Site icon Vistara News

Love Jihad | ಬಾಲಕಿಯಿಂದಲೇ ಮನೆಯವರಿಗೆ ನಿದ್ದೆ ಮಾತ್ರೆ ಕೊಡಿಸಿದ; ಮನೆಗೆ ಬಂದು ಅತ್ಯಾಚಾರ ಮಾಡಿದ!

ಲವ್‌ ಜಿಹಾದ್‌ ಇನ್‌ ಮಂಡ್ಯ

ಮಂಡ್ಯ: ಮುಸ್ಲಿಂ ಯುವಕನೊಬ್ಬ ಹಿಂದು ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆಯೊಂದು ನಾಗಮಂಗಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 25 ವರ್ಷದ ಯೂನಸ್‌ ಪಾಷ ಎಂಬಾತ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಇಸ್ಲಾಂ ಧರ್ಮಕ್ಕೆ ಮತಾಂತರ (Love Jihad) ಆಗುವಂತೆ ಒತ್ತಾಯಿಸಿದ್ದಾನೆ.

ಬೆಳ್ಳೂರು ಕ್ರಾಸ್‌ನಲ್ಲಿರುವ ಪಬ್ಲಿಕ್‌ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ವಿಕಲಚೇತನ ಬಾಲಕಿಯನ್ನು ಈ ಯೂನಸ್‌ ಪಾಷ ಹೇಗೋ ಪರಿಚಯ ಮಾಡಿಕೊಂಡಿದ್ದ. ಬಳಿಕ ಆಕೆಯನ್ನು ಪುಸಲಾಯಿಸಿ ವಿಶ್ವಾಸಕ್ಕೆ ಪಡೆದುಕೊಂಡಿದ್ದ. ಅದೇ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ ಫರಾನ್‌ ಎಂಬಾತನನ್ನು ಬಳಸಿಕೊಂಡು ಆತನ ಮೂಲಕ ಮೊಬೈಲ್‌ ಫೋನ್‌ ಅನ್ನು ಬಾಲಕಿಗೆ ಕೊಟ್ಟಿದ್ದಾನೆ. ಬಳಿಕ ತನ್ನ ಮೊಬೈಲ್‌ನಿಂದ ಆಗಾಗ ವಾಟ್ಸ್‌ಆ್ಯಪ್ ಮೂಲಕ ವಿಡಿಯೊ ಕಾಲ್‌ ಮಾಡಿ ಮಾತನಾಡುತ್ತಿದ್ದ. ಈ ವೇಳೆ ಆಕೆಯೊಂದಿಗೆ ಅಶ್ಲೀಲವಾಗಿ ಮಾತನಾಡುವುದು, ವಿಡಿಯೊ ಮಾಡಿಕೊಳ್ಳುವುದು ಮಾಡಿದ್ದಾನೆ. ಬಳಿಕ ಆಗಾಗ ಕರೆ ಮಾಡುವ ಆತ ಬಾಲಕಿಗೆ ಖಾಸಗಿ ಅಂಗಗಳನ್ನು ತೋರಿಸು, ಇಲ್ಲಾವಾದರೆ ರೆಕಾರ್ಡ್‌ ಮಾಡಿಕೊಂಡಿರುವ ವಿಡಿಯೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತೇನೆ ಎಂದು ಬೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ನಿದ್ದೆ ಮಾತ್ರೆ ನೀಡಿದ!
ಬಾಲಕಿಗೆ ತಿಳಿಯದಂತೆ ಖಾಸಗಿ ವಿಡಿಯೊವನ್ನು ರೆಕಾರ್ಡಿಂಗ್‌ ಮಾಡಿಕೊಂಡಿದ್ದಾನೆ. ಬಳಿಕ ತನ್ನ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯ ಮಾಡಿದ್ದಾನೆ. ಆದರೆ, ಎಲ್ಲಿ ಎಂಬ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಪ್ಲ್ಯಾನ್‌ ಮಾಡಿದ ಯೂನಫ್‌, ಆಕೆಯ ಮನೆಯಲ್ಲಿಯೇ ಸೇರುವುದಾಗಿ ತಿಳಿಸಿದ. ಇದಕ್ಕಾಗಿ ನವೆಂಬರ್‌ 10 ರಂದು ಮನೆಯ ಕಾಂಪೌಂಡ್‌ ಮೇಲಿಂದ ನಿದ್ರೆ ಮಾತ್ರೆಯನ್ನು ಎಸೆದಿದ್ದ. ಅದನ್ನು ಸಾಂಬಾರ್‌ಗೆ ಬೆರೆಸುವಂತೆ ಹೇಳಿದ್ದಾನೆ. ಆದರೆ, ಇದಕ್ಕೆ ಮೊದಲು ಬಾಲಕಿ ವಿರೋಧ ವ್ಯಕ್ತಪಡಿಸಿದ್ದಾಳೆ. ಪಟ್ಟುಬಿಡದ ಯೂನಫ್‌, ತಾನು ಹೇಳಿದಂತೆ ಮಾಡಲಿಲ್ಲವಾದರೆ ತನ್ನ ಬಳಿ ಇರುವ ವಿಡಿಯೊ ಲೀಕ್‌ ಮಾಡುವುದಾಗಿ ಬಾಲಕಿಗೆ ಹೆದರಿಸಿದ್ದಾನೆ.

ಈತನ ಬೆದರಿಕೆಗೆ ಹೆದರಿದ ಬಾಲಕಿ ನಿದ್ರೆ ಮಾತ್ರೆಗಳನ್ನು ಊಟಕ್ಕೆ ಹಾಕಿದ್ದಾಳೆ. ಮನೆಯವರೆಲ್ಲ ನಿದ್ರೆಗೆ ಜಾರಿದ ಬಳಿಕ ಮನೆಗೆ ನುಗ್ಗಿದ ಈ ಕಾಮುಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರೆ ಮದುವೆ ಆಗುವುದಾಗಿ ಹೇಳಿ ಬಲವಂತದಿಂದಲೇ ಅತ್ಯಾಚಾರವೆಸಗಿದ್ದಾನೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನ ತಂದೆ-ತಾಯಿಯನ್ನು ಕೊಲೆ ಮಾಡುತ್ತೇನೆ ಎಂದೂ ಬೆದರಿಸಿದ್ದಾಗಿ ಬಾಲಕಿ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರು ಪಡೆದಿರುವ ಪೊಲೀಸರು ಆರೋಪಿ ಯೂನಫ್‌ ಪಾಷಾನನ್ನು ಬಂಧಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ | Jeep Accident | ಸಿಎಂ ಬೆಂಗಾವಲು ವಾಹನ ಪಲ್ಟಿ, ದಾರಿಯಲ್ಲಿ ಹೋಗುತ್ತಿದ್ದ ತಾಯಿ-ಮಗನಿಗೆ ಗಾಯ; ಕಾಂಗ್ರೆಸ್‌ ಪ್ರತಿಭಟನೆ

Exit mobile version