Site icon Vistara News

Karnataka Election: ಗಾಳಿ ಆಂಜನೇಯಸ್ವಾಮಿ ದೇಗುಲದಲ್ಲಿ ಹನುಮಾನ್ ಚಾಲೀಸಾ ಪಠಣಕ್ಕೆ ದೊರೆಯದ ಅವಕಾಶ!

Management of Gali Anjaneya Swamy temple denied to recite hanuman chalisa

ಬೆಂಗಳೂರು, ಕರ್ನಾಟಕ: ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ಮತ್ತು ಪಿಎಫ್ಐಗಳಂಥ ಸಂಘಟನೆಗಳನ್ನು ನಿಷೇಧ ಮಾಡುವ ಬಗ್ಗೆ ಭರವಸೆ ನೀಡಿತ್ತು. ಬಜರಂಗದಳ ನಿಷೇಧ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ಗುರುವಾರ ಸಂಜೆ ದೇಗುಲಗಳಲ್ಲಿ ಹನುಮಾನ್ ಚಾಲೀಸಾ ಪಠಣ ಹಮ್ಮಿಕೊಂಡಿತ್ತು. ಇದರ ಭಾಗವಾಗಿ, ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇಗುಲದ ಒಳಗೆ ಹನುಮಾನ್ ಚಾಲೀಸಾ ಪಠಣ ಮಾಡಲು ಚಕ್ರವರ್ತಿ ಸೂಲಿಬೆಲೆ, ಪ್ರಶಾಂತ್ ಸಂಬರಗಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಗೆ ಅವಕಾಶ ನಿರಾಕರಿಸಲಾಗಿದೆ(Karnataka Election 2023).

ದೇವಾಲಯದ ಒಳಗೆ ರಾಜಕೀಯ ತರವುದು ಬೇಡ ಎಂದು ಹೇಳಿದ ದೇಗುಲದ ಆಡಳಿತ ಮಂಡಳಿಯು ಅವಕಾಶವನ್ನು ನಿರಾಕರಿಸಿದೆ. ದೇವಾಲಯದ ಒಳ ಆವರಣದಲ್ಲಿ ಪಠಣಕ್ಕೆ ಅವಕಾಶವನ್ನು ಆಡಳಿತ ಮಂಡಳಿ ನೀಡಿಲ್ಲ. ಹನುಮಾನ್ ಚಾಲೀಸ್ ಪಠಣ ಮಾಡಬೇಕು ಅಂದ್ರೆ ವಿಡಿಯೋ ಚಿತ್ರೀಕರಣ ಮಾಡಬೇಡಿ. ನೀವು ಮಾತ್ರ ಬೇಕಾದರೆ ಬಂದು ಭಕ್ತಿಯಿಂದ ಚಾಲೀಸ್ ಪಠಣ ಮಾಡಿ ಎಂದು ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ: Karnataka Election: ಬಜರಂಗದಳ ನಿಷೇಧಕ್ಕೆ ಮುಂದಾದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶ: ಕೋಟಾ ಶ್ರೀನಿವಾಸ ಪೂಜಾರಿ

ಪ್ರಶಾಂತ್ ಸಂಬರಗಿ ಹೇಳೋದೇನು?

ರಾಷ್ಟ್ರಿಯ ಪಕ್ಷ ಕಾಂಗ್ರೆಸ್ ಹಿಂದುಗಳ ಭಾವನಕ್ಕೆ ಧಕ್ಕೆ ತರುವ ಕೆಲಸ ಮಾಡಿದೆ. ದೇಶ ದ್ರೋಹಿ ಸಂಘಟನೆಯೊಂದಿಗೆ ಹಿಂದು ಸಂಘಟನೆಯನ್ನು ಹೋಲಿಕೆ ಮಾಡಿದೆ. ಹಿಂದುಗಳನ್ನು ಜಾಗೃತಗೊಳಿಸಲು ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಅರ್ಚಕರು ದೇವಾಲಯವನ್ನು ಬಂದ್ ಮಾಡಿದ್ದಾರೆ. ನಾವು ಹನುಮಾನ್ ಚಾಲೀಸಾವನ್ನು ರಸ್ತೆಯಲ್ಲೆ ಪಠಣ ಮಾಡ್ತೇವೆ. ಸ್ಥಳೀಯ ಶಾಸಕರು ಹಿಂದೂ ಸಂಘಟನೆಯನ್ನು ನೋಡಿ ಹೆದರಿಕೊಂಡಿದ್ದಾರೆ. ಅರ್ಚಕರಿಗೆ ಹೇಳಿ ದೇವಾಲಯ ಬಂದ್ ಮಾಡಿಸಿದ್ದಾರೆ ಎಂದು ಹಿಂದೂ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರು ಹೇಳಿದ್ದಾರೆ. ಕೆಲವು ತಿಂಗಳ ಹಿಂದೆ ಮುಕ್ತಾಯಗೊಂಡ ಬಿಗ್ ಬಾಸ್‌ ರಿಯಾಲ್ಟಿ ಶೋದಲ್ಲಿ ಪಾಲ್ಗೊಂಡಿದ್ದರು.

Exit mobile version