Site icon Vistara News

Lokayukta Raid: ಮಾಡಾಳ್‌ ವಿರೂಪಾಕ್ಷಪ್ಪ ಈಗ ವಿಚಾರಣಾಧೀನ ಕೈದಿ ನಂಬರ್‌ 3411

Madal Virupakshappa is now an undertrial prisoner number 3411 Lokayukta Raid updates

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (KSDL) ಟೆಂಡರ್‌ಗಾಗಿ ಲಂಚ ಸ್ವೀಕರಿಸಿದ ಲೋಕಾಯುಕ್ತ ಬಲೆಗೆ (Lokayukta raid) ಬಿದ್ದಿದ್ದ ಶಾಸಕ‌ ಮಾಡಾಳ್ ವಿರೂಪಾಕ್ಷಪ್ಪ (Madal virupakshappa) ಕೊನೆಗೂ ಜೈಲು ಪಾಲಾಗಿದ್ದು, ಅವರಿಗೆ ಈಗ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಈ ವೇಳೆ ಅವರಿಗೆ ವಿಚಾರಣಾಧೀನ ಕೈದಿ ನಂಬರ್‌ 3411 ಸಂಖ್ಯೆಯನ್ನು ನೀಡಲಾಗಿದೆ.

ಶನಿವಾರ (ಏ. 1) ರಾತ್ರಿ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ರಾತ್ರಿ ತಡವಾಗಿ ಜೈಲಿಗೆ ಬಂದಿದ್ದ ಹಿನ್ನೆಲೆಯಲ್ಲಿ ಅವರಿಗೆ ಕೈದಿ ಸಂಖ್ಯೆಯನ್ನು ನೀಡಿರಲಿಲ್ಲ. ಹೀಗಾಗಿ ಭಾನುವಾರ ಮಧ್ಯಾಹ್ನ ಸಂಖ್ಯೆ ನೀಡಲಾಗಿದೆ.

ಬೆಳಗ್ಗೆಯಿಂದಲೂ ಮಾಡಾಳ್ ವಿರೂಪಾಕ್ಷಪ್ಪ ಆತಂಕದಲ್ಲಿ ಇದ್ದಂತೆ ಕಾಣುತ್ತಿತ್ತು. ಅಲ್ಲದೆ, ಸಾಧಾರಣ ಕೈದಿಯಂತೆ ಜೈಲಿನ ಕೊಠಡಿಯಲ್ಲಿ ಕಾಲಕಳೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: JDS Hassan: ಭಾನುವಾರವೇ ಹಾಸನ ಜೆಡಿಎಸ್‌ ಟಿಕೆಟ್‌ ನಿರ್ಧಾರ: ಸಭೆಗೆ ಆಹ್ವಾನಿಸಿದ ಎಚ್‌.ಡಿ. ದೇವೇಗೌಡ

ಮಾರ್ಚ್‌ 27ರಂದು ಬಂಧನವಾಗಿತ್ತು

ವಿರೂಪಾಕ್ಷಪ್ಪ ಮಾಡಾಳ್‌ ಅವರನ್ನು ಮಾರ್ಚ್‌ 27ರಂದು ನೆಲಮಂಗಲದಲ್ಲಿ ಬಂಧಿಸಿತ್ತು. ಬಳಿಕ ಕೋರ್ಟ್‌ ಸೂಚನೆಯಂತೆ ಲೋಕಾಯುಕ್ತ ಕಸ್ಟಡಿಯಲ್ಲಿದ್ದ ಅವರ ಕಸ್ಟಡಿ ಅವಧಿ ಏಪ್ರಿಲ್‌ 1ಕ್ಕೆ ಮುಕ್ತಾಯಗೊಂಡಿತ್ತು. ಐದು ದಿನಗಳ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಶನಿವಾರ ಮಾಡಾಳ್‌ ಅವರನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಶಾಸಕರನ್ನು ಏಪ್ರಿಲ್‌ 11ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಇದೀಗ ಕೋರ್ಟ್‌ ಸೂಚನೆಯಂತೆ ಪೊಲೀಸರು ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ತಲುಪಿಸಿದ್ದು, ಈಗ ಕೈದಿ ಸಂಖ್ಯೆಯನ್ನೂ ನೀಡಲಾಗಿದೆ.

