Site icon Vistara News

Suicide | ಗೋಲ ಗುಮ್ಮಟ ನೋಡಲು ಬಂದವನು ಕಟ್ಟಡದ ಮೇಲಿನಿಂದ ಜಿಗಿದು ಆತ್ಮಹತ್ಯೆ

gola gummata

ವಿಜಯಪುರ: ಇಲ್ಲಿನ ಪ್ರಸಿದ್ಧ ಗೋಲ ಗುಮ್ಮಟವನ್ನು ನೋಡಲು ಬಂದಿದ್ದ ವ್ಯಕ್ತಿಯೊಬ್ಬ ಎಲ್ಲರೂ ನೋಡುತ್ತಿದ್ದಂತೆಯೇ ಅದೇ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

55 ವರ್ಷದ ವ್ಯಕ್ತಿ ಸಲೀಂ ತಿಕೋಟ್ಕರ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಆತ ಎಲ್ಲರೊಂದಿಗೆ ಗೋಲ ಗುಮ್ಮಟ ವೀಕ್ಷಣೆಗೆ ಸಾಲಿನಲ್ಲಿ ನಿಂತು ಸಾಗುತ್ತಿದ್ದ. ಆದರೆ ಮೇಲಿನ ಅಂತಸ್ತಿಗೆ ಹೋಗುತ್ತಿದ್ದಂತೆಯೇ ಅಲ್ಲಿಂದ ಆವರಣದ ಭಾಗಕ್ಕೆ ಹಾರಿದ್ದಾನೆ. ನೆಲಕ್ಕೆ ಬಿದ್ದು ಗಾಯಗೊಂಡ ಆತ ಅದೇ ಸ್ಥಳದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.

ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Suicide | Sorry ಅಮ್ಮ, ಅಣ್ಣ ಎಂದು ಸ್ಟೇಟಸ್‌ ಹಾಕಿ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡ ಯುವಕ

Exit mobile version