Site icon Vistara News

Love story : ಪಿಯು ಹುಡುಗನ ಜತೆ ಹೈಸ್ಕೂಲ್‌ ಟೀಚರ್‌ ಲವ್!; ಭಾವಿ ಗಂಡನ ಕೈಲೇ ಸಿಕ್ಕಿಬಿದ್ರು!

teacher student love story

ಬೆಂಗಳೂರು: ಈ ಪ್ರೀತಿಗೆ ಕಣ್ಣಿಲ್ಲ (Love story) ಅನ್ನೋದಕ್ಕೆ ಇನ್ನೊಂದು ಉದಾಹರಣೆ ಸಿಕ್ಕಿದೆ! ಅದು ವಯಸ್ಸು, ಜಾತಿ, ಧರ್ಮಗಳನ್ನು ಮೀರಿದ್ದು ಅನ್ನುವುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ಇದು ಪಿಯುಸಿ ಹುಡುಗ ಮತ್ತು ಹೈಸ್ಕೂಲ್‌ ಟೀಚರ್‌ ನಡುವಿನ ಲವ್ ಸ್ಟೋರಿ (Teacher-student Love story). ಇದರಲ್ಲಿ ವಿಲನ್‌ ಆಗಿ ಬಂದಿದ್ದು ಟೀಚರನ್ನು ಮದುವೆಯಾಗಲಿರೋ ಹುಡುಗ! ಹಾಗಿದ್ದರೆ ಏನಿದು ಸಿನಿಮ್ಯಾಟಿಕ್‌ ಲವ್‌ ಸ್ಟೋರಿ? (Cinematic love story) ಇಲ್ಲಿದೆ ಒಂದು ರೊಮ್ಯಾಂಟಿಕ್‌ ಜರ್ನಿ.

ಈ ಪ್ರಕರಣದ ಪ್ರಧಾನ ಲೊಕೇಶನ್‌ ಭೈರವೇಶ್ವರ ನಗರ, ನಾಗರಬಾವಿ!

ಅವನು ಫಸ್ಟ್‌ ಪಿಯುಸಿ ಹುಡುಗ. ವಯಸ್ಸು 17. ಹೆಸರು ದಿನೇಶ್‌ (ಬದಲಾಯಿಸಲಾಗಿದೆ). ಮೊನ್ನೆ ಅಕ್ಟೋಬರ್‌ 1ರಂದು ಅವನ ಬರ್ತ್‌ ಡೇ ಇತ್ತು. ಅವನು ಬೆಳಗ್ಗೆ 10.30ರ ಸುಮಾರಿಗೆ ದೇವಸ್ಥಾನಕ್ಕೆ ಹೋಗಿ ಬರ್ತೀನಪ್ಪ ಎಂದು ಹೇಳಿ ಹೋಗಿದ್ದಾನೆ. ಮರಳಿ ಬಂದಾಗ ಸಂಜೆ ಆರಾಗಿತ್ತು. ಬರುವಾಗ ಅವನ ಎಡಕೈಗೆ ಗಾಯವಾಗಿತ್ತು. ಅಯ್ಯೋ ದೇವ್ರೆ ಬರ್ತ್‌ ಡೇ ದಿನವೇ ಏನಾಯಿತು ಮಗನೇ ಎಂದು ಅಪ್ಪ ಕೇಳಿದರು. ಆಗ ದಿನೇಶ್‌: ಬೈಕ್‌ನಲ್ಲಿ ಹೋಗುವಾಗ ಕಾರಿನ ಗ್ಲಾಸ್‌ ಬಡಿದು ಗಾಯವಾಯಿತು ಅಂದಿದ್ದಾನೆ. ಅಮ್ಮ ಎಣ್ಣೆ ಹಚ್ಚಿ ಔಷಧ ಕೊಟ್ಟಿದ್ದಾರೆ. ಆ ಜನುಮ ದಿನ ಹಾಗೆ ಮುಗಿದಿದೆ.

ಅಕ್ಟೋಬರ್‌ 2ರಂದು ಸ್ನೇಹಿತರ ಎಂಟ್ರಿ?

