Kolar News: ಬಾರ್‌ನಲ್ಲಿ ಚೂರಿಯಿಂದ ಇರಿದು ವ್ಯಕ್ತಿಯ ಕೊಲೆ Vistara News

ಕರ್ನಾಟಕ

Kolar News: ಬಾರ್‌ನಲ್ಲಿ ಚೂರಿಯಿಂದ ಇರಿದು ವ್ಯಕ್ತಿಯ ಕೊಲೆ

Kolar News: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಬಳಿ ಇರುವ ಬಾರ್ ಒಂದರಲ್ಲಿ ವ್ಯಕ್ತಿಗೆ ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದೆ.

VISTARANEWS.COM


on

Knives
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲಾರ: ಬಾರ್‌ನಲ್ಲಿ ವ್ಯಕ್ತಿಯೊಬ್ಬನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ (Kolar News) ಮಾಲೂರು ತಾಲೂಕಿನ ಲಕ್ಕೂರು ಬಳಿ ಇರುವ ಬಾರ್ ಒಂದರಲ್ಲಿ ನಡೆದಿದೆ. ಜಗದೇನಹಳ್ಳಿ ಗ್ರಾಮದ ನಿವಾಸಿ ಬೈಯ್ಯರೆಡ್ಡಿ (35) ಮೃತರು. ಲಕ್ಕೂರು-ಚಿಕ್ಕ ತಿರುಪತಿ ರಸ್ತೆಯಲ್ಲಿರುವ ಬಾರ್‌ನಲ್ಲಿ ಹತ್ಯೆ ನಡೆದಿದೆ. ಸ್ಥಳಕ್ಕೆ ಮಾಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Electric Fence : ಜಮೀನಿಗೆ ಹಾಕಿದ್ದ ಹೈವೋಲ್ಟೇಜ್ ವಿದ್ಯುತ್‌ ಬೇಲಿ ಸ್ಪರ್ಶಿಸಿ ಇಬ್ಬರು ರೈತರು ದಾರುಣ ಸಾವು

ವಿದೇಶಿ ಮಹಿಳೆ ಬಳಿ ಕಂತೆ‌ ಕಂತೆ ಭಾರತೀಯ ಕರೆನ್ಸಿ ನೋಟು

Indian currency

ದೇವನಹಳ್ಳಿ: ವಿದೇಶಿ ಮಹಿಳೆ ಬಳಿ ಕಂತೆ‌ ಕಂತೆ ಭಾರತೀಯ ಕರೆನ್ಸಿ ನೋಟುಗಳು ಪತ್ತೆಯಾಗಿರುವುದು ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಕಂಡುಬಂದಿದೆ. ಮಹಿಳೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF) ವಶಕ್ಕೆ ಪಡೆದು, ಹಣವನ್ನು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ | Car Accident: ಮರಕ್ಕೆ ಕಾರು ಡಿಕ್ಕಿ ಹೊಡೆದು ಚಾಲಕ ಸಾವು

ವಿದೇಶಿ ಮಹಿಳೆ ಬಳಿ ಗರಿಗರಿ ನೋಟು ನೋಡಿ ಅಧಿಕಾರಿಗಳು ಶಾಕ್‌ ಆಗಿದ್ದಾರೆ. ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ವಿದೇಶಿ ಮೂಲದ ಮಹಿಳೆಯ ಬ್ಯಾಗ್‌ನಲ್ಲಿ ಲಗೇಜ್ ಸ್ಕ್ಯಾನಿಂಗ್ ವೇಳೆ 15 ಲಕ್ಷ ರೂ. ಪತ್ತೆಯಾಗಿದೆ. ಹಣದ ಸಮೇತ ಮಹಿಳೆಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡಸುತ್ತಿದ್ದಾರೆ. ನಂತರ ಹಣ ಹಾಗೂ ಮಹಿಳೆಯನ್ನು ಆದಾಯ ತೆರಿಗೆ ಇಲಾಖೆ‌ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.

ಜಮೀನಿಗೆ ಹಾಕಿದ್ದ ಹೈವೋಲ್ಟೇಜ್ ವಿದ್ಯುತ್‌ ಬೇಲಿ ಸ್ಪರ್ಶಿಸಿ ಇಬ್ಬರು ರೈತರು ದಾರುಣ ಸಾವು

ಚಿಕ್ಕಬಳ್ಳಾಪುರ: ಜಮೀನಿಗೆ ಹಾಕಿದ್ದ ವಿದ್ಯುತ್ ಬೇಲಿ (Electric Fence) ಸ್ಪರ್ಷಿಸಿ ಇಬ್ಬರು ರೈತರು ದಾರುಣವಾಗಿ ಪ್ರಾಣ (Two Farmers dead) ಕಳೆದುಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ (Chikkaballapura News) ಗೌರಿಬಿದನೂರು ತಾಲ್ಲೂಕಿನ ಕುರುಡಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟವರನ್ನು ಕುರುಡಿ ಗ್ರಾಮದ ತಿಪ್ಪೇಸ್ವಾಮಿ (26) ಹಾಗೂ ಅಂಬರೀಶ್ (28) ಎಂದು ಗುರುತಿಸಲಾಗಿದೆ.

ವೆಂಕಟೇಶಪ್ಪ ಎನ್ನುವವರಿಗೆ ಸೇರಿದ ಜಮೀನು ಬಳಿ ಘಟನೆ ನಡೆದಿದೆ. ವೆಂಕಟೇಶಪ್ಪ ತನ್ನ ಜಮೀನಿಗೆ ಕಾಡು ಪ್ರಾಣಿಗಳ ಕಾಟವನ್ನು ತಡೆಯಲು ಅನಧಿಕೃತವಾಗಿ ವಿದ್ಯುತ್‌ ಬೇಲಿ (Illegal Electric Fence) ಹಾಕಿದ್ದರು. ತಿಪ್ಪೇಸ್ವಾಮಿ ಮತ್ತು ಅಂಬರೀಷ್‌ ಅವರು ತಮ್ಮ ಪಕ್ಕದ ಜಮೀನಿಗೆ ಅಳವಡಿಸಿದ್ದ ವಿದ್ಯುತ್ ಬೇಲಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ ಪರಿಣಾಮ ವಿದ್ಯುತ್‌ ಶಾಕ್‌ ಹೊಡೆದು ಪ್ರಾಣ ಕಳೆದುಕೊಂಡಿದ್ದಾರೆ.

