Site icon Vistara News

Kolar News: ಬಾರ್‌ನಲ್ಲಿ ಚೂರಿಯಿಂದ ಇರಿದು ವ್ಯಕ್ತಿಯ ಕೊಲೆ

Knives

ಕೋಲಾರ: ಬಾರ್‌ನಲ್ಲಿ ವ್ಯಕ್ತಿಯೊಬ್ಬನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ (Kolar News) ಮಾಲೂರು ತಾಲೂಕಿನ ಲಕ್ಕೂರು ಬಳಿ ಇರುವ ಬಾರ್ ಒಂದರಲ್ಲಿ ನಡೆದಿದೆ. ಜಗದೇನಹಳ್ಳಿ ಗ್ರಾಮದ ನಿವಾಸಿ ಬೈಯ್ಯರೆಡ್ಡಿ (35) ಮೃತರು. ಲಕ್ಕೂರು-ಚಿಕ್ಕ ತಿರುಪತಿ ರಸ್ತೆಯಲ್ಲಿರುವ ಬಾರ್‌ನಲ್ಲಿ ಹತ್ಯೆ ನಡೆದಿದೆ. ಸ್ಥಳಕ್ಕೆ ಮಾಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Electric Fence : ಜಮೀನಿಗೆ ಹಾಕಿದ್ದ ಹೈವೋಲ್ಟೇಜ್ ವಿದ್ಯುತ್‌ ಬೇಲಿ ಸ್ಪರ್ಶಿಸಿ ಇಬ್ಬರು ರೈತರು ದಾರುಣ ಸಾವು

ವಿದೇಶಿ ಮಹಿಳೆ ಬಳಿ ಕಂತೆ‌ ಕಂತೆ ಭಾರತೀಯ ಕರೆನ್ಸಿ ನೋಟು

ದೇವನಹಳ್ಳಿ: ವಿದೇಶಿ ಮಹಿಳೆ ಬಳಿ ಕಂತೆ‌ ಕಂತೆ ಭಾರತೀಯ ಕರೆನ್ಸಿ ನೋಟುಗಳು ಪತ್ತೆಯಾಗಿರುವುದು ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಕಂಡುಬಂದಿದೆ. ಮಹಿಳೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF) ವಶಕ್ಕೆ ಪಡೆದು, ಹಣವನ್ನು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ | Car Accident: ಮರಕ್ಕೆ ಕಾರು ಡಿಕ್ಕಿ ಹೊಡೆದು ಚಾಲಕ ಸಾವು

ವಿದೇಶಿ ಮಹಿಳೆ ಬಳಿ ಗರಿಗರಿ ನೋಟು ನೋಡಿ ಅಧಿಕಾರಿಗಳು ಶಾಕ್‌ ಆಗಿದ್ದಾರೆ. ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ವಿದೇಶಿ ಮೂಲದ ಮಹಿಳೆಯ ಬ್ಯಾಗ್‌ನಲ್ಲಿ ಲಗೇಜ್ ಸ್ಕ್ಯಾನಿಂಗ್ ವೇಳೆ 15 ಲಕ್ಷ ರೂ. ಪತ್ತೆಯಾಗಿದೆ. ಹಣದ ಸಮೇತ ಮಹಿಳೆಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡಸುತ್ತಿದ್ದಾರೆ. ನಂತರ ಹಣ ಹಾಗೂ ಮಹಿಳೆಯನ್ನು ಆದಾಯ ತೆರಿಗೆ ಇಲಾಖೆ‌ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.