ಅಕ್ಟೋಬರ್‌ 2ರಂದು ಬೆಳಗ್ಗಿನ ಹೊತ್ತು ದಿನೇಶ್‌ನ ಒಂದಿಬ್ಬರು ಸ್ನೇಹಿತರು ಮನೆಗೆ ಬರ್ತಾರೆ. ಅವರು ಗುಟ್ಟು ಗುಟ್ಟಾಗಿ ಏನೋ ಮಾತನಾಡುತ್ತಿರುವುದನ್ನು ಗಮನಿಸಿದ ತಂದೆ ನಿಜಕ್ಕೂ ಏನಾಗಿತ್ತು ನಿನ್ನೆ ಅಂತ ಮಕ್ಕಳನ್ನು ವಿಚಾರಿಸುತ್ತಾರೆ. ಅವರು ಮೊದಲು ಕಾರು ಮತ್ತು ಬೈಕ್‌ ಕಥೆ ಹೇಳುತ್ತಾರೆ. ಕೊನೆಗೆ ಇನ್ನಷ್ಟು ಕೆದಕಿದಾಗ ದಿನೇಶ್‌ ಮೇಲೆ ಹಲ್ಲೆ ಮಾಡಿದ್ದು ಗೊತ್ತಾಗುತ್ತದೆ. ಹಾಗೆ ಹಲ್ಲೆ ಮಾಡಿದ್ದು ಯಾರು ಎಂದು ನೋಡಿದರೆ ಅದು ಒಬ್ಬ ಸ್ಕೂಲ್‌ ಟೀಚರ್‌ ಒಬ್ಬರ ತಮ್ಮ ಮತ್ತು ಇನ್ನೊಬ್ಬ ಯುವಕ. ಹಾಗಿದ್ದರೆ ಯಾಕೆ ಹೊಡೆದರು ಎಂದು ಹುಡುಕುತ್ತಾ ಹೋದಾಗ ಒಂದು ಲವ್‌ ಸ್ಟೋರಿ ತೆರೆದುಕೊಳ್ಳುತ್ತದೆ.

ಅವನು ಹೈಸ್ಕೂಲ್‌ ಹುಡುಗ-ಆಕೆ ಅವನ ಟೀಚರ್!‌

ಈಗ ಪಿಯುಸಿಯಲ್ಲಿರುವ ದಿನೇಶ್‌ ಅದಕ್ಕಿಂತ ಮೊದಲು ಬೇರೆ ಹೈಸ್ಕೂಲ್‌ನಲ್ಲಿದ್ದ. ಅಲ್ಲಿ ಅವನಿಗೆ ಅಚ್ಚುಮೆಚ್ಚಿನ ಟೀಚರ್‌ ಒಬ್ರಿದ್ದರು. ಹೆಸರು ಶ್ರಾವಣಿ (ಹೆಸರು ಬದಲಿಸಲಾಗಿದೆ). ಶ್ರಾವಣಿಗೂ ತನ್ನ ವಿದ್ಯಾರ್ಥಿ ದಿನೇಶ್‌ ಕಂಡರೆ ತುಂಬ ಅಕ್ಕರೆ, ಪ್ರೀತಿ. ಉಳಿದವರ ಕಣ್ಣು ಕುಕ್ಕುವಂತೆ ಅವರಿಬ್ಬರೂ ಜತೆಯಾಗಿ ಕಾರಿಡಾರ್‌ನಲ್ಲಿ ನಿಂತು ಮಾತನಾಡುವುದು, ಕ್ಯಾಂಟೀನ್‌ಗೆ ಹೋಗುವುದು ನಡೆಯುತ್ತಿತ್ತು. ಫೋನ್‌ನಲ್ಲಿ ಚಾಟಿಂಗ್‌, ಗಂಟೆಗಟ್ಟಲೆ ಹರಟೆಯೂ ಇತ್ತು.

ಹಾಗಂತ ಇದನ್ನು ಯಾರೂ ಸೀರಿಯಸ್‌ ಆಗಿ ತೆಗೆದುಕೊಂಡಿರಲಿಲ್ಲ. ಸ್ಟೂಡೆಂಟ್‌ ಚೀಚರ್‌ ನಡುವಿನ ಬಾಂಧವ್ಯ ಅಂತಾನೇ ಅಂದುಕೊಂಡಿದ್ದರು. ಆದರೆ, ಯಾವಾಗ ದಿನೇಶ್‌ ಹೈಸ್ಕೂಲ್‌ ಬಿಟ್ಟು ಕಾಲೇಜು ಸೇರಿದನೋ ಆಗ ಇಬ್ಬರಿಗೂ ಚಡಪಡಿಕೆ ಶುರುವಾಗಿತ್ತು ಅನಿಸುತ್ತದೆ.

