Site icon Vistara News

Love Failure: ಪ್ರೀತಿಗೆ ಪೋಷಕರ ವಿರೋಧ; ರಾಮದೇವರ ಬೆಟ್ಟದಿಂದ ಜಿಗಿದು ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ

#image_title

ರಾಮನಗರ: ಬೆಂಗಳೂರಿನ ಕತ್ರಿಗುಪ್ಪೆವಾಸಿಯಾಗಿರುವ ಪ್ರೇಮಿಗಳಿಬ್ಬರ ಪ್ರೀತಿಗೆ (Love Failure) ಪೋಷಕರ ತೀವ್ರವಾಗಿ ವಿರೋಧ ಮಾಡಿದ್ದಾರೆ. ಇದರಿಂದ ಬೇಸತ್ತ ಯುವ ಪ್ರೇಮಿಗಳು ಸೀದಾ ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟಕ್ಕೆ ಬಂದಿದ್ದು, ಅಲ್ಲಿ ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ. ಸೀದಾ ಬೆಟ್ಟದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬಂಡೆ ಮೇಲಿಂದ ಕೆಳಗೆ ಜಿಗಿದಿದ್ದ ಯುವಕ ಹಾಗೂ ಯುವತಿಗೆ ತೀವ್ರ ಗಾಯಗಳಾಗಿವೆ. ಈ ವೇಳೆ ಯುವಕನ ಸ್ಥಿತಿ ಗಂಭೀರವಾಗಿದ್ದು, ಯುವತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ, ಇಬ್ಬರಿಗೂ ತೀವ್ರ ರಕ್ತಸ್ರಾವವಾಗಿದೆ. ಕೆಳಗೆ ಬಿದ್ದು ಒದ್ದಾಟ ನಡೆಸುತ್ತಿದ್ದ ಇವರಿಬ್ಬರನ್ನು ಸ್ಥಳೀಯರು ನೋಡಿ ರಕ್ಷಣೆ ಮಾಡಿದ್ದಾರೆ.‌

ಇದನ್ನೂ ಓದಿ: Karnataka Election 2023: ಕೆ.ಆರ್‌.ಪೇಟೆಯಲ್ಲಿ ಜೆಡಿಎಸ್‌ಗೆ ಬಿಗ್‌ ಶಾಕ್‌; ಪಕ್ಷ ತೊರೆದ ದೇವರಾಜ್‌, ಕೃಷ್ಣೇಗೌಡ

ಗಾಯಗೊಂಡ ಯುವ ಪ್ರೇಮಿಗಳನ್ನು ರಕ್ಷಣೆ ಮಾಡಿರುವ ಸ್ಥಳೀಯ ನಿವಾಸಿಗಳು ಕೂಡಲೇ ಅವರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಸಾಹಿತ್ಯ (19), ಚೇತನ್ (19) ಆತ್ಮಹತ್ಯೆಗೆ ಯತ್ನಿಸಿದ ಯುವ ಪ್ರೇಮಿಗಳು ಎಂದು ತಿಳಿದು ಬಂದಿದೆ. ಇವರಿಬ್ಬರೂ ಕತ್ರಿಗುಪ್ಪೆಯ ಅಕ್ಕಪಕ್ಕದ ನಿವಾಸಿಗಳಾಗಿದ್ದಾರೆ. ಇವರ ಪ್ರೀತಿಯ ವಿಷಯ ಮನೆಯವರಿಗೆ ತಿಳಿದು ತೀವ್ರ ಆಕ್ರೋಶವನ್ನು ಹೊರಹಾಕಿದ್ದರು. ಪ್ರಥಮ ವರ್ಷದ ಬಿ.ಎ ಓದುತ್ತಿದ್ದ ಇವರಿಗೆ ಇದರಿಂದ ತೀವ್ರ ನೋವಾಗಿದೆ. ಒಬ್ಬರನ್ನೊಬ್ಬರು ಬಿಟ್ಟು ಇರಲು ಆಗದೆ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ ರಾಮದೇವರ ಬೆಟ್ಟಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

ಇದನ್ನೂ ಓದಿ: Karnataka Election 2023: ಆನಂದ್ ಅಸ್ನೋಟಿಕರ್ ರಿಎಂಟ್ರಿ?: ಜೆಡಿಎಸ್‌ನಿಂದಲೇ ಕಣಕ್ಕೆ ಇಳಿಯಲು ಸಿದ್ಧತೆ