ಸಾಮಾನ್ಯವಾಗಿ ವಿದ್ಯುತ್‌ ಬೇಲಿ ಹಾಕುವುದಿದ್ದರೆ ಅಲ್ಪ ಪ್ರಮಾಣದ ವಿದ್ಯುತ್‌ ಹಾಯಿಸಲಾಗುತ್ತದೆ. ಸಾಮಾನ್ಯವಾಗಿ ಸೋಲಾರ್‌ ಬೇಲಿ ಬಳಸಲಾಗುತ್ತದೆ. ಪ್ರಾಣಿಗಳು ಬಂದರೆ ಅವುಗಳಿಗೆ ಸಣ್ಣದಾಗಿ ಶಾಕ್‌ ಹೊಡೆಯುವಂತೆ ವೋಲ್ಟೇಜ್‌ ಸೆಟ್‌ ಮಾಡಲಾಗುತ್ತದೆ. ಅಂದರೆ ಇದಕ್ಕೆ ಪ್ರತ್ಯೇಕ ಸಲಕರಣೆ ಬೇಕಾಗುತ್ತದೆ. ಆದರೆ, ವೆಂಕಟೇಶಪ್ಪ ಮಾತ್ರ ಬೋರ್ ವೆಲ್‌ ವಯರನ್ನೇ ನೇರವಾಗಿ ತಂತಿ ಬೇಲಿಗೆ ಕನೆಕ್ಟ್‌ ಮಾಡಿ ವಿದ್ಯುತ್‌ ಹರಿಸಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ | PSI Recruitment Scam: ಕೊನೆಗೂ ಅಮೃತ್‌ ಪಾಲ್‌ ಸೆಂಟ್ರಲ್‌ ಜೈಲಿನಿಂದ ಬಿಡುಗಡೆ

ಸ್ಥಳಕ್ಕೆ ಚಿಕ್ಕಬಳ್ಳಾಪುರ ವಿಭಾಗದ ಡಿವೈಎಸ್ಪಿ ಶಿವಕುಮಾರ್, ವೃತ್ತ ನಿರೀಕ್ಷಕ ಸತ್ಯನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Elephant Arjuna : ಕಾಡಿನೊಳಗೆ ಅಂತ್ಯಸಂಸ್ಕಾರ ವಿರೋಧಿಸಿ ಮುತ್ತಿಗೆ; ಪೊಲೀಸರಿಂದ ಲಾಠಿಚಾರ್ಜ್

Elephant Arjuna : ಅರ್ಜುನನ ಅಂತ್ಯಕ್ರಿಯೆಯನ್ನು ಎಲ್ಲರಿಗೂ ಕಾಣುವಂತೆ ರಸ್ತೆ ಸಂಪರ್ಕ ಇರುವ ಜಾಗದಲ್ಲಿ ನಡೆಸಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದ ಜನರನ್ನು ಪೊಲೀಸರು ಲಾಠಿ ಚಾರ್ಜ್‌ ಮಾಡಿ ಓಡಿಸಿದ್ದಾರೆ.

VISTARANEWS.COM


on

Elephant Arjuna Lathicharge
Koo

ಹಾಸನ: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಳಸೂರು ಕಾಡಿನಲ್ಲಿ ನಡೆದ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೃತಪಟ್ಟ ಆನೆ ಅರ್ಜುನನ (Elephant Arjuna) ಅಂತ್ಯ ಸಂಸ್ಕಾರವನ್ನು (final rites) ಆತ ಮೃಪಪಟ್ಟ ಕಾಡಿನೊಳಗಿನ ಜಾಗದಲ್ಲಿ ನಡೆಸಬಾರದು, ಎಲ್ಲರಿಗೂ ಕಾಣುವ ರೀತಿಯಲ್ಲಿ ಮೈಸೂರಿನಲ್ಲಿ ಅಥವಾ ಬೇರೆ ಎಲ್ಲಾದರೂ ತೆರೆದ ಜಾಗದಲ್ಲಿ ನಡೆಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ (public protest) ಮತ್ತು ಅಂತ್ಯ ಸಂಸ್ಕಾರ ತಡೆಯಲು ಮುಂದಾದ ಸಾರ್ವಜನಿಕರು ಮತ್ತು ಹೋರಾಟಗಾರರನ್ನು ಪೊಲೀಸರು ಲಾಠಿ ಚಾರ್ಜ್‌ (Police Lathicharge) ಮೂಲಕ ಹಿಮ್ಮೆಟ್ಟಿಸಿದ್ದಾರೆ.

ಸೋಮವಾರ ನಡೆದ ಕಾರ್ಯಾಚರಣೆಯ ವೇಳೆ ಅರ್ಜುನ ಮೃತಪಟ್ಟಿದ್ದ. ದೇಹ ತುಂಬ ಜರ್ಜರಿತವಾಗಿರುವುದರಿಂದ ಅಲ್ಲೇ ಅಂತ್ಯ ಸಂಸ್ಕಾರ ನಡೆಸಲು‌ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ನಿರ್ಧರಿಸಿತ್ತು. ಆದರೆ, ಇದಕ್ಕೆ ಕೆಲವು ಹೋರಾಟಗಾರರು ಆಕ್ಷೇಪಿಸಿದ್ದರು. ಆದರೆ, ಅವರ ವಿರೋಧವನ್ನು ಲೆಕ್ಕಿಸದೆ ಅದೇ ಜಾಗದಲ್ಲಿ ಅಂತ್ಯ ಸಂಸ್ಕಾರ ವಿಧಿ ವಿಧಾನಗಳನ್ನು ಬೆಳಗ್ಗೆ ನಡೆಸಲಾಯಿತು. ಹೋರಾಟಗಾರರ ಧಿಕ್ಕಾರ ಮತ್ತು ಪ್ರತಿಭಟನೆಯ ನಡುವೆಯೇ ಅಂತಿಮ ವಿಧಿಗಳು ನಡೆದವು. ಜಿಲ್ಲಾಧಿಕಾರಿ ಸತ್ಯಭಾಮ, ಎಸ್ಪಿ ಮೊಹಮದ್ ಸುಜೀತಾ, ಡಿಸಿಎಫ್ ಮೋಹನ್ ಕುಮಾರ್ ಅವರ ಸಮ್ಮುಖದಲ್ಲಿ ಮೈಸೂರು ಅರಮನೆಯ ಪುರೋಹಿತರಾದ ಪ್ರಹ್ಲಾದ್‌ ಅವರು ಅಂತಿಮ ವಿಧಿ ವಿಧಾನ ನಡೆಸಿದರು. ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ಜನರು ಹೂವಿನ ಹಾರಗಳ ಪುಷ್ಪಾರ್ಚನೆ ನಡೆಸಿದರು.

