Site icon Vistara News

Road Accident: ಆಟೋಗೆ ಲಾರಿ ಡಿಕ್ಕಿ; ಮಹಾರಾಷ್ಟ್ರ ಮೂಲದ ನಾಲ್ವರ ಸಾವು; ಇಬ್ಬರ ಸ್ಥಿತಿ ಗಂಭೀರ

Lorry collides with auto

ಬೀದರ್: ಆಟೋಗೆ ಲಾರಿ ಡಿಕ್ಕಿಯಾಗಿ ಮಹಾರಾಷ್ಟ್ರ ಮೂಲದ ನಾಲ್ವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ (Road Accident) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮನ್ನಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ನಡೆದಿದೆ.

ಮಹಾರಾಷ್ಟ್ರದ ಉಮ್ಮರ್ಗಾ ತಾಲೂಕಿನ ಸುಂದರವಾಡಿ ಗ್ರಾಮದ ನಿವಾಸಿ ಪ್ರಮೀಳಾ (32), ಪತಿ, ಆಟೋ ಚಾಲಕ ಸುನೀಲ ಜಗದಾಳೆ (35), ಈತನ ತಾಯಿ ಅನುಷಾಬಾಯಿ ಮಹಾದೇವ ಜಗದಾಳೆ(65) ಹಾಗೂ ತುಳಜಾಪೂರ ತಾಲೂಕಿನ ಶಾಪೂರ ಗ್ರಾಮದ ನಿವಾಸಿ ಪೂಜಾ ಜಾಧವ ಮೃತ ದುರ್ದೈವಿಗಳಾಗಿದ್ದಾರೆ. ಗೀತಾ ಶಿವರಾಮ ಜಗದಾಳೆ ಎನ್ನುವ ಮಹಿಳೆಗೆ ಗಂಭೀರವಾಗಿ ಗಾಯಗಳಾಗಿದ್ದು, ಇವರನ್ನು ಲಾತೂರ್‌ ಆಸ್ಪತ್ರೆಗೆ ಸಾಗಿಸಲಾಗಿದೆ. ಆಟೋದಲ್ಲಿ ಒಟ್ಟು 8 ಜನ ಪ್ರಯಾಣಿಸುತಿದ್ದರು.

ಇವರು ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ಬಸವಕಲ್ಯಾಣ ತಾಲೂಕಿನ ಚಂಡಕಾಪೂರ ಬಳಿಯ ಐತಿಹಾಸಿಕ ಶ್ರೀ ಕ್ಷೇತ್ರ ಅಮೃತಕುಂಡಕ್ಕೆ ದರ್ಶನಕ್ಕೆಂದು ಆಗಮಿಸಿದ್ದರು. ದರ್ಶನ ಮುಗಿಸಿಕೊಂಡು ಗ್ರಾಮಕ್ಕೆ ವಾಪಸ್‌ ತೆರಳುವಾಗ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬಸವಕಲ್ಯಾಣದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Murder Case : ಹೆತ್ತಮ್ಮನನ್ನೇ ಕೊಂದ ಧೂರ್ತ ಮಗ ; ಕುಡಿದ ಮತ್ತಿನಲ್ಲಿ ಕೊಲೆ ಮಾಡಿ ಗದ್ದೆಗೆ ಹೋಗಿ ಮಲಗಿದ್ದ!

ವಾಷಿಂಗ್ ಮೆಷಿನ್‌ಗೆ ಬಟ್ಟೆ ಹಾಕುವಾಗ ಕರೆಂಟ್‌ ಶಾಕ್‌; ಯುವಕ ಸಾವು!

ರಾಯಚೂರು: ವಾಷಿಂಗ್‌ ಮೆಷಿನ್‌ಗೆ (Washing Machine) ಬಟ್ಟೆ ಹಾಕುವಾಗ ವಿದ್ಯುತ್‌ ಸ್ಪರ್ಶವಾಗಿ (Electric Shock) ಯುವಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ದುರ್ಗಕ್ಯಾಂಪ್‌ನಲ್ಲಿ ಈ ದುರ್ಘಟನೆ ನಡೆದಿದೆ. ನಾಗೇಂದ್ರ (32) ಮೃತ ದುರ್ದೈವಿ.

