ಬೆಂಗಳೂರು: ಅಪ್ರಾಪ್ತೆಯನ್ನು ಮದುವೆಯಾಗಲು ಮನು ಎಂಬಾತ ಆಕೆಯ ಆಧಾರ್ ಕಾರ್ಡ್‌ನಲ್ಲಿ (Aadhar Card) ತಿದ್ದುಪಡಿ ಮಾಡಿಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಯನ್ನು ರಾಜಗೋಪಾಲನಗರದ ಪೊಲೀಸರು ಬಂಧಿಸಿದ್ದಾರೆ. ಆದರೆ, ಆಧಾರ್ ಕಾರ್ಡ್ ತಿದ್ದಿದ್ದು ಯಾರು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.
ಆಕೆ ಅಪ್ರಾಪ್ತ ಬಾಲಕಿ. ಆಕೆಯನ್ನು ಮದುವೆಯಾಗಬೇಕು ಎಂದುಕೊಂಡವನು ಮನು ಎಂಬ ಯುವಕ. ಇವರಿಬ್ಬರೂ ಲಗ್ಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಲು ಸಿದ್ಧವಾಗಿದ್ದರು. ಆದರೆ, ಆಕೆ 2005ರಲ್ಲಿ ಜನಿಸಿದ್ದರಿಂದ ೧೭ ವರ್ಷವಾಗಿದೆ. ಅಪ್ರಾಪ್ತೆಯನ್ನು ವಿವಾಹ ಆಗಲು ಕಾನೂನು ತೊಡಕು ಎದುರಾಗುವುದರಿಂದ ಮನು ಆಧಾರ್ ಕಾರ್ಡ್‌ನಲ್ಲಿಯೇ ತಿದ್ದುಪಡಿ ಮಾಡಿಸಿದ್ದಾನೆ. 2005 ಆಗಿದ್ದ ಆಕೆಯ ಜನ್ಮ ವರ್ಷವನ್ನು ಆಧಾರ್ ಕಾರ್ಡ್‌ನಲ್ಲಿ 2000ನೇ ಇಸವಿಗೆ ಬದಲಾಯಿಸಿದ್ದಾನೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ರಾಜಗೋಪಾಲನಗರದ ಪೊಲೀಸರು ಈ ಹುಡುಗನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆದರೆ, ಯಾವುದೇ ದಾಖಲೆಗಳಿಲ್ಲದೆ ಆಧಾರ್ ಕಾರ್ಡ್‌ನಲ್ಲಿ ಡೇಟ್ ಆಫ್ ಬರ್ತ್ ಹೀಗೆ ಬದಲಾಯಿಸಬಹುದೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈಗ ಆಧಾರ್ ಕಾರ್ಡ್ ತಿದ್ದಿಕೊಟ್ಟವರ ಹುಡುಕಾಟದಲ್ಲಿ ರಾಜಗೋಪಾಲನಗರ ಪೊಲೀಸರು ನಿರತರಾಗಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ವಿದೇಶಕ್ಕೆ ಪರಾರಿಯಾದ ಯುವಕ