Elephant Arjuna Lathicharge

ಜಿಲ್ಲಾಡಳಿತದ ವತಿಯಿಂದ ಅರ್ಜುನನಿಗೆ ಸರ್ಕಾರಿ ಗೌರವ ಸಮರ್ಪಣೆ ಮಾಡಲಾಯಿತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಪೊಲೀಸ್ ಇಲಾಖೆಯ ಸಿಬ್ಬಂದಿಯಿಂದ ಸರ್ಕಾರಿ ಗೌರವದ ವಿಧಿ ಪೂರೈಸಲಾಯಿತು. ರಾಜ್ಯ ಅರಣ್ಯ ಇಲಾಖೆ ಭಾಗವಾಗಿ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಸಹಾಯಕ ಅರಣ್ಯ ಮುಖ್ಯ ಪ್ರದಾನ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರ ಗೌರವ ಸಲ್ಲಿಸಿದರು.

Elephant Arjuna Lathicharge

ಇಷ್ಟೆಲ್ಲದರ ನಡುವೆಯೂ ಜನರ ಪ್ರತಿಭಟನೆ ಮುಂದುವರಿದಿತ್ತು. ಅಂತ್ಯಕ್ರಿಯೆಯನ್ನು ಬೇರೆ ಕಡೆ ನಡೆಸಬೇಕು, ಅಲ್ಲಿ ಸ್ಮಾರಕ ನಿರ್ಮಿಸಬೇಕು ಮತ್ತು ಆನೆಯ ಸಾವಿಗೆ ಕಾರಣರಾದ ಎಲ್ಲರಿಗೂ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಈ ನಡುವೆ, ಅರ್ಜುನನ ಪಾರ್ಥಿವ ಶರೀರವನ್ನು ದಫನ ಮಾಡುವುದಕ್ಕಾಗಿ ಜೆಸಿಬಿ ಮೂಲಕ ಗುಂಡಿ ತೋಡಲು ಆರಂಭವಾಗುತ್ತಿದ್ದಂತೆಯೇ ಜನರ ಆಕ್ರೋಶದ ಕಟ್ಟೆ ಒಡೆಯಿತು.

ಇದನ್ನೂ ಓದಿ: Elephant Arjuna : ಎದ್ದೇಳು ರಾಜ, ನಾನು ಬಂದಿದ್ದೀನಿ ; ಅರ್ಜುನನ ಮುಂದೆ ಕಾವಾಡಿಗರ ಕಣ್ಣೀರು!

ಪೊಲೀಸರು ಕಟ್ಟಿದ ತಡೆಗಳನ್ನು ದಾಟಿ ಮುನ್ನುಗ್ಗಲು ಯತ್ನಿಸಿದರು. ಆಗ ಪೊಲೀಸರು ಲಾಠಿ ಚಾರ್ಜ್‌ ನಡೆಸಿದರು. ಲಾಠಿ ಏಟು ಬೀಳುತ್ತಿದ್ದಂತೆಯೇ ಜನರು ದಿಕ್ಕಾಪಾಲಾಗಿ ಓಡಿದರು. ಜನರ ಈ ವರ್ತನೆಯಿಂದ ಪರಿಸರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ.

ಪೊಲೀಸ್‌ ಲಾಠಿಚಾರ್ಜ್‌ ದೃಶ್ಯಗಳು ಇಲ್ಲಿವೆ

Continue Reading

ಕರ್ನಾಟಕ

CM Siddaramaiah : ಸಿದ್ದರಾಮಯ್ಯರಿಂದ ಮುಸ್ಲಿಂ ಓಲೈಕೆ ಎಂದ ಬಿಜೆಪಿ; ಹೇಳಿದ್ದರಲ್ಲಿ ತಪ್ಪಿಲ್ಲ ಎಂದ ಸಿಎಂ!

CM Siddaramaiah : ಬಿಜೆಪಿ ನಾಯಕರು ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ. ಒಂದು ಸಮುದಾಯದ ಓಲೈಕೆ ರಾಜಕಾರಣ ಇದಾಗಿದೆ. ಈ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ಕಿಡಿಕಾರಿದೆ. ಅಲ್ಲದೆ, ಕಾಂಗ್ರೆಸ್‌ ಪಕ್ಷವನ್ನು ಕಟುವಾದ ಮಾತುಗಳಿಂದ ಟೀಕೆ ಮಾಡಲಾಗಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ನಾನು ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ.

VISTARANEWS.COM


on

CM Siddarmaiah infrot of vidhansoudha
Koo

ಬೆಂಗಳೂರು: ಸೋಮವಾರ (ಡಿ. 4) ಹುಬ್ಬಳ್ಳಿಯಲ್ಲಿ ನಡೆದಿದ್ದ ಸಮಾವೇಶದಲ್ಲಿ ಮುಸ್ಲಿಂ ಸಮುದಾಯದ (Muslim community) ರಕ್ಷಣೆ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿರುವ ಮಾತಿಗೆ ಈಗ ವಿವಾದ ಸ್ವರೂಪ ಪಡೆದುಕೊಂಡಿದೆ. ಬಿಜೆಪಿ ನಾಯಕರು (BJP leaders) ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ. ಒಂದು ಸಮುದಾಯದ ಓಲೈಕೆ ರಾಜಕಾರಣ ಇದಾಗಿದೆ. ಈ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ಕಿಡಿಕಾರಿದೆ. ಅಲ್ಲದೆ, ಕಾಂಗ್ರೆಸ್‌ ಪಕ್ಷವನ್ನು ಕಟುವಾದ ಮಾತುಗಳಿಂದ ಟೀಕೆ ಮಾಡಲಾಗಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ನಾನು ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ನಾನು ಹೇಳಿದ್ದರಲ್ಲಿ ತಪ್ಪು ಏನಿದೆ…!? ನಾನು ಹೇಳಿದ್ದು ಒಂದು ನೀವು ಬರೆದಿರುವುದು ಒಂದು. ಒಂದು ಪತ್ರಿಕೆಯವರು ಸರಿಯಾಗಿ ಬರೆದಿದ್ದಾರೆ. ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯಗಳ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ ಅಂತ ನಾನು ಹೇಳಿರೋದು. ನೀವು ಅದಕ್ಕೆ ಉಪ್ಪು ಖಾರ ಹಾಕಬೇಡಿ ಎಂದು ಹೇಳಿದರು.

