Site icon Vistara News

Siddaramaiah | ಈ ಟಗರು 10 ಕುರಿ‌ಗಳ ಹಿಂದೆ ಹೋಗುತ್ತೆ, ಮುರುಘಾಶ್ರೀಯಂತೆ ಇವನೂ ಕಳ್ಳ: ಸಿದ್ದರಾಮಯ್ಯ ಬಗ್ಗೆ ಮುಕುಡಪ್ಪ ಪಿಸುಮಾತು!

mukudappa

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಕುರುಬ ಸಮಾಜದ ಹಿರಿಯ ಮುಖಂಡ, “ಹಿಂದʼ ಅಧ್ಯಕ್ಷ ಕೆ. ಮುಕುಡಪ್ಪ ಹಗುರವಾಗಿ ಮಾತನಾಡಿರುವುದು ಬೆಳಕಿಗೆ ಬಂದಿದೆ. ಸಿದ್ದರಾಮಯ್ಯ ಅವರ ಖಾಸಗಿ ಸಂಗತಿಗಳ ಬಗ್ಗೆ ಅವರು ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ. ಕುರುಬ ಸಮಾಜಕ್ಕೆ ರಾಜಕೀಯ ಅಧಿಕಾರ ನೀಡುವಂತೆ ಕರೆಯಲಾಗಿದ್ದ ಪ್ರತಿಕಾಗೋಷ್ಠಿಗೂ ಮುನ್ನ ಸಿದ್ದರಾಮಯ್ಯ ಅವರ ವಿರುದ್ಧ ಮುಕುಡಪ್ಪ ಪಿಸು ಮಾತನಾಡಿದ್ದಾರೆ.

ಕನಕಶ್ರೀ ಚಾರಿಟೇಬಲ್ ಟ್ರಸ್ಟ್ ಹಾಗೂ ಹಿಂದುಳಿದ ಸಮುದಾಯಗಳ ಒಕ್ಕೂಟದಿಂದ ಸುದ್ದಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾಧ್ಯಮದವರು ಸಹ ಸ್ಥಳದಲ್ಲಿದ್ದರು. ಮೈಕ್‌ಗಳನ್ನೂ ಇಡಲಾಗಿತ್ತು. ಆದರೆ, ಸುದ್ದಿಗೋಷ್ಠಿ ಪ್ರಾರಂಭಕ್ಕೂ ಮೊದಲು ಮುಕುಡಪ್ಪ ಅವರು ತಮ್ಮ ಪಕ್ಕದಲ್ಲಿ ಕುಳಿತುಕೊಂಡಿದ್ದವರ ಬಳಿ ಬಾಗಿ, ಸಿದ್ದರಾಮಯ್ಯ ಅವರ ವೈಯಕ್ತಿಕ ಜೀವನದ ಬಗ್ಗೆ ಪಿಸು ಮಾತನಾಡಿದ್ದಾರೆ. ಇದು ಎಲ್ಲರಿಗೂ ಕೇಳಿಸಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.

ಮುಕುಡಪ್ಪ ಹೇಳಿದ್ದೇನು?
“ಈ ಟಗರು ಇದೆಯಲ್ಲ ೧೦ ಕುರಿ‌ ಮೇಲೆ ಹೋಗುತ್ತೆ. ಮುರುಘಾಸ್ವಾಮಿ ತರಹ ಇವನೂ ಕಳ್ಳ. ಕೆಲವು ಹೊರಗೆ ಬರುತ್ತದೆ. ಇನ್ನೂ ಕೆಲವು ಹೊರಗೆ ಬರುವುದಿಲ್ಲ. ಅವರು ಸಿದ್ದರಾಮಯ್ಯ… ಹುಷಾರು ಮಗ… ನಾನು ಅಷ್ಟೇ ನೀವೂ ಅಷ್ಟೇ… ಕೆಲವು ಹೊರಗೆ ಬರುತ್ತದೆ ಮತ್ತೆ ಕೆಲವು ಹೊರಗೆ ಬರುವುದಿಲ್ಲ. ಸಿದ್ದರಾಮಯ್ಯ ಹೊರಗೆ ಬರಲ್ಲ, ಮನೆಗೆ ಸೇರಿಕೊಳ್ಳುತ್ತಾನೆ” ಎಂದು ಮುಕುಡಪ್ಪ ಹೇಳಿದ್ದಾರೆ.