ದಿನೇಶ್‌ ಕಾಲೇಜಿಗೆ ಹೋದ ಬಳಿಕ ಇಬ್ಬರಿಗೂ ಒಂದು ರೀತಿಯ ನೋವು ಆವರಿಸಿತ್ತು. ಪ್ರತಿ ದಿನ ಭೇಟಿಯಾಗುತ್ತಿದ್ದವರಿಗೆ ಒಂದು ರೀತಿಯ ವಿರಹ ವೇದನೆ. ಹೀಗಾಗಿ ಅವರಿಬ್ಬರ ನಡುವೆ ಫೋನ್‌ ಸಂಭಾಷಣೆ ತುಂಬ ಜೋರಾಗಿಯೇ ಮುಂದುವರಿದಿತ್ತು. ದಿನಕ್ಕೆ ಹಲವಾರು ಬಾರಿ ಫೋನ್‌ ಮಾಡುತ್ತಿರುವುದನ್ನು ದಿನೇಶ್‌ನ ಮನೆಯವರೂ ಗಮನಿಸಿದ್ದರು. ಯಾಕೆ ಹಾಗೆ ಪ್ರತಿದಿನ ಕರೆ ಮಾಡ್ತಾರೆ ಅಂತ ಕೇಳಿದ್ದರೂ ಕೂಡಾ. ಜತೆಗೆ ಹಾಗೆಲ್ಲ ದಿನವೂ ಗಂಟೆಗಟ್ಟಲೆ ಮಾತನಾಡುವುದು ಒಳ್ಳೆಯದಲ್ಲ ಎಂದು ಹೇಳಿದ್ದರು.

ಇದೆಲ್ಲವನ್ನೂ ಮೀರಿ ಈ ಕ್ರಷ್‌ ಸ್ಟೋರಿ ಮುಂದುವರಿದಿತ್ತು. ಶ್ರಾವಣಿ ಟೀಚರ್‌ ಮತ್ತು ದಿನೇಶ್‌ ಆಗಾಗ ಭೇಟಿಯಾಗುತ್ತಿದ್ದರು. ಇದು ಕೂಡಾ ದಿನೇಶ್‌ ತಂದೆಗೆ ಗೊತ್ತಾಗಿ ಮಗನಿಗೆ ವಾರ್ನಿಂಗ್‌ ಮಾಡಿದ್ದರು.

ಅದರ ನಡುವೆಯೇ ಬಂದಿತ್ತು ದಿನೇಶನ ಹುಟ್ಟುಹಬ್ಬ!

ಇದೆಲ್ಲವೂ ಹೀಗೆ ಒಂದು ರೀತಿಯಲ್ಲಿ ನಡೆದುಕೊಂಡು ಹೋಗುತ್ತಿತ್ತು. ಆಗ ಬಂದಿದ್ದೇ ಅಕ್ಟೋಬರ್‌ 1. ಆವತ್ತು ದಿನೇಶನ ಹುಟ್ಟುಹಬ್ಬ. ಹಿಂದೆಲ್ಲ ಈ ದಿನ ಅಂದರೆ ಶ್ರಾವಣಿ ಟೀಚರ್‌ಗೆ ಹಬ್ಬ. ತುಂಬ ಖುಷಿಯಿಂದ ಆಚರಿಸುತ್ತಿದ್ದರು. ಈ ಬಾರಿಯೂ ಅವನನ್ನು ಬಾ ಎಂದಿದ್ದರು.

ಆವತ್ತು ಮನೆಯಲ್ಲಿ ದೇವಸ್ಥಾನಕ್ಕೆ ಹೋಗುತ್ತೇನೆ ಎಂದು ಹೇಳಿ ದಿನೇಶ್‌ ಹೋಗಿದ್ದು ಶ್ರಾವಣಿ ಟೀಚರ್‌ ಬಳಿಗೆ. ಅವನು 11.30ರ ಹೊತ್ತಿಗೆ ಮೊದಲೇ ಹೇಳಿದಂತೆ ಬಸವೇಶ್ವರ ನಗರದ ಒಂದು ಶಾಪ್‌ಗೆ ಅವನು ಹೋಗಿದ್ದಾನೆ. ಅಲ್ಲಿ ಶ್ರಾವಣಿ ಟೀಚರ್‌ ಮೊದಲೇ ಬರ್ತ್‌ಡೇ ಕೇಕ್‌ ರೆಡಿ ಮಾಡಿ ಇಟ್ಟಿದ್ದರು. ಅಲ್ಲಿ ಕೇಕ್‌ ಕತ್ತರಿಸಿ ಇಬ್ಬರೂ ಖುಷಿಪಟ್ಟರು.