ಇದನ್ನೂ ಓದಿ: Belagavi Winter Session: ಸದನದಲ್ಲಿ ಎಲೆ ಚುಕ್ಕಿ ರೋಗ ಸದ್ದು; ಗಂಭೀರವಾಗಿ ಪರಿಗಣಿಸಿದ ಸರ್ಕಾರ

ಅಲ್ಪಸಂಖ್ಯಾತರನ್ನು ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡುವುದಾಗಿ ಹೇಳಿದ್ದೇನೆ

ಅಲ್ಪಸಂಖ್ಯಾತರನ್ನೂ ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡುವುದಾಗಿ ಹೇಳಿದ್ದೇನೆ. ಅಲ್ಪಸಂಖ್ಯಾತರಿಗೆ 4 ರಿಂದ 5 ಸಾವಿರ ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡುವುದಾಗಿ ಹೇಳಿದ್ದೇನೆ. ಇದನ್ನು ಬಿಜೆಪಿ ಓಲೈಕೆ ರಾಜಕಾರಣ ಎಂದು ಕರೆದರೆ ಹೇಗೆ? ಅಲ್ಪಸಂಖ್ಯಾತರನ್ನೂ ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡುವುದಾಗಿ ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸಮುದಾಯದ ಪರ ಇದ್ದೇವೆ ಎಂದು ಹೇಳಬೇಕಾಗುತ್ತೆ: ಸತೀಶ್‌ ಜಾರಕಿಹೊಳಿ

ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಸಚಿವ ಸತೀಶ್ ಜಾರಕಿಹೊಳಿ ಸಮರ್ಥನೆ ಮಾಡಿಕೊಂಡಿದ್ದಾರೆ. ಸಮುದಾಯದ ಕಾರ್ಯಕ್ರಮಗಳಲ್ಲಿ ಅಂತಹ ಹೇಳಿಕೆ ಸಹಜ. ಸಮುದಾಯದ ಪರ ಇದ್ದೇವೆ ಎಂದು ಹೇಳಬೇಕಾಗುತ್ತದೆ. ಅದು ಮುಸ್ಲಿಂ ಸಮುದಾಯ ಇರಲಿ ಯಾವುದೇ ಸಮುದಾಯ ಇರಲಿ ಎಂದು ಹೇಳಿದ್ದಾರೆ.

ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಕಿಡಿ

ಈ ಸರ್ಕಾರ ಬಂದ ದಿನದಿಂದಲೂ ಈ ಕೆಲಸವನ್ನು ಮಾಡುತ್ತಿದ್ದಾರೆ. ಮುಸ್ಲಿಂ ಸಮುದಾಯವನ್ನು ಓಲೈಸುವುದು ಅಷ್ಟೇ ಇವರ ರಾಜಕಾರಣ. ಅಭಿವೃದ್ಧಿ ರಾಜಕಾರಣ ಇಲ್ಲ. ಬರೀ ದ್ವೇಷದ ರಾಜಕಾರಣ ಮಾಡುವುದು ಅಷ್ಟೇ ಇವರ ಕೆಲಸ. ಸದನದಲ್ಲಿ ಈ ಎಲ್ಲ ವಿಚಾರಗಳನ್ನು ಗಂಭೀರವಾಗಿ ಚರ್ಚೆ ಮಾಡುತ್ತೇವೆ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಹೇಳಿದ್ದಾರೆ.

ಇದೊಂದು ಎಡಬಿಡಂಗಿ ಸರ್ಕಾರ: ಆರ್.‌ ಅಶೋಕ್

ಇದೊಂದು ಎಡಬಿಡಂಗಿ ಸರ್ಕಾರವಾಗಿದೆ. ಹಿಂದು ಸೆಕೆಂಡ್ ದರ್ಜೆ ಪ್ರಜೆಗಳಲ್ಲ. ಮುಸ್ಲಿಂ ಓಲೈಕೆ ಮಾಡುವುದನ್ನು ಬಿಡಲಿ. ಒಬ್ಬ ಸಿಎಂ ಒಂದು ಸಮುದಾಯದ ಪರ ನಿಲ್ಲೋದು ಸರಿಯಲ್ಲ. ಸಚಿವ ಜಮೀರ್ ಅಹಮದ್ ಖಾನ್ ಆಯಿತು. ಈಗ ಸಿದ್ದರಾಮಯ್ಯ‌ ಮಾತನಾಡುತ್ತಿದ್ದಾರೆ. ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡುತ್ತೇನೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅವರು ಶಾದಿ ಭಾಗ್ಯ ಮಾಡಿದರು. ಎಸ್ಸಿ ಸಮುದಾಯದಲ್ಲಿ ಬಡವರು ಇರಲಿಲ್ವಾ? ಇವರನ್ನು ಕಳೆದ ಬಾರಿ ಜನ ಸೋಲಿಸಿದ್ದರು. ಈಗ ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಚಾಳಿ ಶುರು ಮಾಡಿದ್ದಾರೆ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಇದು ಖಂಡನೀಯ. ಹಿಂದುಗಳು ಕೆಳಗೆ, ಮುಸ್ಲಿಮರು ಮೇಲೆ ಅಂತ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು. ಸಂವಿಧಾನ ಪೀಠಿಕೆಯನ್ನು ಹೇಳುವಾಗ ಎಲ್ಲರೂ ಒಂದೇ ಅಂತ ಹೇಳಲಾಗುವುದು. ಈಗ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಇದು ಬಹುಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ತಂದಿದೆ. ಟಿಪ್ಪು ಸುಲ್ತಾನ್ ಆಚರಣೆಯಂತಹ ಕಾರ್ಯಕ್ರಮವನ್ನು ಬಿಡಬೇಕು ಎಂದು ಆರ್.‌ ಅಶೋಕ್‌ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಒಂದು ಸಮುದಾಯಕ್ಕೆ ಓಲೈಕೆ ಮಾಡಬಾರದು: ಆರಗ

ಒಬ್ಬ ಮುಖ್ಯಮಂತ್ರಿಯಾಗಿ ಒಂದು ಸಮುದಾಯಕ್ಕೆ ಓಲೈಕೆ ಮಾಡಬಾರದು. ನಾನು ನಿಮಗೆ ರಕ್ಷಣೆ ಕೊಡುತ್ತೇವೆ ಎಂದು ಹೇಳುತ್ತಾರೆ. ಅವರಿಗೆ ಏನು ಭಯ ಇದೆ? ಸಿಎಂ ಅವರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇಂತಹ ತುಷ್ಟೀಕರಣದಿಂದ ಮೂರು ರಾಜ್ಯವನ್ನು ಕಳೆದುಕೊಂಡಿದ್ದಾರೆ. ಸಿಎಂ ಹೇಳಿಕೆಯನ್ನು ನಾನು ಖಂಡಿಸತ್ತೇನೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.

