Site icon Vistara News

‌Chikkodi News: ‘ಚೀಟಿ’ ಗ್ಯಾಂಗ್ ಮಾಯಾಜಾಲ; ಚಿನ್ನದ ಸರ ಕದ್ದು ಎಸ್ಕೇಪ್

theft case

ಚಿಕ್ಕೋಡಿ: ಕಿರಾಣಿ ಅಂಗಡಿ ಮಾಲಕಿಯನ್ನು ಯಾಮಾರಿಸಿ ಚಿನ್ನದ ಮಾಂಗಲ್ಯ ದೋಚಿ ಖದೀಮ ಎಸ್ಕೇಪ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರುಪಿನಾಳ ಗ್ರಾಮದಲ್ಲಿ ನಡೆದಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ನಡೆದ ‘ಚೀಟಿ’ ಗ್ಯಾಂಗ್ ಮಾಯಾಜಾಲ ತಡವಾಗಿ ಬೆಳಕಿಗೆ ಬಂದಿದೆ.

ಗುಟ್ಕಾ ಖರೀದಿ ನೆಪದಲ್ಲಿ ಕಿರಾಣಿ ಅಂಗಡಿಗೆ ಯುವಕ ಆಗಮಿಸಿದ್ದ. ಬಳಿಕ ಕೈ ಸನ್ನೆ ಮಾಡಿ ತೆಂಗಿನಕಾಯಿ, ಊದುಬತ್ತಿ ಕೇಳಿದ್ದ. ಇದೇ ವೇಳೆ ಅಂಗಡಿ ಮಾಲಕಿ ಸುವರ್ಣ ಪವಾರ್‌ಗೆ ಚೀಟಿ ತೋರಿಸಿದ್ದ. ಈ ವೇಳೆ ಅದನ್ನು ನೋಡುತ್ತಿದ್ದಂತೆ ಅಂಗಡಿ ಮಾಲಕಿಗೆ ತಲೆ ಸುತ್ತಿದ ಅನುಭವ ಆಗಿದೆ. ಚೀಟಿ ತೋರಿಸಿ ಅದರಲ್ಲಿ ಚಿನ್ನದ ಮಾಂಗಲ್ಯ ಇಡುವಂತೆ ಆರೋಪಿ ಹೇಳಿದ್ದಾನೆ. ನಂತರ ತನಗೆ ಅರಿಯದೇ ಚಿನ್ನದ ಮಾಂಗಲ್ಯ ಸರ ತೆಗೆದು ಮಾಲಕಿ ನೀಡಿದ್ದಾಳೆ.

ಬಳಿಕ ಮಾಂಗಲ್ಯ ಸರ ಚೀಟಿಯಲ್ಲಿ ಕಟ್ಟಿ ಡ್ರಾವರ್‌ನಲ್ಲಿ ಇಡುವಂತೆ ಸಲಹೆ ನೀಡಿದ್ದಾನೆ. ನಂತರ ತನ್ನ ಜೇಬಿನಲ್ಲಿದ್ದ ಮರಳು ತುಂಬಿದ ಚೀಟಿ ಡ್ರಾವರ್‌ನಲ್ಲಿಟ್ಟು, ಚಿನ್ನದ ಮಾಂಗಲ್ಯ ಇಟ್ಟಿದ್ದ ಚೀಟಿ ತೆಗೆದುಕೊಂಡು ಆರೋಪಿ ಪರಾರಿಯಾಗಿದ್ದಾನೆ.

15 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರದ ಜತೆ ಖದೀಮರು ಎಸ್ಕೇಪ್‌ ಆಗಿದ್ದು, ಕಣ್ಣ ಮುಂದೆಯೇ ಚಿನ್ನದ ಮಾಂಗಲ್ಯವಿದ್ದ ಚೀಟಿ ತೆಗೆದುಕೊಂಡು ಹೋದರೂ ಅಂಗಡಿ ಮಾಲಕಿ ಅರಿವಿಗೆ ಬಂದಿಲ್ಲ. ಘಟನೆಯ ಸಂಪೂರ್ಣ ದೃಶ್ಯ ಕಿರಾಣಿ ಅಂಗಡಿಯಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ | Shivamogga News: ಅಡಕೆ, ರಬ್ಬರ್‌ಶೀಟ್‌ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಘಟನೆ ನಡೆದ ಅರ್ಧ ಗಂಟೆ ಬಳಿಕ ಕೊರಳಲ್ಲಿ ಮಾಂಗಲ್ಯ ಸರ ಇಲ್ಲದ್ದು ನೋಡಿ ಸುವರ್ಣ ಗಾಬರಿಯಾಗಿ, ಪತಿಗೆ ವಿಷಯ ತಿಳಿಸಿದ್ದಾರೆ. ಸಿಸಿ ಕ್ಯಾಮೆರಾ ಪರಿಶೀಲನೆ ಬಳಿಕ ಚಾಲಾಕಿ ಯುವಕನ ಕಳ್ಳಾಟ ಬಯಲಾಗಿದೆ.

ಕಾಡಾನೆ ದಾಳಿ ನಡೆಸಿ ಪ್ರಯಾಣಿಕರಿಗೆ ಗಾಯ

ಮಂಗಳೂರು: ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿದ್ದರಿಂದ ಪ್ರಯಾಣಿಕರು ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯಾ ಎಂಬಲ್ಲಿ ನಡೆದಿದೆ. ಆಲ್ಟೋ ಕಾರಿನ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಇದರಿಂದ ಕಾರಿನಲ್ಲಿದ್ದ ಆರು ಮಂದಿಗೆ ಗಾಯಗಳಾಗಿವೆ. ನೆರಿಯಾ ಗ್ರಾಮ ಕಾಡಿನ ಅಂಚಿನಲ್ಲಿರುವ ಕಾರಣ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಕಾಡಾನೆ ದಾಳಿಯಿಂದ ಕಾರಿಗೆ ಹಾನಿಯಾಗಿದ್ದು, ಗಾಯಗೊಂಡವರಿಗೆ ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version