಡಿ “ಇಂಡಿಯಾ” ಒಕ್ಕೂಟವನ್ನು (INDIA Alliance) ರಚನೆ ಮಾಡಿದ್ದಾರೆ. ಬಿಜೆಪಿ ಸಹ ಎನ್‌ಡಿಎ ಪುನಶ್ಚೇತನಕ್ಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಲ್ಲದೆ, ಬಿಜೆಪಿ ದಕ್ಷಿಣ ರಾಜ್ಯಗಳತ್ತ ಈ ಬಾರಿ ವಿಶೇಷ ಗಮನವನ್ನು ಹರಿಸುತ್ತಿದೆ. ಇದರ ಭಾಗವಾಗಿ ಕರ್ನಾಟಕದಲ್ಲಿ ಜೆಡಿಎಸ್‌ ಜತೆಗೆ ಮೈತ್ರಿ (BJP and JDS alliance) ಮಾತುಕತೆಯನ್ನೂ ನಡೆಸುತ್ತಿದೆ. ಇದೇ ಈಗ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್‌ (Sumalatha ‌Ambareesh) ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅವರು ತಮ್ಮ ರಾಜಕೀಯ ಲೆಕ್ಕಾಚಾರದಲ್ಲಿ (Political calculations) ನಿರತರಾಗಿದ್ದಾರೆ.

ಈಗಾಗಲೇ ಸುಮಲತಾ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬಾಹ್ಯ ಬೆಂಬಲವನ್ನು ಸೂಚಿಸಿದ್ದಾರೆ. ಈ ಮೂಲಕ ಮುಂದಿನ ಬಾರಿ ಬಿಜೆಪಿ ಚಿಹ್ನೆಯಡಿ ಸ್ಪರ್ಧೆ ಮಾಡುವ ಲೆಕ್ಕಾಚಾರವನ್ನೂ ಹಾಕಿಕೊಂಡಿದ್ದರು. ಇದರ ಭಾಗವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿ ಪರವಾಗಿ ತಮ್ಮ ಬೆಂಬಲಿಗರನ್ನು ಕೆಲಸ ಮಾಡಲು ಬಿಟ್ಟಿದ್ದರು. ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಲ್ಲಿ (Political Development) ಅವರ ಬದ್ಧ ವೈರಿಯಾಗಿ ಕಾಣಿಸಿಕೊಂಡಿರುವ ಜೆಡಿಎಸ್‌ ಜತೆಗೆ ಬಿಜೆಪಿ ಮೈತ್ರಿ ರಾಜಕೀಯ ಮಾಡಿಕೊಳ್ಳಲು ಹೊರಟಿರುವುದು ತಮ್ಮ ರಾಜಕೀಯ ಭವಿಷ್ಯಕ್ಕೆ ಮುಳುವಾಗಬಹುದು ಎಂಬ ಆತಂಕ ಸದ್ಯ ಇವರನ್ನು ಕಾಡುತ್ತಿದೆ.

ಇದನ್ನೂ ಓದಿ: D ಕೋಡ್‌ ಅಂಕಣ: ಸಂವಿಧಾನದಲ್ಲಿ ಇಲ್ಲದ ಹುದ್ದೆಗೆ ಮೂವತ್ತೂವರೆ ವರ್ಷದ ಸಂಭ್ರಮ!

ಒಂದು ವೇಳೆ ಜೆಡಿಎಸ್ – ಬಿಜೆಪಿ ಮೈತ್ರಿಯಾಗಿದ್ದೇ ಆದರೆ ತಮಗೆ ಮಂಡ್ಯದಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗಲಾರದು. ಮಂಡ್ಯ ಟಿಕೆಟ್‌ಗೆ ಸಹಜವಾಗಿಯೇ ಜೆಡಿಎಸ್‌ ಬೇಡಿಕೆ ಇಡಲಿದೆ. ಕಾರಣ ಈ ಭಾಗದಲ್ಲಿ ಜೆಡಿಎಸ್‌ ಕಾರ್ಯಕರ್ತರು ಗಟ್ಟಿಯಾಗಿದ್ದಾರೆ. ಆ ಪಕ್ಷದ ಅಸ್ತಿತ್ವ ಹೆಚ್ಚು ಇರುವುದೇ ಮಂಡ್ಯ ಸೇರಿದಂತೆ ಹಳೇ ಮೈಸೂರು ಭಾಗದಲ್ಲಾಗಿದೆ. ಹೀಗಾಗಿ ಮಂಡ್ಯ ಟಿಕೆಟ್ ಸಿಗಲಾರದು. ಆಗ ತಾವು ಪರ್ಯಾಯ ಕ್ಷೇತ್ರವನ್ನು ಹುಡುಕಿಕೊಳ್ಳಬೇಕು. ಇದಕ್ಕಾಗಿ ಈಗ ಸುಮಲತಾ ತಮ್ಮದೇ ಆದ ತಂತ್ರಗಾರಿಕೆಯನ್ನು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.