ಇದನ್ನೂ ಓದಿ: Illegal Arecanut: ರಾಜ್ಯದಲ್ಲಿ ಅಕ್ರಮ ಅಡಿಕೆ ದಂಧೆ? ಬೆಂಗಳೂರಲ್ಲಿ ಅಂತಾರಾಜ್ಯ ಜಾಲ ಪತ್ತೆ

ಧರ್ಮದ ಹೆಸರಲ್ಲಿ ರಾಜಕಾರಣ: ಚಲವಾದಿ ನಾರಾಯಣ ಸ್ವಾಮಿ

ಪರಿಷತ್‌ ಸದಸ್ಯ ಚಲವಾದಿ ನಾರಾಯಣ ಸ್ವಾಮಿ ಪ್ರತಿಕ್ರಿಯೆ ನೀಡಿ, ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಮರು ಈಗ ಹುಟ್ಟಿದ್ದಾರೆ ಅಂದುಕೊಂಡಿದ್ದಾರೆ. ಅವರಿಗೆ ಈ ದೇಶ ಯಾವುದೇ ಅನ್ಯಾಯ ಮಾಡಿಲ್ಲ‌. ನಮ್ಮ‌ ಸರ್ಕಾರ ಇದ್ದಾಗಲೂ ಸಹಾಯ ಮಾಡಿದೆ. ಅವರು ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಮುಸಲ್ಮಾನರು ನಮ್ಮ ಪಕ್ಷದಲ್ಲೂ ಇದ್ದಾರೆ. ಕಾಂಗ್ರೆಸ್‌ನವರು ಅವರನ್ನು ಓಲೈಕೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಆಯ್ತು ಮುಸ್ಲಿಂರನ್ನು ಸಿಎಂ ಮಾಡಿದ್ದಾರಾ, ಅಧ್ಯಕ್ಷ ಮಾಡಿದ್ದಾರಾ? ಎಂದು ಪ್ರಶ್ನೆ ಮಾಡಿದರು.

ಏನಿದು ವಿವಾದ?

ಹುಬ್ಬಳ್ಳಿ‌ಯಲ್ಲಿ ಸೋಮವಾರ ನಡೆದಿದ್ದ‌ ಮುಸ್ಲಿಂ ಸಮಾವೇಶದಲ್ಲಿ ಸಿಎಂ‌ ಸಿದ್ದರಾಮಯ್ಯ ಮಾತನಾಡಿ, ರಾಜಕೀಯ ‌ಲಾಭಕ್ಕೆ ಕೆಲವರು ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುತ್ತಾರೆ. ಇದರಿಂದ ತಾತ್ಕಾಲಿಕ ಲಾಭ ಸಿಗಬಹುದು. ಪರಸ್ಪರ ಪ್ರೀತಿ ಇರಬೇಕಾದರೆ ನಾವು ಮನುಷ್ಯತ್ವದಿಂದ ಇರಬೇಕು. ಈ ವರ್ಷ ನಾಲ್ಕು ಸಾವಿರ ಕೋಟಿ ಅನುದಾನ ಅಲ್ಪಸಂಖ್ಯಾತರ ಇಲಾಖೆಗೆ ಕೊಟ್ಟಿದ್ದೇವೆ. 10 ಸಾವಿರ ಕೋಟಿ ಹಣ ಅಲ್ಪಸಂಖ್ಯಾತ ಇಲಾಖೆಗೆ ಖರ್ಚು ಮಾಡಬೇಕು ಅನ್ನೋದು ನಮ್ಮ ಉದ್ದೇಶ. ನಾನು ಕೊಟ್ಟಿದ್ದ ಹಣ ಬಿಜೆಪಿ ಸರ್ಕಾರ ಕಡಿಮೆ ಮಾಡಿತ್ತು. ನಿಮ್ಮ ಧಾರ್ಮಿಕ ಕೇಂದ್ರಗಳಿಗೆ ಅನುದಾನ ಬೇಕು. ದೇಶದ ಸಂಪತ್ತಲ್ಲಿ ನಿಮಗೆ ಪಾಲು ಸಿಗಬೇಕು. ದೇಶದ ಸಂಪತ್ತು ನಿಮಗೂ ಹಂಚುತ್ತೇನೆ. ನಿಮಗೆ ಅನ್ಯಾಯ ಮಾಡೋಕೆ ನಾನು ಬಿಡಲ್ಲ. ನಿಮ್ಮನ್ನು ನಾನು ರಕ್ಷಣೆ ಮಾಡುತ್ತೇನೆ ಎಂದು ಹೇಳಿದ್ದರು.

Continue Reading

ಕರ್ನಾಟಕ

Elephant Arjuna : ಎದ್ದೇಳು ರಾಜ, ನಾನು ಬಂದಿದ್ದೀನಿ ; ಅರ್ಜುನನ ಮುಂದೆ ಕಾವಾಡಿಗರ ಕಣ್ಣೀರು!

Elephant Death : ಹಾಸನದ ಯಳಸೂರು ಕಾಡಿನಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಮೃತಪಟ್ಟ ಅರ್ಜುನನ ಅಂತ್ಯಸಂಸ್ಕಾರ ಅದೇ ಜಾಗದಲ್ಲಿ ನಡೆಯುತ್ತಿದೆ. ಒಂದೆಡೆ ಪ್ರತಿಭಟನೆ, ಇನ್ನೊಂದು ಕಡೆ ಕಣ್ಣೀರ ಧಾರೆ ಸುರಿಯುತ್ತಿದೆ.

VISTARANEWS.COM


on

Arjuna death
Koo

ಹಾಸನ: ಎದ್ದೇಳು ರಾಜ ನಾನು ಬಂದಿದೀನಿ.. ಬಾ ಮನೆಗೆ ಹೋಗೋಣ : ಹೀಗೊಂದು ಕಣ್ಣೀರಿಡುತ್ತಿದ್ದಾರೆ ಕಾಡಾನೆ ಕಾರ್ಯಾಚರಣೆ ವೇಳೆ ಮರಣ ಹೊಂದಿದ ಆನೆ ಅರ್ಜುನನ ಮಾವುತ. ಮೈಸೂರು ದಸರಾದಲ್ಲಿ ತಾಯಿ ಚಾಮುಂಡೇಶ್ವರಿಯನ್ನು ತನ್ನ ಬೆನ್ನಮೇಲೆ ಹೊತ್ತು ಮೆರೆಸಿದ ವೀರ ಅರ್ಜುನ (Elephant Arjuna) ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಪುಂಡಾನೆ ಸೆರೆಗೆ ನಡೆದ ಕಾರ್ಯಾಚರಣೆಯ (Elephant Operation) ವೇಳೆ ಅಸು ನೀಗಿದ್ದ. ಪ್ರಾಣ ಕಳೆದುಕೊಂಡ ಜಾಗದಲ್ಲೇ ಅಂತ್ಯ ಸಂಸ್ಕಾರದ (final rites) ವಿಧಿ ವಿಧಾನಗಳು ನಡೆಯುತ್ತಿವೆ. ಈ ಹೊತ್ತಿನಲ್ಲಿ ಆನೆಯನ್ನು ತಬ್ಬಿಕೊಂಡು ಮಾವುತರು ಕಣ್ಣೀರು ಹಾಕುತ್ತಿರುವ ದೃಶ್ಯ ಎಲ್ಲರೂ ಮರುಗುವಂತೆ ಮಾಡಿದೆ.