ಅಲ್ಲಿಂದ ಮುಂದೆ ಅವರು ಹೋಗಿದ್ದು, ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಒಂದು ಪಾರ್ಕ್‌ಗೆ. ಅಲ್ಲಿ ಅವರು ಇಬ್ಬರು ಜತೆಯಾಗಿ ಕುಳಿತು ಖುಷಿ ಖುಷಿಯಾಗಿ ಮಾತನಾಡುತ್ತಿದ್ದರೆ, ಒಂದು ಜೋಡಿ ಕಣ್ಣು ಅವರನ್ನೇ ದೂರದಿಂದ ಗಮನಿಸುತ್ತಿತ್ತು. ಅದು ಬೇರೆ ಯಾರೂ ಅಲ್ಲ, ಶ್ರಾವಣಿ ಟೀಚರ್‌ ವುಡ್‌ ಬೀ!

ಶ್ರಾವಣಿ ಟೀಚರ್‌ಗೆ ಮದುವೆ ಫಿಕ್ಸ್‌ ಆಗಿತ್ತು!

ಹೌದು, ಈ ನಡುವೆ ಶ್ರಾವಣಿ ಟೀಚರ್‌ಗೆ ಮದುವೆ ನಿಶ್ಚಿತಾರ್ಥ ನಡೆದಿತ್ತು. ಒಳ್ಳೆಯ ಜಾಬ್‌ನಲ್ಲಿರುವ ಒಬ್ಬ ಹುಡುಗನಿಗೆ ಮದುವೆ ಮಾಡಿಕೊಡುವುದಾಗಿ ಗುರು ಹಿರಿಯರಿದ್ದು ನಿರ್ಧಾರ ಮಾಡಿದ್ದರು. ಆದರೆ, ಇದರ ನಡುವೆ ಅದ್ಯಾಕೋ ಶ್ರಾವಣಿ ವಿಚಾರದಲ್ಲಿ ಆ ಹುಡುಗನಿಗೆ ಒಂದು ಸಣ್ಣ ಸಂಶಯ ಇತ್ತು. ಹೀಗಾಗಿಯೇ ಆತ ಆಕೆಯ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಅನಿಸುತ್ತದೆ. ಇವಳ್ಯಾಕೆ ಬಸವೇಶ್ವರ ನಗರಕ್ಕೆ ಹೋಗ್ತಿದ್ದಾಳೆ ಅಂತ ಫಾಲೋ ಮಾಡಿದವನಿಗೆ ಅಲ್ಲಿ ನಡೆದ ಬರ್ತ್‌ ಡೇ ಪಾರ್ಟಿ ಗೊತ್ತಾಗಿದೆ. ಬಳಿಕ ಅವರಿಬ್ಬರೂ ಪ್ರಣಯ ಪಕ್ಷಿಗಳಂತೆ ಪಾರ್ಕ್‌ಗೆ ಬಂದಾಗಲೂ ದೂರದಿಂದಲೇ ಹಿಂಬಾಲಿಸಿದ್ದಾನೆ.

ಇದನ್ನೂ ಓದಿ: Lover and Friend : ಇವನೆಂಥಾ ಪ್ರೇಮಿ! ಗೆಳೆಯ ಕೇಳಿದನೆಂದು ಪ್ರಿಯತಮೆಯನ್ನೇ ಬಿಟ್ಕೊಟ್ಟ!