ಸಿದ್ದರಾಮಯ್ಯ ಹಿಂದೆ ಕುರುಬರು ಇಲ್ಲ
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಕುಡಪ್ಪ, ಸಿದ್ದರಾಮಯ್ಯ ಅವರ ಹಿಂದೆ ಕುರುಬರು ಇದ್ದಾರೆ ಎಂಬುದು ತಪ್ಪು ಕಲ್ಪನೆ. ಜನರನ್ನು ಸೇರಿಸುವುದರಿಂದ ಬಲ ಇದೆ ಎಂದಲ್ಲ. ಇಂದಿರಾ ಗಾಂಧಿ ಸಮಾವೇಶಕ್ಕೂ ಜನ ಸೇರಿದ್ದರು. ಆದರೆ ಅವರು ಚುನಾವಣೆಯಲ್ಲಿ ಸೋತಿದ್ದರು. ಸಿದ್ದರಾಮಯ್ಯ ಸಿಎಂ ಆಗಿದ್ದವರು ಏಕೆ ಚುನಾವಣೆಯಲ್ಲಿ ಸೋತರು? ಸಿದ್ದರಾಮಯ್ಯ ಇದ್ದರೆ ಕುರುಬರು ವೋಟ್ ಹಾಕುತ್ತಾರೆ ಎಂಬುದು ಭ್ರಮೆ. ಕಾಂಗ್ರೆಸ್‌ನವರು ಈ ಭ್ರಮೆಯಲ್ಲಿ ಇದ್ದಾರೆ. ಬಾದಾಮಿಯಲ್ಲಿ ಏಕೆ ಸಿದ್ದರಾಮಯ್ಯ ನಿಲ್ಲಲು ಮುಂದಾಗುತ್ತಿಲ್ಲ? 2018ರಲ್ಲಿ ಅವರಿಗೆ ಕುರುಬರು ಮತ ಹಾಕಿಲ್ಲ. ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ನವರು ಭ್ರಮೆಯಲ್ಲಿ ಇದ್ದಾರೆ
ಕಾಂಗ್ರೆಸ್ ಪರ ಕುರುಬರು ಇದ್ದಾರೆ ಅನ್ನೋದು ಸುಳ್ಳು. ಕಾಂಗ್ರೆಸ್‌ನವರು ಭ್ರಮೆಯಲ್ಲಿ ಇದ್ದಾರೆ. ಈಗ ಕಾಲ ಬದಲಾಗಿದೆ. ರಾಜ್ಯ ಸರ್ಕಾರದಲ್ಲಿ ಕುರುಬರಿಗೆ ರಾಜಕೀಯ ಅಧಿಕಾರ ನೀಡಬೇಕು. ಕುರುಬ ಸಮಾಜದ ಜನಪ್ರತಿನಿಧಿಗಳಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು. ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಅವರನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಅವರನ್ನು ಸಭಾಪತಿ ಆಗಿ ಮುಂದುವರಿಸಬೇಕು. ಕುರುಬ ಸಮಾಜ ಈಗಾಗಲೇ ಬಿಜೆಪಿ ಪರವಾದ ಒಲವು ವ್ಯಕ್ತಪಡಿಸಿದೆ ಎಂದು ಮುಕುಡಪ್ಪ ಹೇಳಿದರು.

ಇದನ್ನೂ ಓದಿ | ಬೊಮ್ಮಾಯಿಗೆ ಕುರುಬರ ಮೇಲೆ ಪ್ರೀತಿ ಇದ್ದರೆ ಎಸ್‌ಟಿಗೆ ಸೇರಿಸಲಿ, ಈಶ್ವರಪ್ಪರನ್ನು ಸಿಎಂ ಮಾಡಲಿ: ಸಿದ್ದು ಸವಾಲು

Exit mobile version