Arjuna death Final rites Kavadi
ಕಣ್ಣೀರು ಹಾಕುತ್ತಿರುವ ಕಾವಾಡಿ

ಅರ್ಜುನನ್ನು ಪ್ರೀತಿಯಿಂದ ಪಳಗಿಸಿ, ಅವನ ಆಟಪಾಠಗಳಲ್ಲೇ ಮರೆತಿದ್ದ ಕಾವಾಡಿಗರಿಗೆ ತಮ್ಮ ಮಗುವನ್ನು ಕಳೆದುಕೊಂಡಷ್ಟೇ ದುಖ ಆಗುತ್ತಿದೆ. ಅದರಲ್ಲೂ ಅರ್ಜುನನ ಸಾವು ಅನ್ಯಾಯ ಎಂಬ ಮಾತುಗಳು ಕಾವಾಡಿಗರ ವಲಯದಲ್ಲಿದ್ದು ಕಣ್ಣೀರನ್ನು ಇನ್ನಷ್ಟು ಹೆಚ್ಚಿಸಿದೆ.

ಎದ್ದೇಳು ರಾಜ ನಾನು ಬಂದಿದೀನಿ.. ಬಾ ಮನೆಗೆ ಹೋಗೋಣ ಎನ್ನುತ್ತಾ ಅರ್ಜುನನ್ನು ಎಬ್ಬಿಸಲು ಪ್ರಯತ್ನ ಮಾಡಿದ ಕಾವಾಡಿ, ʻʻನಿನಗೆ ಮುದ್ದೆ ಮಾಡಿ ಕೊಡ್ತಿನಿ.. ಊಟ ಕೊಡ್ತಿನಿ.. ರಾಜ ನಾನು ಬಂದಿದಿನಿ ಎದ್ದೇಳುʼʼ ಎಂದೆಲ್ಲ ಕಣ್ಣೀರು ಹಾಕಿದ ಕಾವಾಡಿ ಕೊನೆಗೆ, ʻʻಅನ್ಯಾಯವಾಗಿ ನಿನ್ನ ಇಲ್ಲಿ ಕರ್ಕೊಬಂದು ಸಾಯಿಸಿ ಬಿಟ್ರಲ್ಲʼʼ ಎಂದು ಬಿಕ್ಕಿ ಬಿಕ್ಕಿ ಅತ್ತರು.

Arjuna death Final rites

ಮೈಸೂರಿನಲ್ಲಿ ಅಂತ್ಯ ಸಂಸ್ಕಾರಕ್ಕೆ ಒತ್ತಾಯ

ಕಾರ್ಯಾರಣೆಯ ವೇಳೆ ಕಾಡಾನೆಯ ದಾಳಿಗೆ ಒಳಗಾದ ಅರ್ಜುನ ಅಲ್ಲೇ ಪ್ರಾಣ ಕಳೆದುಕೊಂಡಿದ್ದ. ಆತನ ಪಾರ್ಥಿವ ಶರೀರದ ಅಂತ್ಯಕ್ರಿಯೆಯ ವಿಧಿ ವಿಧಾನಗಳನ್ನು ಮೃತಪಟ್ಟ ಜಾಗದಲ್ಲೇ ನಡೆಸಲಾಗುತ್ತಿದೆ. ಮೈಸೂರು ಅರಮನೆಯ ಪುರೋಹಿತರಾದ ಪ್ರಹ್ಲಾದ್‌ ಅವರು ವಿಧಿ ವಿಧಾನಗಳ ನೇತೃತ್ವ ವಹಿಸಿದ್ದಾರೆ. ಹಾಸನ ಡಿಸಿ ಸತ್ಯಭಾಮ ಹಾಗೂ ಎಸ್ಪಿ ಮೊಹಮ್ಮದ್ ಸುಜೀತಾ ಅವರು ಆಗಮಿಸಿದ್ದಾರೆ. ಈ ನಡುವೆ, ಅಂತ್ಯ ಸಂಸ್ಕಾರವನ್ನು ಬೇರೆ ಜಾಗದಲ್ಲಿ ಅದರಲ್ಲೂ ಮೈಸೂರಿನಲ್ಲಿ ನಡೆಸಬೇಕು ಎಂದು ಕೆಲವು ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ. ಅಂತ್ಯ ಸಂಸ್ಕಾರವನ್ನು ಬೇರೆ ಕಡೆ ನಡೆಸಿ ಅಲ್ಲೊಂದು ಸ್ಮಾರಕವನ್ನು ಕಟ್ಟಬೇಕು, ಅದು ಎಲ್ಲರಿಗೂ ಕಾಣುವಂತಿರಬೇಕು ಎನ್ನುವುದು ಹೋರಾಟಗಾರರ ಒತ್ತಾಯ.

ಆದರೆ, ಅರ್ಜುನನಿಗೆ ಈಗಾಗಲೇ ಸಾಕಷ್ಟು ನೋವಾಗಿದೆ. ಇಲ್ಲಿಂದ ಸ್ಥಳಾಂತರ ಮಾಡಿ ತೊಂದರೆ ಕೊಡುವುದು ಬೇಡ, ಇಲ್ಲೇ ಅಂತ್ಯಸಂಸ್ಕಾರ ಮಾಡಲು ಅವಕಾಶ ಕೊಡಿ ಎಂದು ಮೈಸೂರು ಅರಮನೆಯ ಪುರೋಹಿತರು ಮನವಿ ಮಾಡಿಕೊಂಡಿದ್ದಾರೆ.

Arjuna death Final rites Kavadi

ಅರ್ಜುನನ ನೋಡಲು ಜನ ಸಾಗರ

ಮೃತ ಅರ್ಜುನ ನೋಡಲು ಮತ್ತು ಅವನ ಅಂತ್ಯ ಸಂಸ್ಕಾರದ ವೇಳೆ ಅಂತಿಮ ನಮನ ಸಲ್ಲಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಪೊಲೀಸರು ಜನರನ್ನು ನಿಯಂತ್ರಿಸಲು ಮುಂದಾಗುತ್ತಿದ್ದಂತೆ ಜನರ ಪ್ರತಿಭಟನೆ ಹೆಚ್ಚಿತು. ಹೀಗಾಗಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ.