ಮನೆಗೆ ಕರೆ ಮಾಡಿದ್ದ ಪ್ರೇಮಿಗಳು

ರಾಮದೇವರ ಬೆಟ್ಟಕ್ಕೆ ಬಂದಿದ್ದ ಸಾಹಿತ್ಯ ಮತ್ತು ಚೇತನ್‌ ಸಾಯುವ ನಿರ್ಧಾರ ಮಾಡಿದವರು, ಅದಕ್ಕೂ ಮುಂಚೆ ಮನೆಯವರಿಗೆ ಕೊನೆಯದಾಗಿ ಕರೆ ಮಾಡಿ ತಾವು ಹೀಗೆ ರಾಮದೇವರ ಬೆಟ್ಟಕ್ಕೆ ಬಂದಿದ್ದೇವೆ. ನಾವು ಈಗ ಸಾಯುತ್ತಿದ್ದೇವೆ. ನಮ್ಮನ್ನು ಕ್ಷಮಿಸಿಬಿಡಿ ಎಂದು ಹೇಳಿ ಅಲ್ಲಿಂದ ಜಿಗಿದಿದ್ದಾರೆ ಎಂದು ತಿಳಿದುಬಂದಿದೆ.

Road accident: ಸಾಲು ಮರದ ತಿಮ್ಮಕ್ಕ ಉದ್ಯಾನದ ಬಳಿ ಬೈಕ್‌ಗಳ ಮುಖಾಮುಖಿ ಡಿಕ್ಕಿ: ಇಬ್ಬರು ಸವಾರರು ಸಾವು‌

ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಚೇಳೂರು- ಬಿದರೆ ರಸ್ತೆಯ ಸಾಲುಮರದ ತಿಮ್ಮಕ್ಕ ಉದ್ಯಾನವನದ ಬಳಿ ಶುಕ್ರವಾರ ಮುಂಜಾನೆ ಬೈಕ್ ಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಸವಾರರು ಮೃತಪಟ್ಟಿದ್ದಾರೆ.

ತುಮಕೂರು ತಾಲೂಕಿನ ರಾಗಿಮುದ್ದನಹಳ್ಳಿಯ ಚೆಲುವರಾಜು (45) ಅವರು ಗಂಭೀರ ಗಾಯಗೊಂಡು ಗುಬ್ಬಿ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಮತ್ತೊಂದು ಬೈಕ್‌ನ ಸವಾರ ಅಭಿಷೇಕ್ ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದರು ಎಂದು ಹೇಳಲಾಗಿದೆ. ಇದೀಗ ಎರಡೂ ಮೃತ ದೇಹಗಳನ್ನು ಗುಬ್ಬಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

ಜತೆಯಾಗಿ ಕೆಲಸ ಮಾಡುತ್ತಿದ್ದ ಸ್ನೇಹಿತರ ಮಧ್ಯೆ ಕಿರಿಕ್‌; ಕೋಪದಲ್ಲಿ ಇಬ್ಬರಿಗೆ ಇರಿತ, ಒಬ್ಬ ಮೃತ್ಯು

ಬೆಂಗಳೂರು: ನಗರದ ಹೃದಯಭಾಗವಾದ ಉಪ್ಪಾರಪೇಟೆಯಲ್ಲಿ ಗುರುವಾರ ಸಂಜೆ ಸಾರ್ವಜನಿಕ ಸ್ಥಳದಲ್ಲೇ ಮೂವರು ಗೆಳೆಯರ ನಡುವೆ ಹುಟ್ಟಿಕೊಂಡ ಒಂದು ಕಿರಿಕ್‌ ಒಬ್ಬನ ಜೀವ ಬಲಿಗೆ (Murder Case) ಕಾರಣವಾಗಿದೆ. ಕ್ಷುಲ್ಲಕ ವಿಷಯಕ್ಕಾಗಿ ಒಬ್ಬಾತ ಇಬ್ಬರು ಗೆಳೆಯರ ಮೇಲೆ ಚೂರಿಯಿಂದ ಇರಿದಿದ್ದಾನೆ. ಬಿಡಿಸಲು ಹೋದ ಸಾರ್ವಜನಿಕರ ಮೇಲೂ ದಾಳಿ ಮಾಡಿದ್ದಾನೆ. ಇದರಿಂದ ಒಬ್ಬ ಮೃತಪಟ್ಟರೆ, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ: Viral Video: ಬೆನ್ನಟ್ಟಿದ 4 ನಾಯಿಗಳು, ಅಡ್ಡಬಂದ ಹಸುಗಳ ಹಿಂಡು; ಗಲಿಬಿಲಿಯಾಗಿ ಭಯದಿಂದ ಓಡಿದ ಸಿಂಹ!