ಮಂಡ್ಯ ಬಿಟ್ಟು ಹೊರ ಬಂದು ರಾಜಕಾರಣ ಮಾಡುವುದು ಅಷ್ಟು ಸುಲಭವಲ್ಲ ಎಂಬುದು ಸುಮಲತಾ ಅವರಿಗೂ ಗೊತ್ತಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ (Bangalore North Lok Sabha constituency) ಬಿಜೆಪಿಯಿಂದ ಸ್ಪರ್ಧೆ ಮಾಡಲು ಸುಮಲತಾ ಉತ್ಸುಕತೆ ತೋರಿದ್ದಾರೆ ಎನ್ನಲಾಗಿದೆ. ಆದರೆ, ಅಲ್ಲಿ ಟಿಕೆಟ್ ಸಿಗುವುದು ಅಷ್ಟು ಸುಲಭವಲ್ಲ. ಈಗಾಗಲೇ ಡಿ.ವಿ. ಸದಾನಂದ ಗೌಡ (DV Sadananda Gowda) ಅವರು ಅಲ್ಲಿನ ಹಾಲಿ ಸಂಸದರು. ಅವರು ಮತ್ತೆ ಟಿಕೆಟ್ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ಹೀಗಿರುವಾಗ ಅವರಿಗೇ ಇನ್ನು ಸಹ ಟಿಕೆಟ್‌ ಖಾತ್ರಿಯಾಗಿಲ್ಲ.

ಅಲರ್ಟ್‌ ಆದ ಸುಮಲತಾ ಟೀಮ್!

ಈ ಎಲ್ಲ ಬೆಳವಣಿಗೆಗಳ ಮಧ್ಯೆ ವರ್ಷದ ಮೊದಲೇ ಸುಮಲತಾ ಟೀಮ್ ಅಲರ್ಟ್‌ ಆಗಿದೆ. ಬಿಜೆಪಿ ರಾಷ್ಟ್ರೀಯ ನಾಯಕರ ನಡೆ ನೋಡಿಕೊಂಡು ಆದಷ್ಟು ಬೇಗ ತೀರ್ಮಾನ ಮಾಡಲು ಪ್ಲ್ಯಾನ್‌ ಮಾಡಿಕೊಳ್ಳಲಾಗಿದೆ. ಇತ್ತ ಸುಮಲತಾ ಟೀಮ್‌ನಲ್ಲಿರುವವರು ಕಾಂಗ್ರೆಸ್ ಪರ ಒಲವು ಹೊಂದಿದ್ದಾರೆ. ಹೇಗೂ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ (Karnataka Assembly election) ಕಾಂಗ್ರೆಸ್‌ಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಇನ್ನು ಮಂಡ್ಯ ಜಿಲ್ಲೆಯಲ್ಲಿ ಏಳಕ್ಕೆ ಏಳೂ ಕ್ಷೇತ್ರವೂ ಕಾಂಗ್ರೆಸ್‌ಮಯವಾಗಿದೆ. ಹೀಗಾಗಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದರೇ ಗೆಲುವು ಸುಲಭ ಎಂಬ ವಾದವನ್ನು ಮುಂದಿಡಲಾಗಿದೆ ಎನ್ನಲಾಗಿದೆ. ಜತೆಗೆ ಮಂಡ್ಯ ಕಾಂಗ್ರೆಸ್ ನಾಯಕರಿಗೂ ಸುಮಲತಾ ಅಭ್ಯರ್ಥಿಯಾದರೆ ಸಮಸ್ಯೆ ಇಲ್ಲ ಎನ್ನಲಾಗಿದೆ.

ಡಿ.ಕೆ. ಶಿವಕುಮಾರ್‌ ವಿರೋಧ

ಆದರೆ, ಸುಮಲತಾ ಕಾಂಗ್ರೆಸ್ ಸೇರ್ಪಡೆಗೆ ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (KPCC Precedent DK Shivakumar) ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಅವರನ್ನು ಹೊರತುಪಡಿಸಿ ಉಳಿದೆಲ್ಲ ಕಾಂಗ್ರೆಸ್‌ ನಾಯಕರು ಸುಮಲತಾ ಪರ ಒಲವನ್ನು ಹೊಂದಿದ್ದಾರೆ.

ಇದನ್ನೂ ಓದಿ: Weather Report : ಬೆಂಗಳೂರಲ್ಲಿ ದಿನವಿಡೀ ಜಿಟಿ ಜಿಟಿ ಮಳೆ; ಕರಾವಳಿಗೆ ರೆಡ್‌ ಅಲರ್ಟ್‌!

ಬಿಜೆಪಿಯಿಂದ ದೂರ?

ಹೀಗಾಗಿ ಬಿಜೆಪಿ – ಜೆಡಿಎಸ್ ಮೈತ್ರಿ ರಾಜಕೀಯ ಬೆಳವಣಿಗೆಯನ್ನು ಸುಮಲತಾ ಗಮನಿಸುತ್ತಿದ್ದಾರೆ. ಅಲ್ಲದೆ, ಸುಮಲತಾ ಬೆಂಬಲಿಗರು ಸಚಿವ ಎನ್. ಚಲುವರಾಯಸ್ವಾಮಿ ಜತೆ‌ ಸಂಪರ್ಕದಲ್ಲಿದ್ದಾರೆ. ಒಂದು ವೇಳೆ ಮೈತ್ರಿ ಪಕ್ಕಾ ಆದರೆ ಸುಮಲತಾ ಬಿಜೆಪಿಯಿಂದ ದೂರವಾಗಲಿದ್ದಾರೆ ಎನ್ನುತ್ತಿವೆ ಅವರ ಆಪ್ತ ಮೂಲಗಳು.

Exit mobile version