ಆಗ ಫೋನ್‌ ಹೋಗಿದ್ದು ಶ್ರಾವಣಿ ಟೀಚರ್‌ ತಮ್ಮನಿಗೆ

ಇದೆಲ್ಲವನ್ನೂ ನೋಡಿದ ಆ ಭಾವಿ ಗಂಡ ಶ್ರಾವಣಿ ಟೀಚರ್‌ ತಮ್ಮ ಚಂದ್ರನಿಗೆ (ಹೆಸರು ಬದಲಿಸಲಾಗಿದೆ) ಕರೆ ಮಾಡುತ್ತಾನೆ. ಸ್ವಲ್ಪ ಹೊತ್ತಲ್ಲೇ ಚಂದ್ರ ಅಲ್ಲಿಗೆ ಎಂಟ್ರಿ ಕೊಡುತ್ತಾನೆ. ಇಬ್ಬರೂ ಜತೆಯಾಗಿ ಹೋಗಿ ಶ್ರಾವಣಿ ಟೀಚರ್‌ ಮತ್ತು ದಿನೇಶನ ಮುಂದೆ ನಿಲ್ಲುತ್ತಾರೆ. ಆಗ ಬೆಚ್ಚಿ ಬೀಳುವ ಸರದಿ ಟೀಚರ್‌ ಮತ್ತು ಸ್ಟೂಡೆಂಟ್‌ದು. ಇಬ್ಬರೂ ನಮ್ಮ ನಡುವೆ ಏನಿಲ್ಲ, ನಾವು ಗುರು-ಶಿಷ್ಯರು ಅಷ್ಟೆ ಎನ್ನುತ್ತಾರೆ.

ಆಗ ಚಂದ್ರ ಶಶಾಂಕನಿಗೆ ಒಂದು ಹರಿತವಾದ ಆಯುಧದಿಂದ ಕೈಗೆ ಇರಿದುದಲ್ಲದೆ, ಇನ್ಯಾವತ್ತಾದರೂ ಅಕ್ಕನ ಜತೆ ಕಾಣಿಸಿಕೊಂಡರೆ ಹುಟ್ಟಿಲ್ಲ ಅನಿಸಿಬಿಡ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಆದರೆ, ಕೈಗೆ ಗಾಯವಾಗಿದ್ದನ್ನು ಕಂಡು ಕೂಡಲೇ ಸನಿಹದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಿದ್ದಾನೆ. ಮನೆಯಲ್ಲಿ ಹೇಳಿದರೆ ಕಥೆ ಮುಗಿಸ್ತೇನೆ ಅಂದಿದ್ದಾನೆ. ದಿನೇಶ ಮನೆಯಲ್ಲಿ ಕಥೆ ಹೇಳಿಲ್ಲ. ಬದಲಾಗಿ ಗೆಳೆಯರ ಮೂಲಕ ಬಯಲಾಗಿದೆ. ಈಗ ಹಲ್ಲೆ ಮಾಡಿದ ಚಂದ್ರ ಮತ್ತು ಶ್ರಾವಣಿ ಟೀಚರ್‌ಳ ಭಾವಿ ಗಂಡನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದಿನೇಶ್‌ ಮನೆಯವರು ದೂರು ನೀಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಂಡು ಈ ಕ್ರಷ್‌ ಕಂ ಲವ್‌ ಸ್ಟೋರಿಗೆ ಅಂತ್ಯ ಹಾಡಲು ನಿರ್ಧಾರ ಮಾಡಿದ್ದಾರೆ.

ನಿಜವೆಂದರೆ ಕ್ರಷ್‌ ಆಗಿ ಹುಟ್ಟಿದ್ದ ಈ ಸಂಬಂಧ ಸ್ವಲ್ಪ ವಿಸ್ತರಣೆಯಾಗಿದೆ. ಬಹುಶಃ ಟೀಚರ್‌ ಮದುವೆಯಾಗಿ ಹೋಗಿದ್ದರೆ, ಈ ಹುಡುಗನ ಬಾಳಲ್ಲಿ ಇನ್ಯಾವುದೋ ಹೊಸ ಕ್ರಷ್‌ ಹುಟ್ಟಿದ್ದರೆ ಈ ಸಂಬಂಧ ಮರೆತು ಹೋಗುತ್ತಿತ್ತೋ ಏನೋ. ಆದರೆ, ಇದರಲ್ಲೊಂದು ಕ್ರೈಮ್‌ ಟ್ವಿಸ್ಟ್‌ ಸಿಕ್ಕಿದ್ದರಿಂದ ದಾಖಲೆಯಾಗಿದೆ!

Exit mobile version