ಮೃತಪಟ್ಟ ವ್ಯಕ್ತಿಯನ್ನು ಕಲಬುರಗಿ ಮೂಲದ ಮಲ್ಲಿನಾಥ್‌ ಬಿರಾದಾರ್‌ ಎಂದು ಗುರುತಿಸಲಾಗಿದೆ. ಹಲ್ಲೆ ಮಾಡಿದವನು ಗಣೇಶ್‌. ಹಲ್ಲೆ ಮಾಡಿದವನೂ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.

ಕಲಬುರಗಿ ಮೂಲದ ಮಲ್ಲಿನಾಥ್ ಬಿರಾದರ್, ಗಣೇಶ್ ಹಾಗೂ ಇನ್ನೊಬ್ಬ ಮೂವರೂ ಅಡುಗೆ ಕೆಲಸ ಮಾಡಿಕೊಂಡಿದ್ದವರು. ಪ್ರತಿದಿನ ಬೆಂಗಳೂರಿನ ಬೇರೆ ಬೇರೆ ಕಡೆ ಒಟ್ಟಿಗೆ ಕೆಲಸಕ್ಕೆ ಹೋಗುತ್ತಿದ್ದರು. ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಉಪ್ಪಾರಪೇಟೆಯ ಭಾಗ್ಯ ವಿನಾಯಕ ದೇವಸ್ಥಾನದ ಪಕ್ಕದಲ್ಲಿ ಬಂದು ಮೂವರೂ ಕುಳಿತಿದ್ದಾರೆ.

ಹೀಗೆ ಕುಳಿತಿದ್ದವರ ಮಧ್ಯೆ ಏನೋ ಕಿರಿಕ್ ಆಗಿದೆ. ನೋಡ ನೋಡುತ್ತಿದ್ದಂತೆ ಗಣೇಶ ಎಂಬಾತ ಮಲ್ಲಿನಾಥ್ ಬಿರಾದರ್ ಮತ್ತು ಮತ್ತೊಬ್ಬನ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಇದನ್ನು ತಡೆಯಲು ಬಂದ ಸಾರ್ವಜನಿಕರಿಗೂ ಗಣೇಶ್‌ ಇರಿದಿದ್ದಾನೆ. ಕೂಡಲೇ ಯಾರೋ ಆತನನ್ನು ಹಿಡಿದುಕೊಂಡಿದ್ದಾರೆ.

ಚೂರಿ ಇರಿತಕ್ಕೆ ಒಳಗಾದ ಇಬ್ಬರು ಮತ್ತು ಗಲಾಟೆ ವೇಳೆ ಗಾಯಗೊಂಡಿದ್ದ ಗಣೇಶ, ಈ ಮೂವರನ್ನೂ ಸ್ಥಳೀಯರ ಸಹಾಯದಿಂದ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರವಾಗಿ ಗಾಯಗೊಂಡು ರಕ್ತಸ್ರಾವಕ್ಕೆ ಒಳಗಾಗಿದ್ದ ಮಲ್ಲಿನಾಥ್ ಬಿರಾದರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Actor Nani: ನಾನಿ ಅಭಿನಯದ ʻದಸರಾʼ ಸಿನಿಮಾದ ಕ್ಲೈಮ್ಯಾಕ್ಸ್‌ ಶೂಟ್‌ಗೆ ತಗುಲಿದ ವೆಚ್ಚ 5 ಕೋಟಿ ರೂ.?

ಮತ್ತೊಬ್ಬನ ಮರ್ಮಾಂಗಕ್ಕೆ ಚಾಕು ಇರಿತವಾಗಿದ್ದು ಆತನ ಪರಿಸ್ಥಿತಿ ಗಂಭೀರವಾಗಿದೆ. ಆರೋಪಿ ಗಣೇಶ್‌ಗೂ ಗಾಯಗಳಾಗಿವೆ. ಯಾರೂ ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ಜಗಳದ ನಿಖರ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ.

Exit mobile version