ಅರ್ಜುನನ ಮೃತದೇಹದ ಮುಂದೆಯೂ ಕೆಲವರು ಅಧಿಕಾರಿಗಳಿಗೆ ಧಿಕ್ಕಾರ ಕೂಗುತ್ತಿದ್ದಾರೆ. ಅವನ ಸಾವಿಗೆ ಕಾರಣರಾದ ಅಧಿಕಾರಿಗಳನ್ನು ಶಿಕ್ಷಿಸಿ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಜತೆಗೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ಆಗ್ರಹಿಸುತ್ತಿದ್ದಾರೆ.

ಕಾಡಿನಲ್ಲಿ ಅಂತ್ಯ ಸಂಸ್ಕಾರ ಬೇಡ, ಸ್ಮಾರಕ ನಿರ್ಮಿಸಿ: ಶಾಸಕ ಮಂಜು ಒತ್ತಾಯ

ಈ ನಡುವೆ, ಕಾಡಿನ ನಡುವೆ‌ ಅರ್ಜುನನ ಅಂತ್ಯ ಸಂಸ್ಕಾರ ನಡೆಸಬಾರದು, ರಸ್ತೆ ಸಂಪರ್ಕ ಹಾಗು ಮೂಲಭೂತ ಸೌಲಭ್ಯಗಳು ಇರುವ ಜಾಗದಲ್ಲಿ ಅಂತ್ಯಕ್ರಿಯೆ ಮಾಡಬೇಕು. ಅರ್ಜುನನ ಹೆಸರಿನಲ್ಲಿ ಸ್ಮಾರಕ ಮಾಡಬೇಕು ಎಂದು ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಒತ್ತಾಯ ಮಾಡಿದ್ದಾರೆ.

ʻʻಅರ್ಜುನ ರಾಜ್ಯದ ಜನರ ಪ್ರೀತಿಪಾತ್ರ ಆನೆ. ದಸರಾದಲ್ಲಿ ನಾಡದೇವರೆ ಚಾಮುಂಡೇಶ್ಚರಿ ಹೊತ್ತ ಅರ್ಜುನನ ನೆನಪು ಉಳಿಯಬೇಕು. ಅರ್ಜುನನ ನೆನಪು ಉಳಿಯಲು ಸ್ಮಾರಕ ನಿರ್ಮಾಣ ಆಗಬೇಕುʼʼ ಎಂದು ಅವರು ಹೇಳಿದ್ದಾರೆ. ಅರಣ್ಯ ಸಚಿವರು ಕರೆದಿರುವ ಸಭೆಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ ಮಾಡುವುದಾಗಿ ಅವರು ಹೇಳಿದರು.

Arjuna death Final rites

ಉನ್ನತ ಮಟ್ಟದ ತನಿಖೆಗೆ ವಾಟಾಳ್‌ ನಾಗರಾಜ್‌ ಆಗ್ರಹ

ʻʻಸುಮಾರು 22 ವರ್ಷಗಳ ಕಾಲ ಮೈಸೂರು ದಸರಾದಲ್ಲಿ ಭಾಗವಹಿಸಿದ್ದ ಅರ್ಜುನ ಸಾವನ್ನಪ್ಪಿರುವುದು ಅತ್ಯಂತ ಗಂಭೀರವಾದ ಸಂಗತಿ. ಅರ್ಜುನನ ಸಾವಿಗೆ ಕಾರಣ ಯಾರು ಎಂಬುದನ್ನು ತಿಳಿಯಬೇಕು. ಹಾಗಾಗಿ ಅರಣ್ಯ ಇಲಾಖೆಯವರು ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕುʼʼ ಎಂದು ಕ‌ನ್ನಡ ಚಳವಳಿ ಮುಖಂಡ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ʻʻಅರ್ಜುನನ ಸಾವಿನಿಂದ ಕೋಟಿ ಕೋಟಿ ಜನರ ಮನಸ್ಸಿಗೆ ನೋವಾಗಿದೆ‌. ಅರ್ಜುನ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಕಾಡಾನೆಗಳ ದಾಳಿಯಿಂದ ಅರ್ಜುನ ಸಾವನ್ನಪ್ಪಿರುವುದರಿಂದ ನಿಜಕ್ಕೂ ನೋವಾಗಿದೆ. ಅರ್ಜುನನ ಸಾವಿನ ಬಗ್ಗೆ ತನಿಖೆ ಆಗದಿದ್ದರೆ ಕನ್ನಡ ಚಳುವಳಿ ವಾಟಾಳ್ ಪಕ್ಷ ತೀವ್ರ ಹೋರಾಟ ನಡೆಸಲಿದೆʼʼ ಎಂದು ಕನ್ನಡ ಚಳವಳಿ ಮುಖಂಡ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

Continue Reading

ಕರ್ನಾಟಕ

Cyber crime : ಹೈಕೋರ್ಟ್‌ ಲೈವ್‌ ಸ್ಟ್ರೀಮಿಂಗ್‌ನಲ್ಲಿ ಹರಿದಾಡಿದ ಅಶ್ಲೀಲ ದೃಶ್ಯ!

Cyber crime : ಸೈಬರ್ ಹ್ಯಾಕರ್ಸ್ ಹಾವಳಿ ಹೈಕೋರ್ಟ್‌ಗೂ ತಪ್ಪಿಲ್ಲ. ಕಲಾಪದ ಲೈವ್ ಸ್ಟ್ರೀಮಿಂಗ್ ವೇಳೆ ಅಶ್ಲೀಲ ದೃಶ್ಯಾವಳಿ ಅಪ್‌ಲೋಡ್‌ ಆಗಿದೆ. ಹೀಗಾಗಿ ಹೈಕೋರ್ಟ್‌ನ ಲೈವ್‌ ಸ್ಟ್ರೀಮಿಂಗ್‌ ಅನ್ನು ಸ್ಥಗಿತ ಮಾಡಲಾಗಿದೆ.

VISTARANEWS.COM


on

By

High Court live streaming hacked by hackers
Koo

ಬೆಂಗಳೂರು: ಹೈಕೋರ್ಟ್‌ನಲ್ಲಿ ನಡೆಯುವ ಕಾರ್ಯ ಕಲಾಪಗಳನ್ನು ಸಾರ್ವಜನಿಕ ವೀಕ್ಷಣೆಗಾಗಿ ಲೈವ್‌ ಸ್ಟ್ರೀಮಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಹ್ಯಾಕರ್ಸ್‌ಗಳು ಹ್ಯಾಕ್‌ (Cyber crime) ಮಾಡಿ, ಅಶ್ಲೀಲ ದೃಶ್ಯಗಳನ್ನು ಅಪ್‌ಲೋಡ್‌ ಮಾಡಿದ್ದಾರೆ. ಹೈಕೋರ್ಟ್ ಕಲಾಪಕ್ಕೂ ಸೈಬರ್ ಹ್ಯಾಕರ್ಸ್ ಹಾವಳಿಯಿಂದಾಗಿ ವಿಡಿಯೋ ಕಾನ್ಫರೆನ್ಸ್ ಸ್ಥಗಿತ ಮಾಡಲಾಗಿದೆ.

