ಬೆಂಗಳೂರು: ಜಾಲಹಳ್ಳಿ ಮೆಟ್ರೋ ರೈಲು ನಿಲ್ದಾಣದಲ್ಲಿ ಹಳಿಯ ಮೇಲೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶುಕ್ರವಾರ ನಡೆದಿದೆ. ಕೂಡಲೇ ಸಿಬ್ಬಂದಿ ಆ ವ್ಯಕ್ತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ನಡೆದ ಹಿನ್ನೆಲೆಯಲ್ಲಿ ಯಶವಂತಪುರ- ನಾಗಸಂದ್ರ ಮಾರ್ಗದಲ್ಲಿ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸಂಜೆ 7:12ಕ್ಕೆ ಮೆಟ್ರೋ ಹಳಿಗೆ ಕೇರಳ ಮೂಲದ ಯುವಕ ಧುಮುಕಿದ್ದ. ಸದ್ಯ ಯುವಕನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ಆತನನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವಕನ ಸ್ನೇಹಿತನನ್ನು ವಿಚಾರಣೆ ಮಾಡುತ್ತಿದ್ದಾರೆ. ರೈಲು ಸೇವೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸದ್ಯ ಯಶವಂತಪುರ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಕರು ಹೊರ ಬರುತ್ತಿದ್ದಾರೆ.
ಅಬ್ಬಿಗೆರೆಯ ಫ್ಯಾಕ್ಟರಿಯೊಂದರಲ್ಲಿ ಕೇರಳ ಮೂಲದ 23 ವರ್ಷದ ಯುವಕ ಕೆಲಸ ಮಾಡುತ್ತಿದ್ದ. ಯುವಕ ರೈಲ್ವೆ ಹಳಿಗೆ ಹಾರುತ್ತಿದ್ದಂತೆ ಮೆಟ್ರೊ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಯುವಕನಿಗೆ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇತ್ತೀಚೆಗೆ ಇಂದಿರಾನಗರದ ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಟ್ರ್ಯಾಕ್‌ಗೆ ಇಳಿದಿದ್ದ ಘಟನೆ ನಡೆದಿತ್ತು. ಕೂಡಲೇ ಸಿಬ್ಬಂದಿ ವಿದ್ಯುತ್ ಸಂಪರ್ಕ್ ತೆಗೆದು ಮಹಿಳೆಯನ್ನು ರಕ್ಷಿಸಿದ್ದರು. ಮೊಬೈಲ್ ಕೆಳಗೆ ಬಿದ್ದಿದ್ದರಿಂದ ರೈಲು ಹಳಿಗೆ ಮಹಿಳೆ ಇಳಿದಿದ್ದರು. ಬಿಎಂಆರ್‌ಸಿಎಲ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ಆಗುವ ಅನಾಹುತ ತಪ್ಪಿತ್ತು.
ಇದನ್ನೂ ಓದಿ | Coronavirus News: ಜ. 6ರಂದು ಕೋವಿಡ್ ಹೆಲ್ಪ್‌ಲೈನ್ ಆರಂಭ: ದಿನೇಶ್ ಗುಂಡೂರಾವ್
ಮದುವೆ ಮನೆಯಲ್ಲಿ ಹೈಡ್ರಾಮಾ; ಮಾಜಿ ಪ್ರೇಯಸಿ ಎಂಟ್ರಿ ಕೊಡ್ತಿದ್ದಂತೆಯೇ ವರ ಪರಾರಿ!
ಮಂಗಳೂರು: ತಾಲೂಕಿನ ಸೋಮೇಶ್ವರದ ಕಲ್ಯಾಣ ಮಂಟಪವೊಂದರಲ್ಲಿ (Kalyana Mantapa) ಶುಕ್ರವಾರ ಮದುವೆಯ ವೇಳೆ ಹೈಡ್ರಾಮಾ (High drama in Marriage hall) ನಡೆದು ವರನೇ ಪರಾರಿಯಾಗಿದ್ದಾನೆ (Bridegroom Escape). ಕೇರಳ ಮೂಲದ ಅಕ್ಷಯ್ ಎಂಬಾತನ ಮದುವೆ ನಡೆಯುತ್ತಿದ್ದ ಹಾಲ್‌ಗೆ ಆತನ ಮೈಸೂರು ಮೂಲದ ಮಾಜಿ ಪ್ರೇಯಸಿ ಎಂಟ್ರಿ (Ex lover Entry) ಕೊಟ್ಟಿದ್ದು, ಆಕೆಯನ್ನು ನೋಡುತ್ತಿದ್ದಂತೆಯೇ ವರ ಅವಸರದಲ್ಲಿ ತಾಳಿ ಕಟ್ಟಿ ಅನಾರೋಗ್ಯದ ನೆಪವೊಡ್ಡಿ ಎಸ್ಕೇಪ್ (Fraud Case) ಆಗಿದ್ದಾನೆ!
ಕ್ಯಾಲಿಕಟ್‌ನ ಕಾನ್ವೆಂಟ್ ರಸ್ತೆ ನಿವಾಸಿಗಳಾದ ಜ್ಯೋತಿ ಸುಭಾಷ್ ಹಾಗೂ ಸುಭಾಷ್ ದಂಪತಿಯ ಪುತ್ರ ಅಕ್ಷಯ್‌ನ ವಿವಾಹವು ಮಂಗಳೂರು ಮೂಲದ ಯುವತಿ ಜತೆಗೆ ನಿಗದಿಯಾಗಿತ್ತು. ಮದುವೆ ನಡೆಯುತ್ತಿದ್ದಂತೆಯೇ ಅಕ್ಷಯ್‌ನ ಮಾಜಿ ಪ್ರೇಯಸಿಯೊಬ್ಬಳು ಪೊಲೀಸರೊಂದಿಗೆ ಕಲ್ಯಾಣ ಮಂಟಪಕ್ಕೆ ನುಗ್ಗಿ ಜಗಳ ಮಾಡಿದ್ದಾಳೆ.