ಮನೆಯಲ್ಲಿ ಆರು ಕೋಟಿ ರೂ. ಪತ್ತೆಯಾಗಿತ್ತು

ಕೆಎಸ್‌ಡಿಎಲ್‌ ಸಂಸ್ಥೆಯ ಟೆಂಡರ್‌ಗಾಗಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ದಾಖಲಿಸಿದ್ದ ಪ್ರಕರಣದಲ್ಲಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಜೈಲು ಸೇರಿದ್ದಾರೆ. ಟೆಂಡರ್‌ಗಾಗಿ ಲಂಚ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡಾಗಿ ಎರಡು ಕೋಟಿ ಹಣದೊಂದಿಗೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದ. ಅದರ ಬೆನ್ನಲ್ಲೇ ಆತನ ಮನೆ ಶೋಧ ನಡೆಸಿದ ಲೋಕಾಯುಕ್ತ ಅಧಿಕಾರಿಗಳಿಗೆ ಮನೆಯಲ್ಲಿ ಆರು ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು.

ಟೆಂಡರ್‌ಗಾಗಿ ಲಂಚ ಪ್ರಕರಣದಲ್ಲಿ ಮಾಡಾಳು ವಿರೂಪಾಕ್ಷಪ್ಪ ಅವರನ್ನೇ ಮೊದಲ‌ ಆರೋಪಿಯನ್ನಾಗಿ ಮಾಡಲಾಗಿತ್ತು. ಆರಂಭಿಕ ಹಂತದಲ್ಲಿ ಕೆಲವು ದಿನ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಮಾಡಾಳ್‌ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಮಧ್ಯಂತರ ಜಾಮೀನು ದೊರೆತ ಹಿನ್ನೆಲೆಯಲ್ಲಿ ಪ್ರತ್ಯಕ್ಷರಾದ ಅವರು ಬಂಧನ ಭೀತಿಯಿಂದ ಮುಕ್ತರಾಗಿ ಲೋಕಾಯುಕ್ತ ಕಚೇರಿಗೆ ಹಾಜರಾಗಿದ್ದರು.

ಈ ನಡುವೆ, ಲೋಕಾಯುಕ್ತ ಅಧಿಕಾರಿಗಳು ವಿರೂಪಾಕ್ಷಪ್ಪ ಅವರನ್ನು ಕಸ್ಟಡಿಗೆ ಪಡೆಯಲು ಕೋರ್ಟ್‌ಗೆ ಮನವಿ ಸಲ್ಲಿಸಿದರೂ ಕೋರ್ಟ್‌ ಅದೆಲ್ಲ ಯಾಕೆ ಬೇಕು ಎಂದು ಪ್ರಶ್ನಿಸಿತ್ತು. ಈ ನಡುವೆ, ಬಂಧನದ ಭಯ ಕಾಡಿದ ಹಿನ್ನೆಲೆಯಲ್ಲಿ ವಿರೂಪಾಕ್ಷಪ್ಪ ಅವರೇ ಸ್ವತಃ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆಗ ಕೋರ್ಟ್‌ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. ಇದೇ ಸರಿಯಾದ ಸಮಯ ಎಂದು ಲೋಕಾಯುಕ್ತ ಪೊಲೀಸರು ಅವರನ್ನು ಮಾರ್ಚ್‌ 25ರಂದು ಬಂಧಿಸಿದರು.

ಇದನ್ನೂ ಓದಿ: Karnataka Election 2023: ಬ್ಯಾಡಗಿ ಕಾಂಗ್ರೆಸ್‌ನಲ್ಲಿ ಭಿನ್ನಮತ; ಟಿಕೆಟ್‌ ಬದಲಾವಣೆಗೆ ಏ.8ರ ಗಡುವು ನೀಡಿದ ಎಸ್‌.ಆರ್.‌ ಪಾಟೀಲ್

ಕಳೆದ ಐದು ದಿನಗಳಿಂದ ಲೋಕಾಯುಕ್ತ ಕಸ್ಟಡಿಯಲ್ಲಿದ್ದ ಮಾಡಾಳ್‌ ಅವರು ಆರಂಭಿಕ ಹಂತದಲ್ಲಿ ಯಾವ ವಿಚಾರಕ್ಕೂ ಸ್ಪಂದಿಸಿಲ್ಲ ಎಂದು ಹೇಳಲಾಗಿದೆ. ಸ್ವಲ್ಪ ಮಟ್ಟಿಗೆ ದುಃಖದಲ್ಲೂ ಇದ್ದರೆನ್ನಲಾಗಿದೆ. ಬಳಿಕ ತನಿಖಾಧಿಕಾರಿಗಳು ಕೆಲವು ನಾಯಕರ ಉದಾಹರಣೆಗಳನ್ನು ನೀಡಿ ಮಾಡಾಳ್‌ಗೆ ಧೈರ್ಯ ತುಂಬುವ ಮೂಲಕ ಲಂಚ ಪ್ರಕರಣಕ್ಕೆ ಸಂಬಂಧಿಸಿದ‌ ಮಾಹಿತಿಯನ್ನು ಕಲೆ ಹಾಕಿದ್ದಾರೆ.

Exit mobile version