ಸೈಬರ್ ಸೆಕ್ಯುರಿಟಿ ಸಮಸ್ಯೆ ಹಿನ್ನೆಲೆಯಲ್ಲಿ ಸದ್ಯಕ್ಕೆ ವಿಡಿಯೊ ಕಾನ್ಫರೆನ್ಸ್‌ ಅನ್ನು ಸ್ಥಗಿತ ಮಾಡಲಾಗಿದೆ ಎಂದು ಸಿಜೆ ಪ್ರಸನ್ನ ಬಿ ವರಾಳೆ ಸ್ಪಷ್ಟನೆ ನೀಡಿದ್ದಾರೆ. ಕೆಲ ಕೋರ್ಟ್ ಹಾಲ್‌ಗಳ ವಿಡಿಯೊ ಕಾನ್ಫರೆನ್ಸ್ ಹ್ಯಾಕ್ ಆಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸಿಬ್ಬಂದಿ ಸದ್ಯಕ್ಕೆ ಸೌಲಭ್ಯ ಸ್ಥಗಿತಗೊಳಿಸಿದ್ದಾರೆ.

ಲೈವ್ ಸ್ಟ್ರೀಮಿಂಗ್ ಹ್ಯಾಕ್‌ ಮಾಡಿದ್ದು, ಬಳಿಕ ಅಶ್ಲೀಲ ದೃಶ್ಯಗಳನ್ನೆಲ್ಲ ಅಪ್ಲೋಡ್‌ ಮಾಡಿದ್ದಾರೆ. ಇದರಿಂದಾಗಿ ಮುಜುಗರಕ್ಕೆ ಒಳಗಾಗಬೇಕಾಯಿತು. ಹ್ಯಾಕ್‌ ಆಗಿದ್ದು ತಿಳಿಯುತ್ತಿದ್ದಂತೆ ಹೈಕೋರ್ಟ್ ಸಿಬ್ಬಂದಿ ಕೇಂದ್ರ ವಿಭಾಗ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದರನ್ವಯ ಎಫ್‌ಐಆರ್‌ ದಾಖಲು ಮಾಡಲಾಗಿದೆ. ದೂರು ದಾಖಲಿಸಿಕೊಂಡಿರುವ ಕೇಂದ್ರ ವಿಭಾಗ ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading
Advertisement
Kanisena Sukhdeva
ದೇಶ3 mins ago

Sukhdev Singh Gogamedi: ರಜಪೂತ್ ಕರ್ಣಿ ಸೇನಾ ಮುಂಖಡ ಸುಖ್​ದೇವ್​​ ಗೋಗಮೇಡಿ ಗುಂಡಿಟ್ಟು ಹತ್ಯೆ

fighter
ಬಾಲಿವುಡ್5 mins ago

Deepika Padukone: ಪೈಲಟ್‌ ಅವತಾರದಲ್ಲಿ ದೀಪಿಕಾ; ಫೈಟರ್‌ ಫಸ್ಟ್‌ ಲುಕ್‌ ಹೊರಬಿತ್ತು

Layoffs: Another 1000 layoffs at Baijus
ತಂತ್ರಜ್ಞಾನ21 mins ago

Byju’s Debt: ಸಿಬ್ಬಂದಿ ಸಂಬಳಕ್ಕಾಗಿ ಮನೆ ಅಡವಿಟ್ಟ ಬೈಜೂಸ್ ಕಂಪನಿ ಮಾಲಿಕ!

Elephant Arjuna Lathicharge
ಕರ್ನಾಟಕ26 mins ago

Elephant Arjuna : ಕಾಡಿನೊಳಗೆ ಅಂತ್ಯಸಂಸ್ಕಾರ ವಿರೋಧಿಸಿ ಮುತ್ತಿಗೆ; ಪೊಲೀಸರಿಂದ ಲಾಠಿಚಾರ್ಜ್

1 lakh in cash
ವೈರಲ್ ನ್ಯೂಸ್27 mins ago

Viral News: ಹಸಿವಿನಿಂದ ಭಿಕ್ಷುಕ ಸಾವು; ಆತನ ಬಳಿ ಇತ್ತು 1 ಲಕ್ಷ ರೂ!

India bloc Leaders
ದೇಶ1 hour ago

INDIA Alliance: ಬಿಜೆಪಿ ಭರ್ಜರಿ ಗೆಲುವಿನ ಬಳಿಕ ʼಇಂಡಿಯಾ’ ಕೂಟದಲ್ಲಿ ಕೋಲಾಹಲ! ಮೀಟಿಂಗ್ ಕ್ಯಾನ್ಸಲ್

CM Siddarmaiah infrot of vidhansoudha
ಕರ್ನಾಟಕ1 hour ago

CM Siddaramaiah : ಸಿದ್ದರಾಮಯ್ಯರಿಂದ ಮುಸ್ಲಿಂ ಓಲೈಕೆ ಎಂದ ಬಿಜೆಪಿ; ಹೇಳಿದ್ದರಲ್ಲಿ ತಪ್ಪಿಲ್ಲ ಎಂದ ಸಿಎಂ!

Arjuna death
ಕರ್ನಾಟಕ1 hour ago

Elephant Arjuna : ಎದ್ದೇಳು ರಾಜ, ನಾನು ಬಂದಿದ್ದೀನಿ ; ಅರ್ಜುನನ ಮುಂದೆ ಕಾವಾಡಿಗರ ಕಣ್ಣೀರು!

actor nani
South Cinema1 hour ago

Actor Nani: ‘ಹಾಯ್​ ನಾನ್ನʼ ಚಿತ್ರತಂಡದಿಂದ ವಿಜಯ್‌-ರಶ್ಮಿಕಾ ಖಾಸಗಿ ಫೋಟೊ ಬಳಕೆ; ನಾನಿ ಹೇಳಿದ್ದೇನು?

High Court live streaming hacked by hackers
ಕರ್ನಾಟಕ2 hours ago

Cyber crime : ಹೈಕೋರ್ಟ್‌ ಲೈವ್‌ ಸ್ಟ್ರೀಮಿಂಗ್‌ನಲ್ಲಿ ಹರಿದಾಡಿದ ಅಶ್ಲೀಲ ದೃಶ್ಯ!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ11 hours ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ1 day ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ2 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ2 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ3 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ4 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ4 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ5 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ5 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

ಟ್ರೆಂಡಿಂಗ್‌