ಪತ್ರೋಳಿ ಮಾರಾಟ ಅಂಗಡಿ ಹೊಂದಿರುವ ನಾಗೇಂದ್ರ ತಾಲೂಕಿನಾದ್ಯಂತ ಪತ್ರೋಳಿ ನಾಗೇಂದ್ರ ಎಂದು ಫೇಮಸ್ ಆಗಿದ್ದರು. ಮನೆಯಲ್ಲಿ ವಾಷಿಂಗ್‌ ಮೆಷಿನ್‌ಗೆ ಬಟ್ಟೆ ಹಾಕಲು ಹೋಗಿದ್ದಾರೆ. ಈ ವೇಳೆ ಡೈರೆಕ್ಟ್ ಆಗಿ ಫ್ಲಗ್ ಹಾಕಿದಾಗ ಶಾರ್ಟ್‌ ಸರ್ಕ್ಯೂಟ್‌ ಆಗಿದೆ. ಇದು ತಿಳಿಯದೆ ವಾಷಿಂಗ್‌ ಮೆಷಿನ್‌ ಮುಟ್ಟಿದ ಕೂಡಲೇ ಶಾಕ್‌ ಹೊಡೆದಿದೆ. ಪರಿಣಾಮ ಕ್ಷಣಾರ್ಧ ಪ್ರಾಣಪಕ್ಷಿ ಹಾರಿ ಹೋಗಿದೆ.

ರಷ್ಯದಿಂದ ಬಂದವನು ಇಲ್ಲಿ ನೈತಿಕ ಪೊಲೀಸ್‌ಗಿರಿ ಮಾಡಿದ! ಆರೋಪಿ ಬಂಧನ

ಕೋಲಾರ: ನೈತಿಕ ಪೊಲೀಸ್‌ಗಿರಿ (Moral policing) ಮಾಡಿದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಕೋಲಾರ ಜಿಲ್ಲೆ ಬಂಗಾರಪೇಟೆ ಮೂಲದ ಜಾಕೀರ್ ಅಹಮದ್ ಎಂದು ಗುರುತಿಸಲಾಗಿದೆ.

ಈತ ರಷ್ಯಾದಲ್ಲಿ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ಎಂದು ಗೊತ್ತಾಗಿದೆ. ರಜೆ ಎಂದು ಈತ ಬೆಂಗಳೂರಿನ ಗೋವಿಂದಪುರದಲ್ಲಿರುವ ತನ್ನ ಅಕ್ಕನ ಮನೆಗೆ ಬಂದಿದ್ದ. ಅನ್ಯಧರ್ಮೀಯ ಯುವಕನ ಜೊತೆಗೆ ಬುರ್ಖಾ ಧರಿಸಿದ ಯುವತಿ ಹೋಗುತ್ತಿರುವುದು ಕಂಡಿದ್ದ ಈತ ಅವರ ಬೈಕ್ ಅಡ್ಡಗಟ್ಟಿ ಯುವತಿಯನ್ನು ನಿಂದಿಸಿ ಗಲಾಟೆ ಎಬ್ಬಿಸಿದ್ದ.

ಇದನ್ನೂ ಓದಿ | Inhuman Behaviour : ಅಪ್ಪನ ಹೆಣ ಬಿಸಾಕಿ ಎಂದ ಮಗಳು, ಅಂತ್ಯ ಸಂಸ್ಕಾರ ನಡೆಸಿದ ಪೊಲೀಸರು; ಬ್ಯಾಂಕ್‌ ಮ್ಯಾನೇಜರ್‌ ಕಥೆ ಇದು

ಯುವತಿ ಮತ್ತು ಬೈಕ್‌ನಲ್ಲಿದ್ದ ಯುವಕ ಇಬ್ಬರೂ ಪರಿಚಿತರಾಗಿದ್ದು, ಇಬ್ಬರೂ ಕಂಪನಿಯೊಂದರ ಇಂಟರ್‌ವ್ಯೂಗೆ ಹೋಗಿದ್ದರು. ನಂತರ ಯುವತಿಯನ್ನು ಬೈಕ್‌ನಲ್ಲಿ ಮನೆಗೆ ಡ್ರಾಪ್ ಮಾಡಲು ಯುವಕ ಹೋಗುತ್ತಿದ್ದ. ಈ ಸಂದರ್ಭದಲ್ಲಿ ಅಡ್ಡಗಟ್ಟಿ ಬುರ್ಖಾ ತೆಗೆಯುವಂತೆ ಜಾಕೀರ್ ಅಹಮದ್ ಕೆಟ್ಟದಾಗಿ ನಿಂದಿಸಿದ್ದ. ಸದ್ಯ ಜಾಕೀರ್ ಮೇಲೆ ಎಫ್ಐಆರ್ ದಾಖಲಾಗಿದೆ. ಪೂರ್ವ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version