Site icon Vistara News

Love story | ಆಂಟಿ ಮೇಲೆ ಪ್ರೀತಿ ಹೆಚ್ಚಾಗಿ ಅಂಕಲ್‌ ಕೊಲೆಗೆ ಸುಪಾರಿ ಕೊಟ್ಟ; ಕೊನೆಗೆ ಅವನೇ ಜೀವ ಬಿಟ್ಟ!

love story suicide

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆದಿರುವ ಸೂಸೈಡ್‌ ಕೇಸ್‌ವೊಂದು ಯಾವುದೇ ಥ್ರಿಲ್ಲರ್‌ ಸಿನಿಮಾಗೂ ಕಡಿಮೆ ಇಲ್ಲ. ಆಂಟಿಯೊಬ್ಬಳನ್ನು ಅತಿಯಾಗಿ ಲವ್‌ (Love story) ಮಾಡಿದಾತ ಆಕೆಯ ಗಂಡನ ಹತ್ಯೆಗೆ ಸುಪಾರಿ ಕೊಟ್ಟು, ಕೊನೆಗೆ ಆತನೇ ಸಾವಿನ ಕದ ತಟ್ಟಿದ ಪ್ರಕರಣವೊಂದು ನಡೆದಿದೆ.

ಬೆಂಗಳೂರಿನ ಬಾಗಲಗುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ತನಿಖೆಗೆ ನಡೆಸಿದ ಪೊಲೀಸರಿಗೆ ಪ್ರಕರಣದಲ್ಲಿ ಟ್ಟಿಸ್ಟ್‌ ಸಿಕ್ಕಿದೆ. ಕೆಂಪೇಗೌಡ ನಗರದಲ್ಲಿ ವಾಸವಿದ್ದ ಹಿಮಂತ ಎಂಬಾತ ಇಸ್ರೋದಲ್ಲಿ ಎಲೆಕ್ಟ್ರಿಕಲ್ ಕಾಂಟ್ರ್ಯಾಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ.

ಆತ ಪೀಣ್ಯದ ಮಹಿಳೆಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ಪ್ರೀತಿಸಿದವಳು ಬೇಕೇ ಬೇಕು ಎಂದುಕೊಂಡವನಿಗೆ ಅಡ್ಡವಾಗಿದ್ದು ಆಕೆಯ ಗಂಡ ನವೀನ್‌. ಹೀಗಾಗಿ ಆ ಮಹಿಳೆ ಹಾಗೂ ಹಿಮಂತ್ ಸೇರಿ ನವೀನ್‌ ಕೊಲೆಗೆ ಯೋಜನೆ ರೂಪಿಸಿದ್ದರು.

ಇದನ್ನೂ ಓದಿ | ಇದೆಂಥ ಪ್ರೀತಿ! ಗೊಂಬೆಯನ್ನೇ ಮದುವೆಯಾದ ಯುವತಿ, ದಂಪತಿಗೀಗ ಪುಟಾಣಿ ಮಗು ಕೂಡ ಹುಟ್ಟಿದೆ!

ಅದರಂತೆ ನವೀನ್‌ ಕೊಲೆಗೆ ಹಿಮಂತ ಸುಪಾರಿ ಕೊಟ್ಟಿದ್ದ. ಸುಪಾರಿ ಪಡೆದ ವ್ಯಕ್ತಿಗಳು ನವೀನ್‌ನನ್ನು ಕಿಡ್ನಾಪ್ ಕೂಡ ಮಾಡಿ, ಕೊಲೆ ಮಾಡದೇ ಹಾಗೇ ಬಿಟ್ಟು ಕಳುಹಿಸಿದ್ದಾರೆ. ಮುಂದುವರಿದು ಸುಪಾರಿ ಪಡೆದ ವ್ಯಕ್ತಿಗಳು ನವೀನ್‌ನನ್ನು ಕೊಲೆ ಮಾಡಿರುವುದಾಗಿ ವಿಡಿಯೊವೊಂದನ್ನು ಹಿಮಂತನಿಗೆ ಕಳಿಸಿ, ಮೆಸೇಜ್‌ ಮಾಡಿದ್ದರು.

ನವೀನ್‌ ಕೊಲೆ ಸುದ್ದಿ ಕೇಳಿ ಭಯಗೊಂಡ ಹಿಮಂತ್‌ ಮನೆಯಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಬಂದಾಗ ಪೊಲೀಸರಿಗೆ ಹಿಮಂತನ ಮೊಬೈಲ್‌ ಸಿಕ್ಕಿದೆ. ಆದರೆ, ಮೊಬೈಲ್‌ನಲ್ಲಿ ಸೀಮ್‌ ಕಾರ್ಡ್‌ ಇರಲಿಲ್ಲ ಎಂದು ತಿಳಿದು ಬಂದಿದೆ. ಕಿಡ್ನ್ಯಾಪ್ ವಿಚಾರ ತಿಳಿಯುವ ಭೀತಿಯಿಂದ ಹಿಮಂತ ಸಿಮ್ ಕಾರ್ಡ್‌ ಬಿಸಾಕಿರುವ ಸಾಧ್ಯತೆ ಇದೆ. ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನವೀನನಿಗೆ ಸುಪಾರಿ ಕೊಟ್ಟ ಮಹಿಳೆ, ಸುಪಾರಿ ಪಡೆದ ವ್ಯಕ್ತಿಗಳ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ | Murder Case | ಪ್ರೀತಿ ಕೊಂದ ಕೊಲೆಗಾತಿ ಈಗ ಹೇಳೋ ಕತೆಗೆ ಸ್ಫೂರ್ತಿ; ಸುಂದರಿ ಹೆಂಡತಿಯ ಮರ್ಡರ್‌ ಕಹಾನಿ!

Exit mobile version