ಜಮೀನಿಗೆ ಹಾಕಿದ್ದ ಹೈವೋಲ್ಟೇಜ್ ವಿದ್ಯುತ್‌ ಬೇಲಿ ಸ್ಪರ್ಶಿಸಿ ಇಬ್ಬರು ರೈತರು ದಾರುಣ ಸಾವು

ಚಿಕ್ಕಬಳ್ಳಾಪುರ: ಜಮೀನಿಗೆ ಹಾಕಿದ್ದ ವಿದ್ಯುತ್ ಬೇಲಿ (Electric Fence) ಸ್ಪರ್ಷಿಸಿ ಇಬ್ಬರು ರೈತರು ದಾರುಣವಾಗಿ ಪ್ರಾಣ (Two Farmers dead) ಕಳೆದುಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ (Chikkaballapura News) ಗೌರಿಬಿದನೂರು ತಾಲ್ಲೂಕಿನ ಕುರುಡಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟವರನ್ನು ಕುರುಡಿ ಗ್ರಾಮದ ತಿಪ್ಪೇಸ್ವಾಮಿ (26) ಹಾಗೂ ಅಂಬರೀಶ್ (28) ಎಂದು ಗುರುತಿಸಲಾಗಿದೆ.

ವೆಂಕಟೇಶಪ್ಪ ಎನ್ನುವವರಿಗೆ ಸೇರಿದ ಜಮೀನು ಬಳಿ ಘಟನೆ ನಡೆದಿದೆ. ವೆಂಕಟೇಶಪ್ಪ ತನ್ನ ಜಮೀನಿಗೆ ಕಾಡು ಪ್ರಾಣಿಗಳ ಕಾಟವನ್ನು ತಡೆಯಲು ಅನಧಿಕೃತವಾಗಿ ವಿದ್ಯುತ್‌ ಬೇಲಿ (Illegal Electric Fence) ಹಾಕಿದ್ದರು. ತಿಪ್ಪೇಸ್ವಾಮಿ ಮತ್ತು ಅಂಬರೀಷ್‌ ಅವರು ತಮ್ಮ ಪಕ್ಕದ ಜಮೀನಿಗೆ ಅಳವಡಿಸಿದ್ದ ವಿದ್ಯುತ್ ಬೇಲಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ ಪರಿಣಾಮ ವಿದ್ಯುತ್‌ ಶಾಕ್‌ ಹೊಡೆದು ಪ್ರಾಣ ಕಳೆದುಕೊಂಡಿದ್ದಾರೆ.

ಸಾಮಾನ್ಯವಾಗಿ ವಿದ್ಯುತ್‌ ಬೇಲಿ ಹಾಕುವುದಿದ್ದರೆ ಅಲ್ಪ ಪ್ರಮಾಣದ ವಿದ್ಯುತ್‌ ಹಾಯಿಸಲಾಗುತ್ತದೆ. ಸಾಮಾನ್ಯವಾಗಿ ಸೋಲಾರ್‌ ಬೇಲಿ ಬಳಸಲಾಗುತ್ತದೆ. ಪ್ರಾಣಿಗಳು ಬಂದರೆ ಅವುಗಳಿಗೆ ಸಣ್ಣದಾಗಿ ಶಾಕ್‌ ಹೊಡೆಯುವಂತೆ ವೋಲ್ಟೇಜ್‌ ಸೆಟ್‌ ಮಾಡಲಾಗುತ್ತದೆ. ಅಂದರೆ ಇದಕ್ಕೆ ಪ್ರತ್ಯೇಕ ಸಲಕರಣೆ ಬೇಕಾಗುತ್ತದೆ. ಆದರೆ, ವೆಂಕಟೇಶಪ್ಪ ಮಾತ್ರ ಬೋರ್ ವೆಲ್‌ ವಯರನ್ನೇ ನೇರವಾಗಿ ತಂತಿ ಬೇಲಿಗೆ ಕನೆಕ್ಟ್‌ ಮಾಡಿ ವಿದ್ಯುತ್‌ ಹರಿಸಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ | PSI Recruitment Scam: ಕೊನೆಗೂ ಅಮೃತ್‌ ಪಾಲ್‌ ಸೆಂಟ್ರಲ್‌ ಜೈಲಿನಿಂದ ಬಿಡುಗಡೆ

ಸ್ಥಳಕ್ಕೆ ಚಿಕ್ಕಬಳ್ಳಾಪುರ ವಿಭಾಗದ ಡಿವೈಎಸ್ಪಿ ಶಿವಕುಮಾರ್, ವೃತ್ತ ನಿರೀಕ್ಷಕ ಸತ್ಯನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version