ಅಕ್ಷಯ್ ಒಂದೂವರೆ ವರ್ಷದ ಹಿಂದೆ ಮೈಸೂರಿನ ಯುವತಿಯನ್ನು ಶಾದಿ ಡಾಟ್ ಕಾಮ್ ಮೂಲಕ ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದೆ. ನಂತರ ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದಾನೆ. ಬಳಿಕ ಗರ್ಭಪಾತ ಮಾಡಿಸಿದ್ದಾನೆ. ನಿನ್ನನ್ನೇ ಮದುವೆಯಾಗುತ್ತೇನೆ ಎಂದು ನಂಬಿಸಿ ಆಕೆಯ ಜತೆ ಕಾಮದಾಟ ಆಡಿದ್ದ ಅಕ್ಷಯ್ ನಂತರ ವರಸೆ ಬದಲಿಸಿದ್ದಾನೆ. ಆಕೆಗೆ ಹಿಂಸೆ, ನೀಡಿ ಆಕೆಯ ಕೈಯಿಂದ ಸಾಕಷ್ಟು ಚಿನ್ನ, ಹಣ ಪಡೆದು ವಂಚನೆ ಮಾಡಿದ್ದಾನೆ ಎನ್ನಲಾಗಿದೆ.
ಅತ್ತ ಆ ಯುವತಿ ಜತೆಗೆ ಆಟವಾಡಿ ಕೈ ಕೊಟ್ಟ ಅಕ್ಷಯ್ ಇನ್ನೊಬ್ಬ ಯುವತಿ ಜತೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಇದನ್ನು ತಿಳಿಯುತ್ತಿದ್ದಂತೆಯೇ ಮೈಸೂರಿನ ಯುವತಿ ಡಿಸೆಂಬರ್ 26 ರಂದು ಅಕ್ಷಯ್ ವಿರುದ್ಧ ಕೇರಳದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಅಕ್ಷಯ್ ಅಲ್ಲಿನ ನ್ಯಾಯಾಲಯದಲ್ಲಿ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರಗೊಂಡಿದೆ. ಆದರೆ, ಪೊಲೀಸರು ಆತನನ್ನು ಬಂಧಿಸಲು ಕ್ರಮ ಕೈಗೊಂಡಿಲ್ಲ ಎನ್ನುವುದು ಯುವತಿಯ ದೂರು.
ಈ ನಡುವೆ ಆಕ್ರೋಶಗೊಂಡ ಯುವತಿ ಮದುವೆ ಹಾಲ್ ಗೆ ಬಂದು ದಾಂಧಲೆ ಎಬ್ಬಿಸಿದ್ದಾಳೆ. ತನ್ನ ಉದ್ದೇಶ ಆತನ ಮದುವೆಯನ್ನು ತಡೆಯುವುದಲ್ಲ, ನನಗೆ ಮಾಡಿರುವ ವಂಚನೆಗೆ ಶಿಕ್ಷೆಯಾಗಬೇಕು, ನನ್ನಿಂದ ಪಡೆದಿರುವ ಹಣ, ಚಿನ್ನ ವಾಪಸ್ ಕೊಡಬೇಕು ಎಂದು ಯುವತಿ ಆಗ್ರಹಿಸಿದ್ದಾಳೆ.
ಈ ನಡುವೆ ಮಂಜೇಶ್ವರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವತಿಯನ್ನು ಕರೆದಕೊಂಡು ಹೋಗಿದ್ದಾರೆ. ನಾನು ಅಕ್ಷಯ್‌ನನ್ನು ಅರೆಸ್ಟ್ ಮಾಡಿ ಎಂದರೆ ಪೊಲೀಸರು ನನ್ನನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಯುವತಿ ನೋವು ತೋಡಿಕೊಂಡರು.
ಇದನ್ನೂ ಓದಿ: Theft Case : ದೇವರ ಪೂಜೆ ದಿನ ಉಂಡು ಹೋದವರು 21 ಕೆಜಿ ಚಿನ್ನ, ಬೆಳ್ಳಿ ಕೊಂಡೂ ಹೋದರು!
ತಾಳಿ ಕಟ್ಟಿ ಎಸ್ಕೇಪ್ ಆದ ವರ
ಈ ನಡುವೆ, ಪ್ರೇಯಸಿಯ ವಿರೋಧದ ನಡುವೆಯೂ ಮಂಗಳೂರು ಮೂಲದ ಯುವತಿಯನ್ನು ಮದುವೆಯಾದ ಯುವಕ ತಾಳಿ ಕಟ್ಟಿದ ಬಳಿಕ ಅನಾರೋಗ್ಯ ಕಾರಣ ಮುಂದಿಟ್ಟು ಎಸ್ಕೇಪ್ ಆಗಿದ್ದಾನೆ. ಮದುವೆಗೆ ಬಂದಿದ್ದ ಸಂಬಂಧಿಕರಿಗೆ ಅನಾರೋಗ್ಯ ಅಂತ ಹೇಳಿ ಹೊರಟಿದ್ದಾರೆ. ಕಿಡ್ನಿಯಲ್ಲಿ ಕಲ್ಲುಂಟಾಗಿ ಆಸ್ಪತ್ರೆಗೆ ದಾಖಲೆ ಆಗುತ್ತೇವೆ ಎಂದು ಹೇಳಿ ಸಂಬಂಧಿಕರು ಆತನನ್ನು ಕರೆದುಕೊಂಡು ಹೋಗಿದ್ದಾರೆ.